ಎಂದಾದರೊಮ್ಮೆ ಎಫ್‌ ಬಿ ಯಲ್ಲಿ ಅವರ ಸಂದೇಶ ವಿನಿಮಯ ಆಗುತ್ತಿರುತ್ತಿತ್ತು. ಇಂದು ಮಾಲಿನಿ ಮೆಸೆಂಜರ್‌ ನಲ್ಲಿ ಕಾಲ್ ‌ರಿಂಗ್ ಆಯಿತು.

``ಗುಡ್‌ ಮಾರ್ನಿಂಗ್‌'' ಅದೇ ಮೊದಲಿನ ಧ್ವನಿ, ಮಾತುಕತೆಯಲ್ಲಿ ಅದೇ ತುಂಟತನ ಮನಸೋಕ್ತ ನಗು, ``ಹೇಗಿದ್ದೀಯಾ ಡಿಯರ್‌, ಎಲ್ಲ ಸತ್ಯ ತಾನೇ? ನೀನು ನನ್ನ ಮೊದಲಿನ ಮಾಧವನೇ ಆಗಿರುವೆ.''

ಮಾಧವ ತನ್ನ ಪರಿಚಿತ ಧಾಟಿಯಲ್ಲಿ, ``ಹೌದು ಬಾಸ್‌, ಎಲ್ಲ ಸರಿಯಾಗಿದೆ. ನೀವು ಬಿಟ್ಟು ಹೋಗುವಾಗ ಹೇಗಿದ್ದೆನೊ ಈಗಲೂ ಹಾಗೆಯೇ ಇದ್ದೇನೆ. ಕಾಲೇಜಿನ ದಿನಗಳ ಬಳಿಕ ನಿನ್ನೊಂದಿಗೆ ಈ ರೀತಿಯ ಮಾತುಕತೆ ನಡೆಯುತ್ತಿದೆ. ಅವು ಎಂತಹ ಸುವರ್ಣ ದಿನಗಳು! ಆಗ ನಮ್ಮಿಬ್ಬರ ನಡುವೆ ದಿನ ಮಾತುಕತೆ ಮುಂದುವರಿಯುತ್ತಿತ್ತು.''

ಮಾಲಿನಿ ಮಾತನ್ನು ಮಧ್ಯದಲ್ಲಿಯೇ ತುಂಡರಿಸುತ್ತಾ, ``ನೀವು ಇಷ್ಟಪಟ್ಟರೆ ಇಂದು ನಾವು ಹೋಟೆಲ್`ಚಂದ್ರಕಲಾ'ದಲ್ಲಿ ಭೇಟಿಯಾಗೋಣ. ಸಂಜೆ 4 ಗಂಟೆಗೆ ನಾನು ನಿಮಗಾಗಿ ಕಾಯ್ತಾ ಇರ್ತೀನಿ,'' ಎಂದು ಹೇಳಿದಳು.

ಸ್ನೇಹಾ ಮೊದಲಿನಂತೆ ಈಗಲೂ ಸಮಯ ಪಾಲನೆಗೆ ಬದ್ಧಳಾಗಿದ್ದಳು. ಅವಳು 10 ನಿಮಿಷ ಮುಂಚೆಯೇ ಅಲ್ಲಿಗೆ ತಲುಪಿದಳು.

ಸ್ವಲ್ಪ ಹೊತ್ತಿನಲ್ಲಿಯೇ ಮಾಧವ ಕೂಡ ಅಲ್ಲಿಗೆ ಬಂದ. ಅವನು ಕೂಡ ಮೊದಲಿನ ಹಾಗೆಯೇ ಕೈಯಲ್ಲಿ ಹೂಗುಚ್ಛ ಹಿಡಿದು ಮಾಲಿನಿ ಎದುರು ನಿಂತಿದ್ದ.

ಮಾಲಿನಿ ಹಳದಿ ಬಣ್ಣದ ಸೀರೆಯಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದಳು. ಮುಕ್ತ ಕೂದಲು ಸ್ಟ್ರೇಟ್‌ ಮಾಡಲ್ಪಟ್ಟು ಅವಳ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ಕೊಟ್ಟಿದ್ದವು.

ಹಣೆಯ ಮೇಲೆ ಪುಟ್ಟ ಕೆಂಪು ಬಣ್ಣದ ಬೊಟ್ಟು, ಕಣ್ಣಿಗೆ ಕಾಡಿಗೆ ಲೇಪಿಸಿಕೊಂಡಿದ್ದಳು. ಮಾಧವ ಅವಳನ್ನು ನೋಡುತ್ತಲೇ ಉಳಿದುಬಿಟ್ಟ. ಅವಳಲ್ಲಿ ಒಂದಿಷ್ಟೂ ಬದಲಾವಣೆಯಾಗಿರಲಿಲ್ಲ. ಅವಳ ತುಟಿಗಳ ಮೇಲೆ ಮೊದಲಿಗಿಂತ ಸ್ವಲ್ಪ ಹೆಚ್ಚೇ ಲಿಪ್‌ ಸ್ಟಿಕ್ ಲೇಪಿಸಿಲ್ಪಟ್ಟಿತ್ತು. ಹೀಗಾಗಿ ಅವಳು ಬಹಳ ಸುಂದರವಾಗಿ ಕಂಡುಬರುತ್ತಿದ್ದಳು.

``ಏನ್ರೀ ಮಾಧವ್, ನನ್ನನ್ನು ಹೀಗೇಕೆ ನೋಡ್ತಿರುವಿರಿ?'' ಮಾಲಿನಿ ಮಾಧವನ ಕೈ ಹಿಡಿದುಕೊಂಡು ಅವನನ್ನು ಹೆಚ್ಚುಕಡಿಮೆ ಎಳೆದುಕೊಂಡು ಹೋಗುತ್ತಾ ಹೇಳಿದಳು.

ಆದರೆ ಮಾಧವ ಅವಳ ಈ ತೆರನಾದ ಸ್ಪರ್ಶದಿಂದಾಗಿ ಬೆವರಿ ನೀರಾದ. ಕ್ಷಣ ಮಟ್ಟಿಗೆ ಹಾವು ಕಚ್ಚಿದಂತೆ ಸ್ತಬ್ಧನಾದ.

ಅವಳಿಗೆ ಈಗಲೂ ನನ್ನ ಮೇಲೆ ಅದೇ ಪ್ರೀತಿ ಇದೆಯಾ ಎಂದು ಅವನು ಯೋಚಿಸತೊಡಗಿದ. `ಅವಳ ಸ್ಪರ್ಶ ಈಗಲೂ ನನ್ನನ್ನು ಹುಚ್ಚನನ್ನಾಗಿಸುತ್ತಿದೆ. ಅದೇ ಮಾದಕತೆ ಅವಳ ಕಣ್ಣುಗಳಲ್ಲಿ ಇನ್ನೂ ನೆಲೆ ನಿಂತಿದೆ. ಅವಳು ಹೊರಟು ಹೋದ ಬಳಿಕ ಅವಳ ತುಂಟಾಟ ನನಗೆ ಬೇರಾರಲ್ಲೂ ಕಂಡುಬರಲಿಲ್ಲ. ಅವಳ ಸ್ಪರ್ಶದಿಂದ ನಾನಿಂದು ಮತ್ತೆ ಉಲ್ಲಸಿತನಾಗಿರುವೆ. ಜೀವನ ಸುಂದರ ಹಾಗೂ ವರ್ಣಮಯ ಎನಿಸುತ್ತಿದೆ.'

ಅವನು ಮನಸಾರೆ ಪ್ರೇಮದ ಆಳವನ್ನು ಸ್ಪರ್ಶಿಸುತ್ತಿದ್ದ. ಅದನ್ನು ಅವನೆಂದೂ ಕಲ್ಪನೆ ಕೂಡ ಮಾಡಿಕೊಂಡಿರಲಿಲ್ಲ.

ಮಾಧವ ಮಾಲಿನಿಯನ್ನು ಭೇಟಿಯಾಗಿ ಬಂದಾಗಿನಿಂದ ಅವನ ಸ್ಥಿತಿ ದಯನೀಯವಾಗಿತ್ತು. ಅವನ ತಳಮಳ ಕಡಿಮೆಯಾಗುತ್ತಿರಲಿಲ್ಲ. ಅವನ ಕಣ್ಣುಗಳ ಎದುರು ಸುಂದರ ಮುಖ ಗೋಚರಿಸುತ್ತಿತ್ತು. ಅವನಿಗೆ ಯಾವುದೇ ಕೆಲಸದಲ್ಲಿ ಮನಸ್ಸು ನಿಲ್ಲುತ್ತಿರಲಿಲ್ಲ.
ಅತ್ತ ಮಾಲಿನಿ ಕೂಡಾ ಹಾಸಿಗೆಯ ಮೇಲೆ ಬಿದ್ದುಕೊಂಡು ವಿಚಾರಗಳಲ್ಲಿ ಮಗ್ನಳಾಗಿದ್ದಳು ಮತ್ತು ಮನಸ್ಸಿನಲ್ಲಿಯೇ ಮುಗುಳ್ನಗುತ್ತಿದ್ದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ