ರಂಜಿತಾ ಆಫೀಸಿನಿಂದ ಮನೆಗೆ ತಲುಪಿದಾಗ ಮಗು ಆದರ್ಶ್‌ ಅತ್ತು ಅತ್ತು ಇಡೀ ಮನೆಯನ್ನು ರಚ್ಚೆ ಎಬ್ಬಿಸಿಬಿಟ್ಟಿದ್ದ. ರಂಜಿತಾಳನ್ನು ನೋಡುತ್ತಿದ್ದಂತೆ ಅವಳ ಅಮ್ಮ ನೆಮ್ಮದಿಯ ನಿಟ್ಟುಸಿರುಬಿಟ್ಟು ಆದರ್ಶ್‌ ನನ್ನು ಅವಳ ಕೈಗೆ ಕೊಡುತ್ತಾ, ``ನಿನ್ನ ಮಗ ನಮಗೆ ಕೊಟ್ಟ ಕಷ್ಟ ಅಷ್ಟಿಷ್ಟಲ್ಲ. ಪಲ್ಲವಿ 1 ನಿಮಿಷ ಕೂಡ ನೆಮ್ಮದಿಯಿಂದ ಓದಲು ಆಗಲಿಲ್ಲ.''

ರಂಜಿತಾ ಒಂದೂ ಮಾತು ಆಡದೇ ಆದರ್ಶ್‌ ನನ್ನು ತನ್ನ ಮಡಿಲಲ್ಲಿ ಎತ್ತಿಕೊಳ್ಳುತ್ತಾ ವಾಶ್‌ ರೂಮ್ ಕಡೆ ಹೆಜ್ಜೆ ಹಾಕಿದಳು. ಅಲ್ಲಿಂದ ಬಂದ ನಂತರ ರಂಜಿತಾ ಚಹಾ ಮಾಡುತ್ತಲೇ, ಸಂಜೆ ಅಡುಗೆಗಾಗಿ ತರಕಾರಿ ಹೆಚ್ಚತೊಡಗಿದಳು.

ಚಹಾ ಹೀರುತ್ತಲೇ ರಂಜಿತಾ ಆದರ್ಶ್‌ ನನ್ನು ಮಲಗಿಸುವ ಪ್ರಯತ್ನ ಮಾಡತೊಡಗಿದಳು. ಅವನು ನಿದ್ರೆಗೆ ಜಾರುತ್ತಿದ್ದಂತೆ, ರಂಜಿತಾಳಿಗೂ ಕಣ್ಣು ಎಳೆಯುತ್ತಿತ್ತು. ಅಷ್ಟರಲ್ಲಿ ಅಮ್ಮ ರೂಮಿಗೆ ಬಿರುಗಾಳಿಯಂತೆ ಬಂದು, ``ರಂಜಿತಾ, ಕೆಲಸ ಮಾಡೋಕೆ ನನಗೂ ಅಷ್ಟಿಷ್ಟು ನೆರವು ಕೊಡು,'' ಎಂದು ಬಿರುಸಿನಿಂದ ಹೇಳಿದರು.

``ನನ್ನ ಪಾಲಿಗಂತೂ ಸುಖ ಕನಸಿನ ಮಾತೇ ಸರಿ.''

``ಮೊದಲು ಮಕ್ಕಳ ಜವಾಬ್ದಾರಿ ವಹಿಸಬೇಕು. ಆಮೇಲೆ ಅವರ ಮಕ್ಕಳ ಉಸ್ತುವಾರಿ ನೋಡಿಕೊಳ್ಳಬೇಕು.''

``ಅಮ್ಮಾ ಆದರ್ಶನನ್ನು ಮಲಗಿಸ್ತಾ ನನಗೂ ಹಾಗೆ ಜೋಂಪು ಹತ್ತಿಬಿಟ್ಟಿತ್ತು,'' ಎಂದು ಸಂಕೋಚದಿಂದ ಹೇಳಿದಳು ರಂಜಿತಾ.

ಆದರ್ಶ್‌ ನನ್ನು ಮಲಗಿಸಿ, ರಂಜಿತಾ ಕೂದಲು ಕಟ್ಟಿಕೊಂಡು ಅಡುಗೆ ಮನೆಗೆ ಹೋದಳು. ಅಮ್ಮ ಅಪ್ಪನಿಗಾಗಿ ಸ್ವಲ್ಪ ಸಪ್ಪೆ ತಿಂಡಿ, ಪಲ್ಲವಿಗಾಗಿ ಹೈ ಪ್ರೋಟೀನ್‌ ಡಯೆಟ್‌ ಮತ್ತು ತನಗಾಗಿ ಎರಡರಲ್ಲೂ ಉಳಿದದ್ದು.

ರಂಜಿತಾ ಊಟದ ಸಿದ್ಧತೆಗಾಗಿ ಅಡುಗೆಮನೆಯಲ್ಲಿದ್ದಳು. ಅಷ್ಟರಲ್ಲಿಯೇ ಆದರ್ಶ್‌ ಎದ್ದ. ರಂಜಿತಾಳಿಗೆ ದೈನಂದಿನ ದಿನಚರಿ ಇದೇ ಆಗಿತ್ತು. ಅವಳಿಗೆ 4 ಗಂಟೆ ನಿದ್ರೆ ಕೂಡ ಪೂರ್ತಿ ಆಗುತ್ತಿರಲಿಲ್ಲ.

ರಂಜಿತಾ ಆದರ್ಶ್‌ ಗೆ ಹಾಲನ್ನು ಸಿದ್ಧಪಡಿಸಿಕೊಂಡು ತನ್ನ ಕೋಣೆಗೆ ಹೋಗಿ ಬಾಗಿಲು ಮುಚ್ಚಿಕೊಂಡಳು. ಆದರ್ಶ್‌ ನ ಒಂದಿಷ್ಟು ಧ್ವನಿ ಕೇಳಿದರೆ ಸಾಕು, ಮರುದಿನ ಅಮ್ಮನಿಗೆ ತಲೆನೋವು ಬರುತ್ತಿತ್ತು.

ರಂಜಿತಾಳ ಜೀವನ ಕೆಲವು ದಿನಗಳ ಹಿಂದಿನ ತನಕ ಬಹಳ ವಿಭಿನ್ನವಾಗಿತ್ತು. ರಂಜಿತಾ ಬಹಳ ಬಿಂದಾಸ್‌ ಪ್ರವೃತ್ತಿಯವಳು, ಜಗತ್ತಿನ ಹಂಗೇ ಇರದಂಥವಳು. ಉದ್ದನೆಯ ಕಾಯ, ಗೋದಿ ಬಣ್ಣ, ದೊಡ್ಡ ದೊಡ್ಡ ಕಣ್ಣುಗಳು, ಗುಂಗುರು ಕೂದಲು ಹಾಗೂ ಬೆರಗುಗೊಳಿಸುವ ಮುಗುಳ್ನಗು.

ಕಾಲೇಜು ಹಾಗೂ ಆಫೀಸಿನಲ್ಲಿ ಪ್ರತಿಯೊಬ್ಬರೂ ಅವಳ ಅಭಿಮಾನಿಗಳಾಗಿದ್ದರು. ಆದರೆ ರಂಜಿತಾ ಅಭಯ್‌ ನ ಅಭಿಮಾನಿಯಾಗಿದ್ದಳು. ಅಭಯ್‌ ಅವಳ ಜೊತೆಗೆ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓದುತ್ತಿದ್ದ. ಇಬ್ಬರಲ್ಲೂ ಸ್ನೇಹ ಗಾಢವಾಗಿ ಅದು ಪ್ರೀತಿಯಲ್ಲಿ ಪರಿವರ್ತನೆಗೊಂಡಿತ್ತು.

ರಂಜಿತಾಳ ಅಮ್ಮ ಅಪ್ಪ ಅಭಯ್‌ನ  ಮನೆಗೆ ಹೋಗಿ, ಅವನ ತಾಯಿ ತಂದೆಯ ವರ್ತನೆ ಕಂಡು ಮಗಳಿಗೆ, ``ರಂಜು, ಇಂತಹ ಪ್ರೀತಿ ಬಹಳ ಕಾಲ ಉಳಿಯುವುದಿಲ್ಲ. ನಮ್ಮಲ್ಲಿ ಮದುವೆಯ ಬಾಂಧವ್ಯ ಇಬ್ಬರ ನಡುವೆ ಅಲ್ಲ ಎರಡು ಕುಟುಂಬಗಳ ನಡುವೆ ಆಗುತ್ತದೆ. ನಮ್ಮ ಮತ್ತು ಅವರ ಕುಟುಂಬದ ನಡುವೆ ಸಾಕಷ್ಟು ವ್ಯತ್ಯಾಸವಿದೆ,'' ಎಂದು ಹೇಳಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ