ಯಾರ ಜೊತೆಗಾದರೂ ಪ್ರೀತಿಯಾದರೆ, ಜೀವನವೇ ಬದಲಾಗಿಬಿಡುತ್ತದೆ ಎಂದು ಹೇಳಲಾಗುತ್ತದೆ. ಕಲ್ಪನೆಗಳ ಜಗತ್ತು ಸೃಷ್ಟಿಯಾಗುತ್ತದೆ. ಹೃದಯದ ಸಾಮ್ರಾಜ್ಯದ ಮೇಲೆ ಯಾರೂ ಅಧಿಪತ್ಯ ಸ್ಥಾಪಿಸುತ್ತಾರೆ, ಪ್ರೀತಿಯ ಎಳೆಗಳಲ್ಲಿ ಬಂಧಿಯಾದ ವ್ಯಕ್ತಿ ಏನನ್ನಾದರೂ ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ತಮ್ಮದೇ ಆದ ಪ್ರಪಂಚದಲ್ಲಿ ಲೀನರಾಗಿ ಬಿಡುತ್ತಾರೆ.
ಹೆಚ್ಚು ಕಡಿಮೆ ಹೀಗಿಯೇ ಆಗುತ್ತಿತ್ತು. ಅಂದಹಾಗೆ ನಾನು ನನ್ನ ಅನುಭವಗಳ ಬಗ್ಗೆ ಮಾತ್ರ ಅರಿಯುತ್ತಿದ್ದೆ. ಇತ್ಸಿಂಗ್ ಈ ಕುರಿತಂತೆ ಏನನ್ನು ಯೋಚಿಸುತ್ತಾನೆ, ನನಗೇನೂ ಮಾಹಿತಿ ಇರಲಿಲ್ಲ. ಇತ್ಸಿಂಗ್ ಜೊತೆಗೆ ಪರಿಚಯವಾಗಿ ಹೆಚ್ಚು ದಿನಗಳೇನೂ ಆಗಿರಲಿಲ್ಲ. 9 ತಿಂಗಳು ಬಹಳ ದೀರ್ಘ ಸಮಯವೇನಲ್ಲ. 2009ರ ಡಿಸೆಂಬರ್ ತಿಂಗಳ ಚಳಿಯ ದಿನಗಳಲ್ಲಿ ಬ್ಲಾಂಕೆಟ್ ನಲ್ಲಿ ಹುದುಗಿಕೊಂಡಿರಲು ನನಗೆ ಅನಿವಾರ್ಯತೆ ಇತ್ತು. ಹಾಸಿಗೆಯ ಮೇಲೆ ಬ್ಲಾಂಕೆಟ್ ಒಳಗೆ ಹಾಗೂ ಹೊರಗೆ ಲ್ಯಾಪ್ ಟಾಪ್ ನಲ್ಲಿ ಚಾಟಿಂಗ್ ಮತ್ತು ಬ್ರೌಸಿಂಗ್ ಮಾಡುವುದು ನನಗೆ ಇಷ್ಟವಾದ ಕೆಲಸವಾಗಿತ್ತು.
ಇತ್ತೀಚೆಗೆ ನಾನು ದೆಹಲಿ ಯೂನಿವರ್ಸಿಟಿಯಲ್ಲಿ ಚೈನೀಸ್ ಲ್ಯಾಂಗ್ವೇಜ್ ನಲ್ಲಿ ಗ್ರ್ಯಾಜುಯೇಶನ್ ಪರಿಪೂರ್ಣಗೊಳಿಸಿದ್ದೆ. ನಾನು ಚೀನಿ ಭಾಷೆಯನ್ನೇ ಏಕೆ ಆಯ್ಕೆ ಮಾಡಿದೆ ಎಂದು ನೀವು ಕೇಳಬಹುದು. ಅಂದಹಾಗೆ ಅದು ಜಗತ್ತಿನ ಮಹಾ ಕ್ಲಿಷ್ಟಕರ ಭಾಷೆ ಎಂದು ಕರೆಯಿಸಿಕೊಳ್ಳುತ್ತದೆ. ಅದೇ ಕಾರಣದಿಂದ ಈ ಪಿಕ್ಟೊಗ್ರಾಫಿಕ್ ಭಾಷೆ ಬಹಳ ರೋಚಕ ಎನಿಸಿತು. ಹೀಗಾಗಿ ನಾನು ಆ ಭಾಷೆ ಆಯ್ಕೆ ಮಾಡಿಕೊಂಡೆ. ನಾನು ಹಲವು ಚೀನಿ ವ್ಯಕ್ತಿಗಳೊಂದಿಗೆ ಚರ್ಚಿಸಿ ಆ ಭಾಷೆಯಲ್ಲಿ ಪ್ರಾವೀಣ್ಯತೆ ಸಾಧಿಸ ಬಯಸಿದ್ದೆ. ಅದರ ಆಧಾರದ ಮೇಲೆ ಒಂದು ಒಳ್ಳೆಯ ನೌಕರಿ ಪಡೆಯಬೇಕೆನ್ನುವುದು ನನ್ನ ಅಪೇಕ್ಷೆಯಾಗಿತ್ತು.
ನಾನು ಇಂಟರ್ ನೆಟ್ ನಲ್ಲಿ ಸಂಪರ್ಕ ಸಾಧಿಸಲು ಪ್ರಯತ್ನಿಸಿದಾಗ ನನ್ಮುಂದೆ ಇತ್ಸಿಂಗ್ ನ ಪ್ರೊಫೈಲ್ ತೆರೆದುಕೊಂಡಿತು. ಅವನು ಬೀಜಿಂಗ್ ನ ಒಂದು ಮೈನಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅವನ ಬಗ್ಗೆ ತಿಳಿದುಕೊಳ್ಳಲಾರಂಭಿಸಿದಾಗ ಅವನು ಸಂಕೋಚ ಸ್ವಭಾವದ ವ್ಯಕ್ತಿ ಹಾಗೂ ಅವನಿಗೆ ಲಾಂಗ್ ಡ್ರೈವ್ ಹೋಗಲು ಇಷ್ಟವಾಗುತ್ತದೆ. ಗಿಡ ಬಳ್ಳಿಗಳೊಂದಿಗೆ ಮಾತುಕತೆ ನಡೆಸುವುದು ಇಷ್ಟವಂತೆ. ಅವನ ಹವ್ಯಾಸ ಪೇಂಟಿಂಗ್ ಹಾಗೂ ಸರ್ಫಿಂಗ್. ಅವನಿಗೆ ಎಂತಹದೊಂದು ಕೆಲಸ ಮಾಡಬೇಕಿತ್ತೆಂದರೆ, ಅದು ಎಂದೆಂದಿಗೂ ಉಳಿಯುವಂತಹದ್ದಾಗಿರಬೇಕು. ಅದೆಲ್ಲವನ್ನು ಓದಿ ನನಗೆ ಆ ವ್ಯಕ್ತಿಯ ಜೊತೆ ಮಾತನಾಡಬೇಕೆಂಬ ಉತ್ಸಾಹ ಗರಿಗೆದರಿತು. ಅಂದಹಾಗೆ ಚೀನಿ ಭಾಷೆ ಕಲಿಯಲು ನನಗೆ ಅವನ ಅವಶ್ಯಕತೆಯೂ ಇತ್ತು.
ಬಹಳಷ್ಟು ಯೋಚಿಸಿ ನಾನು ಅವನೊಂದಿಗೆ ಮಾತುಕತೆ ನಡೆಸುತ್ತಾ ಬರೆದೆ, ``ಹಲೋ ಇತ್ಸಿಂಗ್....''
`ಹಲೋ'ದ ಉತ್ತರವನ್ನು `ಹಲೋ' ಎಂದು ಕೊಡುವತ್ತ ಅವನು ನಾಪತ್ತೆಯಾದ. ನನಗಂತೂ ವಿಚಿತ್ರ ಎನಿಸಿತು. ಆದರೆ ನಾನು ಅವನನ್ನು ಹಿಂಬಾಲಿಸುವುದನ್ನು ಬಿಡಲಿಲ್ಲ. ಮತ್ತೊಮ್ಮೆ ಬರೆದೆ, ``ಕ್ಯಾನ್ ಐ ಟಾಕ್ ಟು ಯೂ?''
ಅವನ ಒಂದು ಮಾತಿನ ಉತ್ತರ ಬಂತು ``ಎಸ್.''
``ಐ ಲೈಕ್ಡ್ ಯುವರ್ ಪ್ರೊಫೈಲ್,'' ಎಂದು ಹೇಳಿ ನಾನು ಮಾತು ಮುಂದುವರಿಸಿದೆ.