ಮಾನಸಾಳ ಆಪ್ತ ಗೆಳತಿ ತನುಜಾಳ ಏಕೈಕ ಪುತ್ರಿ ರಮ್ಯಾಳ ಮದುವೆ ಮೈಸೂರಿನಲ್ಲಿ ನಡೆಯಲಿತ್ತು. ತನುಜಾ ಎಲ್ಲ ಸ್ನೇಹಿತರನ್ನು ಒಗ್ಗೂಡಿಸಲು ಎಲ್ಲರ ನಂಬರ್‌ ಸಂಗ್ರಹಿಸಿ ಒಂದು ವಾಟ್ಸ್ ಆ್ಯಪ್‌ ಗ್ರೂಪ್‌ ಮಾಡಿದಳು. ಅದೆಷ್ಟೋ ವರ್ಷಗಳ ನಂತರ ಪರಸ್ಪರರ ಪರಿಚಯ ಆಗಿತ್ತು. ಅವರೆಲ್ಲ ವ್ಯಸ್ತ ಗೃಹಸ್ಥರಾಗಿದ್ದರು. ಆದರೆ ಕಾಲೇಜು ದಿನಗಳ ಮೋಜು ಮಜವನ್ನು ನೆನಪಿಸಿಕೊಂಡು ಅಂದಿನ ಯುವಕ ಯುವತಿಯರಂತೆ ಆಗಿಬಿಟ್ಟಿದ್ದರು. ತನುಜಾ ಆ ಗ್ರೂಪಿಗೆ `ಹ್ಯಾಪಿನೆಸ್‌' ಎಂದು ನಾಮಕರಣ ಮಾಡಿದಳು. ಎಲ್ಲರೂ ಅವಕಾಶ ಸಿಕ್ಕಾಗೆಲ್ಲ ಆ ಗ್ರೂಪ್‌ ನಲ್ಲಿ ತಮಾಷೆ, ನಗುವಿನ ಅಲೆ ಹರಿಸುವಂತಹ ಸಂದೇಶ ಕಳುಹಿಸುತ್ತಿದ್ದರು.

ಅದರಲ್ಲಿ ತನುಜಾಳ ಆಗ್ರಹದ ಸಂದೇಶ ಹೀಗಿತ್ತು, ``ಎಲ್ಲರೂ ಮದುವೆಗೆ ಬರುವ ಸಿದ್ಧತೆ ಮಾಡಿಕೊಳ್ಳಿ. ಈ ಮದುವೆಯ ಸಮಾರಂಭವನ್ನೇ `ರೀ ಯೂನಿಯನ್‌' ಎಂದು ಭಾವಿಸಿ ಮೋಜು ಮಜಾ ಮಾಡಲು ಬನ್ನಿ. ಈಗ ಇಷ್ಟೇ ಜನರ ಬಗ್ಗೆ ಮಾತ್ರ ಗೊತ್ತಾಗಿದೆ. ಉಳಿದವರನ್ನು ನಾನು ಫೇಸ್‌ ಬುಕ್‌ ನಲ್ಲಿ ಹುಡುಕಿ ತೆಗಿತೀನಿ. ನಾನು ಎಲ್ಲರ ನಿರೀಕ್ಷೆಯಲ್ಲಿದ್ದೇನೆ.''

ಸದಾ ಹಸನ್ಮುಖಿ ಹಾಗೂ ಮೇಧಾವಿ ವಿದ್ಯಾರ್ಥಿನಿಯಾಗಿದ್ದ ತನುಜಾ ಎಲ್ಲರನ್ನೂ ಒಗ್ಗೂಡಿಸಿ ಒಂದೊಳ್ಳೆ ಕೆಲಸ ಮಾಡಿದ್ದಳು.

ಬೆಂಗಳೂರಿನಲ್ಲಿ ವಾಸವಿದ್ದ ಮಾನಸಾ ಅದೆಷ್ಟೋ ಸಲ ತನುಜಾಳ ಜೊತೆ ಮಾತನಾಡಿದ್ದಳು. ಆದರೆ ಈಗ ಮಾನಸಾ ದ್ವಂದ್ವದಲ್ಲಿದ್ದಳು. ರಮ್ಯಾಳ ಮದುವೆಗೆ ಹೋಗಿ ಎಲ್ಲ ಸ್ನೇಹಿತರನ್ನು ಭೇಟಿಯಾಗುವ ಇಚ್ಛೆ ಅವಳಿಗಿತ್ತು. ಪತಿ ರಮೇಶ್‌ ಮತ್ತು ಮಗಳು ನವ್ಯಶ್ರೀ ಖುಷಿಯಿಂದಲೇ ಅನುಮತಿ ಕೊಟ್ಟರು.

``ಹೋಗು, ನಿನ್ನ ಸ್ನೇಹಿತರ ಬಳಗದೊಂದಿಗೆ ಎಂಜಾಯ್‌ ಮಾಡಿ ಬಾ. ನಾವೇನಾದರೂ ಬಂದರೆ ನಿನ್ನ ಆನಂದಕ್ಕೆ ಕಲ್ಲು ಹಾಕಿದಂತೆ,'' ಎಂದು ರಮೇಶ್‌ ಹೇಳಿದ. ಮಾನಸಾ ಮುಗುಳ್ನಕ್ಕಳು.

``ನನಗಂತೂ ರಜೆ ಸಿಗೋದಿಲ್ಲ. ಹೊಸ ಜಾಬ್‌ ಬೇರೆ. ನೀನು ಅವಶ್ಯವಾಗಿ ಹೋಗಿ ಬಾಮ್ಮಾ,''ಎಂದಳು ನವ್ಯಶ್ರೀ.

ರಮೇಶ್‌ ಗೆ ಸೇಲ್ಸ್ ಕ್ಲೋಸಿಂಗ್‌ ಇತ್ತು. ಆದರೆ ಮಾನಸಾ ತನ್ನ ದುಃಖ, ನೋವನ್ನು ಯಾರ ಮುಂದೆಯೂ ಹೇಳಿಕೊಳ್ಳುವಂತಿರಲಿಲ್ಲ.

`ಹ್ಯಾಪಿನೆಸ್‌' ಗ್ರೂಪ್‌ ನಲ್ಲಿ ಅಖಿಲ್ ‌ನ ಹೆಸರು ಕೂಡ ಇತ್ತು. ಆ ಹೆಸರನ್ನು ನೋಡುತ್ತಿದ್ದಂತೆಯೇ ಮಾನಸಾಳ ಮೈ ಮನಸ್ಸು ಕುದ್ದು ಹೋಗುತ್ತಿತ್ತು. ಕ್ರೋಧದ ಜ್ವಾಲಾಮುಖಿ ಪುಟಿದೇಳುತ್ತಿತ್ತು. ಮಾನಸಾ, ರಮೇಶ್‌ ಹಾಗೂ ನವ್ಯಶ್ರೀಗೆ `ಹ್ಯಾಪಿನೆಸ್‌' ಗ್ರೂಪ್‌ಬಗ್ಗೆ ಹೇಳಿದ್ದಳು. ಆ ಕುರಿತಂತೆ ನವ್ಯಶ್ರೀ ಹೇಳಿಯೇ ಬಿಟ್ಟಿದ್ದಳು, ``ಅಮ್ಮಾ, ಹ್ಯಾಪಿನೆಸ್‌ ಗ್ರೂಪ್‌ ಬಗ್ಗೆ ನೀವು ಸ್ವಲ್ಪವೂ ಹ್ಯಾಪಿ ಆಗಿರುವ ಬಗ್ಗೆ ಕಾಣ್ತಿಲ್ಲವಲ್ಲ. ಆ ಗ್ರೂಪ್‌ ಮಾಡಿದ ಬಳಿಕ ನೀವು ಮತ್ತಷ್ಟು ಉದಾಸ ಹಾಗೂ ದುಃಖಿತರಾಗಿರುವಂತೆ ಕಾಣ್ತಿದೆ.'' ಮಾನಸಾ ನಕ್ಕವಳಂತೆ ನಟಿಸುತ್ತಾ, ``ಅದು ನಿನ್ನ ಭ್ರಮೆ,'' ಎಂದು ಹೇಳುತ್ತಾ ಅವಳ ಮಾತನ್ನು ತಳ್ಳಿ ಹಾಕಿದಳು. ಆದರೆ ಅದೇ ಸತ್ಯವಾಗಿತ್ತು. ಉಳಿದ ಸ್ನೇಹಿತರ ಕಾರಣದಿಂದ ಅವಳು ಗ್ರೂಪ್‌ ಬಿಟ್ಟು ಹೋಗುವ ಹಾಗೆಯೂ ಇರಲಿಲ್ಲ. ಅಖಿಲ್ ‌ನ ಅಸ್ತಿತ್ವ ಅವಳ ಸಹನೆಯ ವ್ಯಾಪ್ತಿಯನ್ನು ಮೀರಿದ್ದಾಗಿತ್ತು. ಹಿಂದೆ ನಡೆದ ಘಟನೆ ಮಾನಸಾಳ ತನುಮನದ ಗಾಯವನ್ನು ಇನ್ನಷ್ಟು ನೋವಾಗುವಂತೆ ಮಾಡುತ್ತಿತ್ತು. ಈ ಕಾರಣದಿಂದ ಅವಳು ಇನ್ನು ಅಪರಾಧೀಪ್ರಜ್ಞೆಯಿಂದ ತೊಳಾಡುತ್ತಿದ್ದಳು. ರಮೇಶ್‌ ನಂತಹ ಅಪ್ಪಟ ಪ್ರೀತಿಪಾತ್ರ ಗಂಡನಿಗೆ ತಾನು ಮೋಸ ಮಾಡಿದ್ದೇನೆ ಎಂದು ಅವಳ ಮನಸ್ಸು ಒತ್ತಿ ಒತ್ತಿ ಹೇಳುತ್ತಿತ್ತು. ಮದುವೆಗೂ ಕೆಲವು ತಿಂಗಳುಗಳ ಮೊದಲು ಅಖಿಲ್ ‌ತನ್ನ ಮೇಲೆ ಅತ್ಯಾಚಾರ ನಡೆಸಿದ ಎಂದು ಅವಳು ಈವರೆಗೂ ರಮೇಶ್‌ ನ ಮುಂದೆ ಹೇಳಲು ಆಗಿರಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ