ಕಥೆ - ಟಿ. ಪದ್ಮಲತಾ

ಕೈ ಹಿಡಿದ ಹೆಂಡತಿಯನ್ನು ಪ್ರೇಮಿಸಿ, ಕೊನೆಯವರೆಗೂ ಅವಳನ್ನೇ ತನ್ನ ಸಂಗಾತಿಯೆಂದು ಭಾವಿಸಿದ್ದ ಆಕಾಶ್‌, ಅಂಥ ಹೆಂಡತಿ ತನಗೆ ಮಗು ಹೆತ್ತು ಕೊಡಲಾರಳು ಎಂದು ಖಾತ್ರಿಯಾದಾಗ ತಳೆದ ನಿರ್ಧಾರವೇನು? ಅಂಥ ಗಂಡನಿಗಾಗಿ ಮೇದಿನಿ ತಳೆದ ನಿಲುವೇನು......?

ಮೇದಿನಿ ಪೋರ್ಟಿಕೋದಲ್ಲಿ ಅತ್ತಿಂದಿತ್ತ ಹೋಗುತ್ತಿದ್ದಳು. ಅವಳು ಧರಿಸಿದ್ದ ತೆಳು ಓವರ್‌ಕೋಟ್‌ ಡಿಸೆಂಬರ್‌ನ ಆ ಚಳಿಯನ್ನು ತಡೆಯಲು ವಿಫಲವಾಗಿತ್ತು. ಮೊದಲಾಗಿದ್ದಿದ್ದರೆ ಅವಳು ಆ ಚಳಿಯಲ್ಲಿ ಅಲ್ಲಿ ನಿಂತಿದ್ದು ನೋಡಿ ಆಕಾಶ್‌ಗೆ ಹೃದಯ ಒಡೆದುಹೋಗುತ್ತಿತ್ತೇನೋ... ಆ ಪ್ರೀತಿ, ಕನ್ಸರ್ನ್‌ ಇಷ್ಟು ಬೇಗ ಮುಗಿದುಹೋಯಿತೇ? ಅನಿಸಿತು. ತಕ್ಷಣ ತನ್ನ ಯೋಚನೆಗೆ ತನಗೇ ನಗು ಬಂತು. ಇದಕ್ಕೆ  ಕಾರಣಕರ್ತೆ ಯಾರು? ನಾನೇ ತಾನೇ? ಅವನ ಮನಸ್ಸಿನಲ್ಲಿ ಗೊಂದಲ ಸೃಷ್ಟಿಸಿ ಈಗ ಅವನನ್ನು ದೂರುವುದು ಸರಿಯಲ್ಲ ಎಂದು ಅವಳ ಒಳ ಮನಸ್ಸು ಒತ್ತಿ ಹೇಳಿತು. ಆಕಾಶ್‌ ಇನ್ನೂ ಯಾಕೆ ಬರಲಿಲ್ಲ ಎಂಬ ಚಿಂತೆ, ಇತ್ತೀಚೆಗೆ ಯಾಕೋ ಬೇಕೆಂದೆ ತಡವಾಗಿ ಬರುತ್ತಿದ್ದಾನೆ ಎಂದೆನಿಸಿತು. ಆಕಾಶ್‌ನನ್ನು ಮದುವೆಯಾಗಿ ಹದಿನೈದು ವರುಷಗಳಾಗುತ್ತಾ ಬಂತು. ಅವರದ್ದು ಪ್ರೇಮ ವಿವಾಹವೇನಲ್ಲ. ಹಿರಿಯರು ನಿಶ್ಚಯಿಸಿದ ಮದುವೆ. ಆಕಾಶ್‌ ಶ್ರೀಮಂತ ಕುಟುಂಬದ ಹುಡುಗ. ಸುಳ್ಯದಲ್ಲಿ ಹೆಸರುವಾಸಿ ಕೃಷಿ ಕುಟುಂಬ ಅವನದು. ಬಹಳ ದೊಡ್ಡ ಅಡಕೆ ತೋಟ ಆಕಾಶ್‌ ಅಪ್ಪನಿಗಿತ್ತು. ಆಕಾಶ್‌ ಮೂರು ಗಂಡು ಮಕ್ಕಳ ಪೈಕಿ ಎರಡನೆಯವನು. ಮೊದಲನೆಯವನು ಡಿಪ್ಲೊಮ ಓದಿ ಬೇರೆ ಊರಿನಲ್ಲಿ ಸ್ವಂತ ಬಿಸ್‌ನೆಸ್‌ ಮಾಡುತ್ತಿದ್ದ. ಅವನು ಅವನ ಹೆಂಡತಿ ಮಕ್ಕಳ ಜೊತೆಗೆ ಹಬ್ಬಹರಿದಿನಗಳಿಗೆ ಮನೆಗೆ ಬಂದು ಹೋಗುತ್ತಿದ್ದರು. ಮೂರನೆಯವನು ಎಂಜಿನಿಯರಿಂಗ್‌ ಓದಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆಕಾಶ್‌  ಡಿಗ್ರಿ ಓದಿದ್ದ, ಅವನ ಅಪ್ಪನ ಅಭಿಲಾಷೆಯಂತೆ ಮನೆಯಲ್ಲಿ ತೋಟ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿದ್ದ.

ಮೇದಿನಿಯದ್ದು ಬಹಳ ಬಡ ಕುಟುಂಬ. ಸಣ್ಣವಳಿರುವಾಗಲೇ ಅಪ್ಪ ತೀರಿಕೊಂಡಿದ್ದರು. ಅಮ್ಮ ಅಡುಗೆ ಕೆಲಸ ಮಾಡಿ ಮಗಳನ್ನು ಸಾಕಿದ್ದರು. ಅವಳು ಯಾವುದೋ ಮದುವೆಯಲ್ಲಿ ಆಕಾಶ್‌ ಅಮ್ಮನ ಕಣ್ಣಿಗೆ ಬಿದ್ದಿದ್ದಳು. ಆಕಾಶ್‌ ಗೆ ಸರಿಯಾದ ಜೋಡಿ ಎಂದು ಅವರು ಮನೆಗೆ ಸಂಬಂಧ ಅರಸಿ ಹೋಗಿದ್ದರು. ಅವಳು ಬಡವಳಾದರೂ ಅವಳಲ್ಲಿ ಚೆಲುವಿಗೆ ಬಡತನವಿರಲಿಲ್ಲ. ಅನುಕೂಲಸ್ಥ ಸಂಬಂಧ ತಾನಾಗಿಯೇ ಹುಡುಕಿ ಬಂದಾಗ ಮೇದಿನಿಯ ಅಮ್ಮ ಖುಷಿಯಿಂದಲೇ ಒಪ್ಪಿಗೆ ಸೂಚಿಸಿದ್ದರು. ಅವಳಿಗೂ ಅಷ್ಟು ಒಳ್ಳೆ ಸಂಬಂಧವನ್ನು ನಿರಾಕರಿಸಲು ಯಾವ ಕಾರಣ ಇರಲಿಲ್ಲ. ಆಕಾಶ್‌ ಕೂಡ ನೋಡಲು ಸ್ಛುರದ್ರೂಪಿ. ಹಾಗಾಗಿ ಅವರಿಬ್ಬರದು ಬಹಳ ಅನುರೂಪ ಜೋಡಿಯೆಂದು ಮದುವೆಗೆ ಬಂದವರೆಲ್ಲ ಮಾತಾಡಿಕೊಂಡಿದ್ದರು. ಎಲ್ಲಾ ಖರ್ಚುವೆಚ್ಚ ತಾವೇ ಹಾಕಿ ಆಕಾಶ್‌ ಮನೆಯವರು ಅವಳನ್ನು ಮನೆ ತುಂಬಿಸಿಕೊಂಡಿದ್ದರು.

ಮದುವೆಯಾಗಿ ಒಂದು ವರ್ಷ ಹನಿಮೂನ್‌, ಸಂಬಂಧಿಕರ ಮನೆ ಎಂದು ತಿರುಗಾಟದಲ್ಲಿ ಹೇಗೆ ಕಳೆದಿತ್ತೆಂದೇ ಗೊತ್ತಾಗಿರಲಿಲ್ಲ. ಅವಳು ಅತ್ತೆ ಮಾವನ ಪ್ರೀತಿಯನ್ನು ಬಹಳ ಬೇಗನೆ ಗಳಿಸಿದ್ದಳು. ಬಹಳ ಮೃದು ಸ್ವಭಾವದ ಆಕಾಶ್‌ ಅವಳನ್ನು ಎಂದೂ ನೋಯಿಸದವನೇ ಅಲ್ಲ. ಇವಳು ಅವನ ಸ್ವಭಾವಕ್ಕೆ ತಕ್ಕಂತೆ ಸರಳ ಹುಡುಗಿಯಾಗಿದ್ದು ಅವನ ಬೇಕುಬೇಡಗಳನ್ನು ಅರಿತು ನಡೆಯುತ್ತಾ ಒಳ್ಳೆಯ ಹೆಂಡತಿ ಅನ್ನಿಸಿಕೊಂಡಿದ್ದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ