``ಅಪ್ಪನ ಮಾತುಗಳಿಂದ ಅವರು ತುಂಬಾ ಡಿಸ್ಟರ್ಬ್‌ ಆಗಿದ್ದಾರೆಂದು ಗೊತ್ತಾಗುತ್ತಿತ್ತು. ಅವರನ್ನು ಭೇಟಿಯಾಗುವ ಕಾರ್ಯಕ್ರಮ ರೂಪಿಸಬೇಕೆಂದು ನಾನು ಎಷ್ಟೋ ಸಲ ಅಂದುಕೊಳ್ಳುತ್ತೇನೆ. ಆದರೆ ನೌಕರಿಯ ಕೋಳ ನನ್ನನ್ನು ಹೇಗೆ ಕಟ್ಟಿ ಹಾಕಿದೆಯೆಂದರೆ, ಅದರಿಂದ ಹೊರಬರಲು ಆಗುವುದೇ ಇಲ್ಲ,'' ಎಂದು ತಂದೆಯೊಂದಿಗೆ ಫೋನ್‌ ಮಾಡಿ ಅದನ್ನು ಟೇಬಲ್ ಮೇಲೆ ಇಡುತ್ತಾ ಗೌರವ್ ಏನೋ ತೊಂದರೆಗೊಳಗಾದವನಂತೆ ಪತ್ನಿ ಶುಭಾ ಹಾಗೂ ಮಗ ವಿನಯ್‌ಗೆ ಹೇಳಿದ.

``ನಾನು ನಿನ್ನೆ ಅಮ್ಮನಿಗೆ ಫೋನ್‌ ಮಾಡಿದ್ದೇ. ಇತ್ತೀಚೆಗೆ ಅಪ್ಪ ಏನೋ ಕಳೆದುಕೊಂಡವರಂತೆ ಇರುತ್ತಾರಂತೆ. ಟಿ.ವಿ. ನೋಡ್ತಾ ಇದ್ರೆ. ಎಲ್ಲ ಟಿ.ವಿ ಧಾರಾವಾಹಿಗಳು ಹಾಗೂ ಇತರೆ ಎಲ್ಲ ಕಾರ್ಯಕ್ರಮಗಳನ್ನು  60 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಗಮನದಲ್ಲಿಟ್ಟುಕೊಂಡು ಮಾಡುತ್ತಾರೆ. ಬಾಲ್ಕನಿಯಲ್ಲಿ ಹೋಗಿ ನಿಂತರೆ ಇಡೀ ಜಗತ್ತೇ ಚಲನಶೀಲವಾಗಿ. ತಾನೊಬ್ಬನೇ ಮಾತ್ರ ಕೈದಿಯಂತೆ ಇಲ್ಲಿ ಪ್ರತ್ಯೇಕವಾಗಿದ್ದೇನೆ.

ಜಗತ್ತಿಗೆ ತನ್ನ ಅವಶ್ಯಕತೆಯೇ ಇಲ್ಲ ಎಂದು ಅವರಿಗೆ ಅನಿಸುತ್ತಿರುತ್ತದಂತೆ,'' ಶುಭಾ ಕೂಡ ಗೌರವ್ ಚಿಂತೆಯಲ್ಲಿ ಪಾಲ್ಗೊಂಡಳು.

``ನಾನು ಇವತ್ತು ಪುನಃ ಫೋನ್‌ ನಲ್ಲಿ ಮಾತನಾಡುತ್ತಾ ಅವರಿಗೆ ನೆನಪಿಸಿದೆ. ಅದೆಷ್ಟೋ ಕೆಲಸಗಳು ಇನ್ನೂ ಬಾಕಿ ಉಳಿದಿದ್ದು, ಅವನ್ನು ಪೂರ್ತಿಗೊಳಿಸಲು ಇಚ್ಛಿಸುತ್ತಿದ್ದೇನೆ. ಅಮ್ಮನ ಕೈ ನೋವನ್ನು ಖಾಯಂ ಆಗಿ ನಿವಾರಿಸುವುದು ಅಪ್ಪನ ಫುಲ್ ಬಾಡಿ ಚೆಕ್ ಅಪ್‌, ಮನೆಯ ವ್ಯರ್ಥ ಸಾಮಾನುಗಳನ್ನು ಹೊರ ತೆಗೆಯುವುದು..... ಹೀಗೆಲ್ಲ ಎಷ್ಟೋ ಕೆಲಸಗಳ ಪಟ್ಟಿ ಇಟ್ಟುಕೊಂಡಿದ್ದೇನೆ. ಆದರೆ ಅಪ್ಪ ಯಾವುದರಲ್ಲೂ ಆಸಕ್ತಿ ತೋರಿಸುವುದಿಲ್ಲ. ಅವರ ಏಕೈಕ ದೂರು ಎಂದರೆ, ನಾವೆಲ್ಲ ಅಲ್ಲಿಗೆ ಮೇಲಿಂದ ಮೇಲೆ ಏಕೆ ಹೋಗಲಾಗುವುದಿಲ್ಲ ಎನ್ನುವುದೇ ಆಗಿದೆ,'' ಗೌರವ್ ಮಾತುಗಳಲ್ಲಿ ನೋವು ಇಣುಕುತ್ತಿತ್ತು.

``ಅತ್ತೆ ಕೂಡ ನಾವು ಅಲ್ಲಿಗೆ ಬರದೇ ಇರುವುದರ ಬಗ್ಗೆಯೇ ಯಾವಾಗಲೂ ಹೇಳುತ್ತಿರುತ್ತಾರೆ. ಪಕ್ಕದ ಮನೆಯವರು ಯಾರಾದರೂ ಬಂದರೆ, ಬಹಳ ದಿನಗಳಿಂದ ಮಗ ಸೊಸೆಯನ್ನು ಕಂಡೇ ಇಲ್ಲ ಎಂದು ಕೇಳುತ್ತಿದ್ದರು ಎಂದು ಅತ್ತೆ ಹೇಳ್ತಾ ಕಣ್ಣೀರು ಹಾಕುತ್ತಿದ್ದರು,'' ಎಂದು ಶುಭಾ ವ್ಯಥೆಯಿಂದ ಹೇಳಿದಳು.

``ನಮ್ಮ ಸಮಸ್ಯೆಯನ್ನು ಅಪ್ಪ ಅಮ್ಮನೇ ಅರ್ಥ ಮಾಡಿಕೊಳ್ಳದಿದ್ದರೆ, ಇನ್ನು ಪಕ್ಕದ್ಮನೆಯವರು ಹೇಗೆ ತಾನೇ ಅರ್ಥ ಮಾಡಿಕೊಳ್ಳುತ್ತಾರೆ? ನಾನು ಒಂದು ದಿನ ಆಫೀಸಿಗೆ ಹೋಗದಿದ್ದರೆ ಬಾಸ್‌ ಗರಂ ಆಗುತ್ತಾರೆ. ನೀನು ಶಾಲೆಗೆ ಎಷ್ಟು ದಿನ ರಜೆ ಹಾಕಲು ಆಗುತ್ತೆ? ವಿನಯ್‌ನ ಶಾಲೆ ಬೇರೆ ಇದೆಯಲ್ಲ. ಈ ಭಾನುವಾರ ನಾವು ಅಲ್ಲಿಗೆ ಹೋಗುವ ಯೋಚನೆ ಮಾಡಬೇಕು,'' ಗೌರವ್ ಏನೋ ಯೋಚಿಸುತ್ತಾ ಹೇಳಿದ.

``ಅಜ್ಜಿ ತಾತನನ್ನು ನೋಡಬೇಕೆಂದು ನನಗೂ ಮನಸ್ಸಾಗ್ತಿದೆ. ಆದರೆ ಈ ವೀಕೆಂಡ್‌ನಲ್ಲಿ ಮ್ಯಾಥ್ಸ್ ಟ್ಯೂಶನ್‌ ನಲ್ಲಿ ಪ್ರಾಬ್ಲಮ್ಸ್ ಬಗ್ಗೆ ಡಿಸ್ಕಶನ್‌ ಆಗುತ್ತೆ. ಅದನ್ನು ನಾನು ಮಿಸ್‌ ಮಾಡಿಕೊಳ್ಳುವುದು ಆಗುವುದಿಲ್ಲ,'' 12 ವರ್ಷದ ವಿನಯ್‌ನ ಭಾವಭಂಗಿ ಇತ್ತೀಚಿನ ಮಕ್ಕಳು ಓದಿನ ಬಗ್ಗೆ ಅದೆಷ್ಟು ಗಂಭೀರರಾಗಿದ್ದಾರೆ ಎನ್ನುವುದನ್ನು ಬಿಂಬಿಸುತ್ತಿತ್ತು.

ಕುರ್ಚಿಯ ಮೇಲೆ ಕಣ್ಮುಚ್ಚಿಕೊಂಡು ಕುಳಿತು ಬೆರಳುಗಳನ್ನು ಹಿಂದೆ ಮುಂದೆ ಮಾಡಿಕೊಳ್ಳುತ್ತಾ, ಗೌರವ್ ಗಾಢ ಚಿಂತೆಯಲ್ಲಿ ಮುಳುಗಿದ. ಅವನ ತಂದೆ ಅರುಣ್‌ ರಾವ್ 3 ವರ್ಷಗಳ ಹಿಂದೆ ನಿರ್ದೇಶಕ ಹುದ್ದೆಯಿಂದ ನಿವೃತ್ತರಾಗಿದ್ದರು. ಬೇರೆ ಬೇರೆ ರಾಜ್ಯಗಳಲ್ಲಿ ವರ್ಗಾವಣೆಗೊಂಡು, ಜವಾಬ್ದಾರಿ ನಿಭಾಯಿಸುತ್ತಾ ಅವರು ತಮ್ಮ ಕಾರ್ಯಾವಧಿಯಲ್ಲಿ ಬಹಳ ವ್ಯಸ್ತರಾಗಿರುತ್ತಿದ್ದರು. ನಿವೃತ್ತಿಯ ನಂತರ ಹಾಗೆ ಸುಮ್ಮನೆ ಕುಳಿತುಕೊಳ್ಳುವುದು ಅವರಿಗೆ ಇಷ್ಟವಾಗುತ್ತಿರಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ