ಟಕ್‌.....ಟಕ್‌.....ಟಕ್‌.... ಬಾಗಿಲು ಒಂದೇ ಸಮನೇ ಬಡಿಯುತ್ತಿರುವ ಶಬ್ದ ಕೇಳಿಸುತ್ತಿತ್ತು. ಬೇಸಿಗೆಯ ಮಧ್ಯಾಹ್ನದ ಹೊತ್ತಿನಲ್ಲಿ ನಮಗದು ಅತ್ಯಂತ ಅಸಾಮಾನ್ಯ ಎನಿಸುತ್ತಿತ್ತು. ಅದು ಯಾವುದೊ ಸಂಕಷ್ಟದ ಸಮಯ ಅಥವಾ ನಮ್ಮನ್ನು ಯಾರಾದರೂ ಎಚ್ಚರಿಸಲು ಹೀಗೆ ಒಂದೇ ಸಮನೆ ಬಾಗಿಲು ಬಡಿಯುತ್ತಿರಬಹುದು ಎನಿಸಿತು. ನಾವೆಲ್ಲ ಅಚ್ಚರಿಗೊಳಗಾಗಿ ಬಾಗಿಲಿನತ್ತ ಧಾವಿಸಿದೆ. ನಾನಂತೂ ಉಳಿದವರನ್ನು ಹಿಂದೆ ಹಾಕಿ ಬಾಗಿಲ ಬಳಿ ಓಡಿದೆ. ಒಬ್ಬ ವ್ಯಕ್ತಿ ಮಾಸ್ಕ್ ಧರಿಸಿ ಹೊರಗೆ ನಿಂತಿರುವುದು ಕಂಡುಬಂತು.

ನಾನು ಒಳಗಿನಿಂದಲೇ ಕೇಳಿದೆ, ``ಏನ್‌ ವಿಷಯ?''

ಆ ವ್ಯಕ್ತಿ ಸ್ವಲ್ಪ ಆತುರಾತುರದಲ್ಲಿಯೇ ಉಸುರಿದ, ``ಮೇಡಂ, ನಿಮ್ಮ ಮರ ನೆಲಕ್ಕುರುಳಿದೆ.''

``ಏನು?'' ಎಂದು ಕೇಳುತ್ತ ನಾವೆಲ್ಲ ಅಂಗಳದತ್ತ ಓಡಿದೆವು. ಅಲ್ಲಿನ ದೃಶ್ಯ ನೋಡಿ ನಾವೆಲ್ಲ ಗಾಬರಿಗೊಳಗಾದೆವು.

``ಇದೇನಿದು? ಇದೇಗ್ಹಾಯಿತು?''

ಮರ ರಸ್ತೆಯ ನಟ್ಟನಡುವೆ ಉರುಳಿಬಿದ್ದಿತ್ತು. ಅದರಲ್ಲಿನ ಕೆಲವು ಒಣಗಿದ ಟೊಂಗೆಗಳು ಅತ್ತಿತ್ತ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮರದ ಕೆಳಭಾಗದಲ್ಲಿ ನಾವು ಅಂಚಿನಗುಂಟ ಸಣ್ಣ ಸಣ್ಣ ಸಸಿಗಳನ್ನು ನೆಟ್ಟಿದ್ದೆವು. ಅವು ಅದರ ಬುಡದ ಭಾಗದಲ್ಲಿ ಅಪ್ಪಚ್ಚಿಯಾಗಿ ಹೋಗಿದ್ದವು. ಮರದ ಮೇಲೆ ಕಟ್ಟಲಾಗಿದ್ದ ಟಿ.ವಿ ಕೇಬಲ್ ಮರದ ಜೊತೆ ಜೊತೆಗೆ ಕೆಳಗೆ ತುಂಡಾಗಿ ಬಿದ್ದು ಹೋಗಿದ್ದವು. ಮನೆಯ ಎದುರುಗಡೆ ವಾಸಿಸುತ್ತಿದ್ದ ಕುಟುಂಬದವರ ಕಾರುಗಳು ಮಾತ್ರ ಮರದ ಟೊಂಗೆಗಳಡಿ ಸಿಲುಕದೆ ಸುರಕ್ಷಿತವಾಗಿದ್ದವು. ಮರದಿಂದ ಅವುಗಳಿಗೆ ಒಂದು ಸಣ್ಣ ತರಚು ಗಾಯ ಕೂಡ ಆಗಿರಲಿಲ್ಲ.

ಅದು ಬೇಸಿಗೆಯ ಉರಿಬಿಸಿಲಿನ ದಿನಗಳು. ಹೀಗಾಗಿ ರಸ್ತೆಯಲ್ಲಿ ಸಂಚಾರ ವಿರಳವಾಗಿತ್ತು. ನಾನು ಮನಸಾರೆ ಆ ಒಣಗಿದ್ದ ಮರ ಉರುಳಿಬಿದ್ದದ್ದನ್ನು ಗಮನಿಸಿ ನೋಡತೊಡಗಿದೆ. ಅದನ್ನು ನೋಡಿ ನನಗೆ 30 ವರ್ಷಗಳ ಹಿಂದಿನ ನೆನಪು ತಾಜಾ ಆಯಿತು.

ನಾವು ಆಗಷ್ಟೇ ಆ ಮನೆಗೆ ವಾಸಿಸಲು ಬಂದಿದ್ದೆವು. ನಮ್ಮ ನೆರೆಮನೆಯಾಕೆ ಒಂದು ಪುಟ್ಟ ಸಸಿ ಕೊಡುತ್ತ ನನಗೆ ಹೇಳಿದ್ದರು, ``ನಮ್ಮ ಬೀದಿಯುದ್ದಕ್ಕೂ ಇಂತಹದೇ ಸಸಿಗಳನ್ನೇ ನೆಟ್ಟಿದ್ದಾರೆ. ನಿಮಗೂ ಅಂಥದೇ ಕೊಡಬೇಕು ಅನಿಸಿ ಇದನ್ನು ನಿಮಗೆ ಕೊಡುತ್ತಿರುವೆ. ಒಂದೇ ರೀತಿಯ ಮರಗಳನ್ನು ನೋಡಿದಾಗ ಬಹಳ ಖುಷಿಯಾಗುತ್ತದೆ.''

ಆ ಪುಟ್ಟ ಸಸಿ ಕ್ರಮೇಣ ದೊಡ್ಡದಾಗುತ್ತ ಹೋಯಿತು. ಸದಾ ಹಸಿರಾಗಿರುತ್ತಿತ್ತು. ಅದರಲ್ಲಿ ಪುಟ್ಟ ಬಿಳಿ ಹೂಗಳು ಕಂಡುಬರುತ್ತಿದ್ದವು. ಅದರ ತೀವ್ರ ವಾಸನೆ ಬಹಳ ವಿಚಿತ್ರ ಎನಿಸುತ್ತಿತ್ತು. ಬೇಸಿಗೆಯ ದಿನಗಳಲ್ಲಿ ಉದ್ದನೆಯ ತೆಳ್ಳನೆಯ ಬೀನ್ಸ್ ನಂತಹ ಕಾಯಿಗಳು, ಹಾರುತ್ತಿದ್ದ ಬೀಜಗಳು ಬಹಳಷ್ಟು ತೊಂದರೆ ಉಂಟು ಮಾಡುತ್ತಿದ್ದವು. ಅವು ಎಲ್ಲರ ಮನೆಯೊಳಗೆ ಹೇಳದೆ ಕೇಳದೆ ನುಸುಳುತ್ತಿದ್ದವು. ಆದರೆ ಆ ಮರ ಸದಾ ಹಸಿರಾಗಿರುತ್ತಿದ್ದುದರಿಂದ ಈ ಒಂದಿಷ್ಟು ಬಂದು ಹೋಗುವ ತೊಂದರೆಗಳು ಅಷ್ಟೊಂದು ಮಹತ್ವ ಪಡೆದುಕೊಳ್ಳುತ್ತಿರಲಿಲ್ಲ. ನಾನು ಕೊನೆಗೂ ಮರದ ಹೆಸರು ಏನೆಂದು ಪತ್ತೆ ಮಾಡಿದೆ. ಸಸ್ಯಶಾಸ್ತ್ರಜ್ಞರೊಬ್ಬರು ಅದರ ಹೆಸರು `ಸಪ್ತಪರ್ಣಿ' ಎಂದು ಹೇಳಿದರು.

ಒಂದೇ ಗುಚ್ಛದಲ್ಲಿ ಏಕಕಾಲಕ್ಕೆ 7 ಎಲೆಗಳನ್ನು ಬಿಡುವುದರಿಂದ ಈ ಹೆಸರು ಬಂತೆಂದು ಗೊತ್ತಾಯಿತು. ಆ ಗಿಡದ ಹೆಸರು `ಸಪ್ತಪರ್ಣಿ' ನನಗೆ ಬಹಳ ಇಷ್ಟವಾಯಿತು. ಜೊತೆಗೆ ಅದರ ತೀವ್ರ ವಾಸನೆಯ ಕಾರಣದಿಂದ ಅದಕ್ಕೆ ಸ್ಥಳೀಯ ಭಾಷೆಯಲ್ಲಿ ಬೇರೆ ಬೇರೆ ಹೆಸರುಗಳಿವೆ ಎನ್ನುವುದು ಕೂಡ ತಿಳಿಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ