ಸ್ನೇಹಾ ಆಫೀಸಿನಿಂದ ಹೊರಡುತ್ತಿದ್ದಂತೆ, ಕಪಿಲ್ ‌ಬೈಕಿನಲ್ಲಿ ಅವಳಿಗಾಗಿ ಕಾಯುತ್ತಿದ್ದ. ಸ್ನೇಹಾ ಅತ್ತಿತ್ತ ಓಲಾಡುತ್ತಾ ಅವನ ಹಿಂದೆ ಕುಳಿತು ಮುಖಕ್ಕೆ ಸ್ಕಾರ್ಫ್‌ ಕಟ್ಟಿಕೊಂಡಳು. ಸ್ವಲ್ಪ ದೂರ ಹೋಗುತ್ತಿದ್ದಂತೆ ಅವಳು ಅವನ ಕತ್ತಿಗೊಂದು ಕಿಸ್‌ ಕೊಟ್ಟಳು. ನಿರ್ಜನ ಪ್ರದೇಶ ಬರುತ್ತಿದ್ದಂತೆಯೇ ಕಪಿಲ್ ‌ಬೈಕ್‌ನ್ನು ಒಂದು ಕಡೆ ನಿಲ್ಲಿಸಿದ. ಸ್ನೇಹಾ ನಗುತ್ತಲೇ ಬೈಕಿನಿಂದ ಇಳಿದಳು. ಕಪಿಲ್ ‌ತನ್ನ ಹೆಲ್ಮೆಟನ್ನು ತಲೆಯಿಂದ ತೆಗೆಯುತ್ತಿದ್ದಂತೆ ಸ್ನೇಹಾ ಅವನ ಕೊರಳಿಗೆ ತನ್ನ ಬಾಹುಗಳನ್ನು ಚಾಚಿದಳು. ಕಪಿಲ್ ಕೂಡ ಅವಳ ಸೊಂಟ ಬಳಸಿ ತನ್ನೆಡೆಗೆ ಎಳೆದುಕೊಂಡ. ಇಬ್ಬರೂ ಬಹಳ ಹೊತ್ತು ಅದೇ ಸ್ಥಿತಿಯಲ್ಲಿದ್ದರು.

ಉಸಿರಾಟದ ಏರುಪೇರನ್ನು ನಿಯಂತ್ರಣಕ್ಕೆ ತಂದುಕೊಳ್ಳುತ್ತ ಸ್ನೇಹಾ, ``ನೋಡು, ನಾವೀಗಲೇ ನಮ್ಮ ಮನೆಗೆ ಹೋಗಬೇಕು,'' ಎಂದಳು.

``ಮನೆಗಾ? ಏಕೆ?'' ಕಪಿಲ್ ‌ಅಚ್ಚರಿಯಿಂದ ಕೇಳಿದ.

``ಹೌದು. ಮನೆಯಲ್ಲಿ ಯಾರೂ ಇಲ್ಲ. ಅದಕ್ಕೆ ಬಾ ಅಂತೀರೋದು.''

``ನಿನ್ನ ಅಮ್ಮ ಅಪ್ಪ ಎಲ್ಲಿ ಹೋದರು?''

``ಯಾರೊ ಸಂಬಂಧಿಕರ ನಿಧನ ಆಗಿದೆ. ಊರಿಗೆ ಹೋಗಿದ್ದಾರೆ. ಬರೋಕೆ ರಾತ್ರಿ ಆಗುತ್ತೆ.''

``ಹಾಗಾದರೆ ನಡಿ, ನಾವೇಕೆ ತಡ ಮಾಡಬೇಕು? 15 ದಿನಗಳಿಂದ ಮಾಡಲಾಗದ್ದನ್ನು ಇವತ್ತು ಮಾಡಲು ಆದೀತಾ ಎಂದು ನಾನು ಯೋಚಿಸುತ್ತಿರುವೆ. ಈ ಮಹಾನಗರದಲ್ಲಿ ಜಾಗ ಸಿಗೋದೇ ಇಲ್ಲ. ಕಳೆದ ಬಾರಿ ನನ್ನ ಮನೆಯಲ್ಲಿ ಯಾರೂ ಇರಲಿಲ್ಲ. ಆಗ ಅವಕಾಶ ಸಿಕ್ಕಿತ್ತು,'' ಎಂದು ಕಪಿಲ್ ‌ಹೇಳಿದ.

``ಬಾ.... ಬಾ.... ಹೋಗೋಣ. ಈಗ ಮಾತು ಕಡಿಮೆ, ಮತ್ತೇನೋ ಮಾಡುವ ಮೂಡಿನಲ್ಲಿ ನಾನಿದ್ದೇನೆ.'' ಕಪಿಲ್ ‌ಅತ್ಯಂತ ಉತ್ಸಾಹದಿಂದ ತನ್ನ ಬೈಕ್‌ನ್ನು ಸ್ನೇಹಾಳ ಮನೆಯ ಕಡೆ ಓಡಿಸಿದ. ರಸ್ತೆಯುದ್ದಕ್ಕೂ ಸ್ನೇಹಾ ಮುಖಕ್ಕೆ ಸ್ಕಾರ್ಫ್‌ ಕಟ್ಟಿಕೊಂಡೇ ಕಪಿಲ್ ‌ನ ಸೊಂಟ ಬಳಸಿ ಕುಳಿತುಕೊಂಡಳು. ಇಬ್ಬರೂ ಪ್ರೇಮಿಗಳು ತಮ್ಮದೇ ಆದ ಲೋಕದಲ್ಲಿ ಕಳೆದುಹೋಗಿದ್ದರು.

ಇಬ್ಬರ ಅಫೇರ್‌ಎರಡು ವರ್ಷಗಳಿಂದ ನಡೆಯುತ್ತಿತ್ತು. ಇಬ್ಬರ ಆಫೀಸುಗಳು ಒಂದೇ ಕಟ್ಟಡದಲ್ಲಿದ್ದವು. ಅದೇ ಬಿಲ್ಡಿಂಗಿನ ಕೆಫೆಟೆರಿಯಾ ಇಲ್ಲವೇ ಲಿಫಅಟ್ ನಲ್ಲಿ ಆಗಾಗ ಅವರ ಭೇಟಿ ಆಗುತ್ತಿತ್ತು. ಇಬ್ಬರೂ ಪರಸ್ಪರರನ್ನು ನೋಡಿಯೇ ಇಷ್ಟಪಟ್ಟಿದ್ದರು. ಸ್ನೇಹಾಳ ಬೋಲ್ಡ್ ನೆಸ್‌ ಅವನಿಗೆ ಬಹಳ ಇಷ್ಟವಾಗುತ್ತಿತ್ತು. ಕಪಿಲ್‌ನ ಶಾಂತ ಸ್ವಭಾವದ ಬಗ್ಗೆ ಸ್ನೇಹಾ ಬಹಳ ಪ್ರಭಾವಿತಳಾಗಿದ್ದಳು. ಈ ಎರಡು ವರ್ಷಗಳಲ್ಲಿ ಅವರು ಅದೆಷ್ಟು ಸಲ ದೈಹಿಕ ಸಾಮೀಪ್ಯ ಹೊಂದಿದ್ದರೊ ಲೆಕ್ಕವಿಲ್ಲ.

ಸ್ನೇಹಾ ಜೀವನವನ್ನು ಮುಕ್ತವಾಗಿ ಜೀವಿಸಲು ಇಷ್ಟಪಡುತ್ತಿದ್ದಳು. ಅದೆಷ್ಟೋ ಸಲ ಅವಳ ಜೀವನದ ರೀತಿ ನೀತಿ ನೋಡಿಯೇ ಅವನಿಗೆ ಅಚ್ಚರಿಯಾಗುತ್ತಿತ್ತು. ಸ್ನೇಹಾಳ ಮನೆಯಲ್ಲಿ ಅವಳ ಅಪ್ಪ ಅಮ್ಮ ಇಬ್ಬರೂ ಉದ್ಯೋಗಿಗಳಾಗಿದ್ದರು. ತಮ್ಮ ಕಾಲೇಜಿಗೆ ಹೋಗುತ್ತಿದ್ದ. ಇತ್ತ ಕಪಿಲ್ ‌ತನ್ನ ತಾಯಿ ತಂದೆಗೆ ಏಕೈಕ ಮಗ. ಅಮ್ಮ  ಗೃಹಿಣಿ, ಅಪ್ಪ ಬಿಲ್ಡರ್‌ ಆಗಿದ್ದರು. ಅವರ ಮನೆ ಪರಿಸ್ಥಿತಿ ಚೆನ್ನಾಗಿಯೇ ಇತ್ತು. ಯಾವುದೇ ಕೊರತೆ ಇರಲಿಲ್ಲ.

ಕಪಿಲ್ ‌ಸ್ನೇಹಾಳ ಬಗ್ಗೆ ತನ್ನ ಮನೆಯಲ್ಲಿ ತಿಳಿಸಿದ್ದ. ಅವಳನ್ನು ಸೊಸೆಯಾಗಿ ತಂದುಕೊಳ್ಳಲು ಅವರಿಗೆ ಯಾವುದೇ ಆಕ್ಷೇಪ ಇರಲಿಲ್ಲ. ಸ್ನೇಹಾ ಕೂಡ ಆಗಾಗ ಕಪಿಲ್ ಮನೆಗೆ ಹೋಗಿ ಬರುವುದು ನಡೆಯುತ್ತಿತ್ತು. ಆದರೆ ಸ್ನೇಹಾಳ ಮನೆಯಲ್ಲಿ ಮಾತ್ರ ಕಪಿಲ್ ಬಗ್ಗೆ ಯಾವುದೇ ವಿಷಯ ತಿಳಿದಿರಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ