2020ರ ಮಾರ್ಚ್‌ ತಿಂಗಳು. ವಾತಾವರಣ ಅತ್ಯಂತ ಹಿತಕರವಾಗಿತ್ತು. ತರುಣ್‌ ಬೆಂಗಳೂರಿನ ಅಪಾರ್ಟ್‌ ಮೆಂಟಿನ ತನ್ನ ಮನೆಯಲ್ಲಿ ನೆಮ್ಮದಿಯಿಂದ ಮಲಗಿಕೊಂಡಿದ್ದ. ಆಗ ಅವನ ಫೋನ್‌ ರಿಂಗಾಯ್ತು. ನಿದ್ರೆಯಲ್ಲಿಯೇ ಒಂದಿಷ್ಟು ಕಣ್ತೆರೆದು ಸಮಯ ನೋಡಿದ. ರಾತ್ರಿಯ 2 ಗಂಟೆ ಆಗಿತ್ತು.`ಇಂತಹ ಹೊತ್ತಿನಲ್ಲಿ ಯಾರದಪ್ಪ ಫೋನ್‌....' ಎಂದು ತನಗೇ ತಾನೇ ಗೊಣಗುತ್ತಾ ಸೈಡ್ ಟೇಬಲ್ ಮೇಲಿದ್ದ ಫೋನ್‌ ಕೈಗೆತ್ತಿಕೊಂಡು ``ಹಲೋ.....'' ಎಂದ.

``ನೀವು ತರುಣ್‌ ಅಲ್ವಾ.....?''

``ಹೌದು. ನಾನು ತರುಣ್‌ ಮಾತನಾಡ್ತಿರೋದು.... ನೀವು ಯಾರು?''

``ನಾನು ಜಯದೇವ್ ಆಸ್ಪತ್ರೆಯಿಂದ ಮಾತನಾಡ್ತಿರೋದು. ನಿಮಗೆ ಪ್ರತಾಪ್‌ ಬಗ್ಗೆ ಗೊತ್ತಾ....? ನಿಮ್ಮ ನಂಬರ್‌ ಅವರ ಎಮರ್ಜೆನ್ಸಿ ಕಾಂಟ್ಯಾಕ್‌ ಲಿಸ್ಟಿನಲ್ಲಿ ಸಿಕ್ಕಿತು.''

``ಹೌದು. ಪ್ರತಾಪ್‌ ನನ್ನ ಗೆಳೆಯ. ಅವನಿಗೆ ಏನಾಯ್ತು?'' ಬೆಡ್‌ ನಿಂದ ಮೇಲೇಳುತ್ತಾ ತರುಣ್‌ ಗಾಬರಿಯ ಧ್ವನಿಯಲ್ಲಿ ಕೇಳಿದ.

``ತರುಣ್‌, ನಿಮ್ಮ ಗೆಳೆಯನಿಗೆ ಹಾರ್ಟ್‌ ಆಟ್ಯಾಕ್‌ ಆಗಿದೆ.''

``ಓಹ್‌.....!  ಈಗ ಅವನು ಹೇಗಿದ್ದಾನೆ?''

``ಈಗ ಅವರು ಆರಾಮಾಗಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ.''

``ನಾನು ಈಗಲೇ ಹೊರಟು ಬರ್ತೀನಿ.''

``ಬೇಡ ಬೇಡ. ನೀವು ಈಗಲೇ ಬರುವ ಅಗತ್ಯವಿಲ್ಲ. ನಾವ ಅವರಿಗೆ ನಿದ್ರೆಯ ಇಂಜೆಕ್ಷನ್‌ ಕೊಟ್ಟಿದ್ದೇವೆ. ಬೆಳಗ್ಗೆಯವರೆಗೂ ಅವರಿಗೆ ಎಚ್ಚರವಾಗುವುದಿಲ್ಲ. ಬೆಳಗ್ಗೆ 11 ಗಂಟೆಗೆ ನೀವು ಬನ್ನಿ. ಆಗ ಡಾಕ್ಟರ್‌ ಕೂಡ ಬಂದಿರುತ್ತಾರೆ. ಅವರೊಂದಿಗೆ ನೀವು ಮಾತನಾಡಬಹುದು.''

``ಸರಿ...ಸರಿ...'' ಎಂದು ಹೇಳಿ ಫೋನ್‌ಇಟ್ಟು ಪುನಃ ನಿದ್ರಿಸುವ ಪ್ರಯತ್ನ ಮಾಡತೊಡಗಿದ.

ಆದರೆ ನಿದ್ರೆ ಅವನ ಕಣ್ಣುಗಳಿಂದ ಗಾವುದ ದೂರ ಹೋಗಿಬಿಟ್ಟಿತ್ತು. ಅವನ ಮನಸ್ಸು ತಳಮಳಗೊಂಡಿತ್ತು. ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದ ಶಾಲಿನಿಯನ್ನು ಎಬ್ಬಿಸಿ ವಿಷಯ ತಿಳಿಸುವ ಮನಸ್ಸು ಅವನಿಗೆ ಆಗಲಿಲ್ಲ.

ಅವನು ಕಣ್ಮುಚ್ಚಿ ಮತ್ತೊಮ್ಮೆ ಮಲಗುವ ಪ್ರಯತ್ನ ಮಾಡತೊಡಗಿದ. ಆದರೆ ನಿದ್ರೆಯ ಬದಲು ಅವನ ಕಣ್ಣುಗಳ ಮುಂದೆ 20 ವರ್ಷ ಹಿಂದೆ ಹುಬ್ಬಳ್ಳಿಯ ಎಂಜಿನಿಯರಿಂಗ್‌ ಕಾಲೇಜಿನ ದಿನಗಳು ನೆನಪಿಗೆ ಬಂದವು.

ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದ ತರುಣ್‌, ತನ್ನ ತಾಯಿ ತಂದೆಯರ ಹಿರಿಯ ಮಗ. ಅವನ ಬಗ್ಗೆ ಅವರು ಬಹಳಷ್ಟು ಅಪೇಕ್ಷೆ ಇಟ್ಟುಕೊಂಡಿದ್ದರು. ಒಳ್ಳೆಯ ಶಿಕ್ಷಣ ಪಡೆದುಕೊಂಡು ಆದಷ್ಟು ಬೇಗ ತನ್ನ ಕಾಲ ಮೇಲೆ ತಾನು ನಿಂತು, ತನ್ನ ತಮ್ಮಂದಿರ ಓದಿಗಾಗಿ ನೆರವು ನೀಡಬೇಕೆಂಬ ತುಡಿತ ಅವನಿಗಿತ್ತು.

ಅದೇ ಯೋಜನೆಯನ್ವಯ ಅವನು ಎಂಜಿನಿಯರಿಂಗ್‌ ಎಂಟ್ರೆನ್ಸ್ ಪರೀಕ್ಷೆಯಲ್ಲಿ ತೊಡಗಿಕೊಂಡ. ಮೊದಲ ಪ್ರಯತ್ನದಲ್ಲಿಯೇ ಅವನಿಗೆ ಒಳ್ಳೆಯ ಕಾಲೇಜಿನಲ್ಲಿ ಅಡ್ಮಿಶನ್‌ ದೊರಕಿತು.

ಕಾಲೇಜು ಸೇರಿಕೊಂಡ ಬಳಿಕ ಅಲ್ಲಿ ಅವನಿಗೆ ಅನೇಕ ಶ್ರೀಮಂತ ವಿದ್ಯಾರ್ಥಿಗಳ ಪರಿಚಯವಾಯಿತು. ಅವರಲ್ಲೊಬ್ಬ ವಿದ್ಯಾರ್ಥಿ ಪ್ರತಾಪ್‌. ಉದ್ದನೆಯ ಕಾಯ, ಬೆಳ್ಳಗಿನ ಬಣ್ಣ, ಗುಂಗುರು ಕೂದಲಿನ ಸ್ಮಾರ್ಟ್‌, ಸುಂದರ ಮುಖ.

ಪ್ರತಾಪ್‌ ಒಂದೆಡೆ ಆಕರ್ಷಕ ವ್ಯಕ್ತಿತ್ವ ಹೊಂದಿದ್ದನಾದರೆ, ಇನ್ನೊಂದೆಡೆ ಓದಿನಲ್ಲೂ ಮುಂದಿದ್ದ. ಶ್ರೀಮಂತ ತಾಯಿ ತಂದೆಗೆ ಅವನು ಕೊನೆಯ ಮಗ. ಶ್ರೀಮಂತಿಕೆಯ ಸುಖ ಹಾಗೂ ಕುಟುಂಬದವರ ಹೆಚ್ಚುವರಿ ಪ್ರೀತಿ ಅವನಿಗೆ ಸಿಗುತ್ತಿತ್ತು. ಪ್ರತಿಯೊದು ಕಲೆಯ ಬಗ್ಗೆ ಆಸಕ್ತಿ ಅವನಿಗೆ ಪರಂಪರಾಗತವಾಗಿಯೇ ದೊರಕಿತ್ತು. ಅವನ ವ್ಯಕ್ತಿತ್ವಕ್ಕೆ ಅದು ಒಂದು ರೀತಿಯ ಸಾಣೆ ಹಿಡಿಸಿದಂತಿತ್ತು. ಅವನು ತನ್ನೆಲ್ಲ ಈ ವಿಶೇಷತೆಯ ಕಾರಣದಿಂದ ಹುಡುಗಿಯರ ವಲಯದಲ್ಲಿ ಸಾಕಷ್ಟು ಜನಪ್ರಿಯನಾಗಿದ್ದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ