ಮೊದಲಿನಿಂದಲೂ ಹಿರಿಯರಿಂದ ಅಥವಾ ಬೇರೆಯವರಿಂದ ಯಾವುದೋ ಒಂದು ವಿಧದಲ್ಲಿ ನಾವೆಲ್ಲರೂ ಶಟ್ಅಪ್ಅನ್ನಿಸಿಕೊಂಡಿರುತ್ತೇವೆ. ಇದಕ್ಕೆ ಬೇಸರವೇಕೆ? ಇಂದು ನಮಗೆ..... ಅದು ನಾಳೆ ಬೇರೆಯವರಿಗೆ.....!

ಶಟ್‌ ಅಪ್‌ ಅಂದ್ರೆ ಬಾಯಿ ಮುಚ್ಚು! ಅಂತ ಕನ್ನಡ ಕ್ಲಾಸಿನಲ್ಲಿ ಹೇಳಿ ಕೊಟ್ಟಿದ್ದೇನೋ ಆಯ್ತು. ಆದರೆ ನಮ್ಮ ವಿದ್ಯಾರ್ಥಿಗಳು ಅದನ್ನು ತುಂಬಾ ರೂಡ್‌ ಅಂದ್ರು. ಆಗ ನಾವು ಶಟ್‌ ಅಪ್‌ ಅಲ್ಲ. ಕ್ಲೋಸ್‌ ದ ಮೌತ್‌ ಅಂತ ಬದಲಾವಣೆ ಮಾಡಿದ್ದೇನೋ ಆಯ್ತು. ಅದ್ರೂ ನಿಜವಾಗಲೂ ಬಾಯಿ ಮುಚ್ಚಿಕೊಂಡಿರೋದು ಬಹಳ ಕಷ್ಟ. ಆದ್ರೆ ಒಂದಲ್ಲ ಒಂದು ದಿನ ಬಾಯಿ ಮುಚ್ಚಿಕೊಂಡಿರೋ ಸಮಯ ಬಂದೇ ಬರುತ್ತೆ. ಬಾಯಿ ಮುಚ್ಚೋದು ಅಂದ್ರೆ ಕಣ್ಣು ಮುಚ್ಚೋದು ಅಲ್ಲ. ಕಣ್ಣು ಬಿಟ್ಟುಕೊಂಡು, ಜೀವ ಬಿಗಿ ಇಟ್ಟುಕೊಂಡು, ಬಾಯಿ ಮಾತ್ರ ಮುಚ್ಚಿಕೊಂಡಿರೋದು. ಅದು ನಿಜಕ್ಕೂ ಬಹಳ ಕಷ್ಟ.

ಬೆಳಗ್ಗೆ ಎದ್ದಾಗಲಿಂದ ರಾತ್ರಿ ಮಲಗಿಕೊಳ್ಳುವವರೆಗೂ ಬಾಯಿ ಮುಚ್ಚಿಕೊಂಡಿರೋದು ಸ್ವಲ್ಪ ಕಷ್ಟವಾದ್ರೂ ಕ್ಷೇಮ ಅಲ್ವೇ? ಬೆಳಗ್ಗೆ ಎದ್ದು ಬಂದಾಗ ಸೊಸೆ ಜೊತೆ ನಮ್ಮ ಅಸಿಸ್ಟೆಂಟ್‌ ಕುಕ್‌ ಏನಾದ್ರೂ ಮಾಡ್ತಾ ಇರ್ತಾಳೆ. ಅವಳದು ಎಂತಾ ಗತ್ತು ಗೊತ್ತಾ? ಅವ್ಳು ಏನೂ ತಪ್ಪು ಮಾಡೋಲ್ಲಾ ಅನ್ನೋದೇ ಅವಳ ನಂಬಿಕೆ. ನನಗೆ ಬೇರೆ ಕೆಲ್ಸ ಇರೋಲ್ವಾ.... ಮಾಡಿದ ತಪ್ಪು ಎದ್ದು ಕಾಣಿಸಿಬಿಡುತ್ತೆ. ಅವಳಿಗೇನಾದ್ರೂ ಹೇಳಿದ್ರೆ, ಒಂದು ದೊಡ್ಡ ಭಾಷಣ ಮಾಡಿಬಿಡ್ತಾಳೆ. ಅವಳಿಗೆ ಎಲ್ಲಿಲ್ಲದ ಸ್ವಾಭಿಮಾನ. ಅವಳು ತನ್ನ ತಪ್ಪನ್ನು ಒಪ್ಪಿಕೊಂಡು ಬಿಡ್ತಾಳಾ..... ಅದು ನಿಮ್ಮ ಕನಸೇ ಸರಿ. ಅದರ ಜೊತೆ ಅಲ್ಲೇ ಕಾಫಿ ಕುಡಿತಿರೋ ಮಗ, ``ಅಮ್ಮಾ, ಅವರು ಮಾಡಿಕೊಳ್ತಾರೆ. ನೀನ್ಯಾಕೆ ತಲೆ ಕೆಡಿಸಿಕೊಳ್ತೀಯಾ? ನೀನು ಸ್ವಲ್ಪ ಸುಮ್ಮನೆ ಇರಬಾರದಾ,'' ಎಂದು ಭರತ ವಾಕ್ಯ ನುಡಿಯುತ್ತಾನೆ.

ಪಡಸಾಲೆಯಲ್ಲಿ ಅಲ್ಲೇ ಪೇಪರ್‌ ಓದ್ತಾ ಇರ್ತೀನಿ. ಫ್ರಿಜ್‌ ಬಾಗಿಲು ಹಾರು ಹೊಡೆದಿರುತ್ತೆ. ಒಗ್ಗರಣೆಗೆ ಬೇಕಾದ ಕರಿಬೇವು ತೆಗೆದುಕೊಳ್ಳೋಕೆ ತೆರೆದದ್ದು. ಒಗ್ಗರಣೆ ಹಾಕಿ ಎಲ್ಲಾ ಮುಗಿಯುವ ತನಕ ಅದು ತೆರೆದೇ ಇರುತ್ತದೆ. ಆದ್ರೆ ಏನೂ ಅನ್ನುವ ಹಾಗಿಲ್ಲ. ಅಂದರೆ ಕೇಳೋದು ಇಲ್ಲ. ಅವರ ಉತ್ತರ ಏನಿರಬಹುದೆಂದು ಗೊತ್ತೇ ಇರುತ್ತಲ್ಲಾ. ಆದ್ದರಿಂದ ಸುಮ್ಮನೆ ಬಾಯಿ ಮುಚ್ಚಿಕೊಂಡಿರೋದು ವಾಸಿ.

ತಯಾರಿಸುವ ಅಡುಗೆ ಯಾವಾಗಲೂ ಹೆಚ್ಚಾಗಿರುತ್ತೆ. ಹೋಗಲಿ ಉಳಿದ ಆಹಾರವನ್ನು ಯಾರಿಗಾದರೂ ಸರಿಯಾದ ರೀತಿಯಲ್ಲಿ ವಿತರಣೆ ಮಾಡಿದರೆ, ಒಟ್ಟಾರೆ ಅದರ ಉಪಯೋಗವಾದ್ರೂ ಆಗುತ್ತೆ. ಆದರೆ ನಮ್ಮ ಮನೆಯ ಕೆಲಸದವರು ನಮಗಿಂತ ಸ್ಪೆಷಲ್. ಅವರು ತೆಗೆದುಕೊಂಡು ಹೋಗಬೇಕಾದರೆ ನಮಗೇ ಉಪಕಾರ ಮಾಡಿದಂತೆ. ಒಂದು ರೀತಿಯಲ್ಲಿ ನಮಗೆ ಉಪಕಾರವೇ. ಆಹಾರವನ್ನು ಹಾಳು ಮಾಡಿದರೆ ಅದರ ಪಾಪ ನಮಗೇ ಸುತ್ತಿಕೊಳ್ಳುತ್ತಲ್ಲ.

ಮನೆಯಲ್ಲಿ ಎಲ್ಲಾ ಲೈಟುಗಳನ್ನು ಹಾಕುವುದು ರೂಢಿ. ಯಾರಿದ್ದರೂ ಅಷ್ಟೇ ಅಥವಾ ಇಲ್ಲದಿದ್ದರೂ ಅಷ್ಟೇ. ಎಲ್ಲಾ ಲೈಟುಗಳನ್ನು ಹಾಕೇ ಇರಬೇಕು, ಫ್ಯಾನ್‌ ಓಡುತ್ತಲೇ ಇರಬೇಕು. ಆದರೂ ಏನೂ ಅನ್ನುವ ಹಾಗಿಲ್ಲ. ಕರೆಂಟ್‌ ಬಿಲ್ ‌ಎಷ್ಟು ಬಂದರೂ ಸರಿ. ಆದ್ರೂ ಮಾತಾಡೋ ಹಾಗಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ