ಯೌವನದ ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಹತಿ - ಸುಮುಖ ಹಿರಿಯರು ಎಷ್ಟೇ ಬೇಡವೆಂದರೂ ಆತುರಾತುರದಲ್ಲಿ ಪ್ರೇಮಕ್ಕೆ ಸಿಲುಕಿದವರು ಮದುವೆಗೆ ದುಮುಕಿದರು. ಇದರಿಂದ ಮಹತಿಯ ವ್ಯಾಸಂಗ ಅಪೂರ್ಣವಾಯಿತು. ಅವರ ಈ ಪ್ರೇಮ ಪರ್ವ ಮುಂದೇನಾಯಿತು......?

``ಮಹತಿ.... ಮಹತಿ...'' ಎಂದು ಸುಜಯಾ ಮಗಳನ್ನು ಕೂಗಿದರು.

``ಈ ದಿನ ಶನಿವಾರ ಅಲ್ವಾ....? ಹೇಗಿದ್ದರೂ ಕಾಲೇಜಿಗೆ ರಜೆ, ಎಲೆಕ್ಟ್ರಿಸಿಟಿ ಬಿಲ್ ‌ಕಟ್ಟಿ ಅಲ್ಲೇ ಇರುವ ಅತ್ತೆ ಮನೆಗೆ ಹೋಗಿ ಈ ಪುಸ್ತಕಗಳನ್ನು ಕೊಟ್ಟು ಬರ್ತೀಯಾ?'' ಎಂದರು.

``ಸರಿ ಕೊಡಮ್ಮಾ.....'' ಎಂದಳು ಮಹತಿ.

ಮಹತಿ ಎಂಜಿನಿಯರಿಂಗ್‌ ಐದನೇ ಸೆಮಿಸ್ಟರ್‌ ಓದುತ್ತಿರುವ ಹುಡುಗಿ. ಅನಂತ್‌ ಹಾಗೂ ಸುಜಯಾರ ಮುದ್ದಿನ ಮಗಳು. ಮಹತಿಯ ಅಣ್ಣ ಮಧು ಎಂಜಿನಿಯರಿಂಗ್‌ ಮುಗಿಸಿ, ಹೆಚ್ಚಿನ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಿದ್ದ. ಅದರಿಂದ ಮನೆಯ ಸಣ್ಣಪುಟ್ಟ ಕೆಲಸಗಳನ್ನು ಮಹತಿಯೇ ಮಾಡುತ್ತಿದ್ದಳು.

ಸುಜಯಾರಿಗೆ ಪುಸ್ತಕಗಳನ್ನು ಓದುವ ಹವ್ಯಾಸ. ತಾನು ಓದಿದ ನಂತರ ಎಲ್ಲವನ್ನೂ ನಾದಿನಿಗೂ ಸಹ ಕಳುಹಿಸುತ್ತಿದ್ದರು. ಮಹತಿ ರೆಡಿಯಾಗಲು ಜೀನ್ಸ್ ಪ್ಯಾಂಟ್‌, ಟೀ ಶರ್ಟ್‌ ತೆಗೆದುಕೊಂಡಳು.

ಅಷ್ಟರಲ್ಲಿ ಸುಜಯಾ, ``ಮಹತಿ, ಅತ್ತೆ ಮನೆಗೆ ಹೋಗ್ತೀಯಲ್ಲ..... ಅವರು ಕೊಟ್ಟ ಚೂಡಿಧಾರ್‌ ಹಾಕಿಕೊಂಡು ಹೋಗು. ಅವರಿಗೆ ಖುಷಿಯಾಗುವುದು,'' ಎಂದರು.

``ಸರಿ....'' ಎಂದು ಚೂಡಿಧಾರ್‌ ಧರಿಸಿ ಹೊರಬಂದ ಮಹತಿ, ``ಅಮ್ಮಾ, ಬೇಗ ಬೇಗ ಕೊಡು. ಅಲ್ಲಿ ಕೆ.ಇ.ಬಿ. ಆಫೀಸ್‌ ನಲ್ಲಿ ತುಂಬಾ ಕ್ಯೂ ಇರುತ್ತೇ,'' ಎಂದು ಗಡಿಬಿಡಿ ಮಾಡುತ್ತಾ ಗಾಡಿ ಕೀ ತೆಗೆದುಕೊಂಡು ಹೊರಟಳು.

ಮಗಳನ್ನು ಕಳುಹಿಸಲು ಹೊರಗೆ ಬಂದ ಸುಜಯಾ, `ತನ್ನ ಮಗಳು ಎಷ್ಟು ಚಂದ ಕಾಣುತ್ತಾಳೆ. ಅಷ್ಟೇ ಒಳ್ಳೆಯ ಹುಡುಗಿ. ಯಾವಾಗಲೂ ಗಲಗಲ ಅಂತ ಮಾತನಾಡುತ್ತಾ ನಗಿಸುತ್ತಾ ಇರುತ್ತಾಳೆ. ಮಹತಿ ಇರುವ ಕಡೆ ಏನೋ ಉಲ್ಲಾಸ ತುಂಬಿರುತ್ತದೆ. ಸದ್ಯ ದೇವರು ಅವಳನ್ನು ಯಾವಾಗಲೂ ಹೀಗೆಯೇ ಸಂತೋಷದಿಂದ ಇಡಲಿ,' ಎಂದು ಯೋಚಿಸುತ್ತಾ ಒಳ ಬಂದರು.

ಮಹತಿ ಬಂದು ಉದ್ದದ ಸಾಲಿನಲ್ಲಿ ನಿಂತಳು. ಅವಳ ಹಾರಾಡುವ ಕೂದಲು, ನಡೆಯುವ ನಡಿಗೆ ಎಲ್ಲದರಲ್ಲೂ ಸೊಬಗು, ಎಲ್ಲರೂ ಅವಳನ್ನು ನೋಡುತ್ತಿದ್ದರು.

ಅಷ್ಟರಲ್ಲಿ ಮಹತಿಗೆ ಅತ್ತೆಯಿಂದ ಫೋನ್‌ ಕಾಲ್ ಬಂದಿತು, ``ಅತ್ತೆ, ಇನ್ನೊಂದು ಗಂಟೆಯಲ್ಲಿ ಬರ್ತೀನಿ,'' ಎಂದು ಹೇಳಿ ಫೋನ್ ಇಟ್ಟಳು.

ಮಹತಿಯ ಮುಂದೆ ಒಬ್ಬ ಹುಡುಗ ನಿಂತಿದ್ದ. ಅವರ ಹಿಂದೆ ಸಾಲು ದೊಡ್ಡದಾಯಿತು. ಅಷ್ಟರಲ್ಲಿ ಒಬ್ಬರು ತುಂಬಾ ವಯಸ್ಸಾದವರು ಬಂದರು. ಅವರು ನಿಂತುಕೊಂಡಿರುವುದನ್ನು ನೋಡಿದ ಮಹತಿ, ``ಅಂಕಲ್ ನೀವು ಅಲ್ಲಿ ಕುಳಿತುಕೊಳ್ಳಿ. ಆ ಬಿಲ್ ‌ನನಗೆ ಕೊಡಿ ನಾನು ಕಟ್ಟಿ ತಂದು ಕೊಡ್ತೀನಿ,'' ಎಂದವಳೇ ಅವರ ಕೈಯಿಂದ ಬಿಲ್ ‌ತೆಗೆದುಕೊಂಡಳು.

ಮುಂದೆ ನಿಂತಿದ್ದ ಹುಡುಗ ಇವಳನ್ನು ನೋಡಿ, ``ಹಾಯ್‌...'' ಎಂದ.

ಬದಲಿಗೆ ಇವಳೂ, ``ಹಾಯ್‌,'' ಎಂದಳು. ಕಟ್ಟಿದ ಬಿಲ್ ರಸೀದಿಯನ್ನು ಆ ವಯಸ್ಸಾದ ವ್ಯಕ್ತಿಗೆ ಕೊಟ್ಟು ಗಾಡಿ ಪಾರ್ಕ್‌ ಮಾಡಿದ್ದ ಕಡೆ ಬಂದಳು.

ಅಲ್ಲಿ ಇವಳ ಮುಂದೆ ನಿಂತಿದ್ದ ಅದೇ ಹುಡುಗ ಬೈಕ್‌ ಮೇಲೆ ಕುಳಿತು ಯಾರೊಂದಿಗೊ ಫೋನ್‌ ನಲ್ಲಿ ಮಾತನಾಡುತ್ತಿದ್ದ. ಇವಳನ್ನು ನೋಡಿ ಕೈ ಆಡಿಸಿದ. ಅವಳೂ ಸಹ ಕೈ ಆಡಿಸಿ ಗಾಡಿ ತೆಗೆದುಕೊಂಡು ಹೊರಟಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ