ಋತು ಅಂದು ಮಧ್ಯಾಹ್ನ ಅರುಣನಿಗೆ ಫೋನ್‌ ಮಾಡಿ ಸಂಜೆ ತನ್ನನ್ನು ಖಂಡಿತಾ ಬಂದು ಭೇಟಿಯಾಗಬೇಕೆಂದು ಒತ್ತಾಯಿಸಿದ್ದಳು.

``ಅರುಣ್‌, ಯಾಕೋ ನನ್ನ ಮನಸ್ಸು ಬಹಳ ಉದ್ವಿಗ್ನಗೊಂಡಿದೆ. ನೀನು ಆಫೀಸಿನಿಂದ ಹೊರಟು ಸೀದಾ ನನ್ನ ಫ್ಲಾಟ್‌ಗೆ ಬಂದುಬಿಡು. ನಾವಿಬ್ಬರೂ ಏಕಾಂತದಲ್ಲಿ ಹರಟೆ ಹೊಡೆದು ಬಹಳ ದಿನ ಆಗಿಹೋಯಿತು,'' ಫೋನಿನಲ್ಲಿ ಋತುವಿನ ದನಿ ಕೇಳಿ ಅವಳು ತುಸು ಚಿಂತೆಗೊಳಗಾಗಿರುವುದನ್ನು ಅರುಣ್‌ ಗ್ರಹಿಸಿದ.

``ನೀನೇಕೆ ವೈಭವನನ್ನು ಕರೆಸಿಕೊಳ್ಳಬಾರದು? ಆಫ್ಟ್ರಾಲ್ ಹೀ ಈಸ್‌ ಆಲ್ ಸೋ ಯುವರ್‌ ಬೆಸ್ಟ್ ಫ್ರೆಂಡ್‌..... ನೀನು ಕರೆದರೆ ಒಂದೇ ಓಟದಲ್ಲಿ ಓಡಿ ಬಂದುಬಿಡುತ್ತಾನೆ.....'' ಎಂದು ಬೇಕೆಂದೇ ಅರುಣ್‌ ವೈಭವ್ ನ ಹೆಸರನ್ನು ಒತ್ತಿ ಹೇಳಿದ.

``ಅಯ್ಯೋ ಬಿಡು.... ಈಗ ನನಗೆ ಯಾವ ಹೊಸ ಫ್ರೆಂಡೂ ಬೇಡ..... ಬದಲಿಗೆ ಮಾಜಿ ಪ್ರೇಮಿಯ ಜೊತೆ ಟೈಂಪಾಸ್‌ಮಾಡಬೇಕಿದೆ,'' ಎಂದು ನಸುನಗುತ್ತಾ ಉತ್ತರ ನೀಡಿದಳು ಋತು.

``ಸೀಮಾ ಸಹ ನಿನ್ನನ್ನು ಭೇಟಿಯಾಗಬೇಕು ಅಂತ ಹೇಳ್ತಿದ್ದಳು. ಅವಳನ್ನೂ ನನ್ನ ಜೊತೆ ಕರೆದುಕೊಂಡು ಬರಲೇ?'' ಅರುಣ್‌ಕೇಳಿದ.

``ಅಂದ್ರೆ.... ನಿನಗೆ ಒಬ್ಬನೇ ಬರಲು ಏನಾದರೂ ತೊಂದರೆಯೇ?'' ಅವಳಿಗೆ ಕೆಟ್ಟ ಕೋಪ ಬಂದಿತ್ತು.

``ನನಗೆ ಯಾಕೆ ತೊಂದರೆ ಆಗಬೇಕು.....?'' ಅರುಣ್‌ ನಗುತ್ತಾ ಕೆಣಕುವಂತೆ ಕೇಳಿದ.

``ಓ ಸಾಕು ಸಾಕು.... ತುಂಬಾ ಟಾಪ್‌ಗೆ ಹೋಗಬೇಡ. ಸಾಯಂಕಾಲ ನಿನಗಾಗಿ ಕಾಯ್ತಿರ್ತೀನಿ.... ಆದಷ್ಟು ಬೇಗ ಬಂದುಬಿಡು,'' ಎನ್ನುತ್ತಾ ಅವಳು ಕಾಲ್ ಕಟ್‌ ಮಾಡಿದಳು.

ಋತು ಬೆಂಗಳೂರಿನ ಕೋರಮಂಗಲದ ತನ್ನ ಫ್ಲಾಟ್‌ನಲ್ಲಿ ಒಬ್ಬಳೇ ವಾಸಿಸುತ್ತಿದ್ದಳು. ಸಂಜೆ ಅವಳನ್ನು ಭೇಟಿಯಾಗುವ ಆಸೆ ಅವನನ್ನು ಮನದಲ್ಲೇ ಮಂಡಿಗೆ ಮೆಲ್ಲುವಂತೆ ಮಾಡಿತು. ಕಾಫಿ ಬ್ರೇಕ್‌ ಆದ್ದರಿಂದ ಅವನು ಕ್ಯಾಂಟೀನ್‌ಗೆ ಹೋಗಿ, ಅಲ್ಲಿ ಕಾಫಿಗೆ ಆರ್ಡರ್‌ ನೀಡಿ ಸಿಗರೇಟ್‌ ಸೇದುತ್ತಾ ಕಳೆದ ಕೆಲವು ತಿಂಗಳ ಘಟನೆಗಳ ಬಗ್ಗೆ ಯೋಚಿಸತೊಡಗಿದ.....ಸೀಮಾ ಜೊತೆ ಅರುಣನ ಮದುವೆಯಾಗಿ 8 ವರ್ಷ ಕಳೆದ ನಂತರ, ಒಂದು ದಿನ ಆಕಸ್ಮಿಕವಾಗಿ ಋತು ತನ್ನ ಮನೆಗೆ ಹುಡುಕಿಕೊಂಡು ಬಂದಾಗ, ಅರುಣನಿಗೆ ಶಾಕ್‌ ಹೊಡೆದಂತಾಗಿತ್ತು! ಒಳಗೊಳಗೇ ಖುಷಿಯೂ ಆಗಿತ್ತು.

ಈ ವಯಸ್ಸಿನಲ್ಲೂ ಇನ್ನೂ ಮಾಡೆಲ್ ತರಹ ಮೆರೆಯುತ್ತಿದ್ದ ಋತು ಅರುಣನ ಸಹಪಾಠಿ ಆಗಿದ್ದಳು. ಅವಳಿಗೆ ಮುಂಬೈನಲ್ಲಿ ಖ್ಯಾತ ಬಹುರಾಷ್ಟ್ರೀಯ ಕಂಪನಿಯೊದರಲ್ಲಿ ಉನ್ನತ ಹುದ್ದೆ ದೊರಕಿದ್ದರಿಂದ, ತಮ್ಮ ಮದುವೆಗೆ ಮುಂಚೆಯೇ ಮುಂಬೈಗೆ ಹೋಗಿ ಸೆಟ್ ಆಗಿದ್ದಳು ಎಂದು ಅರುಣ್‌ ಪತ್ನಿ ಸೀಮಾಳಿಗೆ ಅವಳನ್ನು ಪರಿಚಯಿಸಿದ. ತಮ್ಮಿಬ್ಬರ ಪ್ರೇಮದ ವಿಷಯವನ್ನು ಮರೆಮಾಚಿ ಪತ್ನಿ ಮುಂದೆ ಆದರ್ಶ ಪತಿ ಎನಿಸಿದ್ದ.

ಇವರ 5 ವರ್ಷದ ಮಗ ರೋಹಿತ್‌ಗಾಗಿ ಋತು ಬೇಕಾದಷ್ಟು ಚಾಕಲೇಟ್‌, ಟಾಫಿ, ರಿಮೋಟ್‌ ಕಂಟ್ರೋಲ್ ‌ಟಾಯ್ಸ್ ತಂದಿದ್ದಳು. ರೋಹಿತ್‌ಗಂತೂ ಹೊಸ ಆಂಟಿಯ ಆಗಮನ ಬಹಳ ಸಂತಸ ತಂದಿತ್ತು. ಮಗನನ್ನು ಅಷ್ಟು ಹಚ್ಚಿಕೊಂಡು ಅಷ್ಟೆಲ್ಲ ಗಿಫ್ಟ್ ತಂದಿದ್ದ ಪತಿಯ ಹಳೆಯ ಸಹಪಾಠಿಯ ಅಭಿಮಾನ ಕಂಡು ಮುಗ್ಧೆ ಸೀಮಾ, ಸಹಜವಾಗಿ ಅತಿಥಿಯನ್ನು ಆದರಾತಿಥ್ಯಗಳಿಂದ ಸತ್ಕರಿಸಿದಳು. ಬಂದ ದಿನವೇ ಋತು, ಸೀಮಾ ಮತ್ತು ಅವಳ ಮಗನ ಮೆಚ್ಚಿನ ಅತಿಥಿಯಾದಳು. ಇವಳ ಬಣ್ಣದ ಮಾತುಗಳ ಮಾಯಾಜಾಲಕ್ಕೆ ಮರುಳಾದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ