ಮುನಿಸಿಕೊಂಡ ಹೆಂಡತಿ ನಿಧಿಯನ್ನು ಮನವೊಲಿಸಲೆಂದು ರಾಜೇಶ್ಮನೆಗೆ ಹೋದಾಗ, ಅವನಿಗೆ ಅಲ್ಲಿ ನಿಧಿ ಕಾಣದೆ ಅವಳು ಬರೆದ ಒಂದು ಪತ್ರ ಸಿಕ್ಕಿತು. ಅದರಲ್ಲಿ ಅಂಥದ್ದೇನು ಬರೆದಿತ್ತು........?

``ನಾನು, ನಿಮ್ಮನ್ನು ಪ್ರಶ್ನಿಸಿದೆನೆಂದು ನಿಮಗೆ ಕೆಟ್ಟದೆನಿಸಿತಾ?

``ಇಲ್ಲ, ಎಂಬ ನಿಮ್ಮ ಉತ್ತರ ಕೇಳಿ ನಾನು ಸ್ವಲ್ಪ ಹೊತ್ತು ಸ್ತಬ್ಧಳಾಗಿಬಿಟ್ಟಿದ್ದೆ. ನಾನು ನಿಮ್ಮ ಜೊತೆಗೆ ಮಾತಾಡಲಿ ಇಲ್ಲವೇ ಮಾತನಾಡದೆ ಇರುವುದರಿಂದ ನಿಮಗೆ ಯಾವುದೇ ವ್ಯತ್ಯಾಸ ಆಗುವುದಿಲ್ಲವೇ?

``ಆದರೆ ನಾನು ನಿಮ್ಮೊಂದಿಗೆ ಬೇಸರಗೊಂಡು ನಿಮ್ಮೊದಿಗೆ ಮಾತಾಡುವುದನ್ನು ನಿಲ್ಲಿಸಿದಾಗ, ನನ್ನ ಹೃದಯ ಬಡಿತ ನಿಂತಂತಾಗುತ್ತದೆ. ಮೆದುಳು ಯೋಚಿಸುವುದನ್ನು ನಿಲ್ಲಿಸಿಬಿಡುತ್ತೆ.

``ನೀವು ನನ್ನನ್ನು ಕೂಗಿ ಕರೆಯಬೇಕು ಹಾಗೂ ನಾನು ಆ ಧ್ವನಿಯಲ್ಲಿ ನನಗೆ ನಾನೇ ಕಳೆದುಹೋಗಬೇಕು ಎನಿಸುತ್ತೆ.

``ಒಮ್ಮೊಮ್ಮೆ ಅನಿಸುತ್ತೆ ಕಾಲ್ ‌ಮಾಡಿ ನಿಮ್ಮ ಧ್ವನಿ ಕೇಳಿಸಿಕೊಳ್ಳಬೇಕು ಅಂತ. ಆದರೆ ನನ್ನ ಬಳಿಯೂ ಇದೆಯಲ್ಲ ಅಹಂಭಾವ, ಯಾಕೆ ಮಾಡಬೇಕು. ನಿಮಗೆ ಕೇಳಿಸಿಕೊಳ್ಳು ಅಪೇಕ್ಷೆ ಇಲ್ಲವೆಂದ ಮೇಲೆ. ನಾನು ಎಲ್ಲೋ ಕೇಳಿಸಿಕೊಂಡಿದ್ದೆ. ಜೀವನವನ್ನು ಬಹಳ ಹಗುರವಾಗಿ ತೆಗೆದುಕೊಳ್ಳಬೇಕೆಂದು. ಆದರೆ ಜೀವನದ ಪ್ರತಿಯೊಂದು ಪುಟಗಳು ನಿಮ್ಮೊಂದಿಗೆ ಸಂಬಂಧಪಟ್ಟಿವೆ ಎಂದಾದರೆ ಜೀವನವನ್ನು ಹಗುರವಾಗಿ ಹೇಗೆ ತೆಗೆದುಕೊಳ್ಳಲು ಸಾಧ್ಯ?

``ಕೆಲವು ಜನರು ಹೇಳುತ್ತಾರೆ, ಪ್ರೀತಿಗೀತಿ ಏನೂ ಇಲ್ಲ ಅದೇನಿದ್ದರೂ ಒಂದು ರಾಸಾಯನಿಕ ಕ್ರಿಯೆ, ಅದು ಹೃದಯ ಹಾಗೂ ಮೆದುಳನ್ನು ಮುಚ್ಚಿಬಿಡುತ್ತದೆ. ಹಾಗೊಂದು ವೇಳೆ ಹಾಗೆಯೇ ಇದೆಯೆಂದಾದರೆ, ಹೃದಯ ಒಬ್ಬರಿಗಾಗಿಯೇ ಏಕೆ ಮಿಡಿಯುತ್ತಿರುತ್ತದೆ? ಈ ಪ್ರೀತಿ ನಮ್ಮ ತಿಳಿವಳಿಕೆ ಇತಿಮಿತಿಗೆ ಹೊರತಾಗಿದೆ ಅಲ್ವೆ?

``ನನ್ನ ಹಾಗೆಯೇ ನಿಮ್ಮ ಹೃದಯ ಕೂಡ ಕೇವಲ ನನಗಾಗಿಯೇ ಮಿಡಿಯುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ? ನನ್ನ ಹೆಸರು ಸದಾ ನಿಮ್ಮ ನಾಲಿಗೆಯ ಮೇಲೆ ಇದ್ದಿದ್ದರೆ ಚೆನ್ನ ಅಲ್ವಾ? ಆದರೆ ನಿಮಗೆ ನನ್ನನ್ನು ಹೊರತುಪಡಿಸಿ ಎಲ್ಲರೂ ವಿಶೇಷ ಎನಿಸುತ್ತಾರೆ. ಅದೇ ರೀತಿ ಕೆಲಸದ ಒತ್ತಡ ಕೂಡ ನನ್ನಿಂದ ದೂರ ಇರಲು ಕಾರಣ ಅಲ್ವೇ? ಕೆಲರವ ಪ್ರೀತಿ ಅಪೂರ್ಣವಾಗಿಯೇ ಇರುತ್ತದೆ. ಹಾಗೆಂದು ನನಗೂ ಅಪೂರ್ಣ ಪ್ರೀತಿಯೇ ದಕ್ಕುತ್ತದೆ? ಆದರೆ ನಾನಂತೂ ನಿಮ್ಮದೇ ಬಣ್ಣದಲ್ಲಿ ಮಿಂದೇಳುತ್ತೇನೆ. ಹಾಗೆಂದು ನಾನು ನಿಮ್ಮಿಂದ ದೊರೆತ ಅರೆಬರೆ ಪ್ರೀತಿಯನ್ನೇ ಸ್ವೀಕರಿಸಿದ್ದೇನೆ.

``ನೀವು ಖುಷಿಯಿಂದಿರಿ. ಒಂದು ವಿಷಯ ಗೊತ್ತಾ? ನಾನು ನನ್ನ ಖುಷಿಯನ್ನು ನಿಮಗೇ ಕೊಟ್ಟುಬಿಡಬೇಕೆಂದು ಯೋಚಿಸುತ್ತೇನೆ. ಆದರೆ ನಾನು ಆ ಖುಷಿಯನ್ನು ಹಾಗೆ ಕೊಡಲು ಆಗುವುದಿಲ್ಲ. ಏಕೆಂದರೆ ನಾನು ಅಪೂರ್ಣಳಾಗಿ ಎಂದೂ ಖುಷಿಯಿಂದಿರಲು ಸಾಧ್ಯವಿಲ್ಲ.

``ಹೊರಟಿದ್ದೇನೆ. ನಿಮ್ಮಿಂದ ದೂರ..... ಸ್ವಲ್ಪ ದೂರ ಅದೂ ಕೂಡ ಅಲ್ಲಿಂದ ನಿಮ್ಮನ್ನು ನೋಡಲು ಸಾಧ್ಯವಾಗಬೇಕು. ಆದರೆ ನೀವು ನಿನ್ನನ್ನು ನೋಡಲು ಆಗುವುದಿಲ್ಲ. ನನ್ನ ಹೃದಯದಲ್ಲಿ ಎಷ್ಟು ತುಡಿತ ಇದೆಯೋ, ಅಷ್ಟೇ ನಿಮ್ಮ ಹೃದಯದಲ್ಲೂ ಯಾವಾಗ ಮಿಡಿಯುತ್ತೋ, ಆಗಲೇ ನಾನು ವಾಪಸ್‌ ಬರ್ತೀನಿ. ನಿಮ್ಮ ಬಾಹುಗಳಲ್ಲಿನ ಬಿಸುಪು, ನನ್ನನ್ನು ತಳಮಳಕ್ಕೀಡು ಮಾಡುತ್ತದೆ. ಆದರೆ ಆ ತಳಮಳದಲ್ಲೂ ಪ್ರೀತಿಯ ಅನುಭವ ನನ್ನನ್ನು ಬಂಧಿಯಾಗಿಸುತ್ತೆ. ಮನಸ್ಸು ಮಿಲನಕ್ಕಾಗಿ ಕಾತರಿಸುತ್ತದೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ