ಪತಿಯನ್ನು ಕಳೆದುಕೊಂಡ ವನಿತಾ, ಒಬ್ಬಳೇ ಮಗಳನ್ನು ಸುಸಂಸ್ಕೃತೆಯಾಗಿ ಬೆಳೆಸಿದ್ದರು. ಆಕಸ್ಮಿಕ ಅಪಘಾತದಲ್ಲಿ ಕಣ್ಣು ಕಳೆದುಕೊಂಡ ಮಗಳ ಬಾಳಲ್ಲಿ ಮತ್ತೆ ಬೆಳಕು ಮೂಡುವುದೇ ಎಂದು ಕಾಯುತ್ತಿದ್ದ ತಾಯಿಯ ಕನಸು ನನಸಾಯಿತೇ.......?

ಸೂರ್ಯ ಸಿಟ್ಟಿನಿಂದಲೋ ಅಥವಾ ತನ್ನಲ್ಲಿಯ ಎಲ್ಲ ಶಕ್ತಿಯನ್ನು ಒಗ್ಗೂಡಿಸಿ ಪ್ರಖರವಾಗಿ ಉರಿಯುತ್ತಿದ್ದಾನೋ ಏನೋ, ಎಲ್ಲೆಡೆ ಸುಡುವ ಕಿರಣಗಳು, ಮಧ್ಯಾಹ್ನ 12ರ ಸಮಯ, ಇಂಥ ಬಿರು ಬಿಸಿಲಲ್ಲಿ ವನಿತಾಳ ಜೀವನ ಅಂಧಕಾರದಲ್ಲಿ ಮುಳುಗಿದೆ. ಇಷ್ಟೊಂದು ಬೆಳಕು ಇದ್ದರೂ ವನಿತಾರ ಕಣ್ಣಿಗೆ ಒಂದು ಬೆಳಕಿನ ಕಿರಣ ಕಾಣಿಸುತ್ತಿಲ್ಲ. ಜೀವನ ಹೇಗೆ? ಏನು? ಎನ್ನುವ ಚಿಂತೆ. ಕಣ್ಣಿಂದ ಒಂದೇ ಸಮನೆ ಕಂಬನಿ ಸುರಿಯುತ್ತಿತ್ತು.

ಮನೆಯ ಒಳಗಡೆಯಿಂದ, ``ಅಮ್ಮಾ....'' ಎಂದ ಶಬ್ದ ಕೇಳಿ ಒಂದೇ ಹೆಜ್ಜೆಗೆ ಓಡಿ ಹೋಗಿ ಮಗಳ ಕೈಯನ್ನು ಹಿಡಿದು, ``ಹುಷಾರಾಗಿ ನಡೆಯಮ್ಮಾ....'' ಎನ್ನುತ್ತಾ ಹೊರಗಡೆ ಕರೆತಂದು ಕೂಡಿಸಿದರು.

ತಮ್ಮ ಅಳು, ದುಃಖವನ್ನು ಮರೆ ಮಾಚಿದರೂ ಮಗಳ ಹೃದಯದ ಕಣ್ಣಿಗೆ ಅದು ಕಾಣುತ್ತದೆ. ಕಣ್ಣಿಲ್ಲದಿದ್ದರೆ ಏನಾಯಿತು? ತಾಯಿಯ ದುಃಖವನ್ನು ಅರಿಯಲು ಕಣ್ಣು ಬೇಕಿಲ್ಲ ಅಲ್ಲವೇ?

``ಅಮ್ಮಾ.... ನೀನು ಹೀಗೆ ಅಳುತ್ತಾ ಕುಳಿತರೆ, ನಾನೇನು ಮಾಡಲಿ? ಇರುವುದೇ ಇಬ್ಬರು. ನನಗೆ ನೀನು ಧೈರ್ಯ ಹೇಳಬೇಕು, ನಿನಗೆ ನಾನು ಧೈರ್ಯ ಹೇಳಬೇಕು. ಈ ಸಮಯದಲ್ಲಿ ನೀನು ಒಬ್ಬಂಟಿ. ನನ್ನಿಂದ ಎಷ್ಟೊಂದು ದುಃಖ, ಹಿಂಸೆ ಅನುಭವಿಸುತ್ತಿದ್ದೀಯಾ. ನಾನು ಅಸಹಾಯಕಳಾಗಿದ್ದೇನೆ. ನಿನ್ನ ಪರಿಸ್ಥಿತಿ ಯಾವ ತಾಯಿಗೂ ಬರಬಾರದು,'' ಎಂದಳು.

ಒಮ್ಮೆಲೇ ವನಿತಾ, ಮಗಳ ಬಾಯಿಯನ್ನು ತನ್ನ ಕೈಯಿಂದ ಮುಚ್ಚಿ, ಮಗಳನ್ನು ಎದೆಗೆ ಅಪ್ಪಿಕೊಂಡು, ``ಇಲ್ಲ ಮಗಳೇ, ನಿನ್ನ ತಂದೆ ಬಿಟ್ಟು ಹೋದಾಗ ನನಗೆ ಜೊತೆಯಾಗಿದ್ದೆ. ನಿನ್ನ ಮುಖವನ್ನು ನೋಡಿ, ನಿನ್ನ ನಗುವನ್ನು ನೋಡಿ ನನಗೆ ಜೀವನದಲ್ಲಿ ಸ್ಛೂರ್ತಿ ಸಿಕ್ಕಿತು. ಹೊಸ ಹುಮ್ಮಸ್ಸಿನಿಂದ ಬೆಳೆಸಿದೆ. ನೀನು ಆಳೆತ್ತರ ಬೆಳೆದ ಮೇಲೆ ಒಂದು ಗಂಡು ಹುಡುಗನ ಹಾಗೆ ನನ್ನ ಭಾರವನ್ನು ಹೊತ್ತುಕೊಂಡು, ಸಂಸಾರದ ನೊಗವನ್ನು, ತಾಯಿಯ ಜವಾಬ್ದಾರಿಯನ್ನು ತೂಗುತ್ತಾ ನಡೆದೆ. ಆದರೆ ಆ ಭಗವಂತನಿಗೆ ಅದು ಸರಿಬರಲಿಲ್ಲ ಅನಿಸುತ್ತೆ ಅದಕ್ಕೆ....'' ಎಂದವರೇ ಗದ್ಗದಿತರಾದರು.

``ಅಮ್ಮಾ, ಮರೆತು ಬಿಟ್ಟೆಯಾ....? ನೀನೇ ಸದಾ ಹೇಳುತ್ತಿದ್ದೆ, ದೇವರು ಒಂದು ಬಾಗಿಲನ್ನು ಮುಚ್ಟಿದರೆ ಹತ್ತು ಬಾಗಿಲು ತೆರೆಯುತ್ತಾನೆ. ಮನಸ್ಸನ್ನು ಗಟ್ಟಿಯಾಗಿಸಿಕೊಳ್ಳಬೇಕು, ದೃಢವಾಗಿ ನಿಲ್ಲಬೇಕು ಅಂತ ನೀನೇ ಹೇಳುತ್ತಿ..... ಆದರೆ ಈಗ ಈ ರೀತಿ ಮಾತಾಡಿದರೆ ಹೇಗಮ್ಮಾ.....''

ಬೆಳೆದು ನಿಂತ ಮಗಳು ಅಪಘಾತದಲ್ಲಿ ಕಣ್ಣನ್ನು ಕಳೆದುಕೊಂಡಳೆಂದರೆ, ಆ ತಾಯಿಯ ಮೇಲಾಗುವ ಆಘಾತ, ಅದರ ಪರಿಣಾಮ ಅಷ್ಟಿಷ್ಟಲ್ಲ....

``ಹಾಗಲ್ಲ ಸಹನಾ..... ನಾನೇನೋ ನಾಳೆ ಉರುಳಿ ಹೋಗುವ ಮರ, ಮುಂದೆ ನಿನ್ನ ಭವಿಷ್ಯ ಹೇಗೆ....? ನಿನ್ನ ಜೀವನ ತುಂಬಾ ದೊಡ್ಡದು ಅಲ್ವಾ ಮಗು......'' ಎನ್ನುತ್ತಾ ಮತ್ತೆ ಬಾಯಿಗೆ ಕೈಯಿಟ್ಟುಕೊಂಡು ಅತ್ತರು ವನಿತಾ.

``ಅಮ್ಮಾ.... ನಾನು ನನ್ನ ಜೀವನದ 22 ವಸಂತಗಳನ್ನು ನೋಡಿದ್ದೇನೆ. ನಿನ್ನನ್ನು, ಈ ಸುಂದರ ಪ್ರಕೃತಿ, ಗಿಡ ಮರ, ಪ್ರಾಣಿ, ಪಕ್ಷಿ, ದೇಗುಲದಲ್ಲಿ ಭಗವಂತನ ಸ್ವರೂಪ ಎಲ್ಲವನ್ನೂ ಕಣ್ಣಾರೆ ಕಂಡಿದ್ದೇನೆ. ಒಂದು ವಿಷಯ ಯೋಚಿಸು, ಹುಟ್ಟು ಕುರುಡರಾಗಿ ಹುಟ್ಟಿದ ಮಕ್ಕಳು ಏನನ್ನೂ ಕಾಣದೆ ತಮ್ಮ ಇಡೀ ಜೀವನವನ್ನು ಸವೆಸುತ್ತಿವೆ... ಆಗ ಅವರನ್ನು ಹೆತ್ತವರಿಗೆ ಅದೆಷ್ಟು ಆಘಾತವಾಗಿರುತ್ತದೆ? ನೀನು ನನ್ನನ್ನು ಹಾಗೆಲ್ಲ ಬೆಳೆಸಿಲ್ಲ. ಯಾವುದೇ ಗಂಡಂತಾರ ಬಂದರೂ, ಯಾವುದೇ ಸಮಸ್ಯೆ ಎದುರಾದರೂ ಎದೆ ತಟ್ಟಿ ನಿಲ್ಲುವ ಹಾಗೆ ಬೆಳೆಸಿದ್ದೀಯಾ.... ನಾನೂ ಕೂಡ ಹಾಗೇ ಬೆಳೆದಿದ್ದೇನೆ. ಈಗ ಇಷ್ಟೊಂದು ದುಃಖ ಯಾಕಮ್ಮಾ.....? ದೇವರು ಒಂದಲ್ಲ ಒಂದು ಹಾದಿಯನ್ನು ತೋರಿಸುತ್ತಾನೆ. ನನ್ನ ಮೇಲೆ ಭರವಸೆ ಇಡು,'' ಎಂದು ನಿಧಾನವಾಗಿ ಹೇಳಿದಳು ಸಹನಾ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ