ಮಳೆಗಾಲದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಬ್ಯಾಕ್ಟೀರಿಯಾ, ಫಂಗಸ್ ಮತ್ತು ಇತರೆ ಸೋಂಕುಗಳು ಹರಡುವ ಸಾಧ್ಯತೆ ಅಧಿಕವಾಗಿದ್ದು, ಚರ್ಮಕ್ಕೆ ಸಂಬಂಧಿಸಿದ ಅನೇಕ ತೊಂದರೆಗಳು ತಲೆದೋರುತ್ತವೆ. ಹೀಗಾಗಿ ಚರ್ಮ ಮತ್ತು ಕೂದಲಿಗೆ ಬಹಳಷ್ಟು ಹಾನಿಯುಂಟಾಗುವ ಸಂಭವವಿರುತ್ತದೆ. ಆದ್ದರಿಂದ ಈ ಕಾಲದಲ್ಲಿ ಕೆಲವು ಅಂಶಗಳ ಬಗ್ಗೆ ಗಮನವಿಡುವುದರಿಂದ ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಂದ ಪಾರಾಗಬಹುದು :
ಮಾನ್ಸೂನ್ನಲ್ಲಿ ಚರ್ಮದ ರಕ್ಷಣೆ
ಸ್ವಚ್ಛತೆ ಅಥವಾ ಕ್ಲೆನ್ಸಿಂಗ್ : ಮಳೆ ನೀರಿನಲ್ಲಿ ಬಹಳಷ್ಟು ಕೆಮಿಕಲ್ಸ್ ಇರುತ್ತವೆ. ಆದ್ದರಿಂದ ಮಾನ್ಸೂನ್ನಲ್ಲಿ ಚರ್ಮವನ್ನು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸಬೇಕು. ಮೇಕಪ್ ತೆಗೆಯಲು ಮಿಲ್ಕ್ ಕ್ಲೆನ್ಸರ್ ಅಥವಾ ಮೇಕಪ್ ರಿಮೂವರ್ನ್ನು ಬಳಸಬೇಕು. ಹೀಗೆ ಸ್ವಚ್ಛಗೊಳಿಸುವುದರಿಂದ ಚರ್ಮದ ರೋಮರಂಧ್ರಗಳು ತೆರೆದುಕೊಳ್ಳುತ್ತವೆ. ಸಾಬೂನಿಗೆ ಬದಲು ಫೇಸ್ವಾಶ್, ಫೇಶಿಯಲ್, ಪೇವ್ ಇತ್ಯಾದಿಗಳು ಉತ್ತಮ.
ಟೋನಿಂಗ್ : ಕ್ಲೆನ್ಸಿಂಗ್ ನಂತರ ಟೋನಿಂಗ್ ಮಾಡಬೇಕು. ಮಾನ್ಸೂನ್ನಲ್ಲಿ ಗಾಳಿ ಮತ್ತು ನೀರಿನಲ್ಲಿ ಮೈಕ್ರೋಬ್ಸ್ ಬಹಳವಾಗಿ ಅಂಕುರಿಸುತ್ತವೆ. ಆದ್ದರಿಂದ ಸ್ಕಿನ್ ಇನ್ಫೆಕ್ಷನ್ ಮತ್ತು ಚರ್ಮ ಒಡೆಯುವುದನ್ನು ತಡೆಯಲು ಆ್ಯಂಟಿ ಬ್ಯಾಕ್ಟೀರಿಯಲ್ ಟೋನರ್ ಹೆಚ್ಚು ಉಪಯುಕ್ತವಾಗಿರುತ್ತದೆ. ಅತಿ ಶುಷ್ಕ ಚರ್ಮಕ್ಕೆ ಸಾಧಾರಣ ಟೋನರ್ ಬಳಸುವುದು ಬೇಡ. ಸೌಮ್ಯವಾದ ಟೋನರ್ನ್ನು ಬಳಸಬಹುದು. ಇದು ಎಣ್ಣೆ ಚರ್ಮ ಮತ್ತು ಮೊಡವೆಯಿಂದ ಕೂಡಿದ ಚರ್ಮಕ್ಕೆ ಸೂಕ್ತವಾಗಿರುತ್ತದೆ.
ಮಾಯಿಶ್ಚರೈಸರ್ : ಬೇಸಿಗೆಯಂತೆ ಮಳೆಗಾಲದಲ್ಲಿಯೂ ಮಾಯಿಶ್ಚರೈಸಿಂಗ್ ಅವಶ್ಯಕ. ಮಾನ್ಸೂನ್ನಲ್ಲಿ ಒಣ ಚರ್ಮದ ಮೇಲೆ ಡೀಮಾಯಿಶ್ಚರೈಸಿಂಗ್ನ ಪ್ರಭಾವ ಉಂಟಾಗುತ್ತದೆ ಹಾಗೂ ತೈಲೀಯ ತ್ವಚೆಯ ಮೇಲೆ ಇದರ ಓವರ್ಹೈಡ್ರೇಟಿಂಗ್ ಪ್ರಭಾವ ಉಂಟಾಗುತ್ತದೆ. ಮಳೆಗಾಲದಲ್ಲಿ ಗಾಳಿಯು ತೇವಾಂಶದಿಂದ ಕೂಡಿರುವುದರಿಂದ ಚರ್ಮ ಸಂಪೂರ್ಣವಾಗಿ ಡೀಹೈಡ್ರೇಟ್ ಆಗುವ ಸಂಭವಿರುತ್ತದೆ. ಇದರ ಪರಿಣಾಮವಾಗಿ ಚರ್ಮ ಜೀವಕಳೆಯನ್ನು ಕಳೆದುಕೊಂಡು ಕಾಂತಿಹೀನವಾಗುತ್ತದೆ.
ಎಲ್ಲ ಬಗೆಯ ಚರ್ಮಗಳಿಗೂ ಪ್ರತಿ ರಾತ್ರಿ ಮಾಯಿಶ್ಚರೈಸ್ ಮಾಡಬೇಕು. ಇಲ್ಲವಾದರೆ ನವೆ ಪ್ರಾರಂಭವಾಗುತ್ತದೆ. ನೀವು ಮಳೆಯಲ್ಲಿ ಆಗಾಗ ನೆನೆಯುತ್ತಿದ್ದರೆ ನಾನ್ವಾಟರ್ ಬೇಸ್ಡ್ ಮಾಯಿಶ್ಚರೈಸರ್ ಬಳಸಿ. ನಿಮ್ಮದು ತೈಲೀಯ ತ್ವಚೆಯಾದರೂ ಸಹ ರಾತ್ರಿ ಹೊತ್ತಿನಲ್ಲಿ ವಾಟರ್ ಬೇಸ್ಡ್ ಲೋಶನ್ನ್ನು ತೆಳುವಾಗಿ ಹಚ್ಚಬೇಕು.
ಸನ್ಸ್ಕ್ರೀನ್ : ಬಿಸಿಲು ಇರುವಾಗ ನಿಮ್ಮ ಚರ್ಮಕ್ಕೆ ಯುವಿಎ ಮತ್ತು ಯುವಿಬಿ ಕಿರಣಗಳಿಂದ ರಕ್ಷಣೆ ಬೇಕಾಗುತ್ತದೆ. ಆದ್ದರಿಂದ ಮನೆಯಿಂದ ಹೊರಡುವ 20 ನಿಮಿಷಗಳ ಮೊದಲು 25 ಎಸ್ಪಿಎಫ್ವುಳ್ಳ ಸನ್ಸ್ಕ್ರೀನ್ ಹಚ್ಚಿ ಮತ್ತು ಪ್ರತಿ 3-4 ಗಂಟೆಗಳಿಗೊಮ್ಮೆ ಹಚ್ಚುತ್ತಿರಿ. ಬಿಸಿಲಿರುವಾಗ ಮಾತ್ರ ಸನ್ಸ್ಕ್ರೀನ್ ಹಚ್ಚಿದರೆ ಸಾಕು ಎನ್ನುವ ಭಾವನೆ ಸರಿಯಲ್ಲ. ಮಳೆಗಾಲದಲ್ಲಿಯೂ ವಾತಾವರಣದಲ್ಲಿರುವ UV ಕಿರಣಗಳನ್ನು ನಿರ್ಲಕ್ಷಿಸಬೇಡಿ.
ಒಣಗಿಸಿಕೊಳ್ಳಿ : ಮಳೆಯಲ್ಲಿ ನೆನೆದರೆ, ಶರೀರವನ್ನು ಒಣಗಿಸಿಕೊಳ್ಳಿ. ಹೊರಗಡೆ ಹೋಗಿರುವಾಗ ಮಳೆ ನೀರನ್ನು ಒರೆಸಿಕೊಳ್ಳಲು ನಿಮ್ಮೊಂದಿಗೆ ಟಿಶ್ಶೂ/ಚಿಕ್ಕ ಟವೆಲ್ ಕೊಂಡೊಯ್ಯಿರಿ. ಡಸ್ಟಿಂಗ್ ಪೌಡರ್ನ್ನು ಬಳಸುವುದು ಒಳ್ಳೆಯದು. ಮನೆಗೆ ಹಿಂದಿರುಗಿದ ನಂತರ ಸ್ವಚ್ಛವಾದ ನೀರಿನಲ್ಲಿ ಸ್ನಾನ ಮಾಡಿ.
ನಿರ್ವಹಣೆ : ಕಾಂತಿಯುತ ಮತ್ತು ಕಲೆರಹಿತ ಚರ್ಮಕ್ಕಾಗಿ ಚರ್ಮರೋಗ ತಜ್ಞರ ಸಲಹೆಯಂತೆ ಸ್ಕಿನ್ ಟ್ರೀಟ್ಮೆಂಟ್ ಪಡೆಯಿರಿ. ಲೇಸರ್ ಟ್ರೀಟ್ಮೆಂಟ್ಗೆ ಮಾನ್ಸೂನ್ ಸೂಕ್ತವಾದ ಸಮಯ. ಏಕೆಂದರೆ ಈ ಕಾಲದಲ್ಲಿ ಹೆಚ್ಚು ಸಮಯ ಬಿಸಿಲು ಇಲ್ಲದಿರುವುದರಿಂದ ಚಿಕಿತ್ಸೆಯ ನಂತರದ ಪ್ರಕ್ರಿಯೆಯು ಸುಲಭವಾಗಿರುತ್ತದೆ.
ಮಾನ್ಸೂನ್ನಲ್ಲಿ ಕೂದಲಿನ ರಕ್ಷಣೆ
– ಮಳೆಯಲ್ಲಿ ಕೂದಲು ನೆನೆದಿದ್ದರೆ ಆದಷ್ಟು ಬೇಗ ಮೈಲ್ಡ್ ಶ್ಯಾಂಪೂನಿಂದ ತೊಳೆಯಿರಿ. ಏಕೆಂದರೆ ಮಳೆ ನೀರಿನಲ್ಲಿರುವ ಕೆಮಿಕಲ್ಸ್ ಕೂದಲಿಗೆ ಹಾನಿಯುಂಟು ಮಾಡುತ್ತವೆ.
– ತಲೆಯಲ್ಲಿನ ರಕ್ತ ಸಂಚಾರ ಚೆನ್ನಾಗಿರಲು ಮಾಲಿಶ್ ಮಾಡಿ. ವಾರದಲ್ಲಿ ಒಂದು ಸಲ ಬೆಚ್ಚನೆಯ ಎಣ್ಣೆಯಿಂದ ತಲೆಯನ್ನು ಮಸಾಜ್ ಮಾಡುವುದು ಒಳ್ಳೆಯದು.
– ದಿನ ಬಿಟ್ಟು ದಿನ ಕೂದಲನ್ನು ತೊಳೆಯಿರಿ. ಕೂದಲು ಚಿಕ್ಕದಾಗಿದ್ದರೆ ದಿನ ತೊಳೆಯಬಹುದು. ಅದಕ್ಕಾಗಿ ಅಲ್ಚ್ರಾಜೆಂಟ್/ಬೇಬಿ ಶ್ಯಾಂಪೂ ಬಳಸಬಹುದು. ಹೇರ್ ಶಾಫ್ಟ್ ಗೆ ಕಂಡೀಶನರ್ ಹಚ್ಚುವುದರಿಂದ ಕೂದಲು ಬಲವಾಗುತ್ತದೆ.
– ಮಾನ್ಸೂನ್ನಲ್ಲಿ ಹೇರ್ಸ್ಪ್ರೆ ಅಥವಾ ಜೆಲ್ ಬಳಸಬೇಡಿ. ಏಕೆಂದರೆ ಅದು ಬುರುಡೆಗೆ ಅಂಟಿಕೊಂಡು ಹೊಟ್ಟನ್ನು ಉತ್ಪತ್ತಿ ಮಾಡುತ್ತದೆ. ಬ್ಲೋ ಡ್ರೈಯರ್ನ್ನು ಸಹ ಬಳಸಬೇಡಿ. ರಾತ್ರಿಯ ಸಮಯದಲ್ಲಿ ಕೂದಲು ಒದ್ದೆಯಾಗಿದ್ದರೆ, ಕಂಡೀಶನರ್ ಹಚ್ಚಿ ಮತ್ತು ಬ್ಲೋಯರ್ನ ತಣ್ಣನೆಯ ಗಾಳಿಯಿಂದ ಒಣಗಿಸಿ.
– ಗುಂಗುರು ಕೂದಲಿನಲ್ಲಿ ಹೆಚ್ಚು ನೀರು ಸೇರಿರುತ್ತದೆ. ಸ್ಟೈಲಿಂಗ್ಗೆ ಮೊದಲು ಹ್ಯುಮಿಡಿಟಿ ಪ್ರೊಟೆಕ್ಟಿವ್ ಜೆಲ್ ಬಳಸಿ.
– ನಿಮ್ಮ ಕೂದಲಿನ ಪ್ರಕಾರದ ಆಧಾರದ ಮೇಲೆ ಹೇರ್ ಕೇರ್ ಉತ್ಪನ್ನಗಳನ್ನು ಆರಿಸಿಕೊಳ್ಳಿ. ಶುಷ್ಕ ಮತ್ತು ಒರಟು ಕೂದಲಿಗಾಗಿ ಹೇರ್ಕ್ರೀಮ್ ಮುಂತಾದವನ್ನು ಬಳಸಿ ಕೂದಲನ್ನು ನೇರಗೊಳಿಸಲಾಗುತ್ತದೆ.
– ಮಾನ್ಸೂನ್ನಲ್ಲಿ ಗಾಳಿಯಲ್ಲಿನ ಅಧಿಕ ತೇವಾಂಶದಿಂದಾಗಿ ತಲೆಹೊಟ್ಟು ಒಂದು ಸಾಮಾನ್ಯ ಸಮಸ್ಯೆಯಾಗುತ್ತದೆ. ಆದ್ದರಿಂದ ವಾರಕ್ಕೊಮ್ಮೆ ಒಳ್ಳೆಯ ಆ್ಯಂಟಿಡ್ಯಾಂಡ್ರಫ್ ಶ್ಯಾಂಪೂನಿಂದ ತಲೆಯನ್ನು ತೊಳೆಯಿರಿ.
– ಮಳೆ ನೀರಿನಲ್ಲಿ ಕ್ಲೋರಿನ್ ಅಂಶ ಹೆಚ್ಚಾಗಿದ್ದು, ಕೂದಲನ್ನು ಬ್ಲೀಚ್ ಮಾಡಿಬಿಡುತ್ತದೆ. ಆದ್ದರಿಂದ ತಲೆಕೂದಲು ಮಳೆಗೆ ಒದ್ದೆಯಾಗದಂತಿರಲು ಕ್ಯಾಪ್ ಅಥವಾ ಹುಡ್ವುಳ್ಳ ರೇನ್ಕೋಟ್ ಬಳಿಸಿ.
– ಮಳೆಗಾಲದಲ್ಲಿ ಕೂದಲಿನಲ್ಲಿ ಹೇನು ಅಂಕುರಿಸುವ ಸಾಧ್ಯತೆ ಹೆಚ್ಚು. ಅದನ್ನು ನಿವಾರಿಸಲು ಪರ್ಮೈಟ್ ಲೋಶನ್ ಹಚ್ಚಿ. 1 ಗಂಟೆಯ ನಂತರ ತೊಳೆಯಿರಿ. ವಾರದಲ್ಲಿ 3-4 ಸಲ ಹೀಗೆ ಮಾಡಿ.
ಮಾನ್ಸೂನ್ನಲ್ಲಿ ಈ ವಸ್ತುಗಳು ನಿಮ್ಮ ಹ್ಯಾಂಡ್ಬ್ಯಾಗ್ನಲ್ಲಿರಲಿ
– ಮೊದಲನೆಯದಾಗಿ ಲೆದರ್ ಬ್ಯಾಗ್ ಬಳಸಬೇಡಿ. ವಾಟರ್ ರೆಸಿಸ್ಟೆಂಟ್ ಸ್ಟಫ್ ಬಳಸಿ.
– ವಾಟರ್ ರೆಸಿಸ್ಟೆಂಟ್ ಮೇಕಪ್ ಸ್ಟಫ್ ಮುಖ್ಯವಾಗಿ ಲೂಸ್ ಪೌಡರ್, ಟ್ರಾನ್ಸ್ ಫರ್ ರೆಸಿಸ್ಟೆಂಟ್, ಲಿಪ್ಸ್ಟಿಕ್ ಹಾಗೂ ಐಲೈನರ್.
– 20 ಎಸ್ಐಎಫ್ ವಾಟರ್ ರೆಸಿಸ್ಟೆಂಟ್ ಸನ್ಸ್ಕ್ರೀನ್ ಲೋಶನ್.
– ಒಂದು ಚಿಕ್ಕ ಕನ್ನಡಿ ಮತ್ತು ಹೇರ್ ಬ್ರಶ್
– ಪಾಕೆಟ್ ಹೇರ್ ಡ್ರೈಯರ್
– ಚರ್ಮವನ್ನು ಸ್ವಚ್ಛಗೊಳಿಸಲು ವೈಪ್ಸ್
– ಆ್ಯಂಟಿ ಫಂಗಲ್ ಡಸ್ಟಿಂಗ್ ಬ್ಯಾಗ್.
– ಪರ್ಫ್ಯೂಮ್/ಡಿಯೊಡ್ರೆಂಟ್.
– ಆ್ಯಂಟಿಫ್ರಿಂಜ್ ಹೇರ್ ಸ್ಪ್ರೇ.
– ಹ್ಯಾಂಡ್ ಟವೆಲ್.
– ವನಿತಾ