ಯುವ ದಸರಾ 2026 ಕಾರ್ಯಕ್ರಮವು ಪ್ರತಿದಿನ ಹೊಸತನ ಸಂಗೀತದ ರಸದೌತಣ ಎಂಬ ಧೇಯ್ಯವಾಕ್ಯದೊಂದಿಗೆ ಅಕ್ಟೋಬರ್ 13 ರಿಂದ ಅಕ್ಟೋಬರ್ 17 ರವರೆಗೆ ನಡೆಯಲಿದೆ.

ಐದು ದಿನಗಳ ಕಾಲ ಸಂಜೆ 5.30 ರಿಂದ ರಾತ್ರಿ 10.30 ರವರೆಗೆ ಮೈಸೂರು ರಿಂಗ್ ರೋಡ್, ಜ್ವಾಲಾಮುಖಿ ತ್ರಿಪುರಸುಂದರಿ ದೇವಸ್ಥಾನದ ಸಮೀಪ ನಡೆಯಲಿದೆ.

ಅಕ್ಟೋಬರ್ 13 ರಂದು ಖ್ಯಾತ ನೃತ್ಯ ನಿರ್ದೇಶಕ ಹಾಗೂ ನಟ ಪ್ರಭುದೇವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಗರಾಭಿವೃದ್ಧಿ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಖ್ಯಾತ ಕಲಾವಿದರು ಪ್ರತಿದಿನ ರಾತ್ರಿ 7:30 ರಿಂದ 10:30 ರವರೆಗೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಅಕ್ಟೋಬರ್ 13 ರಂದು ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ತಂಡದ ಗಾಯಕರಾದ ಆಬಿ.ಬಿ, ನಕಾಶ್ ಅಜೀಜ್, ವಾಸುಕಿ ವೈಭವ್, ಸಾಯಿ ವಿಘ್ನೇಶ್, ಅನನ್ಯಾ ಭಟ್, ಮಂಗಲಿ, ಜಸ್ಕರನ್ ಸಿಂಗ್, ಐಶ್ವರ್ಯ ರಂಗರಾಜನ್, ಗಾಯಕರಾದ ಸಿ. ಆರ್  ಬಾಬಿ, ಹರ್ಷಿಕಾ ದೇವನಾಥ್, ಅನಿರುದ್ದ ಶಾಸ್ತ್ರಿ, ಇಂದು ನಾಗರಾಜ್, ಶೇ಼ಷಾಂಕ್ ಶೇಷಗಿರಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಅಕ್ಟೋಬರ್ 14 ರಂದು ಖ್ಯಾತ ಸಂಗೀತ ನಿರ್ದೇಶಕರು ಮತ್ತು ಗಾಯಕರಾದ ಶಂಕರ್-ಎಹಸಾನ್-ಲಾಯ್ ಅವರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಅಕ್ಟೋಬರ್ 15 ರಂದು ಬಹುಭಾಷಾ ಗಾಯಕರಾದ ಸಿಡ್ ಶ್ರೀರಾಮ್ ಅವರಿಂದ ಸಂತ ಕಾರ್ಯಕ್ರಮ ನಡೆಯಲಿದೆ.

ಅಕ್ಟೋಬರ್ 16 ರಂದು ಸ್ಯಾಂಡ್​​ವುಡ್ ನೈಟ್ಸ್, ಶಿವರಾಜ್ ಕುಮಾರ್, ರಚಿತಾ ರಾಮ್, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಚಂದನ್ ಶೆಟ್ಟಿ, ಅನುರಾಧಾ ಭಟ್ ಮತ್ತು ಹೆಸರಾಂತ ಗಾಯಕರಿಂದ ಕಾರ್ಯಕ್ರಮ ನಡೆಯಲಿದೆ.

ಅಕ್ಟೋಬರ್ 17 ರಂದು ಭಾರತದ ಖ್ಯಾತ ಗಾಯಕರಾದ ಜಾಸ್ಮಿನ್ ಸ್ಯಾಂಡ್ಲಾಸ್ ಅವರಿಂದ ರಸ ಸಂಜೆ ಕಾರ್ಯಕ್ರಮ ನಡೆಯಲಿದ್ದು, ಪ್ರತಿದಿನ ಸಂಜೆ 5.30 ರಿಂದ ರಾತ್ರಿ 7.30 ರವರೆಗೆ ಸ್ಥಳೀಯ ಹಾಗೂ ವಿವಿಧ ಭಾಗಗಳ ಕಲಾವಿದರಿಂದ ಫಿಲ್ಲರ್ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ