ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ 2026ರಲ್ಲಿ ಭಾರತದ ಮಹಿಳೆಯರು 4×400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ನಗೋಯಾದ ಮಿಜುಹೋ ಪಾರ್ಕ್ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ನಡೆದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಕಿರಣ್ ಪಹಲ್, ಎಂ ಆರ್ ಪೂವಮ್ಮ, ಪ್ರಾಚಿ ಚೌಧರಿ ಮತ್ತು ವಿಥ್ಯಾ ರಾಮರಾಜ್ ಒಳಗೊಂಡ ತಂಡ, ಅಥ್ಲೆಟಿಕ್ಸ್ ವಿಭಾಗದಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದೆ. ಈ ಐತಿಹಾಸಿಕ ಸಾಧನೆಯಲ್ಲಿ ಕರ್ನಾಟಕದ ಪೂವಮ್ಮ ಪ್ರಮುಖ ಪಾತ್ರ ವಹಿಸಿದ್ದಾರೆ.

ಭಾರತದ ಮಹಿಳಾ ತಂಡ 3:29.69 ಸೆಕೆಂಡುಗಳಲ್ಲಿ ರೇಸ್ ಪೂರ್ಣಗೊಳಿಸಿ ಪ್ರಥಮ ಸ್ಥಾನ ಪಡೆಯಿತು. ಬಹ್ರೇನ್ ತಂಡ (3:30.21) ಬೆಳ್ಳಿ ಪದಕ ಹಾಗೂ ಚೀನಾ ತಂಡ (3:31.02) ಕಂಚಿನ ಪದಕವನ್ನು ಪಡೆದುಕೊಂಡವು.

ಹ್ಯಾಟ್ರಿಕ್ ಪದಕ: ತಮಿಳುನಾಡಿನ ಅಥ್ಲೀಟ್ ವಿತ್ಯಾ ರಾಮ್‌ರಾಜ್ ಪಾಲಿಗೆ ಈ ಬಾರಿಯ ಏಷ್ಯನ್ ಗೇಮ್ಸ್ ಅತ್ಯಂತ ಸ್ಮರಣೀಯವಾಗಿದೆ. ಈ ಕೂಟದಲ್ಲಿ ಅವರು ಗಳಿಸಿದ 3ನೇ ಪದಕ ಇದಾಗಿದೆ:

ಇನ್ನು ಪುರುಷರ 5000 ಮೀಟರ್ಸ್ ಓಟದಲ್ಲಿ ಗುಲ್ವೀರ್ ಸಿಂಗ್ 13:32.75 ಸಮಯದಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದರು. ಈ ಹಿಂದೆ 10,000 ಮೀ. ಹಾಗೂ 1500 ಮೀ.ನಲ್ಲಿ ಬೆಳ್ಳಿ ಗೆದ್ದಿದ್ದ ಗುಲ್ವೀರ್‌ಗೆ ಇದು ಕೂಟದ 3ನೇ ಪದಕ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ