ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಮಹಿಳಾ ಆರ್ಚರಿ ತಂಡ ಭರ್ಜರಿ ಸಾಧನೆ ಮಾಡಿದ್ದು, ಚೀನಾವನ್ನು 238-234 ಅಂಕಗಳಿಂದ ಮಣಿಸಿದೆ.

ಜ್ಯೋತಿ ಸುರೇಖಾ ವೆನ್ನಮ್, ಚಿಕಿತಾ ತನಿಪರ್ತಿ, ಪ್ರೀತಿಕಾ ಪ್ರದೀಪ್ ಒಳಗೊಂಡ ಭಾರತ ತಂಡ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.

ಈ ಗೆಲುವಿನೊಂದಿಗೆ ಭಾರತ ತಂಡ ವಿಶ್ವದಾಖಲೆ ಮಾಡಿದ್ದು, ಸತತ ಎರಡನೇ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಆರ್ಚರಿ ತಂಡ ಚಿನ್ನವನ್ನು ಉಳಿಸಿಕೊಂಡಿದೆ.

ಜ್ಯೋತಿ ಸುರೇಖಾ ವೆನ್ನಮ್, ಚಿಕಿತಾ ತನಿಪರ್ತಿ, ಪ್ರೀತಿಕಾ ಪ್ರದೀಪ್ ಒಳಗೊಂಡ ಭಾರತ ತಂಡವು ಫೈನಲ್‌ನಲ್ಲಿ ಪ್ರಾಬಲ್ಯ ಮೆರೆಯಿತು. ಚಿನ್ನದ ಪದಕದ ಪಂದ್ಯದಲ್ಲಿ ಚೀನಾವನ್ನು 238-234 ಅಂಕಗಳಿಂದ ಸೋಲಿಸಿ ಅಗ್ರಸ್ಥಾನಕ್ಕೇರಿತು.

ಈ ಸಾಧನೆಯೊಂದಿಗೆ ಭಾರತ ತಂಡವು ಕೊರಿಯಾ ಹೆಸರಿನಲ್ಲಿದ್ದ ವಿಶ್ವದಾಖಲೆಯ ಸ್ಕೋರ್ ಅನ್ನು ಸರಿಗಟ್ಟಿತು. ವುನಿಯರ್, ಯು ವಾಂಗ್ ಮತ್ತು ಫಾಂಗ್ಯಾವೋ ವೀ ಒಳಗೊಂಡ ಚೀನಾ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿಕೊಂಡಿದೆ.

ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಕೊರಿಯಾವನ್ನು 234-233 ಅಂಕಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಈ ಪಂದ್ಯ ಒಕಝಾಕಿ ಚುವೊ ಸೊಗೊ ಪಾರ್ಕ್‌ನಲ್ಲಿ ನಡೆಯಿತು.

ಪಾರ್ಕ್ ಜಂಗ್ಯುನ್, ಪಾರ್ಕ್ ಯೆರಿನ್ ಮತ್ತು ಕಾಂಗ್ ಯಿಯೋನ್ಸಿಯೊ ಒಳಗೊಂಡ ದಕ್ಷಿಣ ಕೊರಿಯಾ ತಂಡ ಚೈನೀಸ್ ತೈಪೆಯನ್ನು ಮಣಿಸಿ ಕಂಚಿನ ಪದಕ ಗೆದ್ದುಕೊಂಡಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ