ಏನಾಯಿತು ಈಕೆಯ ಲುಕ್ಸ್ ಗೆ?
ಇತ್ತೀಚೆಗೆ ಒಂದು ಅಂತಾರಾಷ್ಟ್ರೀಯ ಫ್ಯಾಷನ್ ಶೋನಲ್ಲಿ ಪ್ರಿಯಾಂಕಾ ಚೋಪ್ರಾ ಈ ಅವತಾರದಲ್ಲಿ ಕಾಣಿಸಿಕೊಂಡಿದ್ದೇ ಎಲ್ಲರೂ ಆಕೆಯನ್ನು ಟೀಕಿಸಿದರು. ಥೀಂ ಪ್ರಕಾರ ಈಕೆಯ ಲುಕ್ಸ್ ಸರಿ ಇತ್ತು, ಆದರೆ ಅಭಿಮಾನಿಗಳಿಗೆ ಮಾತ್ರ ಅವಳ ಈ ಅವತಾರ ಸರಿಹೋಗಲಿಲ್ಲ. ಅದೇ ವೇದಿಕೆಯಲ್ಲಿ ದೀಪಿಕಾ ಬಾರ್ಬಿ ಡಾಲ್ ಆಗಿ ಕಾಣಿಸಿದಳು. ಅದು ಸಹನೀಯವಾಗಿದ್ದ ಕಾರಣ ಫ್ಯಾನ್ಸ್ ಟೀಕೆಗೆ ಹೋಗಲಿಲ್ಲ. ಇಲ್ಲದಿದ್ದರೆ ಟ್ವೀಟಿಗರು ಫೇಸ್ಬುಕ್ನಲ್ಲಿ ತೆಪ್ಪಗಿರುತ್ತಿದ್ದರೇ?
ಕಿಯಾರಾ ಮೊದಲು ಆಲಿಯಾ ಆಗಿದ್ದಳು!
ಇದೇನು….. ಎಂದು ಕನ್ಫ್ಯೂಸ್ ಆದಿರಾ? ಅಸಲಿಗೆ `ಕಳಂಕ್’ ಚಿತ್ರದ 2ನೇ ನಾಯಕಿ ಕಿಯಾರಾ ಅಡ್ವಾನಿಯ ಮೂಲ ಹೆಸರು ಆಲಿಯಾ ಆಗಿತ್ತಂತೆ….. ಹಾಗೆಂದು ಅವಳೇ ಕಿರುತೆರೆಯ ಇತ್ತೀಚಿನ ಒಂದು ರಿಯಾಲಿಟಿ ಶೋನಲ್ಲಿ ಹೇಳಿಕೊಂಡಿದ್ದಾಳೆ. ಅವಳು ಬಾಲಿವುಡ್ಗೆ ಎಂಟ್ರಿ ಪಡೆದಾಗ, ಇವಳ ಸೀನಿಯರ್ ಆಗಿದ್ದ ಆಲಿಯಾ ಭಟ್ ಸ್ಟಾರ್ ಆಗಿಹೋಗಿದ್ದಳು. ಹೀಗಾಗಿ ಸಲ್ಮಾನ್ನ ಸಲಹೆಯಂತೆ ಇವಳ ಹೆಸರನ್ನು ಬೆಳ್ಳಿತೆರೆಗಾಗಿ ಕಿಯಾರಾ ಎಂದು ಬದಲಿಸಲಾಯಿತು. ಭಾರತೀಯ ಚಿತ್ರರಂಗಕ್ಕೆ ಇದೇನೂ ಹೊಸತಲ್ಲ. ಗೆದ್ದವರು ಸಂಭ್ರಮಿಸುತ್ತಾರೆ, ಸೋತವರು ಹಳೆಯದಿದ್ದಿದ್ದರೆ ಚೆನ್ನಾಗಿರುತ್ತಿತ್ತೇನೋ ಎಂದು ಹಲುಬುತ್ತಾರೆ. ನಿಜ ನಿಜ…… ಕೈಗೆಟುಕುದ ದ್ರಾಕ್ಷಿ……
ಸಿಕ್ಕಿಬಿದ್ದ ಕರಣ್
ಮಾಡೆಲ್ ನಟ ಆದ ಕರಣ್ ಒಬೆರಾಯ್ನನ್ನು ಲೈಂಗಿಕ ಶೋಷಣೆಯ ಪ್ರಕರಣದಲ್ಲಿ 14 ದಿನ ನ್ಯಾಯಾಲಯ ವಿಚಾರಣಾ ಕಸ್ಟಡಿಗೆ ತೆಗೆದುಕೊಂಡಿದೆ. `ಮೀ ಟೂ’ ಮೂಮೆಂಟ್ ಅಂತೂ ಹಿಂದಿ ಚಿತ್ರರಂಗದಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸಿದೆ. ಎಷ್ಟೋ ನಟರು ಬಹಳ ಭಯಪಡುತ್ತಿದ್ದಾರೆ. ಅತ್ತ ಕರಣ್ನ ಫ್ರೆಂಡ್ ಪೂಜಾ ಬೇಡಿ ಖುಲ್ಲಂಖುಲ್ಲ ಅವನಿಗೆ ಸಪೋರ್ಟ್ ಮಾಡುತ್ತಿದ್ದಾಳೆ
`ಮೀ ಟೂ’ ಸಾಲಿಗೆ ಜವಾಬಾಗಿ `ಮ್ಯಾನ್ ಟೂ’ ಆಂದೋಲನ ಶುರು ಮಾಡಬಾರದೇಕೆ ಎಂದು ಕರೆ ನೀಡಿದ್ದಾಳೆ.
ರಾಜ್ಕುಮಾರ್ ಮಾರ್ಗದರ್ಶನದಲ್ಲಿ ಪ್ರತೀಖಾ
ತನ್ನ ಬಾಯ್ಫ್ರೆಂಡ್ ರಾಜ್ಕುಮಾರ್ ರಾವ್ ಮಾರ್ಗದಲ್ಲೇ ನಡೆಯಲು ಪ್ರತೀಖಾ ಬಯಸಿ, ಎಂದಿನ ಟೈಪ್ಕಾಸ್ಟ್ ಪಾತ್ರ ಬಿಟ್ಟು ವಿಭಿನ್ನ ಪಾತ್ರ ನಿರ್ವಹಿಸಲು ಮುಂದಾಗಿದ್ದಾಳೆ. `ಬದ್ನಾಮ್ ಗಲೀ’ ಚಿತ್ರದಲ್ಲಿ ಆಕೆಯ ಗರ್ಭಿಣಿ ಪಾತ್ರ ತುಸು ವಿಭಿನ್ನವಾದುದು. ಒಂದು ಗಂಭೀರ ಪ್ರಕರಣವನ್ನು ಲಘು ಹಾಸ್ಯದೊಂದಿಗೆ ಇಲ್ಲಿ ಹೇಳಲಾಗಿದೆ. ಆಹಾ…. ಕ್ಯಾ ಬಾತ್ ಹೈ! ಪ್ರತೀಖಾ ಬಾಯ್ಫ್ರೆಂಡ್ನ ಎಲ್ಲಾ ಗುಟ್ಟನ್ನೂ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದಾಳೆ.
ಯಾವಾಗ ನಿಲ್ಲುತ್ತದೆ ಈ ಜಗಳ?
ಒಲೆಯ ಮೇಲಿಟ್ಟ ಹಾಲು ಉಕ್ಕಿದ ಮೇಲೆ, ಸಣ್ಣ ಉರಿ ಮಾಡಿದರೂ ಮತ್ತೆ ಮತ್ತೆ ಉಕ್ಕುತ್ತಾ ಕುದಿಯುವಂತೆ ಕಂಗನಾ-ಹೃತಿಕ್ರ ಜಗಳ ತಾರಕಕ್ಕೆ ಏರುತ್ತಲೇ ಇರುತ್ತದೆ. ಇದೀಗ ಹೊಸ ಗಲಾಟೆ ಅಂದ್ರೆ, ಕಂಗನಾಳ `ಮೆಂಟಲ್ ಹೈ ಕ್ಯಾ’ ಮತ್ತು ಹೃತಿಕ್ನ `ಸೂಪರ್ 30′ ಚಿತ್ರಗಳ ರಿಲೀಸಿಂಗ್ ಡೇಟ್ ಕ್ಲಾಶ್ ಆಗುತ್ತಿದೆ. ಇಷ್ಟು ಸಾಲದೆಂಬಂತೆ ಇವರ ಈ ಜಗಳದ ಬೆಂಕಿಗೆ ತುಪ್ಪ ಹೊಯ್ಯುಂತೆ, ಕಂಗನಾಳ ತಂಗಿ ರಂಗೋಲಿ ಟ್ವೀಟ್ ಮಾಡುತ್ತಾ, ಹೃತಿಕ್ನನ್ನೇ ಬೆದರಿಸಿದ್ದಾಳೆ. ನಮ್ಮಕ್ಕ ಕಂಗನಾ ಸುಮ್ಮನಲ್ಲ….. ಈ ಬಗ್ಗೆ ಒಂದು ಕೈ ನೋಡದೆ ಬಿಡುವವಳಲ್ಲ! ಎಂದು ಕಿಚಾಯಿಸಿದ್ದಾಳೆ. ಇನ್ನು ಹೃತಿಕ್ ಸುಮ್ಮನಿದ್ದಾನಾ? ರೀ ಕಂಗನಾ ಮೇಡಂ, ನೀವು ಇದೇ ಅವತಾರ ಮುಂದುವರಿಸಿದರೆ ಮುಂದೆ ಯಾವ ಸಹಕಲಾವಿದರೂ ನಿಮ್ಮೊಂದಿಗೆ ನಟಿಸಲಾರರು ಎಂದು ಬಾಲಿವುಡ್ ನೇರವಾಗಿಯೇ ಆಡಿಕೊಳ್ಳುತ್ತಿದೆ.
ಆಯುಷ್ಮಾನ್ ಇದೀಗ ಜ್ಯಾದಾ ಸಾವ್ಧಾನ್!
ಎಂದಿನ ಸಾಧಾರಣ ವಿಷಯಗಳಿಗಿಂತ ವಿಭಿನ್ನ, ಆದರೆ ಸಾಮಾಜಿಕ ಕಳಕಳಿಯುಳ್ಳ ಚಿತ್ರಗಳನ್ನೇ ಆಯ್ದುಕೊಳ್ಳುವ ಆಯುಷ್ಮಾನ್ `ಶುಭ್ ಮಂಗಲ್ ಸಾವ್ಧಾನ್’ ಚಿತ್ರದ ಸೀಕ್ವೆನ್ಸ್ `ಶುಭ್ ಮಂಗಲ್ ಜ್ಯಾದಾ ಸಾವ್ಧಾನ್’ ಚಿತ್ರದಲ್ಲೂ ಪ್ರಧಾನ ಪಾತ್ರ ವಹಿಸುತ್ತಿದ್ದಾನೆ. ಇದರ ಹೊರತಾಗಿ ಇವನ ಇನ್ನೊಂದು ಹೊಸ ಚಿತ್ರ `ಡ್ರೀಮ್ ಗರ್ಲ್’ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ತಲೆ ಬಾಲಗಳಿಲ್ಲದ ಕಾನ್ಸೆಪ್ಟ್ ಇಟ್ಟುಕೊಂಡು ಕೋಟ್ಯಂತರ ರೂ. ಸುರಿದು ಚಿತ್ರ ಮಾಡುವವರು ಅಪರೂಪದ ಕಾನ್ಸೆಪ್ಟ್ ಆರಿಸಿಕೊಳ್ಳುವುದು ಹೇಗೆ ಎಂಬುದನ್ನು ಆಯುಷ್ಮಾನ್ನಿಂದ ಕಲಿಯಲಿ.
ಎಲ್ಲಿದ್ದೀಯಮ್ಮ ಸೋನಂ?
ಹಾಗಲ್ಲ ಕೇಳುವುದು, ಸೋನಂ ಎಲ್ಲಿಲ್ಲ ಹೇಳಿ ಅನ್ನಬೇಕು! ಏಕೆಂದರೆ ಮದುವೆ ನಂತರವಂತೂ ಆಂಟಿ ಆದ ಸೋನಂಳನ್ನು ಯಾರೂ ಸಿನಿಮಾಗೆ ಮೂಸುತ್ತಿಲ್ಲ. ಆದರೆ ಫೇಸ್ಬುಕ್, ಟ್ವೀಟರ್ನಲ್ಲಿ ತನ್ನ ಗಂಡ ಆನಂದ್ ಜೊತೆ ಪೋಸ್ಟರ್ನಲ್ಲಿ ಮಿರಿಮಿರಿ ಮಿಂಚುತ್ತಿದ್ದಾಳೆ. ಒಂದಂತೂ ನಿಜ, ಬಾಲಿವುಡ್ನ ಸ್ಟೈಲಿಶ್ ಐಕಾನ್ ಎನಿಸಿದ್ದ ಸೋನಂ, ಮದುವೆ ನಂತರ ಮತ್ತಷ್ಟು ಮಗದಷ್ಟು ಗ್ಲಾಮರಸ್ ಆಗುತ್ತಿದ್ದಾಳೆ, ಮೇಲಿನ ಫೋಟೋದಲ್ಲಿ ಅದು ಧಾರಾಳ ಕಾಣಿಸುತ್ತದೆ ಅಲ್ಲವೇ?
ಅಮಾಯಕಳಲ್ಲ ಅಮಾಯ್ರಾ!
ಪಾಪ, ಅಭಿಮಾನಿಗಳ ಮಧ್ಯೆ ಸದಾ ನೆನಪಲ್ಲಿ ಉಳಿಯಬೇಕು ಅಂದ್ರೆ ನಟನಟಿಯರು ಏನೆಲ್ಲ ತಿಪ್ಪರಲಾಗ ಹಾಕಬೇಕಾಗುತ್ತದಲ್ಲವೇ? ನಟೀಮಣಿಯರ ಹಾಟ್ ಫೋಟೋ ಶೂಟ್ ಇದರ ಕೊಡುಗೆಯೇ ಸರಿ. ಅಮಾಯ್ರಾ ಬೇಬಿ ಬಳಿಯಂತೂ ಇತ್ತೀಚೆಗೆ ಯಾವ ಚಿತ್ರವೂ ಇಲ್ಲ, ಹೀಗಾಗಿ ಈಕೆ ಸಹ ಹಾಟ್ ಫೋಟೋ ಶೂಟ್ ನಡೆಸಿದ್ದೂ ನಡೆಸಿದ್ದೇ! ಮೈಮಾಟ ಮೆರೆಸಿ ಸಿನಿಮಾದಲ್ಲಿ ಶಿಳ್ಳೆ ಗಿಟ್ಟಿಸುವ ಕಾಲ ಹೋಯ್ತು ಎಂದು ಅಮಾಯಕಳಾದ ಅಮಾಯ್ರಾಗೆ ಯಾರಾದರೂ ತಿಳಿಸಿ ಹೇಳಬಾರದೇ?
ಇರ್ಫಾನ್ನ ಶೂಟಿಂಗ್ ಮತ್ತು ಆರೋಗ್ಯ
ಇತ್ತೀಚೆಗಷ್ಟೆ ತನ್ನ ಗಂಭೀರ ಕಾಯಿಲೆ ಗುಣಪಡಿಸಿಕೊಂಡು ಭಾರತಕ್ಕೆ ಮರಳಿರುವ ಇರ್ಫಾನ್ `ಅಂಗ್ರೇಝಿ ಮೀಡಿಯಂ’ ಚಿತ್ರದಲ್ಲಿ ಬಿಝಿ ಆಗಿದ್ದಾನೆ. ಸತತ ಶೂಟಿಂಗ್ ಕಾರಣ ಈತನ ಹೊಸ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗುತ್ತಲೇ ಇರುತ್ತದೆ. ಅತ್ತ ಇರ್ಫಾನ್ ತನ್ನ ಆರೋಗ್ಯ ಹದಗೆಡದಂತೆಯೂ ನೋಡಿಕೊಳ್ಳಬೇಕು. ಹೀಗಾಗಿ ಶೂಟಿಂಗ್ ಸ್ಪಾಟ್ಗೆ ಆಗಾಗ ಇವರ ಫ್ಯಾಮಿಲಿ ಡಾಕ್ಟರ್ ಭೇಟಿ ಕೊಡುತ್ತಿರುತ್ತಾರೆ.
ವಿದ್ಯಾ ಇದೀಗ ಗಣಿತಜ್ಞೆ
ಬಾಲಿವುಡ್ನ ಕೆಲವೇ ನುರಿತ, ಚಿತ್ರವನ್ನು ಅನಾಯಾಸವಾಗಿ ಗೆಲ್ಲಿಸಿ ಕೊಡಬಲ್ಲ ನಟಿಯರಲ್ಲಿ ವಿದ್ಯಾ ಸಹ ಒಬ್ಬಳು. ಇತ್ತೀಚಿನ ವರದಿ ಎಂದರೆ, ಭಾರತದ `ಹ್ಯೂಮನ್ ಕಂಪ್ಯೂಟರ್’ ಎಂದೇ ಹೆಸರಾಗಿದ್ದ ಅಮೋಘ ಗಣಿತಜ್ಞೆ ಶಕುಂತಲಾ ದೇವಿಯವರ ಬಯೋಪಿಕ್ನಲ್ಲಿ ವಿದ್ಯಾ, ಅವರ ಪಾತ್ರ ವಹಿಸಲಿದ್ದಾಳೆ. ಸಹಜವಾಗಿಯೇ ಇಡೀ ಚಿತ್ರದ ಯಶಸ್ಸು ವಿದ್ಯಾಳಿಗೇ ಸಲ್ಲುತ್ತದೆ. ವಾಹ್, ಜವಾಬ್ದಾರಿ ಹೊರುವುದು ಅಂದ್ರೆ ಹೀಗಲ್ಲವೇ? ಅಂದಹಾಗೆ ಶಕುಂತಲಾ ದೇವಿ ನಮ್ಮ ಬೆಂಗಳೂರಿನ ಜಯನಗರದವರು!