`ಬಿಗ್‌ಬಾಸ್‌' ಈ ರಿಯಾಲಿಟಿ ಶೋ ಅನೇಕರಿಗೆ ಲೈಫ್‌ ಕೊಟ್ಟಿರುವುದಂತೂ ಸತ್ಯ. ಕೆಲವರು ಅದನ್ನು ಬಳಸಿಕೊಂಡು ತಮ್ಮ ವೃತ್ತಿ ಬೆಳೆಸಿಕೊಂಡರೆ ಇನ್ನೂ ಕೆಲವರು ತಾವರೆಯಂತೆ ಶೋ ಮಾಡುತ್ತಾ ತಮ್ಮತನವನ್ನು ಮರೆತುಬಿಟ್ಟರು. ಈಗ ನಾಯಕಿ ಪಟ್ಟ ದೊರಕಿಸಿಕೊಂಡು ಮಿಂಚುತ್ತಿರುವ ಶೃತಿ ಪ್ರಕಾಶ್‌ ಕೂಡಾ `ಬಿಗ್‌ಬಾಸ್‌' ಮನೆಯಿಂದಲೇ ಜನಪ್ರಿಯತೆ ಪಡೆದುಕೊಂಡಂಥ ಹುಡುಗಿ. `ಬಿಗ್‌ಬಾಸ್‌' ಕಾರ್ಯಕ್ರಮವನ್ನು ಒಮ್ಮೆಯೂ ನೋಡದಂಥ ಶೃತಿ ಪ್ರಕಾಶ್‌, ಆಯ್ಕೆ ಆಗಿದ್ದೇ ಆಶ್ಚರ್ಯ. `ನನ್ನ ಸಹೋದರಿ `ಬಿಗ್‌ಬಾಸ್‌' ಫ್ಯಾನ್‌ ಆಗಿದ್ದಳು. ಆದರೆ ನಾನೇ ಸ್ಪರ್ಧಿಯಾಗಿ ಭಾಗವಹಿಸಿದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು,' ಎನ್ನುವ ಶೃತಿ ಇಂದು ಎಲ್ಲರ ಮನೆ ಮಾತಾಗಿರುವ ನಟಿಯಾಗಿ ಒಪ್ಪಿದ್ದಾಳೆ.

ಸಿನಿಮಾ ನಟಿಯಾಗಬೇಕೆಂಬ ಆಸೆ ಮೊದಲಿನಿಂದಲೂ ಇತ್ತಂತೆ. ಮಹಿಳಾ ಪ್ರಧಾನ ಚಿತ್ರಗಳು ಹಾಗೂ ಸಿನಿಮಾದಲ್ಲಿ ಪ್ರಮುಖ ಪಾತ್ರದ ಮೂಲಕ ತನ್ನನ್ನು ಗುರುತಿಸಿಕೊಳ್ಳಬೇಕೆಂಬ ಹಂಬಲ ಶೃತಿಗಿತ್ತು. ನನ್ನ ಆಸೆಗಳು ಕನಸುಗಳಿಗೆ `ಬಿಗ್‌ಬಾಸ್‌' ವೇದಿಕೆಯಾಗುತ್ತೆ ಎಂಬುದು ನನಗೆ ಗೊತ್ತಿರಲಿಲ್ಲ. ಬಿಗ್‌ಬಾಸ್‌ ಮೂಲಕ ಕನ್ನಡಿಗರ ಮನಸ್ಸು ಗೆದ್ದೆ. ಅವರ ಪ್ರೀತಿ ಸಂಪಾದಿಸಿದೆ ಎನ್ನುತ್ತಾಳೆ. ಶೃತಿ ಕನ್ನಡಿಗಳಾದರೂ ಬೆಳೆದದ್ದು ಮುಂಬೈನಲ್ಲಿ. ಕನ್ನಡವನ್ನು `ಬಿಗ್‌ಬಾಸ್‌' ಮನೆಯಲ್ಲೇ ಕಲಿತಳು. ಇಂದು ಕನ್ನಡದ ನಟಿಯಾಗಿ ಬೆಳೆಯುತ್ತಿದ್ದಾಳೆ. ಒಬ್ಬ ಉತ್ತಮ ನಟಿ ಎನಿಸಿಕೊಳ್ಳಬೇಕೆಂಬ ಹಂಬಲದಿಂದಲೇ ಶೃತಿ `ಬಿಗ್‌ಬಾಸ್‌' ಮನೆಗೆ ಎಂಟ್ರಿ ಕೊಟ್ಟ ಹಾಗಾಗಿತ್ತು. ಸಿನಿಮಾದಲ್ಲಿ ಆಫರ್ಸ್‌ ಬರಲು ಶುರುವಾದಾಗ, ಶೃತಿ ಮಾಡುವುದಾದರೆ ನಾಯಕಿ ಪಾತ್ರ ಎಂದು ಮೊದಲೇ ನಿರ್ಧರಿಸಿಬಿಟ್ಟಿದ್ದಳು.

`ಲಂಡನ್‌ನಲ್ಲಿ ಲಂಬೋದರ' ಮೊದಲ ಚಿತ್ರದಲ್ಲೇ ನಾನಂದುಕೊಂಡಂತೆ ಒಂದೊಳ್ಳೆ ಪಾತ್ರ ಸಿಕ್ಕಿತು. ಈ ಚಿತ್ರದಲ್ಲಿ ನಾನು ನಾಯಕಿಯಾಗಿ ನನ್ನ ಪ್ರತಿಭೆನೂ ತೋರುವಂತಾಯಿತು. ಅಂದಹಾಗೆ ಶೃತಿ ಒಳ್ಳೆ ಗಾಯಕಿ ಕೂಡಾ. ಕನ್ನಡದ ಹಾಡುಗಳನ್ನು ಸೊಗಸಾಗಿ ಹಾಡಬಲ್ಲಳು. ಹಿಂದಿ ಹಾಡುಗಳನ್ನು ಅಷ್ಟೇ ಚಂದವಾಗಿ ಹಾಡುವ ಶೃತಿ ಟ್ಯಾಲೆಂಟ್‌ ಏನೆಂಬುದನ್ನು ಆಕೆಯ ಫೇಸ್‌ಬುಕ್‌ ಪೇಜ್‌ ತಿರುವಿ ಹಾಕಿದರೆ ಗೊತ್ತಾಗುತ್ತದೆ.

`ಲಂಡನ್‌ನಲ್ಲಿ ಲಂಬೋದರ' ನಂತರ ಶೃತಿ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದಳು. ಚಿತ್ರದ ಹೆಸರು `ಫಿದಾ.' ನೈಜ ಘಟನೆಯಾಧಾರಿತ ಚಿತ್ರ ಇದಾಗಿದೆ. `ಫಿದಾ' ಚಿತ್ರ ರಾಮ್ ವಿನಯ್‌ ಎನ್ನುವ ನಿರ್ದೇಶಕರ ಮೊದಲ ಚಿತ್ರವಾಗಲಿದೆ. ಈ ಕಥೆಯ ಬಗ್ಗೆ ಅವರು ಸಾಕಷ್ಟು ಕೆಲಸ ಮಾಡಿದ್ದಾರಂತೆ. ಇದೀಗ `ಕಡಲ ತೀರದ ಭಾರ್ಗವ' ಎನ್ನುವ ಹೊಸ ಚಿತ್ರದ ಚಿತ್ರೀಕರಣದಲ್ಲಿ ಶೃತಿ ನಿರತಳಾಗಿದ್ದಾಳೆ. ಇದೊಂದು ಲವ್ ಸ್ಟೋರಿಯಾಗಿದ್ದು, ಶೃತಿ ಜೊತೆ ಭರತ್‌ಗೌಡ ಲೀಡ್‌ ರೋಲಲ್ಲಿದ್ದಾರೆ. ಈ ಚಿತ್ರದ ಬಗ್ಗೆ ಶೃತಿ ಹೇಳುವಂತೆ ``ನನಗೆ ಈ ಚಿತ್ರದ ಸ್ಕ್ರಿಪ್ಟ್ ಬಹಳ ಪವರ್‌ಫುಲ್ ಅನಿಸ್ತು. ಅಭಿನಯಕ್ಕೆ ತುಂಬಾ ಅವಕಾಶವಿದೆ. ನಾನಿಂಥ ಪಾತ್ರಕ್ಕಾಗಿಯೇ ಕಾಯುತ್ತಿದ್ದೆ.  ಬಹಳ ಇಷ್ಟವಾದ ಪಾತ್ರವಿದು. ತುಂಬಾ ಶೇಡ್ಸ್ ಇರೋವಂಥ ಪಾತ್ರ. ಕಥೆ ಕೂಡಾ ತುಂಬಾ ಚೆನ್ನಾಗಿದೆ. ಅದರ ಬಗ್ಗೆ ಈಗಲೇ ಎಲ್ಲವನ್ನು ಹೇಳುವಂತಿಲ್ಲ,'' ಎನ್ನುತ್ತಾಳೆ.

ಅಂದಹಾಗೆ ಈ ಚಿತ್ರಕ್ಕೂ ಶಿವರಾಮ ಕಾರಂತರಿಗೂ ಸಂಬಂಧವಿಲ್ಲ ಎಂಬುದನ್ನು ಚಿತ್ರತಂಡ ಸ್ಪಷ್ಟಪಡಿಸುತ್ತದೆ. ಈ ಚಿತ್ರವನ್ನು ಸೋಮಶೇಖರ್‌ ನಿರ್ದೇಶನ ಮಾಡುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ