ಸಿನಿಮಾ ನಟಿಯಾಗಬೇಕೆಂದು ಪುಟ್ಟ ಹುಡುಗಿಯಿಂದಲೇ ಕನಸು ಕಾಣುತ್ತಾ ಬಂದ ನೀತೂ ರಾಯ್‌, ಸ್ಕೂಲ್‌ನಲ್ಲಿದ್ದಾಗಲೇ ಕನ್ನಡಿ ಮುಂದೆ ನಿಂತು ನಟನೆ ಮಾಡ್ತಿದ್ದಳಂತೆ. ಇವಳಲ್ಲಿದ್ದ ಈ ಕ್ರೇಜ್‌ ಮನೆಯವರಿಗೂ ಗೊತ್ತಾಗಿ ಗ್ರೀನ್‌ ಸಿಗ್ನಲ್ ಕೊಟ್ಟರು.

ಆಂಧ್ರ ಮೂಲದ ನೀತೂ ಹತ್ತನೇ ಕ್ಲಾಸ್‌ ನಂತರ ಬೆಂಗಳೂರಿಗೆ ಬಂದಳು. ನಟಿಯಾಗಬೇಕೆಂಬ ರಂಗೀನ್‌ ಕನಸು ಕಂಡು, ಎರಡು ವರ್ಷ ಅನಿಮೇಷನ್‌ ಕೋರ್ಸ್‌ ಮಾಡಿದಳು. ಒಳ್ಳೆ ಜಾಬ್‌ ಕೂಡ ಸಿಗುವ ಅವಕಾಶ ಇತ್ತಾದರೂ ಬಣ್ಣದ ಲೋಕದತ್ತ ಹೆಜ್ಜೆ ಹಾಕಿದಳು. ಸಕ್ಸಸ್‌ ಆದಳೇ ಹೇಗೆ.......?

ಓವರ್‌ ಟು ನೀತು

ನಿಜ ಮೇಡಂ ನನಗೆ ಸಿನಿಮಾದಲ್ಲಿ ನಟಿಸಬೇಕು, ಹೆಸರು ಮಾಡಬೇಕೆಂಬ ಆಸೆ. ಆದರೆ ನಾನಂದುಕೊಂಡಷ್ಟು ದಾರಿ ಸುಲಭವಾಗಿರಲಿಲ್ಲ. ಜಾಹೀರಾತುಗಳಿಗೆ ಪೋಸ್‌ ಕೊಟ್ಟೆ. ಮಾಡೆಲ್ ಆದೆ. ನನಗ್ಯಾರೂ ಗಾಡ್‌ ಫಾದರ್‌ ಇಲ್ಲ ಎನ್ನುವ ಕೊರಗಿರಲಿಲ್ಲ. ಏಕೆಂದರೆ ನನ್ನಲ್ಲಿ ಟ್ಯಾಲೆಂಟ್‌ ಎನ್ನುವ ಸರ್ಟಿಫಿಕೇಟ್‌ ಇತ್ತು. ಹಾರ್ಡ್‌ವರ್ಕ್‌ ಮಾಡಲು ಸದಾ  ಸಿದ್ಧ. ದರ್ಶನ್‌ ಸರ್‌, ಯಶ್‌ ಸರ್‌ ಇವರು ಯಾರೂ ಗಾಡ್‌ ಫಾದರ್‌ ನೆರವಿನಿಂದ ಬಂದವರಲ್ಲ. ಅವರಲ್ಲಿದ್ದ ಪ್ರತಿಭೆ, ಪರಿಶ್ರಮ ಇಂದು ಉತ್ತುಂಗಕ್ಕೇರಿಸಿದೆ. ನನಗೆ ಅಂಥವರೇ ಸ್ಛೂರ್ತಿ.

ದುನಿಯಾ ಸೂರಿ ಚಿತ್ರದಲ್ಲಿ...... ನನ್ನ ಫೋಟೋಗಳನ್ನು ನೋಡಿಯೇ ಒಂದಷ್ಟು ಅವಕಾಶಗಳು ಬಂದವು. `ನಾಗಕನ್ನಿಕೆ' ಸೀರಿಯಲ್‌ನಲ್ಲಿ ಪಾತ್ರ ಮಾಡಿದೆ. ಈಗ `ಮರಳಿ ಬಂದಳು ಸೀತೆ' ಧಾರಾವಾಹಿಯಲ್ಲೂ ಒಳ್ಳೆ ಪಾತ್ರವಿದೆ. `ಕಾಫಿ' ಎನ್ನುವ ತಮಿಳು ಚಿತ್ರದಲ್ಲಿ ರಾಹಲ್ ಸೇನ್‌ ಜೊತೆ ನಟಿಸಿದ್ದೀನಿ. ಈಗ ಒಂದೆರಡು ಕನ್ನಡ ಚಿತ್ರಗಳು ನನ್ನ ಕೈ ಸೇರಲಿದೆ. ದುನಿಯಾ ಸೂರಿಯವರ `ಪಾಪ್‌ಕಾರ್ನ್‌ ಮಂಕಿ ಟೈಗರ್‌' ಚಿತ್ರದಲ್ಲಿ ನನಗೊಂದು ಒಳ್ಳೆ ಪಾತ್ರ ಸಿಕ್ಕಿದೆ. ಶೂಟಿಂಗ್‌ ಕೂಡಾ ಆಗಿದೆ. ತುಂಬಾ ಇಂಟ್ರೆಸ್ಟ್ ಆಗಿರುವ ರೋಲ್‌. ಸೂರಿಯವರು ತುಂಬಾನೇ ಸಿಂಪಲ್. ಅಷ್ಟು ದೊಡ್ಡ ಡೈರೆಕ್ಟರ್‌ ಆಗಿದ್ದರೂ ನಮ್ಮಂಥ ಹೊಸಬರಿಗೆ ಬಹಳ ತಾಳ್ಮೆಯಿಂದ ತಿಳಿಸಿ ಹೇಳುತ್ತಾರೆ. ಮೊದಲ ದಿನ ಸ್ವಲ್ಪ ನರ್ವಸ್ ಆಗಿದ್ದೆ. ಇನ್ನೊಂದಿಷ್ಟು ದಿನ ಶೂಟಿಂಗ್‌ ಇದೆ. ಸೂರಿಯವರ ಚಿತ್ರದಲ್ಲಿ ನಟಿಸುತ್ತಿರೋದು ನನ್ನ ಅದೃಷ್ಟ.

ನನ್ನಲ್ಲಿ ಸ್ಛೂರ್ತಿ ತುಂಬಿದ ಗ್ರೇಟ್‌ ಆ್ಯಕ್ಟರ್‌

ನಾನ್ಯಾವತ್ತೂ ಅವಕಾಶಕ್ಕಾಗಿ ಅಲೆಯಲು ಬೇಸರಪಟ್ಟುಕೊಂಡವಳಲ್ಲ. ಶ್ರಮ ಪಡದ ಹೊರತು ಇಲ್ಲೇನೂ ಸಿಗುವುದಿಲ್ಲ ಎಂಬುದೂ ಗೊತ್ತಿದೆ. ಹೀಗೊಂದು ದಿನ ಡೈರೆಕ್ಟರ್‌ ಹೇಳಿ ಕಳುಹಿಸಿದ್ದಾರೆಂದು ಶೂಟಿಂಗ್‌ ಸ್ಥಳಕ್ಕೆ ಹೋಗಿ ಕುಳಿತುಕೊಂಡಿದ್ದೆ. ಅಂದು ಅವರು ನನ್ನ ಕಡೆ ಗಮನಹರಿಸಲಿಲ್ಲವೋ ಅಥವಾ ಕೆಲಸದಲ್ಲಿ ನಿರತರಾಗಿದ್ದರೋ ಗೊತ್ತಿಲ್ಲ. ಮರುದಿನ ಅದೇ ಸೆಟ್ಟಿಗೆ ಹೋಗಿ ಕುಳಿತುಕೊಂಡೆ. ಇದನ್ನು ದೂರದಿಂದ ನೋಡುತ್ತಾ ಗಮನಿಸುತ್ತಿದ್ದ ಶಿವಣ್ಣ ಶೂಟಿಂಗ್‌ ಮುಗಿಸಿ ಹೋಗುವಾಗ ನನ್ನ ಬಳಿ ಬಂದು, `ಯಾರಮ್ಮ.... ಯಾಕಿಲ್ಲಿ ಕುಳಿತಿದ್ಯಾ.... ಏನಾಗ್ಬೇಕು ಅಂತ ವಿಚಾರಿಸಿದ್ರು,' ನಾನು ಎಲ್ಲವನ್ನೂ ಹೇಳಿದೆ.

`ನೋಡಲು ಲಕ್ಷಣವಾಗಿದೀಯ, ಒಳ್ಳೆ ನಾಯಕಿಯಾಗಬಹುದು. ಸುಮ್ಮನೆ ಇಲ್ಲೆಲ್ಲ ಬಂದು ಕುಳಿತುಕೊಳ್ಳುವುದು ಸರಿಯಲ್ಲ. ಒಳ್ಳೆಯದಾಗುತ್ತೆ ಹೋಗು,' ಅಂತ ಹೇಳಿದಾಗ, ನನಗಾದ ಸಂತೋಷ ಅಷ್ಟಿಷ್ಟಲ್ಲ. ಅಷ್ಟು ದೊಡ್ಡ ನಟರಾಗಿದ್ದರೂ ನನ್ನಂಥ ಹೊಸಬರಲ್ಲಿ ಈ ರೀತಿ ಸ್ಛೂರ್ತಿ ತುಂಬಿದ್ದು ನನ್ನಲ್ಲಿ ಕಾನ್ಛಿಡೆನ್ಸ್ ತುಂಬಿತು, ಎಂದು ಹೇಳುವ ನೀತೂಗೆ ನಿರ್ಮಾಪಕರಿಂದ ಕಹಿ ಅನುಭವ ಆಗಿದೆ. ಹಣಕ್ಕಾಗಿ ನಾನೆಂದೂ ಆಸೆ ಪಟ್ಟವಳಲ್ಲ. ಸಂಭಾವನೆ ಇಲ್ಲದೇ ಅಭಿನಯಿಸಬಲ್ಲೇ. ತಾಳಿದವನು ಬಾಳಿಯಾನು ಎಂಬಂತೆ ನೀತೂ ದೃಢ ನಂಬಿಕೆಯಿಟ್ಟುಕೊಂಡಿರುವಂಥ ಹುಡುಗಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ