``ನನ್ನ ಬದುಕಿನಲ್ಲಿ ನಡೆದ ಘಟನೆಗಳೆಲ್ಲ ಆಕಸ್ಮಿಕ. ಸಿನಿಮಾರಂಗಕ್ಕೆ  ಬಂದದ್ದು, ಅಲ್ಲಿಂದ ಅಂಬರೀಷ್‌ರ ಪತ್ನಿಯಾದದ್ದು ಅವರು ನಮ್ಮನ್ನಗಲಿದ ಒಂದೇ ತಿಂಗಳಿಗೆ ರಾಜಕೀಯ ರಂಗಪ್ರವೇಶ. ಇದೆಲ್ಲವನ್ನೂ ಅದಾಗಿ ಬಂದಂತೆ ಸ್ವೀಕರಿಸುತ್ತಾ ಹೋದವಳು ನಾನು,'' ಎಂದು ಸುಮಲತಾ ಅಂಬರೀಷ್‌ ತಮ್ಮ ಎಲ್ಲ ಸಂದರ್ಶನಗಳಲ್ಲೂ ಹೇಳುತ್ತಲೇ ಬಂದಿದ್ದಾರೆ.

ಸುಮಲತಾ ಸುಮಕ್ಕ, ಸುಮಮ್ಮ ಆದದ್ದು ಚುನಾವಣಾ ಕಣಕ್ಕಿಳಿದಾಗಲೇ! ಪತಿಯನ್ನು ಕಳೆದುಕೊಂಡು ತಮ್ಮ ದುಃಖದಲ್ಲಿದ್ದ ಸುಮಲತಾರನ್ನು ಮಂಡ್ಯದ ಜನರು, ಅಂಬರೀಷ್‌ ಅಭಿಮಾನಿಗಳು, ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿತು. ಮಂಡ್ಯದ ಜನರ ಆ ಕೂಗಿಗೆ ಸುಮಲತಾ ಇಲ್ಲ ಎನ್ನುವಂತಿರಲಿಲ್ಲ. ಏಕೆಂದರೆ ಮಂಡ್ಯದ ಗಂಡು ಅಂಬರೀಷ್‌ರ ಊರದು. ಅಲ್ಲಿಯ ಜನ ಅಂಬಿಯನ್ನು ಪ್ರೀತಿಸುತ್ತಿದ್ದರು, ಪೂಜಿಸುತ್ತಿದ್ದರು. ಅಣ್ಣನ ಸ್ಥಾನವನ್ನು ನೀವು ತುಂಬಲೇಬೇಕು ಎಂದು ಒತ್ತಾಯ ಮಾಡಿದಾಗಲೇ ಸುಮಲತಾ ಮೆಂಟಲಿ ಪ್ರಿಪೇರ್‌ ಆಗಿದ್ದು.

ಯಾವ ಪಕ್ಷ? ಅದು ಮುಂದಿನ ಪ್ರಶ್ನೆ. ಕಾಂಗ್ರೆಸ್‌ನಿಂದ ಟಿಕೆಟ್‌ ಕೊಡುವಂತಿರಲಿಲ್ಲ. ದೋಸ್ತಿ ಸರ್ಕಾರ ಮಂಡ್ಯವನ್ನು ಜೆ.ಡಿ.ಎಸ್‌ಗೆ ಬಿಟ್ಟುಕೊಟ್ಟಿತ್ತು. ಕುಮಾರಸ್ವಾಮಿಯವರ ಮಗ ನಿಖಿಲ್‌ ಆಗಲೇ ಫಿಕ್ಸ್ ಆಗಿಬಿಟ್ಟಿದ್ದರು. ಇಟ್ಟ ಹೆಜ್ಜೆಯನ್ನು ಹಿಂತೆಗೆಯಬಾರದು, ನೀವು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಾವಿದ್ದೀವಿ ಅಂತ ಮಂಡ್ಯ ಜನರು, ಮಹಿಳೆಯರು, ರೈತ ಬಾಂಧವರು ಇವರೆಲ್ಲರ ಜೊತೆಗೆ ಜೋಡೆತ್ತುಗಳಾಗಿ ದರ್ಶನ್‌, ಯಶ್‌ ಸುಮಕ್ಕನ ಆಜುಬಾಜಿನಲ್ಲಿ ನಿಂತರು. ಬಿ.ಜೆ.ಪಿ ಹೊರಗಿನಿಂದ ಸಪೋರ್ಟ್‌ ಮಾಡಿತು. ಇದು ಚುನಾವಣೆಯಲ್ಲ ಯುದ್ಧ ಅಂತ ಸುಮಲತಾ ಸಾಕಷ್ಟು ಬಾರಿ ಹೇಳಿದ್ದಾರೆ.

ಸ್ವತಂತ್ರ ಅಭ್ಯರ್ಥಿಯಾಗಿ ನಿಂತಾಗ ಇವರೆದುರು ಘಟಾನುಘಟಿಗಳು ಹಣದ ಹೊಳೆ ಹರಿಸಿದರು. ಹಣ ಬಲವೋ ಜನ ಬಲವೋ ಎಂಬಂಥ ಫೈಟ್‌ನ್ನು ಸುಮಲತಾ ಎದುರಿಸಿದರು. ಪ್ರೀತಿ ಮುಂದೆ ಹಣ ಏನೇನು ಅಲ್ಲ ಎಂದು ಮಂಡ್ಯ ಜನರು ಸ್ವಾಭಿಮಾನಿಗಳಾಗಿ ನಿಂತರು. ಪರೀಕ್ಷಿಸಿದ ಹಾಗೆ ಸುಮಲತಾ 1,25,000  ಅಂತರದಿಂದ ಓಟು ಗಳಿಸಿ ವಿಜಯೋತ್ಸವ ಆಚರಿಸಿದರು. ಇಂದು ಮಂಡ್ಯದ ಜನರಿಗಾಗಿ, ರೈತರಿಗಾಗಿ, ಮಹಿಳೆಯರಿಗಾಗಿ ದುಡಿಯಲು ಪಣತೊಟ್ಟು ನಿಂತಿದ್ದಾರೆ. ಗೆದ್ದ ಮೇಲೂ ಸಹ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗದೆ, ಮಂಡ್ಯ ಜನರ ಜನ ಸೇವಕಿಯಾಗಿ ದೆಹಲಿಯ ಪಾರ್ಲಿಮೆಂಟ್‌ ಮೆಟ್ಟಿಲು ತುಳಿದಿದ್ದಾರೆ.

ಮಂಡ್ಯದಲ್ಲೇ ವಾಸ ಮಾಡಲು ನಿರ್ಧರಿಸಿರುವ ಸುಮಲತಾ ಕುಡಿಯುವ ನೀರು, ಕೆರೆ ಸ್ವಚ್ಛತೆ, ಮಹಿಳೆಯರಿಗಾಗಿ ದುಡಿಯುವುದು ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ. ``ನಾನು ರಾಜಕಾರಣಿಯಲ್ಲ, ಜನ ಸೇವಕಿ. ಸುಳ್ಳು ಭರವಸೆ ಕೊಡುವುದಕ್ಕೆ ಬರೋದಿಲ್ಲ,'' ಎಂದು ಸುಮಲತಾ ದೆಹಲಿಗೆ ಹೋಗಿ ಬಂದ ನಂತರ ಮುಂದಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದಾರೆ.

ಸುಮಲತಾ ಸಿನಿಮಾರಂಗಕ್ಕೆ ಬಂದದ್ದು ಸಹ ಆಕಸ್ಮಿಕವೇ. ತಂದೆ ತಾಯಿ, ಮಗಳು ವಿದ್ಯಾವಂತಳಾಗಿ ದೊಡ್ಡ ಹುದ್ದೆಯಲ್ಲಿ ಇರಬೇಕೆಂದು ಆಸೆಪಟ್ಟಿದ್ದರು. ಬಣ್ಣದರಂಗ ಹುಡುಕಿಕೊಂಡು ಬಂದಿತು. ರಜನೀಕಾಂತ್‌, ಕಮಲ್‌ಹಾಸನ್‌, ಚಿರಂಜೀವಿ, ಮೋಹನ್‌ಲಾಲ್‌, ಪ್ರೇಮ್ ನಜೀರ್‌, ಕನ್ನಡದಲ್ಲಿ ಡಾ. ರಾಜ್‌, ವಿಷ್ಣುರ್ಧನ್‌, ಶಂಕರ್‌ನಾಗ್‌ ಹೀಗೆ ಹೆಸರಾಂತ ನಾಯಕರ ಜೊತೆ ನಟಿಸಿ ಜನಪ್ರಿಯರಾದ ಮೇಲೆ ತಾರೆಯಾಗಿಯೇ ಉಳಿದುಬಿಟ್ಟರು. `ಆಹುತಿ' ಸಿನಿಮಾದಲ್ಲಿ ಅಂಬರೀಷ್‌ ಅವರ ಜೊತೆ ನಟಿಸುವಾಗಲೇ ಇವರಿಬ್ಬರ ನಡುವೆ ಸ್ನೇಹ ಬೆಳೆಯಿತು. ಇಬ್ಬರೂ ಒಂಟಿ ತಾರೆಯರಾಗಿದ್ದರಿಂದ ನಡೆಯುತ್ತಿದ್ದ ಸಂಭಾಷಣೆಗಳು ಫೋನ್‌ನಲ್ಲೇ ಅಂತೆ. ಸ್ನೇಹ ಪ್ರೀತಿಗೆ ತಿರುಗಿದಾಗ ಅಂಬಿ ಸುಮಾ ಸರಳವಾಗಿ ಮದುವೆಯಾದರು. ಮುದ್ದಾದ ಅಭಿಶೇಕ್‌ ಹುಟ್ಟಿದ. ಅಂಬಿಯಂಥ ವ್ಯಕ್ತಿಯನ್ನು ಸುಮಲತಾ ಸಂಸಾರಸ್ಥನನ್ನಾಗಿ ಮಾಡಿದರು. ಮನೆ, ಮಕ್ಕಳು, ಸಂಸಾರ ಅಂಬರೀಷ್‌ರನ್ನು ಹೊಸ ಮನುಷ್ಯನನ್ನಾಗಿ ಮಾಡಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ