ಹ್ಯಾಪಿ ಎಂಡಿಂಗ್

ರಣವೀರ್‌ ಸಿಂಗ್‌ ಹಾಗೂ ದೀಪಿಕಾರ ಮುಂದೆ ಬರಲಿರುವ ಚಿತ್ರ `83' ನಿಜಕ್ಕೂ ವಿಶಿಷ್ಟವಾದುದು. ಅಸಲಿಗೆ ಈ ಜೋಡಿಯ ಹಿಂದಿನ `ರಾಮಲೀಲಾ, ಪದ್ಮಾವತ್‌' ಚಿತ್ರಗಳಲ್ಲಿ ಇಬ್ಬರೂ ಕೊನೆಯಲ್ಲಿ ಅಗಲುತ್ತಾರೆ. ರಣವೀರ್‌ ಪಾತ್ರವಂತೂ ಸತ್ತೇಹೋಗುತ್ತದೆ. ಕನಿಷ್ಠ `83' ಚಿತ್ರದಲ್ಲಾದರೂ ಈ ಜೋಡಿಗೆ ಅಂಥ ದುಃಖಾಂತ್ಯವಿಲ್ಲ ಎನಿಸುತ್ತದೆ. ಈ ಚಿತ್ರದಲ್ಲಿ 1983ರಲ್ಲಿ ವಿಶ್ವಕಪ್‌ ಗೆದ್ದ ಭಾರತ ತಂಡದ ನಾಯಕ ಕಪಿಲ್‌ದೇವ್‌ರ ಪಾತ್ರ ವಹಿಸಲಿರುವ ರಣವೀರ್‌ಗೆ ಖಂಡಿತಾ ಸ್ಯಾಡ್‌ ಎಂಡಿಂಗ್‌ ಇರುವುದಿಲ್ಲ.

ಇಂದಿಗೂ ಹಿಟ್‌ ಜಗ್ಗೂ ದಾದಾ

ಬೆಳ್ಳಿ ತೆರೆಯಿಂದ ಹಿಡಿದು ಮೊಬೈಲ್‌ನ ಮನರಂಜನಾ ಲೋಕದವರೆಗೂ ಜಗ್ಗೂ ದಾದಾ ಜ್ಯಾಕಿಶ್ರಾಫ್‌ ಮೋಡಿ ಮಾಡಿದ್ದಾರೆ. ವೆಬ್‌ ಸೀರೀಸ್‌ನ `ಕ್ರಿಮಿನಲ್ ಜಸ್ಟೀಸ್‌'ನಲ್ಲಿ ಆತನ ಪಾತ್ರಕ್ಕೆ ಅಪಾರ ಮನ್ನಣೆ ದೊರಕಿದೆ. ಇತ್ತೀಚಿನ `ಭಾರತ್‌' ಚಿತ್ರದಲ್ಲೂ ಸಣ್ಣ ಪಾತ್ರದಲ್ಲಿ ಮಿಂಚಿದ್ದಾರೆ. ಹೊಸ ಸುದ್ದಿ ಎಂದರೆ ಸಂಜಯ್‌ ಗುಪ್ತಾರ ಮುಂದಿನ ಚಿತ್ರ `ಮುಂಬೈ ಸಾಗಾ'ದಲ್ಲೂ ಮುಖ್ಯ ಪಾತ್ರ ಪಡೆದಿದ್ದಾರೆ. ಈ ಚಿತ್ರದ ಉಳಿದ ಘಟಾನುಘಟಿಗಳೆಂದರೆ ಜಾನ್‌ ಅಬ್ರಹಾಂ, ಇಮ್ರಾನ್‌ ಹಾಶ್ಮಿ ಮತ್ತು ಸುನೀಲ್‌ ಶೆಟ್ಟಿ.

ಮುಳುಗುತ್ತಿರುವ ಈತನ ದೋಣಿಯ ದಡ ಸೇರಿಸುವವರಾರು?

ಅಂದ ಕಾಲತ್ತಿಲೆ ಬಾದಶಾಹ್‌ ಖಾನ್‌ ಎನಿಸಿದ್ದ ಶಾರೂಖ್‌ ಇತ್ತೀಚೆಗೆ ಮನೋಮಂಥನ ನಡೆಸುತ್ತಿರುವಂತಿದೆ. ಸಿನಿಮಾಗಳಲ್ಲಿ ಆತನ ಮ್ಯಾಜಿಕ್‌ ನಡೆಯುತ್ತಿಲ್ಲ ಹಾಗೂ ಕ್ರಿಕೆಟ್‌ ಮ್ಯಾಚ್‌ನಲ್ಲೂ ಸಹ! ಬಲ್ಲ ಮೂಲಗಳ ಪ್ರಕಾರ, ಈಗ ನಿರ್ದೇಶಕರರು ಈತನನ್ನು ತಮ್ಮ ಚಿತ್ರಕ್ಕೆ ತೆಗೆದುಕೊಳ್ಳುವುದೇ ಬೇಡ ಅನ್ನುತ್ತಿದ್ದಾರಂತೆ. ಸದ್ಯಕ್ಕಂತೂ ರಾಜ್‌ಕುಮಾರ್‌ ಹಿರಾನಿಯವರ ಚಿತ್ರದಲ್ಲಿ ನಟಿಸುತ್ತಿರುವ ಶಾರೂಖ್‌, ತನ್ನನ್ನು ರಕ್ಷಿಸುವವರೂ ಯಾರೂ ಇಲ್ಲವೇ ಎಂದು ತಲೆ ಮೇಲೆ ಕೈ ಹೊತ್ತಿದ್ದಾನಂತೆ!

ಗುಡ್‌ ಜಾಬ್‌ ಶರ್ಮೀನ್‌!

ನಿರ್ದೇಶಕ ಸಂಜಯ್‌ ಲೀಲಾ ಭನ್ಸಾಲಿಯ ಅಣ್ಣನ ಮಗಳು ಶರ್ಮೀನ್‌ ಸೆಹಗಲ್, ತನ್ನ ಮುಂದಿನ `ಮಾಲ್‌' ಚಿತ್ರದಲ್ಲಿ ಡೂಪ್‌ ಇಲ್ಲದೆಯೇ ಫೈಟ್‌ ಮತ್ತು ಸಾಹಸದ ದೃಶ್ಯಗಳಲ್ಲಿ ಮಿಂಚಿದ್ದಾಳಂತೆ! ಬಲ್ಲ ಮೂಲಗಳ ಪ್ರಕಾರ, ಶರ್ಮೀನ್‌ ಈ ಚಿತ್ರದ ಕುರಿತಾಗಿ ಬಹಳ ಉತ್ಸಾಹದಿಂದಿದ್ದಾಳೆ. ತನಗೆ ಪೆಟ್ಟಾಗಿದ್ದರೂ ಕೂಡ, ದಿ ಬೆಸ್ಟ್ ಸ್ಟಂಟ್‌ ಸೀನ್ಸ್ ಮಾಡಿದ್ದಾಳಂತೆ. ಶಭಾಷ್‌ ಶರ್ಮೀನ್‌, ಈಗ ಕಷ್ಟಪಟ್ಟರೆ ಮುಂದೆ ಫಲ ಉಂಟು!

ಭಾಷೆಯಲ್ಲ ಪ್ರತಿಭೆ ಮುಖ್ಯ

ವೆಬ್‌ ಸೀರೀಸ್‌ನ ಲೋಕದಲ್ಲಿ ಹೊಸ ಪ್ಲೇಯರ್‌ ಅಂದ್ರೆ  ಪ್ಲೇಯರ್‌ ಇತ್ತೀಚೆಗೆ ಬಹು ಚರ್ಚೆಯಲ್ಲಿದೆ. ಕೆಲವು ವಾರಗಳ ಹಿಂದಿನಿಂದ `ಥಿಂಕಿಸ್ತಾನ್‌' ಹೆಸರಿನ ಒಂದು ಟಾಕ್‌ ಶೋ ಬರುತ್ತಿದೆ. ಈ ಸೀರೀಸ್‌ನ ಒಂದು ಉತ್ತಮ ಅಂಶವೆಂದರೆ `ಅತ್ತ ಹಿಂದಿ ಬರೋಲ್ಲ ಇತ್ತ ಇಂಗ್ಲಿಷ್‌ ಅರ್ಥವಾಗೋಲ್ಲ!' ಪ್ರಸ್ತುತ ಯುವಜನತೆ ತಮ್ಮನ್ನೇ ತಾವು ಇದರಲ್ಲಿ ಗುರುತಿಸಿ ಸಂಭ್ರಮಿಸುತ್ತಿದ್ದಾರೆ. ಹಾಗಾಗಿ ಇದು ಯಶಸ್ವೀ ಎನಿಸಿದೆ.

ಸೋನು ನೀಡಲಿದ್ದಾರೆ ಫಿಟ್‌ನೆಸ್‌ ಜ್ಞಾನ

ಸೋನು ಸೂದ್‌ಗೆ ಫಿಟ್‌ನೆಸ್‌ ಕುರಿತಾಗಿ ಇರುವ ಹುಚ್ಚು ಜಗಜ್ಜಾಹೀರು. ಸುದ್ದಿ ಹಂಚುವವರು ಸೋನು ಕುರಿತಾಗಿ ಹೊಸ ಸುದ್ದಿ ನೀಡಿದ್ದಾರೆ. ಸೋನು ಖುದ್ದಾಗಿ ಆನ್‌ಲೈನ್‌ ಮೂಲಕ ತಮ್ಮ ಫ್ಯಾನ್ಸ್ ಗೆ ಫಿಟ್‌ನೆಸ್‌ ಜ್ಞಾನ ಹಂಚುತ್ತಾರಂತೆ. ಸೋನು ಇದಕ್ಕಾಗಿ ಯೂಟ್ಯೂಬ್‌ ಚ್ಯಾನೆಲ್ ನೆರವು ಪಡೆಯಲಿದ್ದಾರೆ. ಈ ಸುದ್ದಿ ನಿಜವಾದರೆ, ಎಷ್ಟೋ ಫ್ಯಾಮಿಲಿ ಪ್ಯಾಕ್‌ಗಳು 6 ಪ್ಯಾಕ್‌, 8 ಪ್ಯಾಕ್‌ ಆಗುವುದರಲ್ಲಿ ಸಂದೇಹವಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ