ನಿಮ್ಮ ಅಡುಗೆಮನೆ ಸಾಕಷ್ಟು ದೊಡ್ಡದಾಗಿದ್ದು ಹಾಗೂ ಅದರ ಮಧ್ಯದಲ್ಲಿ ತುಸು ಜಾಗವಿದ್ದರೆ, ನೀವು ನಿಮ್ಮ ಕಿಚನ್ನಲ್ಲಿ ಅಗತ್ಯ ಐಲ್ಯಾಂಡ್ ಮಾಡಿಸಿ. ಕಿಚನ್ ಐಲ್ಯಾಂಡ್ ನಿಮ್ಮ ಕಿಚನ್ಗೆ ಮೋಸ್ಟ್ ಬ್ಯೂಟಿಫುಲ್ ಲುಕ್ಸ್ ನೀಡುತ್ತದೆ. ಅದರ ಸೌಂದರ್ಯ ಮತ್ತಷ್ಟು ಹೆಚ್ಚಲಿದೆ. ಇಷ್ಟು ಮಾತ್ರವಲ್ಲದೆ ಇದರಿಂದ ಇನ್ನಷ್ಟು ಹೆಚ್ಚಿನ ಲಾಭಗಳಿವೆ. ಈ ಐಲ್ಯಾಂಡ್ ಫಿಕ್ಸ್ಡ್ಇರಬಹುದು ಹಾಗೂ ಮೊಬೈಲ್ ಕೂಡ. ಮೊಬೈಲ್ ಐಲ್ಯಾಂಡ್ಗೆ ತನ್ನದೇ ಆದ ಲಾಭಗಳಿವೆ.
ಐಲ್ಯಾಂಡ್ನ ಲಾಭಗಳು
– ಐಲ್ಯಾಂಡ್ ಕೆಳಗೆ ಎರಡೂ ಕಡೆ ನೀವು ಹೆಚ್ಚುವರಿ ಕ್ಯಾಬಿನೆಟ್, ಡ್ರಾಯರ್ ಮತ್ತು ಶೆಲ್ಫ್ ಮಾಡಿಸಬಹುದು. ಈ ರೀತಿ ಕಿಚನ್ ಐಲ್ಯಾಂಡ್ನಲ್ಲಿ ಎಕ್ಸ್ ಟ್ರಾ ಸ್ಟೋರೇಜ್ಗೆ ಜಾಗ ಸಿಗುತ್ತದೆ.
– ನೀವು ಇದರೊಳಗೆ ರೀಸೈಕಲ್ ಬಿನ್ ಇರಿಸಿ ಅದಕ್ಕೆ ಕಿಚನ್ ವೇಸ್ಟ್ ತುಂಬಿಸಬಹುದು.
– ಅಗತ್ಯ ಬಿದ್ದಾಗ ಇದು ಹೆಚ್ಚುವರಿ ಡೈನಿಂಗ್ ಟೇಬಲ್ನ ಕೆಲಸವನ್ನೂ ಮಾಡಬಲ್ಲದು. ಇದರ ಎರಡೂ ಕಡೆ ನೀವು ಕುರ್ಚಿ ಹಾಕಿ, ಬಡಿಸಬಹುದು.
– ನಿಮ್ಮ ಮನೆಯಲ್ಲಿ ಎಂದಾದರೂ ಪಾರ್ಟಿ ನಡೆದಾಗ, ಇದರ ಮೇಲೆ ಅಡುಗೆ ಪಾತ್ರೆ, ಪ್ಲೇಟ್, ಲೋಟ, ಸ್ಪೂನ್ ಇತ್ಯಾದಿ ಜೋಡಿಸಿ ಕುಳಿತ ಕಡೆ ಸರ್ವ್ ಮಾಡಬಹುದು.
– ಇದು ನಿಮಗೆ ಹೆಚ್ಚುವರಿ ಕೌಂಟರ್ ಸ್ಪೇಸ್ ನೀಡಲಿದೆ. ಇಂಥ ಐಲ್ಯಾಂಡ್ ಮೊಬೈಲ್ ಆಗಿದ್ದರೆ, ಎಕ್ಸ್ ಟ್ರಾ ಸಿಂಕ್ ಯಾ ವಾಶ್ಬೇಸಿನ್ ಇರಿಸಬಹುದು.
– ಐಲ್ಯಾಂಡ್ನ ಟಾಪ್ ನಡುವೆ ನೀವು ಹೂದಾನಿ ಅಥವಾ ಇನ್ನಿತರ ಅಲಂಕಾರಿಕ ವಸ್ತು ಇಡಬಹುದು.
– ನಿಮ್ಮ ಖಾಸಗಿ ಅಗತ್ಯಗಳಿಗೆ ತಕ್ಕಂತೆ, ಇದನ್ನು ನೀವು ಮಾಡಿಸಬಹುದು. ಇದನ್ನು ಪರ್ಮನೆಂಟ್ ಇರಿಸಬಯಸಿದರೆ, ಇದಕ್ಕೆ ಕರೆಂಟ್, ವಾಟರ್ ಲೈನ್ ಸಹ ಅಳವಡಿಸಬಹುದು. ಟೋಸ್ಟರ್, ಮೈಕ್ರೋವೇವ್ ಇತ್ಯಾದಿ ಇರಿಸಬಹುದು.
– ನೀವು ಬಯಸಿದರೆ ಇದಕ್ಕೆ ಪಾತ್ರೆ ತೊಳೆಯುವ ಮೆಶೀನ್ ಡಿಶ್ ವಾಷರ್ ಸಹ ಅಳವಡಿಸಬಹುದು.
– ಶಕುಂತಲಾ ರಾವ್