ಇಡೀ ದಿನದ ಆಯಾಸವನ್ನು ಪರಿಹರಿಸುವ ಸ್ಥಳ ನಮ್ಮ ಬೆಡ್‌ರೂಮ್. ಹೂವಿನಂಥ ಹಾಸಿಗೆ, ನುಣುಪಾದ ಹೊದಿಕೆ, ಬೆಳಕನ್ನು ಮರೆಮಾಡುವ ಕಿಟಕಿಯ ಪರದೆಗಳು, ಜೊತೆಗೆ ಕೋಣೆಗೆ ಮೆರುಗು ನೀಡುವ ನಮ್ಮ ಮೆಚ್ಚಿನ ಅಲಂಕಾರಗಳು. ಇವೆಲ್ಲ ಇದ್ದೂ ಸಹ ನಿದ್ರೆ ಬರುತ್ತಿಲ್ಲವೆಂದರೆ ಮನೆಯೊಳಗಿನ ಹವೆ ಶುದ್ಧವಾಗಿಲ್ಲವೆಂದೇ ಅರ್ಥ.

ನಾಸಾ ಇನ್ಸ್ ಟಿಟ್ಯೂಟ್‌ ಆಫ್‌ ಅಮೆರಿಕಾದ ಒಂದು ಸಂಶೋಧನೆಯ ಪ್ರಕಾರ, ದಿನವಿಡೀ ಕಾರ್ಯನಿರತರಾದ ಜನರಿಗೆ ಆರಾಮವಾಗಿ ನಿದ್ರಿಸಲು ಇತರರಿಗಿಂತ ಹೆಚ್ಚು ಶುದ್ಧವಾದ ಗಾಳಿಯ ಅವಶ್ಯಕತೆ ಇರುತ್ತದೆ. ಆದ್ದರಿಂದ ತಜ್ಞರ ಸಲಹೆ ಏನೆಂದರೆ ಬಾತ್‌ರೂಮಿನಿಂದ ಹೊರಬರುವ ಅಮೋನಿಯಾ ಗ್ಯಾಸ್‌ ಕಸಕಡ್ಡಿಗಳಿಂದ ಫಾರ್ಮಾಲ್ಡಿಹೈಡ್‌ ಗ್ಯಾಸ್‌, ಡಿಟರ್ಜೆಂಟ್‌ನಿಂದ ಬೆನ್‌ಝೀನ್‌, ಫರ್ನೀಚರ್‌ನಿಂದ ಟ್ರೈಕ್ಲೋರೋ ಎಥಿಲಿನ್‌, ಗ್ಯಾಸ್‌ ಸ್ಟವ್ನಿಂದ ಕಾರ್ಬನ್‌ ಮಾನಾಕ್ಸೈಡ್‌, ಲ್ಯಾಂಡರಿಯಿಂದ ಹೊರಬರುವ ವಾಸನೆ, ಇವುಗಳನ್ನೆಲ್ಲ ನಿಷ್ಕ್ರಿಯಗೊಳಿಸಲು ಮನೆಗಳಲ್ಲಿ ಗಿಡಗಳನ್ನು ಇರಿಸಬೇಕು. ಕೆಲವು ವಿಶೇಷ ಗಿಡಗಳು ಏರ್‌ ಪ್ಯೂರಿಫೈಯರ್‌ನ ಕೆಲಸ ಮಾಡುತ್ತದೆ. ಇದನ್ನು ಓದಿದಾಗ ನಿಮ್ಮ ಮನಸ್ಸಿನಲ್ಲಿ ಒಂದು ಸಂದೇಹ ಮೂಡಬಹುದು. `ಗಿಡಗಳು ರಾತ್ರಿಯ ವೇಳೆ ಕಾರ್ಬನ್‌ ಡೈ ಆಕ್ಸೈಡ್‌ ಗ್ಯಾಸ್‌ ಹೊರ ಬಿಡುತ್ತವೆ. ಆದರೆ ನಮಗೆ ಬೇಕಾದುದು ಆಕ್ಸಿಜನ್‌ ಅಲ್ಲವೇ?'

lifestyle

ನಿಜ. ಗಿಡಗಳು ಹಗಲಿನಲ್ಲಿ ಫೋಟೋಸಿಂಥೆಸಿಸ್‌ ಕ್ರಿಯೆಯಲ್ಲಿ ಕಾರ್ಬನ್‌ ಡೈ ಆಕ್ಸೈಡ್‌ನ್ನು ಎಳೆದುಕೊಂಡು ಆ್ಯಕ್ಸಿಜನ್‌ ಹೊರಬಿಡುತ್ತವೆ. ಅದೇ ರಾತ್ರಿಯಲ್ಲಿ ಇದಕ್ಕೆ ವಿರುದ್ಧವಾಗಿರುತ್ತದೆ.

ಆದರೆ ಕೆಲವು ಗಿಡಗಳು ಸಾಯಂಕಾಲ ಮತ್ತು ರಾತ್ರಿ ಸ್ವಲ್ಪ ಕಾಲದಲ್ಲೂ ಸಹ ಆಕ್ಸಿಜನ್‌ ನೀಡುತ್ತವೆ. ಈ ಗಿಡಗಳು ನಮ್ಮನ್ನು ವಿಷಾನಿಲಗಳಿಂದ ಬಿಡುಗಡೆ ಮಾಡುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಬನ್ನಿ, ನಾವೀಗ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಸಹಾಯ ಮಾಡಬಲ್ಲ ಕೆಲವು ಏರ್‌ ಪ್ಯೂರಿಫೈಯರ್‌ ಗಿಡಗಳ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ :

ಸ್ನೇಕ್‌ ಪ್ಲಾಂಟ್‌ : ಹಗಲು ರಾತ್ರಿ ಎರಡೂ ಸಮಯದಲ್ಲಿಯೂ ಆಕ್ಸಿಜನ್‌ ನೀಡುವ ಈ ಗಿಡ ಸ್ಯಾಂಸೆವೀರಿಯಾ ಟ್ರಿಫಿಸಿಯಾ ಎಂಬ ಸಸ್ಯನಾಮದಿಂದ ಕರೆಯಲ್ಪಡುತ್ತದೆ. ಸಸ್ಯಪ್ರಿಯರು ಇದನ್ನು ಸ್ನೇಕ್‌ ಪ್ಲಾಂಟ್‌ ಎಂದು ಕರೆಯುತ್ತಾರೆ. ಇದು ಸದಾಕಾಲ ಆಕ್ಸಿಜನ್‌ನ್ನು ಹೊರಸೂಸುತ್ತಿರುವುದರಿಂದ ಆಕ್ಸಿಜನ್‌ ಸ್ತರವನ್ನು ಹೆಚ್ಚಿಸಿ ಮಾಲಿನ್ಯವನ್ನು ತಡೆಗಟ್ಟುತ್ತದೆ. ಆದ್ದರಿಂದ ಬಾತ್‌ರೂಮಿನ ಅಮೋನಿಯಾ ಗ್ಯಾಸ್‌ನ ಪ್ರಭಾವವನ್ನು ನಿಷ್ಕ್ರಿಯಗೊಳಿಸಲು ಮನೆಯೊಳಗೆ ಸ್ನೇಕ್‌ ಪ್ಲಾಂಟ್‌ ಬೆಳೆಸಿ. ಇದು ಕಸದ ದುರ್ಗಂಧವನ್ನು ಹೋಗಲಾಡಿಸುತ್ತದೆ. ಬಾತ್‌ರೂಮ್ ನಲ್ಲಿ ಹೂಗಿಡದ ಕುಂಡವನ್ನು ಇರಿಸುವುದರಿಂದ ನಿಮಗೆ ಹೂವಿನ ಪರಿಮಳ ದೊರೆಯುತ್ತದೆ.

Poudhe-jo-rakhe

ಗೋಲ್ಡನ್‌ ಪೊಥೊಸ್‌ : ಅಗಲವಾದ ಹಸಿರು ಹಳದಿ ಎಲೆಗಳಿಂದ ಕೂಡಿದ ಈ  ಗಿಡ ಮನೆಯೊಳಗೆ ಕಡಿಮೆ ಸೂರ್ಯಪ್ರಕಾಶದಲ್ಲಿ ಬೆಳೆಯಬಲ್ಲದು. ಬಲ್ಬ್ ಅಥವಾ ಟ್ಯೂಬ್‌ಲೈಟ್‌ನ ಬೆಳಕು ಇದಕ್ಕೆ ಸಾಕಾಗುತ್ತದೆ. ಹೆಚ್ಚಿನ ಆರ್ದ್ರತೆಯಲ್ಲೂ ಮತ್ತು ಕಡಿಮೆ ನೀರಿನಲ್ಲೂ ಈ ಗಿಡ ಬೆಳೆಯುತ್ತದೆ. ಕಸದ ರಾಶಿಯಿಂದ ಹೊರಬರುವ ಗ್ಯಾಸ್‌ನ ಪ್ರಭಾವವನ್ನು ಆ್ಯಲೋವೇರಾ ಗಿಡದಂತೆ ಈ ಗಿಡ ನಿಷ್ಕ್ರಿಯಗೊಳಿಸುತ್ತದೆ. ಜೊತೆಗೆ ಇದು ಗ್ಯಾಸ್‌ ಸ್ಟವ್ ನಿಂದ ಹೊರಬರುವ ಕಾರ್ಬನ್‌ ಮಾನಾಕ್ಸೈಡ್‌ ಗ್ಯಾಸ್‌ನ್ನು ದೂರುಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಹೀಗೆ ಈ ಗಿಡ ವಾಯು ಮಾಲಿನ್ಯವನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ