ಈಗೆಲ್ಲ ಮಜಬೂತಾದ ಕಟ್ಟಡದ ಕಲ್ಯಾಣ ಮಂಟಪಗಳಿಗಿಂತ ವಿಶಾಲ ಬಯಲಿನಲ್ಲಿ ತಾತ್ಕಾಲಿಕವಾಗಿ ಹಾಕಲಾಗುವ ಚಿತ್ತಾಕರ್ಷಕ ವರ್ಣಮಯ ಟೆಂಟ್‌ ಮಂಟಪಗಳೇ ಬಲು ಜನಪ್ರಿಯ…….!

ಬೆಂಗಳೂರಿನ ಪ್ಯಾಲೆಸ್‌ ಗ್ರೌಂಡ್ ನ ವಿಶಾಲ ಬಯಲು ಇದಕ್ಕೆ ಹೆಸರುವಾಸಿ. ಈ ರೀತಿ ಎಲ್ಲೆಡೆ ಕಂಡುಬರುತ್ತಿದೆ. ಅದಕ್ಕಾಗಿ ಲಕ್ಷಾಂತರ ಖರ್ಚಾಗುತ್ತದೆ ಎಂಬುದು ಬೇರೆ ವಿಚಾರ.

ದ. ಭಾರತದಲ್ಲಿ ಇಂದಿಗೂ ಮಾವಿನ ತಳಿರು ತೋರಣ, ಬಾಳೆಕಂಬದ ಅಲಂಕಾರ, ತೆಂಗಿನ ಗರಿ ಚಪ್ಪರ ಇತ್ಯಾದಿ ಕಂಡುಬರುತ್ತದೆ. ಜೊತೆಗೆ ಆಧುನಿಕತೆಯ ಸಂಕೇತವಾಗಿ ಈ ಟೆಂಪೊರರಿ ಟೆಂಟ್ಸ್ ತಲೆಯೆತ್ತಿವೆ. ಇಂಥ ಕಡೆ ಮದುವೆಯ ಈವೆಂಟ್‌ ಮ್ಯಾನೇಜ್‌ಮೆಂಟ್‌ಗಳು ಬಲು ಪ್ರಭಾವಶಾಲಿ ಎನಿಸಿವೆ.

ಧಾರಾಳವಾಗಿ ದುಡ್ಡು ಖರ್ಚು ಮಾಡಿ ಈ ಈವೆಂಟ್‌ ಮ್ಯಾನೇಜ್‌ಮೆಂಟ್‌ಗೆ ಒಪ್ಪಿಸಿದರೆ ಆಯ್ತು ಮದುವೆಗೆ ಬೇಕಾಗುವ - ಜವಾಬ್ದಾರಿ ಅವರದೆ. ಪುರೋಹಿತರು, ವಾಲಗ, ಅಡುಗೆಯವರು, ಕಲ್ಯಾಣ ಮಂಟಪದ ಅಲಂಕಾರ, ಬಡಿಸುವಿಕೆ, ಕೊನೆಗೆ ತಾಂಬೂಲ ಕೊಟ್ಟು ಕಳುಹಿಸುವ ಸಮಸ್ತ ಜವಾಬ್ದಾರಿಯೂ ಇವರದೇ! ನೀವು ನಿಮ್ಮ ಒಡವೆ ವಸ್ತ್ರ ತೆಗೆದುಕೊಂಡು ಜಬರ್ದಸ್ತಾಗಿ ಮದುವೆಗೆ ಬಂದರೆ ಆಯಿತು ಅಷ್ಟೆ.ಎಷ್ಟೋ ಸಲ ಇಂಥ ಕಲ್ಯಾಣ ಮಂಟಪಗಳಿಗಾಗಿ ಹೊಸ ಹೊಸ ಕಾನ್‌ಸೆಪ್ಟ್ ಹುಟ್ಟಿಕೊಳ್ಳುತ್ತವೆ. ಅವರವರ ಬಜೆಟ್‌ಗೆ ತಕ್ಕಂತೆ ಇವನ್ನು ಅತ್ಯಾಕರ್ಷಕವಾಗಿ ಅಲಂಕರಿಸಿ ರೂಪಿಸುತ್ತಾರೆ.

ಇಂಥ ಮಂಟಪಗಳಿಗಾಗಿ ಇತ್ತೀಚೆಗೆ ಹೊಸ ಹೊಸ ಟೆಕ್ನಿಕ್ಸ್ ಬಳಕೆಯಾಗುತ್ತಿವೆ. ಇದರಲ್ಲಿ ಥರ್ಮೋಕೋಲ್‌ (ಬಿಳಿಯ ಬೆಂಡು), ಪೇಪರ್‌, ಬಣ್ಣ, ಇಕೋಫ್ರೆಂಡ್ಲಿ ಪ್ರಿಂಟರ್‌ ಮೂಲಕ ಕಟ್ಟಿಗೆ, ಬಟ್ಟೆ ಇತ್ಯಾದಿಗಳ ಮೇಲೆ ವಿಭಿನ್ನ ಬಗೆಯ ಚಿತ್ರಗಳನ್ನು ಬಿಡಿಸಿ ನಾನಾ ರೀತಿಯಲ್ಲಿ ಅಲಂಕರಿಸುತ್ತಾರೆ. ಇಂಥ ಎಷ್ಟೋ ಮಂಟಪಗಳು ಥೀಮ್ ಬೇಸ್ಡ್ ಆಗಿರುತ್ತವೆ. ವಿಭಿನ್ನ ಭಾಷೆಯ ನಾನಾ ಸಿನಿಮಾಗಳನ್ನು ನೋಡಿ ಇಂಥ ಮಂಟಪ ಅಲಂಕರಿಸುತ್ತಾರೆ.

ಗುಂಬಜ್‌ ಆಕಾರದ ಮಂಟಪ : ಮೊಘಲರ ಕಾಲದಲ್ಲಿ ಪ್ರಚಲಿತವಾಗಿದ್ದ ಗುಂಬಜ್‌ ಆಕಾರದ ಮಂಟಪಗಳು ರಿಚ್‌ ಟ್ರೆಡಿಶನಲ್ ಮತ್ತು ಪರಂಪರೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಇವನ್ನು ರೂಪಿಸಲು ಅತಿ ಸುಂದರ ಕಂಬಗಳನ್ನು ಬಳಸುತ್ತಾರೆ. ಅ ಮಂಟಪಗಳ ಚೆಂದವನ್ನು ಎತ್ತಿಹಿಡಿಯುತ್ತವೆ. ಗುಮ್ಮಟ (ಗುಂಬಜ್‌)ಗಳನ್ನು ಅಲಂಕರಿಸಲು ಹಲವು ಬಗೆಯ ಹೂ, ಬಣ್ಣಗಳನ್ನು ಬಳಸುತ್ತಾರೆ. ಹಿಂದಿನ ಕಾಲದಿಂದಲೂ ಆಕಾಶವನ್ನೇ ಗುಮ್ಮಟವಾಗಿ ಭಾವಿಸಿದ್ದ ಜನ, ಇಂಥ ಶೈಲಿಯ ಮಂಟಪಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ.

ಥೀಮ್ ಬೇಸ್ಡ್ ಮಂಟಪಗಳು : ಪರಂಪರಾಗತ ಶೈಲಿಯಲ್ಲಿ ಅಲಂಕರಿಸಲಾದ ಮಂಟಪಗಳು ಸಹಜವಾಗಿ ಗಾಢ ಬಣ್ಣ, ಗೋಲ್ಡನ್‌, ಗುಲಾಬಿ ಶೇಡ್ಸ್ ಜೊತೆ ಸ್ಯಾಟಿನ್‌ ಬಟ್ಟೆ, ವಿಭಿನ್ನ ಬಗೆಯ ಹೂಗಳನ್ನು ಬಳಸುತ್ತಾರೆ. ಮದುವೆಯ ಪ್ರತಿಯೊಂದು ಸಂಪ್ರದಾಯಕ್ಕೂ ಇಂಥ ಮಂಟಪಗಳು ಸರಿಹೊಂದುತ್ತವೆ. ಇದರ ಸಲುವಾಗಿಯೇ ಫ್ಲವರೀ ಥೀಮ್, ಕಲರ್‌ ಬೇಸ್ಡ್ ಥೀಮ್, ಅದರಲ್ಲೂ ರಾಯಲ್ ಬ್ಲೂ, ಬ್ಲಶಿಂಗ್‌ ರೋಸ್‌ ಇತ್ಯಾದಿ ಜನಪ್ರಿಯ ಎನಿಸಿವೆ.

ರಾಜಸ್ಥಾನಿ ಶೈಲಿ ಮಂಟಪ : ಈ ಮಂಟಪ ರಾಜಸ್ಥಾನಿ ಶೈಲಿಯ ಪಿಂಕ್‌ ಸಿಟಿ ಎಂದೇ ಖ್ಯಾತವಾದ ಜೈಪುರ್‌ ಗುಲಾಬಿಯನ್ನು ಆಧರಿಸಿದೆ. ಇದು ಹೆಚ್ಚಾಗಿ ಕಟ್ಟಿಗೆಯ ಕಂಬಗಳು, ಅದರ ಕಟ್‌ ವರ್ಕ್‌ಗಳನ್ನು ಆಧರಿಸಿ ರೂಪಿಸಲಾಗಿರುತ್ತದೆ. ಇದರಲ್ಲಿ ಸೀರಿಯಲ್ ಸೆಟ್‌ ಲೈಟಿಂಗ್‌ ಬಹಳ ಆಕರ್ಷಕವಾಗಿರುತ್ತದೆ. ಕಲ್ಯಾಣ ಮಂಟಪದೊಳಗೆ ಪ್ರವೇಶಿಸಿದವರಿಗೆ ತಾವು ಜೈಪುರದ ಅರಮನೆಗೇ ಬಂದಿದ್ದೇವೇನೋ ಎನಿಸುವಂತಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ