ಆನ್‌ಲೈನ್‌ ಶೋಷಣೆಯ ಶಿಕಾರಿಯಾದ ಸ್ವರಾ

ಇಗೊಳ್ಳಿ ಆನ್‌ಲೈನ್‌ನಲ್ಲಿ ಶೋಷಣೆಯ ಆರಂಭ ಆಗಿಹೋಗಿದೆ. ಇದರ ತಾಜಾ ಬಲಿ ಎಂದರೆ ಸ್ವರಾ ಭಾಸ್ಕರ್. ಫೇಸ್‌ಬುಕ್‌, ಟ್ವೀಟರ್‌ಗಳಲ್ಲಿ ಸಾಕಷ್ಟು ಆ್ಯಕ್ಟಿವ್‌ ಆಗಿರುವ ಸ್ವರಾಳಿಗೆ, ಯಾರೋ ಒಬ್ಬ ಬೇಕೆಂದೇ ಕೆಟ್ಟ ಮಾತುಗಳ ಕಿಡಿ ಕಾರಿದ್ದಾನೆ. ಹಾಳಾಗಿಹೋಗಲಿ ಎಂದು ನಿರ್ಲಕ್ಷಿಸದೆ ಸ್ವರಾ ಪೊಲೀಸರಿಗೆ ದೂರು ಕೊಟ್ಟಳು.

ಸೋಶಿಯಲ್ ಮೀಡಿಯಾದಲ್ಲಿ ಮುಕ್ತವಾಗಿ ಮಾತನಾಡುವ ಅಭಿಮಾನಿಗಳು, ವೈಯಕ್ತಿವಾಗಿ ಇಂಥ ಸೆಲೆಬ್ರಿಟಿಗಳನ್ನು ಬೇಸ್‌ಲೆಸ್‌ ಆಗಿ ಕೆಣಕುವುದೇಕೆ? ಸ್ವರಾಗಂತೂ ಸಾಕಾಗಿ ಹೋಗಿದೆ.

ಸುನೀಲ್‌….. ಏನಾಯ್ತಪ್ಪ?

ಸುನೀಲ್‌ ಗ್ರೋವರ್‌ `ಭಾರತ್‌’ ಚಿತ್ರದಲ್ಲಿ ಸಲ್ಮಾನ್‌ ಜೊತೆ ನಟಿಸಿದ್ದೇ ಬಂತು, ಆತನ ಅದೃಷ್ಟ ಬದಲಾಯಿಸಿತು. ಸುನೀಲ್ ಕೂಡ ಇದನ್ನು ಒಪ್ಪುತ್ತಾನೆ. ಈ ಚಿತ್ರ ಬಿಡುಗಡೆ ಆದನಂತರ ತನ್ನ ಫೀಮೇಲ್‌ ಫ್ಯಾನ್‌ ಫಾಲೋಯರ್ಸ್‌ ಹೆಚ್ಚಿದ್ದಾರೆ ಎಂದು ಒಪ್ಪಿಕೊಂಡ. ಅತ್ತ ನಂಬಲರ್ಹ ಸುದ್ದಿ ಮೂಲಗಳು ಈತ ವಾಪಸ್‌ ಕಪಿಲ್‌ ಶೋಗೆ ಬರುತ್ತಾನೋ ಇಲ್ಲವೋ ಎಂದು ತಪಾಸಣೆ ಮಾಡುತ್ತಲೇ ಇವೆ. ಅಂತೂ ಸುನೀಲ್‌…. ಏನಪ್ಪ ಇದು? ಒಂದೇ ಸಲಕ್ಕೆ ಇಷ್ಟೊಂದು ಅಟೆನ್ಶನ್‌?

ಇದೀಗ ಈಕೆಯ ಸರದಿ

ಶ್ರೀದೇವಿ ಮಕ್ಕಳಾದ ಜಾಹ್ನವಿ ಮತ್ತು ಅನನ್ಯಾ ಬಾಲಿವುಡ್‌ಗೆ ಬಂದ ನಂತರ, ಸಂಜಯ್‌ ಕಪೂರ್‌ ಮಗಳಾದ ಶನಾಯಾ ಕಪೂರ್‌ ಇದೀಗ ಎಂಟ್ರಿ ಪಡೆದಿದ್ದಾಳೆ. ಇವಳು ನಟಿಯಾಗಿ ಅಲ್ಲದೆ ಅಸಿಸ್ಟೆಂಟ್‌ ಡೈರೆಕ್ಟರ್‌ ಆಗಿ ಚಿತ್ರೋದ್ಯಮಕ್ಕೆ ಕಾಲಿಡುತ್ತಿದ್ದಾಳೆ. ಹಾಗೆಯೇ ಮತ್ತೊಂದೆಡೆ ಬಾದ್‌ಶಾಹ್‌ ಖಾನ್‌ ಮಗಳು ಸುಹಾನಾ ಸಹ ನಟನೆಯ ತರಬೇತಿ ಪಡೆದು ಇದೀಗ ಬೆಳ್ಳಿತೆರೆಯಲ್ಲಿ ಮಿಂಚಲಿದ್ದಾಳಂತೆ. ಆದರೆ ಬಾಲಿವುಡ್‌ ಮಾತ್ರ ತಾನು ನ್ಯಾಪೋಟಿಸಂ ಅಂದರೆ ಕುಟುಂಬ ಉದ್ಯಮ ನಡೆಸುವುದಿಲ್ಲ ಎಂದು ಸುಳ್ಳು ಹೇಳಿಕೊಳ್ಳುತ್ತದೆ. ಹಾಗಾದ್ರೆ ಇದೆಲ್ಲ ಏನಂತೆ?

 

ಭೂಮಿ ತರಹ ತಯಾರಿ ಇರಬೇಕು?

ಇತ್ತೀಚೆಗಷ್ಟೆ ಲಖ್ನೌದ ಒಂದು ಪಂಚತಾರಾ ಹೋಟೆಲ್‌ನಲ್ಲಿ ಭೂಮಿ ಒಂದು ಕೋಣೆಯಲ್ಲಿ ತಾನೇ ಲಾಕ್‌ ಮಾಡಿಕೊಂಡು ಎಲ್ಲರನ್ನೂ ಪೇಚಿಗೆ ಸಿಲುಕಿಸಿದ್ದಳು. ಅದಕ್ಕೆ ಮುಂಚೆ ಅವಳು ತನ್ನ ಪ್ರೊಡಕ್ಷನ್‌ ಟೀಂ ಜೊತೆಗಷ್ಟೇ ಮಾತನಾಡುತ್ತಿದ್ದಳು. ಭೂಮಿ ತನ್ನ ಬರಲಿರುವ `ಪತಿ ಪತ್ನಿ ಔರ್‌ ವೋ’ ಚಿತ್ರದ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಳು. ಪ್ರತಿ ಸಲ ಅವಳು ಪ್ರಯಾಣ ಮಾಡಿ ಶೂಟಿಂಗ್‌ ಲೊಕೇಶನ್‌ಗೆ ಹಿಂದಿನ ಸಂಜೆ ತಲುಪುತ್ತಿದ್ದಂತೆ ಹೀಗೆಯೇ ಅವಾಂತರ ಮಾಡಿಕೊಂಡು, ಆ ಪಾತ್ರವನ್ನು ತನ್ನ ಮೈ ಮೇಲೆ ಆವಾಹನೆ ಮಾಡಿಕೊಳ್ಳುತ್ತಾಳೆ. ಅಬ್ಬಬ್ಬಾ…. ಪೂರ್ವ ತಯಾರಿ ಅಂದ್ರೆ ಹೀಗಿರಬೇಕು, ಅಲ್ಲವೇ?

ಕ್ವೀನ್‌ಗೀಗ ಯಾರ ಭಯ ಇಲ್ಲ

ಯಶಸ್ವಿ ಆಗುವುದು ಮತ್ತು ಅದನ್ನು ಜೀರ್ಣಿಸಿಕೊಂಡು ನಾರ್ಮಲ್ ಆಗಿರುವುದು ಎರಡೂ ಕಷ್ಟವೇ! ಇತ್ತೀಚೆಗಷ್ಟೇ ಕಂಗನಾ ಮತ್ತು ಒಬ್ಬ ಪತ್ರಕರ್ತರ ನಡುವೆ ನಡೆದ ವಾದವಿವಾದ ಇದನ್ನೇ ಸಾಬೀತುಪಡಿಸಿದೆ. ಕಂಗನಾ ಆ ಪತ್ರಕರ್ತನ ಮೇಲೆ ಹೊರಿಸಿದ್ದ ಆರೋಪ ನಿಜವೋ ಸುಳ್ಳೋ ಅದನ್ನು ಅವರಿಬ್ಬರೇ ಹೇಳಬೇಕಷ್ಟೆ. ಆದರೆ ಕಂಗನಾ ಯಶಸ್ಸಿನ ಮೆಟ್ಟಿಲ ತುದಿಗೇರಿ, ಪ್ರೊಫೆಶನಲ್ ಅನಿಸಿಕೊಂಡು ಪಬ್ಲಿಕ್‌ನಲ್ಲಿ ಈ ರೀತಿ ಆಡಬಾರದೆಂಬ ಕನಿಷ್ಠ ವ್ಯವಹಾರ ಜ್ಞಾನ ಇಲ್ಲದಿರುವುದು ದುರದೃಷ್ಟಕರ. ಕಂಗನಾ, ಹುಷಾರು ಕಣಮ್ಮ….. ವಿಜಯದ ಮೆಟ್ಟಿಲೇರಿದವರು ಪಾತಾಳಕ್ಕಿಳಿಯಲು ಎಷ್ಟು ಹೊತ್ತು ಬೇಕು?

ಮತ್ತೊಂದು ಹೊಸ ಬಯೋಪಿಕ್

ಈಗಂತೂ ಬಾಲಿವುಡ್‌ನಲ್ಲಿ ಹೇಗಾಗಿದೆ ಅಂದ್ರೆ `ಬಯೋಪಿಕ್‌ ಬನಾವೋ ಪೈಸಾ ಕಮಾವೋ’ ಅಂತಾಗಿದೆ. ಅಲ್ಲಿನ ಅರ್ಥಶಾಸ್ತ್ರ ನೀತಿಯೇ ಬದಲಾಗಿದೆ. ಪ್ರತಿಯೊಬ್ಬ ನಿರ್ಮಾಪಕ ನಿರ್ದೇಶಕರೂ ಊರೂರು ತಿರುಗುತ್ತಾ ಯಾರ ಬಯೋಗ್ರಫಿಯನ್ನು ಮಸಾಲೆ ಬೆರೆಸಿ ಪ್ರೇಕ್ಷಕರಿಗೆ ಬಡಿಸಬಹುದು ಎಂದು ಅಲೆಯುತ್ತಿದ್ದಾರೆ. ಇಂಥದೇ ಒಂದು ಬಯೋಪಿಕ್‌ನಲ್ಲಿ ಅನಿಲ್‌ ಕಪೂರ್‌ ಮತ್ತು ಅವರ ಮಗ ಹರ್ಷವರ್ಧನ್‌ ಕಪೂರ್‌ ಒಟ್ಟಿಗೆ `ಅಭಿನವ್ ಬಿಂದ್ರಾ’ ಕುರಿತು ಚಿತ್ರ ಮಾಡುತ್ತಿದ್ದಾರೆ. ಈಗ ಮನಸ್ಸು ಮಾಡಿದರೆ ನೀವು ನಿಮ್ಮೂರಿನಲ್ಲಿ ಇಂಥದ್ದೇನಾದರೂ ಕಥೆ ಹುಡುಕಿ ಸಿನಿಮಾ ಯಾಕೆ ಮಾಡಬಾರದು?

ಅವರೇ ಇವರು!

ಆಹಾ, ಈ ಚಿತ್ರದಲ್ಲಿ ಇರುವುದು ಯಾರು ಅಂತ ಗೊತ್ತಾಯ್ತಾ? ಈತ ಕಿರುತೆರೆಯ ಜನಪ್ರಿಯ ನಟ ರಾಮ್ ಕಪೂರ್‌. ಕನ್‌ಫ್ಯೂಸ್‌ ಆದಿರಾ? 16 ಗಂಟೆಗೂ ಹೆಚ್ಚು ಕಾಲ ಏನೂ ತಿನ್ನದೆ ಹಾಗೂ ಶೂಟಿಂಗ್‌ನಲ್ಲಿ ಸತತ ಬೆವರು ಹರಿಸಿದ್ದರಿಂದ ಈ ಮಹಾಶಯ ಹೀಗಾಗಿದ್ದಾನೆ. ಪರಿಣಾಮ…..? ಈತ ತನ್ನ ಮೈ ತೂಕ ಕರಗಿಸಿ 30 ಕಿಲೋ ತೆಳ್ಳಗಾಗಿದ್ದಾನೆ. ಹೌದು, ನೀವು ಏಕೆ ಈತನಂತೆ ಹಠ ತೊಟ್ಟು ಮೈ ಕರಗಿಸಬಾರದು? ಫಿಟ್‌ನೆಸ್‌ ಈಸ್‌ ಆಲ್ವೇಸ್ ದಿ ಬೆಸ್ಟ್!

ಇದು ಇವರ ಸ್ಟೈಲಿಸ್ಟ್ ಗುಟ್ಟು

ಬಾಲಿವುಡ್‌ನ ಬಿ ಟೌನ್‌ನಲ್ಲಿ ಈಗ ಎಲ್ಲೆಡೆ ಚರ್ಚೆ ಆಗುತ್ತಿರುವ ಒಂದೇ ವಿಷಯ ಅಂದ್ರೆ ಮಲೈಕಾ ಅರ್ಜುನ್‌ ವಿವಾಹ! ಜೊತೆ ಜೊತೆಯಾಗಿ ಬರ್ತ್‌ಡೇ ಆಚರಿಸಿಕೊಳ್ಳುವುದು, ವೆಕೇಶನ್‌ ಹೊರಡುವುದು….. ಇವೆಲ್ಲ ಮುಗಿದುಹೋದ ಮಾತು. ಈಗಂತೂ ಮಲೈಕಾ ಅರ್ಜುನನಿಗೆ ಫಿಟ್‌ನೆಸ್‌ ಫ್ಯಾಷನ್‌ ಟಿಪ್ಸ್ ಕೂಡ ಕೊಡುತ್ತಿದ್ದಾಳೆ. ಅಷ್ಟು ಮಾತ್ರವಲ್ಲ, ನನ್ನಿಂದಲೇ ನೀನು ಈಗ ಸುಂದರವಾಗಿ ಕಾಣುತ್ತಿರುವುದು, ಎಂಬ ಘೋಷವಾಕ್ಯ ನೀಡಿದ್ದಾಳೆ. ಇದಪ್ಪ ಜೋಡಿ ಅಂದ್ರೆ!

ವಿಲನ್‌ ಈಗ ಹೊಸ ಹೀರೋ

ಇತ್ತೀಚೆಗೆ ನೀವು ಕಿರುತೆರೆಯ ಧಾರಾವಾಹಿಗಳನ್ನು ಗಮನಿಸುತ್ತಿದ್ದರೆ ಅಲ್ಲಿ ವಿಲನ್‌ ಇದೀಗ ಹೀರೋ ಆಗಿ ಮಿಂಚುತ್ತಿದ್ದಾನೆ! ಹಾಗೆನ್ನುತ್ತಾರೆ ಕಲರ್ಸ್‌ ಚಾನೆಲ್‌‌ನ `ಕಚ್‌’ ಧಾರಾವಾಹಿಯ ವಿಲನ್‌ ವಿನಯ್ ರಾಣಾ. ದೆವ್ವಗಳ ಕುರಿತಾದ ಕಥಾಹಂದರ ಇರುವ ಇದರಲ್ಲಿ ತನ್ನ ಪಾತ್ರದ ಕುರಿತಾಗಿ ಹೆಮ್ಮೆಪಡುವ ವಿನಯ್ ರಾಣಾ, ಹಿಂದಿನ ಕಾಲದಲ್ಲಿ ಹೀರೋನೇ ಎಲ್ಲಾ ಎಂಬ ಹಾಗಿರುತ್ತಿತ್ತು. ಈಗ ಕಾಲ ಬದಲಾಗಿದೆ, ಹಾಗೇನಿಲ್ಲ ಸಿನಿಮಾ, ವೆಬ್‌ ಸೀರೀಸ್‌, ಇಂದಿನ ಧಾರಾವಾಹಿಗಳನ್ನೂ ಸೇರಿಸಿ. ಎಲ್ಲೆಡೆ ವಿಲನ್‌ ಎಲ್ಲರ ಪ್ರೀತಿಪಾತ್ರನಾಗುತ್ತಿದ್ದಾನೆ. ನೆಗೆಟಿವ್‌ ಇಲ್ಲದೆ ಪಾಸಿಟಿವ್ ಅಪೂರ್ಣ ಎಂಬಂತೆ ವಿಲನ್‌ ಇಲ್ಲದ ಹೀರೋ ಏತಕ್ಕೆ?

ಆಹಾ, ಹೋಗೋಣ ಹೋಟೆಲ್‌ಗೆ!

ವಿಷಯ ಕೇವಲ ಚಿತ್ರದ ಪ್ರಮೋಶನ್‌ ಇರಲಿ ಅಥವಾ ಕ್ವಾಲಿಟಿ ಟೈಂ ಎಂಜಾಯ್‌ ಮಾಡುವುದಿರಲಿ, ಟೈಗರ್‌ ದಿಶಾ ಜೋಡಿ ಇತ್ತೀಚೆಗೆ ಎಲ್ಲೆಲ್ಲೂ ಮಿಂಚುತ್ತಿದೆ. ಆದರೂ ಇನ್ನೂ ಇವರಿಬ್ಬರೂ ತಮ್ಮ ಸಂಬಂಧದ ಬಗ್ಗೆ ಓಪನ್‌ ಆಗಿ ಹೇಳಿಕೊಳ್ಳುತ್ತಿಲ್ಲ, ಆದರೆ ಮೀಡಿಯಾದ ಕ್ಯಾಮೆರಾದಲ್ಲಿ ಸೆರೆಯಾದಾಗ ಕಕ್ಕಾಬಿಕ್ಕಿ ಆಗುತ್ತಾರೆ. ಇತ್ತೀಚೆಗೆ ಈ ಜೋಡಿ ಎಲ್ಲಾ ಕಡೆ ಲಂಚ್‌, ಡಿನ್ನರ್‌ ಎಂದು ಸುತ್ತಾಡುತ್ತಿದೆ. `ಹೃದಯದ ಹಾದಿ ಇರುವುದೇ ಹೊಟ್ಟೆ ಮೂಲಕ’ ಎಂಬ ಮಾತು ಇಲ್ಲಿ ಅಕ್ಷರಶಃ ಸತ್ಯವಾಗಿದೆ.

ಚಿತ್ರಗಳ ಮೇಲೆ ಸವಾರಿ ಮಾಡುತ್ತಿರುವ ವೆಬ್

ಒಂದು ಭಾರಿ ಚಿತ್ರ ಬಂದು ಲೋ ಬಜೆಟ್‌ ಚಿತ್ರಗಳನ್ನು ಢೀ ಕೊಟ್ಟು ಉರುಳಿಸುವುದು ಸಾಲದೆಂಬಂತೆ ಇದೀಗ ವೆಬ್‌ನವರು ತಮ್ಮ ಸೀರೀಸ್‌ ತಂದು ಸಾಧಾರಣ ಚಿತ್ರಗಳ ಮಂದಿಯ ಕಣ್ಣೀರಿಳಿಸುತ್ತಿದ್ದಾರೆ. ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಮಿಶನ್‌ ಮಂಗ್‌, ಸಾಹೋನಂಥ ಭಾರೀ ಚಿತ್ರಗಳು ಟೈಟನ್‌ ಆಗಿ ಅಪ್ಪಳಿಸಲಿರುವುದರ ಜೊತೆ, ಇದೀಗ ನೆಟ್‌ಫ್ಲಿಕ್ಸ್ ಸೀರೀಸ್‌ `ಸೇಕ್ರೆಡ್‌ ಗೇಮ್ಸ್’ ಕೊಡುತ್ತಿರುವ ಡೋಸ್‌ ಏನೂ ಕಡಿಮೆ ಇಲ್ಲ. ಈ ಸೀರೀಸ್‌ನ ಮೊದಲ ಸೀಸನ್‌ ಬಹಳ ಹಿಟ್‌ ಎನಿಸಿತ್ತು. ಇದಕ್ಕೆ ಹೆದರಬೇಕೇಕೆ? ಜಬರ್ದಸ್ತ್ ಕಥೆ ರೆಡಿ ಮಾಡಿ ಸುಪರ್ಬ್‌ ಡೈರೆಕ್ಷನ್‌ ನೀಡಿದರೆ ಯಾವ ಉತ್ತಮವೂ ಚಿತ್ರ ಫ್ಲಾಪ್‌ ಆಗದು.

ದೇಬಿನಾಳ ಬೋಲ್ಡ್ ಅವತಾರ

ಕಿರುತೆರೆ ಈಗ ಹೆಸರಿಗಷ್ಟೆ ಕಿರಿದು, ಅದು ಬೆಳ್ಳಿತೆರೆಗೆ ಸರಿಯಾಗಿ ಬ್ಯಾಂಡ್‌ ಬಜಾಯಿಸುತ್ತಿದೆ. ಆರಂಭದಲ್ಲೇ ದೇಬಿನಾ ಇದನ್ನು ನಿರೂಪಿಸಿದ್ದಾಳೆ. ಕಿರುತೆರೆಯ ಸೊಸೆಯರೆಲ್ಲ ಅತಿ ಆದರ್ಶದ ಬೆನ್ನು ಹತ್ತಿರುವಾಗ ಇವಳು ಅಲ್ಲೇ ಬಿಕಿನಿಯಲ್ಲಿ ಮಿಂಚುವುದೇ? ಧಾರಾವಾಹಿ ಪ್ರಿಯರಂತೂ ಬೆಚ್ಚಿಬಿದ್ದರು. ಬಹುಶಃ ಇನ್ನೂ ಮುಂದೆ ಟಿವಿ ಅಭಿಮಾನಿಗಳಲ್ಲಿ ಹೆಂಗಸರು ಮಾತ್ರವಲ್ಲ, ಗಂಡಸರೂ ಹೆಚ್ಚಾಗಲಿದ್ದಾರೆ ಅನ್ಸುತ್ತೆ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ