ಆನ್‌ಲೈನ್ ಶೋಷಣೆಯ ಶಿಕಾರಿಯಾದ ಸ್ವರಾ
ಇಗೊಳ್ಳಿ ಆನ್‌ಲೈನ್‌ನಲ್ಲಿ ಶೋಷಣೆಯ ಆರಂಭ ಆಗಿಹೋಗಿದೆ. ಇದರ ತಾಜಾ ಬಲಿ ಎಂದರೆ ಸ್ವರಾ ಭಾಸ್ಕರ್. ಫೇಸ್‌ಬುಕ್, ಟ್ವೀಟರ್‌ಗಳಲ್ಲಿ ಸಾಕಷ್ಟು ಆ್ಯಕ್ಟಿವ್ ಆಗಿರುವ ಸ್ವರಾಳಿಗೆ, ಯಾರೋ ಒಬ್ಬ ಬೇಕೆಂದೇ ಕೆಟ್ಟ ಮಾತುಗಳ ಕಿಡಿ ಕಾರಿದ್ದಾನೆ. ಹಾಳಾಗಿಹೋಗಲಿ ಎಂದು ನಿರ್ಲಕ್ಷಿಸದೆ ಸ್ವರಾ ಪೊಲೀಸರಿಗೆ ದೂರು ಕೊಟ್ಟಳು.
ಸೋಶಿಯಲ್ ಮೀಡಿಯಾದಲ್ಲಿ ಮುಕ್ತವಾಗಿ ಮಾತನಾಡುವ ಅಭಿಮಾನಿಗಳು, ವೈಯಕ್ತಿವಾಗಿ ಇಂಥ ಸೆಲೆಬ್ರಿಟಿಗಳನ್ನು ಬೇಸ್‌ಲೆಸ್ ಆಗಿ ಕೆಣಕುವುದೇಕೆ? ಸ್ವರಾಗಂತೂ ಸಾಕಾಗಿ ಹೋಗಿದೆ.
ಸುನೀಲ್..... ಏನಾಯ್ತಪ್ಪ?
ಸುನೀಲ್ ಗ್ರೋವರ್ `ಭಾರತ್' ಚಿತ್ರದಲ್ಲಿ ಸಲ್ಮಾನ್ ಜೊತೆ ನಟಿಸಿದ್ದೇ ಬಂತು, ಆತನ ಅದೃಷ್ಟ ಬದಲಾಯಿಸಿತು. ಸುನೀಲ್ ಕೂಡ ಇದನ್ನು ಒಪ್ಪುತ್ತಾನೆ. ಈ ಚಿತ್ರ ಬಿಡುಗಡೆ ಆದನಂತರ ತನ್ನ ಫೀಮೇಲ್ ಫ್ಯಾನ್ ಫಾಲೋಯರ್ಸ್ ಹೆಚ್ಚಿದ್ದಾರೆ ಎಂದು ಒಪ್ಪಿಕೊಂಡ. ಅತ್ತ ನಂಬಲರ್ಹ ಸುದ್ದಿ ಮೂಲಗಳು ಈತ ವಾಪಸ್ ಕಪಿಲ್ ಶೋಗೆ ಬರುತ್ತಾನೋ ಇಲ್ಲವೋ ಎಂದು ತಪಾಸಣೆ ಮಾಡುತ್ತಲೇ ಇವೆ. ಅಂತೂ ಸುನೀಲ್.... ಏನಪ್ಪ ಇದು? ಒಂದೇ ಸಲಕ್ಕೆ ಇಷ್ಟೊಂದು ಅಟೆನ್ಶನ್?
ಇದೀಗ ಈಕೆಯ ಸರದಿ
ಶ್ರೀದೇವಿ ಮಕ್ಕಳಾದ ಜಾಹ್ನವಿ ಮತ್ತು ಅನನ್ಯಾ ಬಾಲಿವುಡ್‌ಗೆ ಬಂದ ನಂತರ, ಸಂಜಯ್ ಕಪೂರ್ ಮಗಳಾದ ಶನಾಯಾ ಕಪೂರ್ ಇದೀಗ ಎಂಟ್ರಿ ಪಡೆದಿದ್ದಾಳೆ. ಇವಳು ನಟಿಯಾಗಿ ಅಲ್ಲದೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಚಿತ್ರೋದ್ಯಮಕ್ಕೆ ಕಾಲಿಡುತ್ತಿದ್ದಾಳೆ. ಹಾಗೆಯೇ ಮತ್ತೊಂದೆಡೆ ಬಾದ್‌ಶಾಹ್ ಖಾನ್ ಮಗಳು ಸುಹಾನಾ ಸಹ ನಟನೆಯ ತರಬೇತಿ ಪಡೆದು ಇದೀಗ ಬೆಳ್ಳಿತೆರೆಯಲ್ಲಿ ಮಿಂಚಲಿದ್ದಾಳಂತೆ. ಆದರೆ ಬಾಲಿವುಡ್ ಮಾತ್ರ ತಾನು ನ್ಯಾಪೋಟಿಸಂ ಅಂದರೆ ಕುಟುಂಬ ಉದ್ಯಮ ನಡೆಸುವುದಿಲ್ಲ ಎಂದು ಸುಳ್ಳು ಹೇಳಿಕೊಳ್ಳುತ್ತದೆ. ಹಾಗಾದ್ರೆ ಇದೆಲ್ಲ ಏನಂತೆ?
ಭೂಮಿ ತರಹ ತಯಾರಿ ಇರಬೇಕು?
ಇತ್ತೀಚೆಗಷ್ಟೆ ಲಖ್ನೌದ ಒಂದು ಪಂಚತಾರಾ ಹೋಟೆಲ್‌ನಲ್ಲಿ ಭೂಮಿ ಒಂದು ಕೋಣೆಯಲ್ಲಿ ತಾನೇ ಲಾಕ್ ಮಾಡಿಕೊಂಡು ಎಲ್ಲರನ್ನೂ ಪೇಚಿಗೆ ಸಿಲುಕಿಸಿದ್ದಳು. ಅದಕ್ಕೆ ಮುಂಚೆ ಅವಳು ತನ್ನ ಪ್ರೊಡಕ್ಷನ್ ಟೀಂ ಜೊತೆಗಷ್ಟೇ ಮಾತನಾಡುತ್ತಿದ್ದಳು. ಭೂಮಿ ತನ್ನ ಬರಲಿರುವ `ಪತಿ ಪತ್ನಿ ಔರ್ ವೋ' ಚಿತ್ರದ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಳು. ಪ್ರತಿ ಸಲ ಅವಳು ಪ್ರಯಾಣ ಮಾಡಿ ಶೂಟಿಂಗ್ ಲೊಕೇಶನ್‌ಗೆ ಹಿಂದಿನ ಸಂಜೆ ತಲುಪುತ್ತಿದ್ದಂತೆ ಹೀಗೆಯೇ ಅವಾಂತರ ಮಾಡಿಕೊಂಡು, ಆ ಪಾತ್ರವನ್ನು ತನ್ನ ಮೈ ಮೇಲೆ ಆವಾಹನೆ ಮಾಡಿಕೊಳ್ಳುತ್ತಾಳೆ. ಅಬ್ಬಬ್ಬಾ.... ಪೂರ್ವ ತಯಾರಿ ಅಂದ್ರೆ ಹೀಗಿರಬೇಕು, ಅಲ್ಲವೇ?
ಕ್ವೀನ್‌ಗೀಗ ಯಾರ ಭಯ ಇಲ್ಲ
ಯಶಸ್ವಿ ಆಗುವುದು ಮತ್ತು ಅದನ್ನು ಜೀರ್ಣಿಸಿಕೊಂಡು ನಾರ್ಮಲ್ ಆಗಿರುವುದು ಎರಡೂ ಕಷ್ಟವೇ! ಇತ್ತೀಚೆಗಷ್ಟೇ ಕಂಗನಾ ಮತ್ತು ಒಬ್ಬ ಪತ್ರಕರ್ತರ ನಡುವೆ ನಡೆದ ವಾದವಿವಾದ ಇದನ್ನೇ ಸಾಬೀತುಪಡಿಸಿದೆ. ಕಂಗನಾ ಆ ಪತ್ರಕರ್ತನ ಮೇಲೆ ಹೊರಿಸಿದ್ದ ಆರೋಪ ನಿಜವೋ ಸುಳ್ಳೋ ಅದನ್ನು ಅವರಿಬ್ಬರೇ ಹೇಳಬೇಕಷ್ಟೆ. ಆದರೆ ಕಂಗನಾ ಯಶಸ್ಸಿನ ಮೆಟ್ಟಿಲ ತುದಿಗೇರಿ, ಪ್ರೊಫೆಶನಲ್ ಅನಿಸಿಕೊಂಡು ಪಬ್ಲಿಕ್‌ನಲ್ಲಿ ಈ ರೀತಿ ಆಡಬಾರದೆಂಬ ಕನಿಷ್ಠ ವ್ಯವಹಾರ ಜ್ಞಾನ ಇಲ್ಲದಿರುವುದು ದುರದೃಷ್ಟಕರ. ಕಂಗನಾ, ಹುಷಾರು ಕಣಮ್ಮ..... ವಿಜಯದ ಮೆಟ್ಟಿಲೇರಿದವರು ಪಾತಾಳಕ್ಕಿಳಿಯಲು ಎಷ್ಟು ಹೊತ್ತು ಬೇಕು?