ಚುಮುಚುಮು ಚಳಿಗಾಲ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಎಲ್ಲರೂ ಅದನ್ನು ಪ್ರೀತಿಯಿಂದ ಸ್ವಾಗತಿಸುತ್ತಾರೆ. ಯಾಕಿಲ್ಲ…..? ಚಳಿಗಾಲದ ಹಿತಕರ ವಾತಾವರಣವೇ ಹಾಗಿರುತ್ತದೆ. ಬೇಸಿಗೆಯ ಧಗೆ ಹೋಗಿ, ಉರಿಯುವ ಬಿಸಿಲು ತಗ್ಗಿ, ಮಳೆಗಾಲದ ರಾಡಿ ಕೊನೆಗೊಂಡು ಎಲ್ಲೆಲ್ಲೂ ಹಿತಕರ ವಾತಾವರಣ ಮೂಡಿರುತ್ತದೆ. ತಣ್ಣನೆಯ ಗಾಳಿ ಬೀಸುತ್ತಾ, ಚಳಿ ಚಳಿಯಲ್ಲಿ ಬಿಸಿ ಬಿಸಿ ಬೋಂಡ, ಬಜ್ಜಿ ಸವಿಯುತ್ತಾ ಕಾಫಿ, ಟೀ ಹೀರುತ್ತಿದ್ದರೆ ಅದರ ಸೊಗಸೇ ಬೇರೆ!
ಸುಂಯ್ ಸುಳಿದಾಡುವ ಸುಳಿಗಾಳಿಯಲ್ಲಿ ಬೆಚ್ಚಗಿನ ಸ್ವೆಟರ್ ಇತ್ಯಾದಿ ಧರಿಸಿ, ನಡುನಡುವೆ ಕಾಣಿಸುವ ಹಿತಕರ ಬಿಸಿಲಿನಲ್ಲಿ ಮೈ ಕಾಯಿಸುವುದು ಯಾರಿಗೆ ಬೇಡ ಹೇಳಿ….? ಈ ಹವಾಮಾನದಲ್ಲಿ ಪ್ರವಾಸ ಹೊರಡುವುದರ ಆನಂದವೇ ಬೇರೆ. ಇಂಥ ಹಿತಕರ ಚಳಿಗಾಲ ನಮ್ಮ ಚರ್ಮಕ್ಕೆ ಹಲವು ಸಮಸ್ಯೆಗಳನ್ನೂ ತಂದೊಡ್ಡಬಹುದು ಎಂದು ನಿಮಗೆ ಗೊತ್ತಲ್ಲವೇ?
ಚಳಿಗಾಲ ತೀವ್ರವಾಗುತ್ತಿದ್ದಂತೆ ಚರ್ಮ ಶುಷ್ಕವಾಗಿ ನಿರ್ಜೀವ ಅನಿಸತೊಡಗುತ್ತದೆ. ಹೀಗಿರುವಾಗ ಯಾವುದಾದರೂ ಉತ್ತಮ ಗುಣಮಟ್ಟದ ಕೋಲ್ಡ್ ಕ್ರೀಂ ಬಳಸಿ ಚರ್ಮದ ಈ ಶುಷ್ಕತೆಯ ಸಮಸ್ಯೆ ನಿವಾರಿಸಬಹುದಾಗಿದೆ. ಅಂಥ ಕೋಲ್ಡ್ ಕ್ರೀಮಿನಲ್ಲಿ ವಿಟಮಿನ್ ಲೆವೆಲ್ ಬೆರೆತಿದ್ದರೆ ಎಷ್ಟು ಒಳ್ಳೆಯದು! ಇದು ನಮ್ಮ ಚರ್ಮಕ್ಕೆ ಹೆಚ್ಚಿನ ಸುರಕ್ಷತೆ ಒದಗಿಸಬಲ್ಲದು, ಪೋಷಕಾಂಶ ಒದಗಿಸಿ ಚರ್ಮ ಬಾಡಿ ಹೋಗದಂತೆ ಕಾಪಾಡಬಲ್ಲದು, ಜೊತೆಗೆ ಚರ್ಮದ ಆರ್ದ್ರತೆಯನ್ನೂ ಉಳಿಸಬಲ್ಲದು. ಇಂಥ ಉತ್ತಮ ಗುಣಮಟ್ಟದ ಕೋಲ್ಡ್ ಕ್ರೀಂ ಬಳಸಿದಾಗ ಮಾತ್ರ ಚಳಿಗಾಲದ ಹೊಡೆತದ ತೀವ್ರತೆ ತಗ್ಗಿ ನಿಮ್ಮ ಮುಖದಲ್ಲಿ ಮಂದಹಾಸ ಮಿನುಗಬಲ್ಲದು.
ಚಳಿಗಾಲವನ್ನು ಹೀಗೆ ಎದುರಿಸಿ
ಈ ರೀತಿ ಚಳಿಗಾಲ ಬಂದಾಗ ನಮ್ಮ ಚರ್ಮವನ್ನು ಇನ್ನಷ್ಟು ಬ್ಯೂಟಿಫುಲ್ ಆಗಿಸಲು ಕೋಲ್ಡ್ ಕ್ರೀಂ ನೆರವಾಗುತ್ತದೆ. ಅದರ ಕೋಮಲ ಸ್ಪರ್ಶ ನಮಗೆ ಆಪ್ಯಾಯಮಾನ ಎನಿಸುತ್ತದೆ. ಏಕೆಂದರೆ ಇದರಲ್ಲಿ ಬೆರೆತಿರುವಂಥ ವಿಟಮಿನ್ ನಮ್ಮ ಚರ್ಮದ ಮೇಲೆ ಒಂದು ಪದರ ಮೂಡಿಸಿ ಅದು ನಿರ್ಜೀವವಾಗಿ ಕಾಣದಂತೆ ತಡೆಯುತ್ತದೆ. ಅದೇ ಸಮಯದಲ್ಲಿ ಅದರಲ್ಲಿನ ವಿಟಮಿನ್ ಲೆವೆಲ್ ಚರ್ಮವನ್ನು UV ಕಿರಣಗಳ ಪ್ರಭಾವದಿಂದ ರಕ್ಷಿಸುತ್ತದೆ. ಇಷ್ಟು ಮಾತ್ರವಲ್ಲದೆ ಚರ್ಮ ಸದಾ ಯಂಗ್ ಆಗಿರುವಂತೆ, ಮೃದು ಮಾತ್ರವಲ್ಲದೆ, ಅದರಲ್ಲಿ ಬಿಗಿತ ಮೂಡಿಸಲು ಸಹಕರಿಸುತ್ತದೆ. ಎಲ್ಲಕ್ಕೂ ಹೆಚ್ಚು ಜನಪ್ರಿಯವಾದ ವಿಟಮಿನ್, ಇಲ್ಲಿ ಪ್ರಭಾವಶಾಲಿ ಆ್ಯಂಟಿಆಕ್ಸಿಡೆಂಟ್ಸ್ ಕೆಲಸ ಮಾಡುತ್ತದೆ. ಇದು ಚರ್ಮಕ್ಕೆ ಏಜಿಂಗ್ ಆಗದಂತೆ ತಡೆಯುತ್ತದೆ. ಅದರ ಆರ್ದ್ರತೆ ಕಾಪಾಡುತ್ತದೆ. ಹೀಗಾಗಿ ಈ ಎಲ್ಲಾ ಗುಣಮಟ್ಟ ಇರುವಂಥ ಉತ್ತಮ ಕಂಪನಿಯ ಉತ್ಕೃಷ್ಟ ಕೋಲ್ಡ್ ಕ್ರೀಂ ಆರಿಸಿಕೊಳ್ಳಿ. ಇದರಿಂದ ನಿಮ್ಮ ಚಳಿಗಾಲದ ಆನಂದ ಹೆಚ್ಚುತ್ತದೆ.
ಭರವಸೆಯ ಅನುಭವ
ಚಳಿಗಾಲದಲ್ಲಿ ಕೋಲ್ಡ್ ಕ್ರೀಂ ಬಳಸುವುದರ ಕುರಿತಾಗಿ ಸ್ವಯಂ 2 ಮಕ್ಕಳ ತಾಯಿಯಾಗಿರುವ, ಹಲವಾರು ಬಾಲಿವುಡ್ ಚಿತ್ರಗಳಲ್ಲಿ ತಾಯಿ ಪಾತ್ರದಲ್ಲಿ ನಟಿಸಿರುವ ಕೃಷ್ಣಸುಂದರಿ ಕಾಜೋಲ್ ಹೇಳುತ್ತಾಳೆ, ನಿಮ್ಮ ಒಳ್ಳೆತನವೇ ಖುಷಿಯಾಗಿ ನಿಮ್ಮ ಮುಖದಲ್ಲಿ ಪ್ರತಿಬಿಂಬಗೊಳ್ಳುತ್ತದೆ. ಈ ವಿಷಯವನ್ನು ನಾನು ತಾಯಿಯಾಗಿ ಚೆನ್ನಾಗಿ ಗಮನಿಸಿಕೊಂಡಿದ್ದೇನೆ. ಮುಖ್ಯವಾಗಿ ನಿಮ್ಮ ಪ್ರಾಮಾಣಿಕತೆ, ಅಖಂಡತೆ, ದಯಾಳುಗುಣ, ನೈತಿಕತೆ ಇತ್ಯಾದಿಗಳೆಲ್ಲ ಮಿಳಿತಗೊಂಡು ನಿಮ್ಮ ಮುಖದಲ್ಲಿ ನಡವಳಿಕೆಯಾಗಿ ಪ್ರತಿಫಲಿಸುತ್ತದೆ. ನಿಮ್ಮ ಈ ವ್ಯವಹಾರದಿಂದಲೇ ಜನ ನಿಮ್ಮ ನಿಕಟತೆ ಅಥವಾ ಸಾನ್ನಿಧ್ಯ ಬಯಸುತ್ತಾರೆ. ಅಂದರೆ ನಿಮ್ಮ ವ್ಯಹಾರದಿಂದ ಅವರಿಗೆ ನೀವು ಎಷ್ಟು ಒಳ್ಳೆಯವರೆಂಬ ಅನುಭವ ಆಗುತ್ತದೆ.
ಕಾಜೋಲ್ ಅಭಿಪ್ರಾಯದಲ್ಲಿ, ತಾಯಿ ಮಗುವಿನ ಕೈ ಬಲವಾಗಿ ಹಿಡಿದು ಸುಭದ್ರತೆ ಒದಗಿಸುತ್ತಾಳೆ. ಇಡೀ ದಿನ ಅಲ್ಲದಿದ್ದರೂ ಹಲವು ನಿಮಿಷಗಳ ಇಂಥ ಒಡನಾಟ ಮಗುವಿನ ಮನದಲ್ಲಿ ಅಖಂಡ ಆತ್ಮವಿಶ್ವಾಸ ಮೂಡಿಸುತ್ತದೆ. ಇದರಿಂದಾಗಿ ಮಗು ತಾಯಿಯ ಸಾಮೀಪ್ಯವನ್ನು ಜೀವನವಿಡೀ ಬಯಸುತ್ತದೆ. ತನ್ನ ಮಗುವಿಗಾಗಿ ತಾಯಿ ತನ್ನಲ್ಲಿ ಎಂಥ ಬದಲಾವಣೆಯನ್ನಾದರೂ ತಂದುಕೊಳ್ಳಲು ಬಯಸುತ್ತಾಳೆ. ಇಷ್ಟು ಮಾತ್ರವಲ್ಲದೆ, ಸಮಾಜದಲ್ಲಿ ಬದಲಾವಣೆ ತರುವಲ್ಲಿಯೂ ತಾಯಿಯ ಪಾತ್ರ ಹಿರಿದು. ಯಾವುದೇ ಸವಾಲವನ್ನು ಎದುರಿಸಲು ಮಗು ಯಾವಾಗ ಸಿದ್ಧವಾಗುತ್ತದೆ ಎಂದರೆ, ಅದರ ಯೋಚನಾಧಾಟಿ ಸಶಕ್ತವಾಗಿದ್ದಾಗ ಮಾತ್ರ. ತಾಯಿಯಾಗಿ ತಾನು ಇದರ ಪ್ರತ್ಯಕ್ಷ ಅನುಭವ ಕಂಡುಕೊಂಡಿದ್ದೇನೆ ಎನ್ನುತ್ತಾಳೆ ಕಾಜೋಲ್.
ತಾಯಿಯಾದವಳು ಮಗುವಿನೊಡನೆ 9 ತಿಂಗಳ ಸುದೀರ್ಘ ಒಡನಾಟ ಹೊಂದಿ, ತನ್ನದೇ ದೇಹದ ಭಾಗವಾಗಿ ಮಗುವನ್ನು ಹೊಂದುತ್ತಾಳೆ. ಈ ಕಾರಣದಿಂದಲೇ ತಾಯಿ ಎಲ್ಲರಿಗಿಂತ ಹೆಚ್ಚಾಗಿ ತನ್ನ ಮಗುವನ್ನು ಅರ್ಥ ಮಾಡಿಕೊಳ್ಳಬಲ್ಲಳು. ಹೀಗಾಗಿ ಪರ್ಫೆಕ್ಟ್ ಪೇರೆಂಟಿಂಗ್ ಪಾರ್ಟ್ನರ್ಶಿಪ್ನಲ್ಲಿ ತಾಯಿಯ ಪಾತ್ರವೇ ಹಿರಿದು. ಈಗ ಕಾಲ ಬದಲಾಗಿದೆ, ಸಮಯಕ್ಕೆ ತಕ್ಕಂತೆ ಮಗುವಿನ ಅಗತ್ಯಗಳೂ ಬದಲಾಗುತ್ತಿರುತ್ತದೆ ಎನ್ನುತ್ತಾಳೆ ಕಾಜೋಲ್.
ನಮ್ಮ ಕಾಲದಲ್ಲಿ ಹಾಗಿತ್ತು, ಹೀಗಿತ್ತು ಎಂದು ಮಗುವನ್ನು ಆ ನಿಟ್ಟಿನಲ್ಲಿ ಹೋಲಿಸದೆ, ಅದರದೇ ಕಾಲಘಟ್ಟದಲ್ಲಿ ಗುರುತಿಸಬೇಕಾಗುತ್ತದೆ. ಪ್ರೀತಿಯಿಂದಲೇ ಅದನ್ನು ಓಲೈಸಿಕೊಂಡು ಪ್ರತಿಯೊಂದನ್ನೂ ಮಗುವಿನ ಮಟ್ಟದಲ್ಲಿಯೇ ತೂಗಿ, ಅದರ ಬೇಕು ಬೇಡಗಳನ್ನು ಗಮನಿಸಬೇಕು. ಈ ರೀತಿ ನಾವು ಮಗುವನ್ನು ಅರ್ಥ ಮಾಡಿಕೊಂಡಾಗ ಮಾತ್ರ ಮಗು ನಮ್ಮ ಮಾತಿನಂತೆ ನಡೆದುಕೊಳ್ಳುತ್ತದೆ. ಇದರಲ್ಲಿ ನಾವು ಮತ್ತೆ ಮತ್ತೆ ಪ್ರಯತ್ನಪಟ್ಟಾಗ ಮಾತ್ರವೇ ಯಶಸ್ವಿಯಾಗಲು ಸಾಧ್ಯ. ಕೋಲ್ಡ್ ಕ್ರೀಮ್ ಚರ್ಮಕ್ಕೆ ಪೂರಕವಾಗಿರುವಂತೆಯೇ ತಾಯಿ ಕೋಮಲವಾಗಿ ಮಗುವಿನ ರಕ್ಷಣೆಗೆ ತೊಡಗಬೇಕು.
– ಪ್ರತಿನಿಧಿ
ಕೋಲ್ಡ್ ಕ್ರೀಂ ವಿತ್ ಮಿಟಮಿನ್ಸ್
ಆಂತರಿಕವಾಗಿ ಆಹಾರ ರೂಪದಲ್ಲಿ ದೇಹಕ್ಕೆ ಪೋಷಣೆ ಒದಗಿಸುವಂತೆ, ಬಾಹ್ಯರೂಪದಲ್ಲೂ ಚರ್ಮ ಮತ್ತು ಕೂದಲನ್ನು ಸುಂದರವಾಗಿಡುವಲ್ಲಿ ವಿಟಮಿನ್ಸ್ ಪಾತ್ರ ಅತಿ ಹಿರಿದು. ಯಾವುದೇ ಉತ್ಕೃಷ್ಟ ಕೋಲ್ಡ್ ಕ್ರೀಮಿನಲ್ಲಿ ವಿಟಮಿನ್, ಬೆರೆತಿದೆ ಎಂದರೆ ಅದೆಷ್ಟು ಉನ್ನತ ಎಂದು ಹೇಳಬೇಕಾಗಿಲ್ಲ. ಚಳಿಗಾಲದಲ್ಲಿ ಸಹಜವಾಗಿ ಶುಷ್ಕತೆಗೆ ತಿರುಗುವ ಚರ್ಮಕ್ಕೆ ಉತ್ತೇಜನ ನೀಡಿ, ಕೋಮಲಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಇದು ಹೆಚ್ಚು ತಲೆಹೊಟ್ಟು ಸೇರಿ ಕೂದಲು ಹಾಳಾಗದಂತೆ ತಲೆಯ ಸ್ಕಾಲ್ಪ್ ನ್ನು ರಕ್ಷಿಸುತ್ತದೆ. ಚರ್ಮದ ಆರ್ದ್ರತೆ, ಸೌಂದರ್ಯ ಉಳಿಯುವಂತೆ ಕಾಪಾಡುತ್ತದೆ. ಹಾಗಿದ್ದರೆ ಈ ವಿಟಮಿನ್ಗಳ ವೈಶಿಷ್ಟ್ಯವೇನು? :
ವಿಟಮಿನ್ ಎ : ಆ್ಯಂಟಿ ಆಕ್ಸಿಡೆಂಟ್ಸ್ ನಿಂದ ಸಮೃದ್ಧವಾಗಿರುವ ಈ ವಿಟಮಿನ್ ಚರ್ಮದ ಸಣ್ಣಪುಟ್ಟ ಸಮಸ್ಯೆಗಳನ್ನು ದೂರಗೊಳಿಸಿ, ಅದರ ಅಂದ ಹೆಚ್ಚಿಸಿ, ಕಾಂತಿ ಚಿಮ್ಮಿಸುವಲ್ಲಿ ನೆರವಾಗುತ್ತದೆ. ಏಜಿಂಗ್ ಗುರುತು ಮರೆಯಾಗುವಂತೆ ಮಾಡಬಲ್ಲದು. ಚರ್ಮದ ಹೊಳಪು, ಆರೋಗ್ಯಕರ ನಳನಳಿಸುವಿಕೆಯನ್ನು ಉಳಿಸುತ್ತದೆ.
ವಿಟಮಿನ್ ಸಿ : ಇದರಲ್ಲಿ ಲಭ್ಯವಿರುವ ಆ್ಯಸ್ಕಾರ್ಬಿಕ್ ಆ್ಯಸಿಡ್ ಚರ್ಮದ ಜೀವಕೋಶಗಳನ್ನು ಪುಷ್ಟಿಕರಾಗಿ ಇಡುತ್ತದೆ. ಇದರ ಉತ್ತಮಿಕೆಯ ಗುಣಗಳು, ಇಂಥ ಉತ್ಪನ್ನ ಬಳಸುವುದರಿಂದ ಚರ್ಮದ ಕಾಂತಿ, ಸದಾಕಾಲ ಉಳಿದುಕೊಂಡು ಚಿರಯೌವನ ನಿಮ್ಮದಾಗಲಿದೆ, ಅದು ಡ್ರೈ ಆಗದು.
ವಿಟಮಿನ್ ಇ : ಬೇಸಿಗೆ ಅಥವಾ ಚಳಿಗಾಲವಿರಲಿ, ಸೂರ್ಯನ ತೀಕ್ಷ್ಣ UV ಕಿರಣಗಳು ಚರ್ಮದ ಮೇಲೆ ಸದಾ ದುಷ್ಪರಿಣಾಮ ಬೀರುತ್ತವೆ. ಇಂಥ ಸಂದರ್ಭದಲ್ಲಿ ವಿಟಮಿನ್ ಇ ಚರ್ಮಕ್ಕೆ ಉತ್ತಮ ಪೋಷಣೆ ನೀಡುತ್ತದೆ ಹಾಗೂ UV ಕಿರಣಗಳ ದುಷ್ಪ್ರಭಾವದಿಂದ ಚರ್ಮವನ್ನು ರಕ್ಷಿಸುತ್ತದೆ.
ಹೀಗಾಗಿ ನೀವು ಸಹ ಈ ಚಳಿಗಾಲದಲ್ಲಿ ಇಂಥ ಉತ್ತಮ ವಿಟಮಿನ್ಸ್ ಅಡಗಿರುವ ಕೋಲ್ಡ್ ಕ್ರೀಂ ಬಳಸಲು ಒಳ್ಳೆಯದು.