ಚುಮುಚುಮು ಚಳಿಗಾಲ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಎಲ್ಲರೂ ಅದನ್ನು ಪ್ರೀತಿಯಿಂದ ಸ್ವಾಗತಿಸುತ್ತಾರೆ. ಯಾಕಿಲ್ಲ.....? ಚಳಿಗಾಲದ ಹಿತಕರ ವಾತಾವರಣವೇ ಹಾಗಿರುತ್ತದೆ. ಬೇಸಿಗೆಯ ಧಗೆ ಹೋಗಿ, ಉರಿಯುವ ಬಿಸಿಲು ತಗ್ಗಿ, ಮಳೆಗಾಲದ ರಾಡಿ ಕೊನೆಗೊಂಡು ಎಲ್ಲೆಲ್ಲೂ ಹಿತಕರ ವಾತಾವರಣ ಮೂಡಿರುತ್ತದೆ. ತಣ್ಣನೆಯ ಗಾಳಿ ಬೀಸುತ್ತಾ, ಚಳಿ ಚಳಿಯಲ್ಲಿ ಬಿಸಿ ಬಿಸಿ ಬೋಂಡ, ಬಜ್ಜಿ ಸವಿಯುತ್ತಾ ಕಾಫಿ, ಟೀ ಹೀರುತ್ತಿದ್ದರೆ ಅದರ ಸೊಗಸೇ ಬೇರೆ!
ಸುಂಯ್ ಸುಳಿದಾಡುವ ಸುಳಿಗಾಳಿಯಲ್ಲಿ ಬೆಚ್ಚಗಿನ ಸ್ವೆಟರ್ ಇತ್ಯಾದಿ ಧರಿಸಿ, ನಡುನಡುವೆ ಕಾಣಿಸುವ ಹಿತಕರ ಬಿಸಿಲಿನಲ್ಲಿ ಮೈ ಕಾಯಿಸುವುದು ಯಾರಿಗೆ ಬೇಡ ಹೇಳಿ....? ಈ ಹವಾಮಾನದಲ್ಲಿ ಪ್ರವಾಸ ಹೊರಡುವುದರ ಆನಂದವೇ ಬೇರೆ. ಇಂಥ ಹಿತಕರ ಚಳಿಗಾಲ ನಮ್ಮ ಚರ್ಮಕ್ಕೆ ಹಲವು ಸಮಸ್ಯೆಗಳನ್ನೂ ತಂದೊಡ್ಡಬಹುದು ಎಂದು ನಿಮಗೆ ಗೊತ್ತಲ್ಲವೇ?
ಚಳಿಗಾಲ ತೀವ್ರವಾಗುತ್ತಿದ್ದಂತೆ ಚರ್ಮ ಶುಷ್ಕವಾಗಿ ನಿರ್ಜೀವ ಅನಿಸತೊಡಗುತ್ತದೆ. ಹೀಗಿರುವಾಗ ಯಾವುದಾದರೂ ಉತ್ತಮ ಗುಣಮಟ್ಟದ ಕೋಲ್ಡ್ ಕ್ರೀಂ ಬಳಸಿ ಚರ್ಮದ ಈ ಶುಷ್ಕತೆಯ ಸಮಸ್ಯೆ ನಿವಾರಿಸಬಹುದಾಗಿದೆ. ಅಂಥ ಕೋಲ್ಡ್ ಕ್ರೀಮಿನಲ್ಲಿ ವಿಟಮಿನ್ ಲೆವೆಲ್ ಬೆರೆತಿದ್ದರೆ ಎಷ್ಟು ಒಳ್ಳೆಯದು! ಇದು ನಮ್ಮ ಚರ್ಮಕ್ಕೆ ಹೆಚ್ಚಿನ ಸುರಕ್ಷತೆ ಒದಗಿಸಬಲ್ಲದು, ಪೋಷಕಾಂಶ ಒದಗಿಸಿ ಚರ್ಮ ಬಾಡಿ ಹೋಗದಂತೆ ಕಾಪಾಡಬಲ್ಲದು, ಜೊತೆಗೆ ಚರ್ಮದ ಆರ್ದ್ರತೆಯನ್ನೂ ಉಳಿಸಬಲ್ಲದು. ಇಂಥ ಉತ್ತಮ ಗುಣಮಟ್ಟದ ಕೋಲ್ಡ್ ಕ್ರೀಂ ಬಳಸಿದಾಗ ಮಾತ್ರ ಚಳಿಗಾಲದ ಹೊಡೆತದ ತೀವ್ರತೆ ತಗ್ಗಿ ನಿಮ್ಮ ಮುಖದಲ್ಲಿ ಮಂದಹಾಸ ಮಿನುಗಬಲ್ಲದು.
ಚಳಿಗಾಲವನ್ನು ಹೀಗೆ ಎದುರಿಸಿ
ಈ ರೀತಿ ಚಳಿಗಾಲ ಬಂದಾಗ ನಮ್ಮ ಚರ್ಮವನ್ನು ಇನ್ನಷ್ಟು ಬ್ಯೂಟಿಫುಲ್ ಆಗಿಸಲು ಕೋಲ್ಡ್ ಕ್ರೀಂ ನೆರವಾಗುತ್ತದೆ. ಅದರ ಕೋಮಲ ಸ್ಪರ್ಶ ನಮಗೆ ಆಪ್ಯಾಯಮಾನ ಎನಿಸುತ್ತದೆ. ಏಕೆಂದರೆ ಇದರಲ್ಲಿ ಬೆರೆತಿರುವಂಥ ವಿಟಮಿನ್ ನಮ್ಮ ಚರ್ಮದ ಮೇಲೆ ಒಂದು ಪದರ ಮೂಡಿಸಿ ಅದು ನಿರ್ಜೀವವಾಗಿ ಕಾಣದಂತೆ ತಡೆಯುತ್ತದೆ. ಅದೇ ಸಮಯದಲ್ಲಿ ಅದರಲ್ಲಿನ ವಿಟಮಿನ್ ಲೆವೆಲ್ ಚರ್ಮವನ್ನು UV ಕಿರಣಗಳ ಪ್ರಭಾವದಿಂದ ರಕ್ಷಿಸುತ್ತದೆ. ಇಷ್ಟು ಮಾತ್ರವಲ್ಲದೆ ಚರ್ಮ ಸದಾ ಯಂಗ್ ಆಗಿರುವಂತೆ, ಮೃದು ಮಾತ್ರವಲ್ಲದೆ, ಅದರಲ್ಲಿ ಬಿಗಿತ ಮೂಡಿಸಲು ಸಹಕರಿಸುತ್ತದೆ. ಎಲ್ಲಕ್ಕೂ ಹೆಚ್ಚು ಜನಪ್ರಿಯವಾದ ವಿಟಮಿನ್, ಇಲ್ಲಿ ಪ್ರಭಾವಶಾಲಿ ಆ್ಯಂಟಿಆಕ್ಸಿಡೆಂಟ್ಸ್ ಕೆಲಸ ಮಾಡುತ್ತದೆ. ಇದು ಚರ್ಮಕ್ಕೆ ಏಜಿಂಗ್ ಆಗದಂತೆ ತಡೆಯುತ್ತದೆ. ಅದರ ಆರ್ದ್ರತೆ ಕಾಪಾಡುತ್ತದೆ. ಹೀಗಾಗಿ ಈ ಎಲ್ಲಾ ಗುಣಮಟ್ಟ ಇರುವಂಥ ಉತ್ತಮ ಕಂಪನಿಯ ಉತ್ಕೃಷ್ಟ ಕೋಲ್ಡ್ ಕ್ರೀಂ ಆರಿಸಿಕೊಳ್ಳಿ. ಇದರಿಂದ ನಿಮ್ಮ ಚಳಿಗಾಲದ ಆನಂದ ಹೆಚ್ಚುತ್ತದೆ.
ಭರವಸೆಯ ಅನುಭವ
ಚಳಿಗಾಲದಲ್ಲಿ ಕೋಲ್ಡ್ ಕ್ರೀಂ ಬಳಸುವುದರ ಕುರಿತಾಗಿ ಸ್ವಯಂ 2 ಮಕ್ಕಳ ತಾಯಿಯಾಗಿರುವ, ಹಲವಾರು ಬಾಲಿವುಡ್ ಚಿತ್ರಗಳಲ್ಲಿ ತಾಯಿ ಪಾತ್ರದಲ್ಲಿ ನಟಿಸಿರುವ ಕೃಷ್ಣಸುಂದರಿ ಕಾಜೋಲ್ ಹೇಳುತ್ತಾಳೆ, ನಿಮ್ಮ ಒಳ್ಳೆತನವೇ ಖುಷಿಯಾಗಿ ನಿಮ್ಮ ಮುಖದಲ್ಲಿ ಪ್ರತಿಬಿಂಬಗೊಳ್ಳುತ್ತದೆ. ಈ ವಿಷಯವನ್ನು ನಾನು ತಾಯಿಯಾಗಿ ಚೆನ್ನಾಗಿ ಗಮನಿಸಿಕೊಂಡಿದ್ದೇನೆ. ಮುಖ್ಯವಾಗಿ ನಿಮ್ಮ ಪ್ರಾಮಾಣಿಕತೆ, ಅಖಂಡತೆ, ದಯಾಳುಗುಣ, ನೈತಿಕತೆ ಇತ್ಯಾದಿಗಳೆಲ್ಲ ಮಿಳಿತಗೊಂಡು ನಿಮ್ಮ ಮುಖದಲ್ಲಿ ನಡವಳಿಕೆಯಾಗಿ ಪ್ರತಿಫಲಿಸುತ್ತದೆ. ನಿಮ್ಮ ಈ ವ್ಯವಹಾರದಿಂದಲೇ ಜನ ನಿಮ್ಮ ನಿಕಟತೆ ಅಥವಾ ಸಾನ್ನಿಧ್ಯ ಬಯಸುತ್ತಾರೆ. ಅಂದರೆ ನಿಮ್ಮ ವ್ಯಹಾರದಿಂದ ಅವರಿಗೆ ನೀವು ಎಷ್ಟು ಒಳ್ಳೆಯವರೆಂಬ ಅನುಭವ ಆಗುತ್ತದೆ.