ಪ್ರೇಮವಿಲ್ಲದೆ ನೆಮ್ಮದಿ ಎಲ್ಲಿ?
ಇತ್ತೀಚೆಗೆ ಹಳೆಯ ಹಿಂದಿ ಗೀತೆಗಳಾದ `ಪ್ಯಾರ್ ಬಿನಾ ಚೇನ್ ಕಹಾ ರೇ....' `ಬಸ್ ಏಕ್ ಸನಂ ಚಾಹಿಯೇ ಆಶಿಕೀ ಕೇ ಲಿಯೇ....' ಮುಂತಾದ ಹಾಡುಗಳು ಶೃತಿ ಹಾಸನ್‌ಗೆ ಹೆಚ್ಚು ಸೂಟ್ ಆಗುತ್ತಿವೆ. ಅಸಲಿಗೆ ಕೆಲವು ದಿನಗಳ ಹಿಂದೆ ಶೃತಿ ಬೇಬಿಗೆ ತನ್ನ ಬಾಯ್‌ಫ್ರೆಂಡ್ ಮೈಕಲ್‌ನಿಂದ ಬ್ರೇಕ್‌ಅಪ್ ಆಗಿತ್ತು. ಕೆಲವು ದಿನಗಳ ವಿರಹ ವೇದನೆಯ ನಂತರ ಶೃತಿ ಮತ್ತೆ ಬಾಯ್‌ಫ್ರೆಂಡ್ ಹಂಟ್‌ಗಿಳಿದಳು. ತನ್ನನ್ನು ಚೆನ್ನಾಗಿ ಅರಿತು ಹೃದಯಪೂರ್ಕವಾಗಿ ಪ್ರೇಮಿಸಬಲ್ಲಂಥ ಹುಡುಗನನ್ನು ಹುಡುಕುತ್ತಿದ್ದೇನೆ ಎಂದು ತಾನೇ ಹೇಳಿಕೆ ಕೊಟ್ಟಳು. ಹಿಂದೆ ದಕ್ಷಿಣದ ಹೀರೋ ಸಿದ್ದಾರ್ಥನಿಗೆ ಕೈಕೊಟ್ಟಿದ್ದನ್ನು ನೆನಪಿಸಿಕೊಳ್ಳಲಿಕ್ಕೂ ಈಗ ಅವಳಿಗೆ ಮನಸ್ಸಿಲ್ಲ. ಕೈಯಲ್ಲಿ ಸಿನಿಮಾಗಳಂತೂ ಗಿಟ್ಟುತ್ತಿಲ್ಲ, ಟೈಂಪಾಸ್‌ಗೆ ಬಾಯ್‌ಫ್ರೆಂಡ್ ಆದರೂ ಸಿಗಲಿ, ಆಲ್ ದಿ ಬೆಸ್ಟ್!
ಫಿಟ್‌ನೆಸ್ ಈಕೆಯ ಮೂಲ ಮಂತ್ರ
ದಕ್ಷಿಣದ ಚಿತ್ರಗಳಿಂದ ಬಾಲಿವುಡ್‌ನತ್ತ ಜಿಗಿದಿರುವ ರಕುಲ್‌ಪ್ರೀತ್ ಇಲ್ಲಿ ಝಾಂಡಾ ಊರಲು ಹರಸಾಹಸ ಮಾಡುತ್ತಿದ್ದಾಳೆ. ಅದು ಅಷ್ಟು ಸುಲಭವಲ್ಲ ಎಂಬುದು ಅವಳಿಗೂ ಗೊತ್ತು. ಹೀಗಾಗಿ ಈಕೆ ಈಗ ನಟನೆಯ ಜೊತೆ ಫಿಟ್‌ನೆಸ್ ಕಡೆಗೂ ಹೆಚ್ಚಿನ ಗಮನಹರಿಸುತ್ತಿದ್ದಾಳೆ. ಗಂಟೆಗಟ್ಟಲೆ ಜಿಮ್ ನಲ್ಲಿ ಬೆವರು ಹರಿಸಿ ಇತರರನ್ನು ಅಸೂಯೆಯಿಂದ ಬೆಚ್ಚಿ ಬೀಳುವಂತೆ ಮಾಡುತ್ತಿದ್ದಾಳೆ. ಈಕೆ ಸ್ಟ್ರೆಂಥ್ ಟ್ರೇನಿಂಗ್ ಜೊತೆಗೆ ಕಾರ್ಡಿಯೊ, ಕೂಲ್ ಮೋಶನ್‌ಗಳ ಕಡೆಗೂ ಗಮನ ಕೊಡುತ್ತಾಳೆ. ಕೇವಲ ಫಿಟ್‌ನೆಸ್ ಇದ್ದರೆ ಸಾಲದಮ್ಮ, ನಟನೆಯತ್ತಲೂ ಗಮನಹರಿಸು ಎನ್ನುತ್ತಿದ್ದಾರೆ ಹಿತೈಷಿಗಳು!
ರಾಣಿ ಇದೀಗ ಮರ್ದಾನಿ
ರಾಣಿ ಮುಖರ್ಜಿ `ಈಟ್ ಲೆಸ್ ಬಟ್ ಗುಡ್' ಪಾಲಿಸಿಯನ್ನು ಚಿತ್ರಗಳ ಆಯ್ಕೆಗೂ ಮಾಡಿಕೊಂಡಂತಿದೆ. ಹೀಗಾಗಿಯೇ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಮಾತ್ರವೇ ನಟಿಸುತ್ತಿದ್ದಾಳೆ. ಅದರ ನಿರ್ದೇಶಕ ಈಕೆಯ ಪತಿಯಲ್ಲದೆ ಬೇರಾರೂ ಅಲ್ಲ. ಈಗಾಗಲೇ ಈಕೆಯ `ಮರ್ದಾನಿ' ಯಶಸ್ವಿ ಆಗಿತ್ತು. ಹೀಗಾಗಿ ಇದರ `ಪಾರ್ಟ್-2' ಬರುತ್ತಿದೆ. ಇದರಲ್ಲಿ ಟಿಪಿಕಲ್ ಬಾಲಿವುಡ್ ಕಥೆ ಇದ್ದು, ರಾಣಿ ರೌಡಿ ಇನ್‌ಸ್ಪೆಕ್ಟರ್ ಆಗಿರುತ್ತಾಳಂತೆ. ಈ ಚಿತ್ರದ ಟೀಸರ್ ಸಕ್ಸಸ್ ಅನಿಸಿದೆ, ಆದರೆ ಚಿತ್ರ ಇದೇ ತರಹ ಸಕ್ಸಸ್ ಆಗುತ್ತದಾ ಎಂದು ಕಾದು ನೋಡಬೇಕಿದೆ.
ತಾರಾ ಏಕೆ ಮೂಕಿ ಆದಳು?
`ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರದಿಂದ ತನ್ನದೇ ಆದ ಐಡೆಂಟಿಟಿ ಪಡೆದ ಹಿಂದಿ ತಾರಾ ಈಗ ತನ್ನ ಪ್ರತಿಭೆಯನ್ನು `ಮರ್ಜಾಲಾ' ಚಿತ್ರದಲ್ಲಿ ತೋರಿಸಲಿದ್ದಾಳೆ. ಇಲ್ಲಿ ಅದು ಬಹಳ ಸುಲಭವೇನಲ್ಲ. ಏಕೆಂದರೆ ಇಲ್ಲಿ ತಾರಾ ಮೂಕಿ. ಡೈಲಾಗ್ ಇಲ್ಲದೆ ಪ್ರೇಕ್ಷಕರನ್ನು ಮೋಡಿ ಮಾಡುವುದು ಸುಲಭದ ಮಾತಲ್ಲ. ತಾರಾ ಬೇಬಿ ಈ ಸಂಕಷ್ಟವನ್ನರಿತುಕೊಂಡೇ ಸೈನ್ ಲ್ಯಾಂಗ್ವೇಜ್ ಕೋರ್ಸ್ ಸೇರಿದಳಂತೆ. ಈಕೆಯ ಎಕ್ಸ್ ಪ್ರೆಶೆನ್ಸ್ ಇವಳ ನಟನೆಯನ್ನು ಎತ್ತಿಹಿಡಿಯುವುದೇ? ಎಂಬುದನ್ನು ಚಿತ್ರವೇ ಹೇಳಬೇಕಷ್ಟೆ. ಅಂದಹಾಗೆ ತಾರಾಳ ಧೈರ್ಯಕ್ಕೆ ಮೆಚ್ಚಲೇಬೇಕು, ಕೆರಿಯರ್ ಆರಂಭದಲ್ಲೇ ಇಂಥ ಸವಾಲಿನ ಪಾತ್ರ ನಿರ್ವಹಿಸುವುದು ಸುಲಭದ ಮಾತಲ್ಲ.
ಐಡೆಂಟಿಟಿ ಗಿಟ್ಟಿಸಿದ ಕೀರ್ತಿ
ಬಾಲಿವುಡ್‌ಗೆ ಬಂದು ತಮ್ಮ ಅದೃಷ್ಟ ಪರೀಕ್ಷಿಸಿ ನಿಧಾನವಾಗಿ ಇಲ್ಲಿ ಸೆಟಲ್ ಆಗುತ್ತಿರುವ ಕೆಲವೇ ನಾಯಕಿಯರಲ್ಲಿ ಕೀರ್ತಿ ಕುಲ್ಹಾಡಿ ಸಹ ಒಬ್ಬಳು. ಅವಳು ಒಟ್ಟಾರೆ ಉತ್ತಮ ಐಡೆಂಟಿಟಿ ಗಿಟ್ಟಿಸುವುದರ ಪರಿಣಾಮವಾಗಿ ಇವಳಿಗೆಂದೇ ಪಾತ್ರ ಸೃಷ್ಟಿಸಿ ಕಥೆ ಎಳೆಯಲಾಗುತ್ತದಂತೆ. `ಪಿಂಕ್, ಉರೀ, ಮಿಶನ್ ಮಂಗಲ್'ನಂಥ ಚಿತ್ರಗಳಿಂದ ಈಕೆ ಗೆದ್ದಿದ್ದಾಳೆ. ಏನೇ ಆದರೂ.... ಕೀರ್ತಿ ಇನ್ನೂ ಸಹಕಲಾವಿದೆ ಆಗಿಯೇ ತೃಪ್ತಿಪಡಬೇಕಿದೆ. ಆದರೆ ಇನ್ನು ಕೆಲವೇ ದಿನಗಳಲ್ಲಿ ತಾನು ಪೂರ್ಣ ಪ್ರಮಾಣದ ನಾಯಕಿ ಆಗುವೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾಳೆ ಕೀರ್ತಿ.