ವೆಸ್ಟರ್ನ್ ಥೀಂ ಪಾರ್ಟಿಗೆ ಹೋಗಬೇಕೆಂದು ನೀವು ಸೀಸನ್ ಪಾರ್ಟಿಗೆ ತಕ್ಕಂತೆ ಪರ್ಫೆಕ್ಟ್ ಡ್ರೆಸ್ ಕೊಂಡಿರಿ, ಸರಿ. ಆದರೆ ನೀವು ಅದಕ್ಕೆ ಸಪೋರ್ಟಿವ್ ಮೇಕಪ್ ಹೇರ್‌ಸ್ಟೈಲ್ ಕಡೆ ಗಮನ ಕೊಟ್ಟಿದ್ದೀರಾ ಇಲ್ಲವಾ? ನಿಮ್ಮ ಡ್ರೆಸ್ ಎಷ್ಟೇ ಬ್ಯೂಟಿಫುಲ್ ಆಗಿರಲಿ, ಎಲ್ಲರ ಮೊದಲ ನೋಟ ಮುಖದ ಮೇಲೆ ನಂತರ ಹೇರ್ ಸ್ಟೈಲ್‌ನತ್ತ ತಿರುಗುತ್ತದೆ. ಹೀಗಾಗಿ ನೀವು ಪಾರ್ಟಿಯಲ್ಲಿ ಹಿಟ್ ಆಗಬಯಸಿದರೆ, ಬ್ಯೂಟಿ ಎಕ್ಸ್ ಪರ್ಟ್ಸ್ ನೀಡಿರುವ ಈ ಸಲಹೆಗಳನ್ನು ಅಗತ್ಯ ಅನುಸರಿಸಿ.
ವೆಸ್ಟರ್ನ್ ಮೇಕಪ್
ನಿಮ್ಮ ಮುಖ ಚರ್ಮ ಎಷ್ಟೇ ಮೊಡವೆ ಹೊಂದಿರಲಿ, ಅನ್‌ಈವೆನ್ ಟೋನ್ ಆಗಿರಲಿ, ಅದರ ಮೇಲೂ ಸಹ ಪರ್ಫೆಕ್ಟ್ ಆಗಿ ಮೇಕಪ್ ಮಾಡಿದರೆ, ಸಾಕಷ್ಟು ಉತ್ತಮ ಗುಡ್ ಲುಕ್ಸ್ ಎದ್ದು ಕಾಣುತ್ತದೆ. ಇದಕ್ಕಾಗಿ ಎಲ್ಲಕ್ಕೂ ಮುಂಚೆ ಮುಖಕ್ಕೆ ಪ್ರೈಮರ್ ಹಚ್ಚಬೇಕು. ಇದುವೇ ಮೇಕಪ್ ಬೇಸ್. ಇದನ್ನು ಹಚ್ಚಿದ 4-5 ನಿಮಿಷಗಳ ನಂತರ ವೆಟ್ ಟಿಶ್ಯೂನಿಂದ ಚರ್ಮ ಸ್ವಚ್ಛಗೊಳಿಸಿ. ನಂತರ ಕನ್ಸೀಲಿಂಗ್ ಮಾಡಿ. ಏಕೆಂದರೆ ಇದರ ನೆರವಿನಿಂದ ಮುಖದಲ್ಲಿನ ಕಲೆ, ಗುರುತು, ಅನ್‌ಈವೆನ್ ಟೋನ್, ಮೊಡವೆಗಳಿಗೆ ಸಿಂಗಲ್ ಟೋನ್ ಆಗಿಸಲು ನೆರವು ಸಿಗುತ್ತವೆ.
ಕನ್ಸೀಲರ್‌ನ ಬಳಕೆ ನಂತರ ಯೆಲ್ಲೋ ಪಿಗ್ಮೆಂಟ್ ಬಳಸಿರಿ. ಪಿಂಪಲ್ಸ್ ಇರುವಲ್ಲಿ ಗ್ರೀನ್ ಕಲರ್ ಕನ್ಸೀಲರ್ ಅಪ್ಲೈ ಮಾಡಿ. ಸ್ಕಿನ್ ಪ್ರಾಬ್ಲಮ್ಯಾಟಿಕ್ ಅನಿಸಿದರೆ ಡರ್ಮಾಬೇಸ್ ಬಳಸಿರಿ. ಇದಾದ ಮೇಲೆ ಫಿಕ್ಸರ್ ಹಚ್ಚಿರಿ, ಆಗ ಮೇಕಪ್ ಚೆನ್ನಾಗಿ ಫಿಕ್ಸ್ ಆಗುತ್ತದೆ. ನಂತರ ಜಾ ಲೈನ್, ಮೂಗು, ಚೀಕ್ಸ್ ಬಳಿ ಕಂಟ್ರೋಲಿಂಗ್‌ಗೆಂದು ಮಿಗ್ರೊ ಕಲರ್ ಬಳಸಿರಿ. ಇದಾದ ಮೇಲೆ ಪೀಚ್ ಕಲರ್ ಬ್ಲಶರ್ ಬಳಸಬೇಕು. ಯಾವಾಗ ಕಂಟ್ರೋಲಿಂಗ್ ಮಾಡಿದರೂ ಡಾರ್ಕ್ ಕಲರ್‌ನ ಬ್ಲಶರ್ ಮೆರೂನ್ ಕಲರ್‌ನಲ್ಲಿ ಬದಲಾಗುತ್ತದೆ, ಹೀಗಾಗಿ ಕಂಟ್ರೋಲಿಂಗ್ ಜೊತೆ ಪೀಚ್ ಯಾ ಪಿಂಕ್ ಕಲರ್ ಮಾತ್ರ ಬಳಸಬೇಕು.
ಐ ಬ್ರೋಸ್ ಮೇಕಪ್
ಇನ್ನು ನ್ಯಾಚುರಲ್ ವಿಧಾನದಿಂದಲೇ ಡಿಫೈನ್ ಮಾಡಬೇಕು. ನಂತರ ಅವುಗಳ ಕೆಳಗೆ ಹೈಲೈಟಿಂಗ್ ಮಾಡಿ. ಬ್ರೌನ್ ಕಲರ್‌ನಿಂದ ಕ್ರೀಸ್ ಲೈನ್ ಎಳೆಯಿರಿ. ಐ ಬಾಲ್ ಏರಿಯಾ ಯಾ ಡ್ರೆಸ್‌ಗೆ ಹೊಂದುವಂಥ ಕಲರ್ ಮಾತ್ರವೇ ಬಳಸಬೇಕೆಂದು ನೆನಪಿಡಿ. ನಂತರ 1-2 ನಿಮಿಷ ಬಿಟ್ಟು ಜೆಲ್ ಲೈನರ್ ಬಳಸುವುದರ ಜೊತೆ ಜೊತೆಯಲ್ಲೇ ಕೃತಕ ಐ ಲ್ಯಾಶೆಸ್ ಬಳಸಿರಿ.
ಈ ಐಲ್ಯಾಶ್ ಬಳಸುವ ಮೊದಲು ಗ್ಲೂ ಹಚ್ಚಿ ಅದನ್ನು 40 ಸೆಕೆಂಡ್ಸ್ ಹಾಗೇ ಬಿಡಿ. ಹೀಗೆ ಮಾಡುವುದರಿಂದ ಲ್ಯಾಶೆಸ್ ಬಹಳ ಬೇಗ ಫಿಕ್ಸ್ ಆಗುತ್ತವೆ. ಹೀಗೆ ಲ್ಯಾಶೆಸ್ ಅಳವಡಿಸಿದ ಬಳಿಕ, ನ್ಯಾಚುರಲ್ ಆರ್ಟಿಫಿಶಿಯಲ್ ಲ್ಯಾಶೆಸ್‌ನ್ನು ಮಸ್ಕರಾ ಬ್ರಶ್‌ನಿಂದ ಫಿಕ್ಸ್ ಮಾಡಿ. ನಿಮ್ಮ ನ್ಯಾಚುರಲ್ ಲ್ಯಾಶೆಸ್ ಮೊದಲೇ ದಟ್ಟವಾಗಿದ್ದರೆ, ಆಗ ಅದನ್ನು ಮಸ್ಕರಾದಿಂದಲೇ ಗ್ರೂಮ್ ಮಾಡಬೇಕೆಂದು ಮರೆಯದಿರಿ.
ಮುಖ ಹೈಲೈಟ್ ಮಾಡಿ
ಮುಖದ ಯಾವ ಭಾಗವನ್ನು ಲಿಫ್ಟ್ ಮಾಡಬೇಕಿದೆಯೋ, ಅದಕ್ಕಾಗಿ ಅಗತ್ಯ ಹೈಲೈಟರ್ ಬಳಸಿರಿ. ಭಾರತೀಯ ಚರ್ಮದ ದೃಷ್ಟಿಯಿಂದ, ಲೈಟ್ ಗ್ಲೋ ಕಲರ್ ಎಲ್ಲಕ್ಕೂ ಉತ್ತಮ. ಇದನ್ನು ಸಾಮಾನ್ಯವಾಗಿ ಚೀಕ್‌ಬೋನ್ಸ್, ನೋಸ್ ಟಿಪ್, ಹಣೆ, ಗಲ್ಲದ ಏರಿಯಾದಲ್ಲೂ ಬಳಸಿರಿ.
ವೆಸ್ಟರ್ನ್ ಮೇಕಪ್ ದೃಷ್ಟಿಯಿಂದ ಕಂಗಳು ಹೆಚ್ಚು ಹಿಗ್ಗಿವೆ ಎನಿಸಿದರೆ, ಆಗ ಲಿಪ್ಸ್ ನ್ಯೂಡ್ ಇರಲಿ. ಅಂದ್ರೆ ತುಟಿಗಳಿಗೆ ಲೈಟ್ ಗ್ಲಾಸ್ ಹಚ್ಚಬೇಕು. ಕೊನೆಯಲ್ಲಿ ಮುಖಕ್ಕೆ ಮೇಕಪ್ ಫಿಕ್ಸರ್ ಅಳವಡಿಸಿ. ಇದು ಮೇಕಪ್‌ನ್ನು 15-20 ಗಂಟೆಗಳ ಕಾಲ ಕಾಪಾಡುತ್ತದೆ.
ಉತ್ತಮ ಮೇಕಪ್‌ಗಾಗಿ ಉತ್ತಮ ಸ್ಕಿನ್ ಇರಬೇಕು. ಉತ್ತಮ ಸ್ಕಿನ್‌ಗಾಗಿ ಉತ್ತಮ ಡಯೆಟ್, ಉತ್ತಮ ಲೈಫ್‌ಸ್ಟೈಲ್, ಸಕಾರಾತ್ಮಕ ಧೋರಣೆ, ಧಾರಾಳ ನೀರು ಕುಡಿಯುವಿಕೆ, ನ್ಯಾಚುರಲ್ ವಸ್ತುಗಳ ಬಳಕೆ ಅತ್ಯಗತ್ಯ.
ಹೇರ್‌ಸ್ಟೈಲ್
ಇದೀಗ ಹೇರ್‌ಸ್ಟೈಲ್ ಕಡೆ ದೃಷ್ಟಿಹರಿಸೋಣ. ನಾವು ವೆಸ್ಟರ್ನ್ ಮೇಕಪ್ ಮಾಡಿದಾಗ, ಕೂದಲನ್ನು ಕ್ರಿಂಪ್ ಮಾಡಬೇಕು. ಕ್ರಿಂಪ್ ಮಾಡುವುದರಿಂದ ಕೂದಲು ಮ್ಯಾನೇಜೆಬಲ್ ಎನಿಸುತ್ತದೆ. ಇಂಥ ಕೂದಲಿಗೆ ಯಾವ ಬಗೆಯ ಹೇರ್ ಸ್ಟೈಲಿಂಗ್ ಆದರೂ ಹೊಂದುತ್ತದೆ. ಉತ್ತಮ ಹೇರ್ ಸ್ಟೈಲಿಂಗ್‌ಗಾಗಿ ಕೂದಲು ಶುಭ್ರವಾಗಿ ಇರಬೇಕಾದುದು ಅನಿವಾರ್ಯ. ಕೂದಲಿಗೆ ಶ್ಯಾಂಪೂ ಜೊತೆ ಕಂಡೀಶನಿಂಗ್ ಸಹ ಮಾಡಿದ್ದರೆ, ಕೂದಲು ಸಿಕ್ಕು ಸಿಕ್ಕಾಗುವುದಿಲ್ಲ.
ಹೇರ್‌ಸ್ಟೈಲ್ ಮಾಡುವಾಗ ಮುಖ್ಯವಾಗಿ ಫೀಚರ್ಸ್‌ನ್ನು ಗಮನದಲ್ಲಿಡಬೇಕು. ಉದ್ದದ ಮುಖಕ್ಕೆ ಪಫ್ ಒಪ್ಪುವುದಿಲ್ಲ. ಕುತ್ತಿಗೆ ತೀರಾ ಚಿಕ್ಕದಾಗಿದ್ದರೆ ಲೋ ಬನ್ ಹೊಂದದು, ಹಾಗೇ ಹೆವಿ ಫೇಸ್‌ಗೆ ಕರ್ಲಿ ಕೂದಲು ಒಪ್ಪುವುದಿಲ್ಲ. ಇದೇ ತರಹ ತೆಳು ಮುಖಕ್ಕೆ ಸ್ಟ್ರೇಟ್ ಕೂದಲು ಒಪ್ಪುವುದಿಲ್ಲ. ಹೇರ್‌ಸ್ಟೈಲ್ ಮಾಡುವಾಗ ಸದಾ ವಯಸ್ಸು ಮತ್ತು ಪಾರ್ಟಿ ಸಂದರ್ಭ ನೆನಪಿಡಬೇಕು. ಇಲ್ಲಿನ ವೆಸ್ಟರ್ನ್ ಹೇರ್‌ಸ್ಟೈಲ್ ಗಮನಿಸಿ. ಇದಕ್ಕಾಗಿ ಮೊದಲು ಕಿವಿಯಿಂದ ಕಿವಿಗೆ ಕೂದಲನ್ನು ಪಾರ್ಟಿಂಗ್ ಮಾಡಿ. ನಂತರ ಮಧ್ಯದ ಕೂದಲಿಗೆ ಪೋನಿ ಮಾಡಿ. ಪೋನಿ ಮೇಲೆ ಡೋನಟ್ ಫಿಕ್ಸ್ ಮಾಡಿ. ನಂತರ ಉಳಿದ ಎಲ್ಲಾ ಕೂದಲಿಗೂ ವರ್ಕ್ಸ್ ಮಾಡಿ. ಇದಾದ ಮೇಲೆ ಕೂದಲನ್ನು ಸಣ್ಣಸಣ್ಣ ವಿಭಾಗ ಮಾಡಿ, ರೂಟ್ ಬಳಿ ಬ್ಯಾಕ್ ಕೋಂಬಿಂಗ್ ಮಾಡಿ ರೋಲ್ ಮಾಡಬೇಕು. ಕೂದಲನ್ನು ವಿವಿಧ ಶೇಪ್‌ನಲ್ಲಿ ಡಿಸೈನ್ ಮಾಡಿ, ಅಂದ್ರೆ ಮುಖಕ್ಕೆ ತಕ್ಕಂತೆ ಸೆಟ್ ಮಾಡಬೇಕು.
ಈ ಹೇರ್‌ಸ್ಟೈಲ್ ಈವ್ನಿಂಗ್ ಗೌನ್ ಹಾಗೂ ವೆಸ್ಟರ್ನ್ ಡ್ರೆಸೆಸ್‌ಗೆ ಬಹಳ ಚೆನ್ನಾಗಿ ಹೊಂದುತ್ತದೆ.
– ದಿವ್ಯಾ