ವಿವಾಹ ಅಥವಾ ರಿಸೆಪ್ಶನ್‌ ಪಾರ್ಟಿಗೆ ಈ ರೀತಿಯಲ್ಲಿ ಸಿದ್ಧರಾಗ

ವಿವಾಹ ಸಮಾರಂಭವಾಗಲಿ ಅಥವಾ ಯಾವುದೇ ವಿಶೇಷ ಕಾರ್ಯಕ್ರಮವಾಗಲಿ, ಸಿಂಗರಿಸಿಕೊಂಡು ಸುಂದರವಾಗಿ ಕಾಣಬೇಕೆಂದು ಪ್ರತಿಯೊಬ್ಬ ಮಹಿಳೆಯೂ ಬಯಸುತ್ತಾಳೆ. ವೆಡ್ಡಿಂಗ್‌ ಪಾರ್ಟಿಗಳಲ್ಲಿ ತಾನು ಇತರರಿಗಿಂತ ಚೆಂದವಾಗಿ ಕಾಣಬೇಕೆಂದು ತವಕಪಡುತ್ತಾಳೆ. ಇದಕ್ಕಾಗಿ ಏನು ಮಾಡಬೇಕೆಂದು ತಿಳಿಯೋಣ :

ಕಾಂತಿಯುತ ತ್ವಚೆ

ಚರ್ಮದ ಕಾಂತಿಗಾಗಿ ಮಿಲ್ಕ್ ಪೌಡರ್‌, ಬಾದಾಮಿ, ಅಕ್ಕಿಹಿಟ್ಟು ಮತ್ತು ಗುಲಾಬಿ ದಳಗಳನ್ನು ಬೆರೆಸಿ ಒಂದು ಬಟ್ಟೆಯಲ್ಲಿ ಕಟ್ಟಿ. ಸ್ನಾನ ಮಾಡುವಾಗ ಇದನ್ನು ಚರ್ಮದ ಮೇಲೆ ಉಜ್ಜಿ. ಇದರಿಂದ ಚರ್ಮ ಮೃದುವಾಗಿ ಆಕರ್ಷಕವಾಗಿ ಕಾಣುತ್ತದೆ. ಇದು ಚರ್ಮಕ್ಕೆ ನೈಸರ್ಗಿಕ ತಾಜಾತನವನ್ನು ನೀಡುತ್ತದೆ.

ಚರ್ಮವನ್ನು ಸ್ವಚ್ಛ ಹಾಗೂ ಕೋಮಲವಾಗಿರಿಸುವ ಒಂದು ಉತ್ತಮ ಉಪಾಯವೆಂದರೆ ಮುಲ್ತಾನಿ ಮಿಟ್ಟಿಯ ಬಳಕೆ. ಎಣ್ಣೆ ಚರ್ಮವಾದರೆ ಮುಲ್ತಾನಿ ಮಿಟ್ಟಿಗೆ ರೋಸ್‌ ವಾಟರ್‌ ಬೆರೆಸಿ ಪೇಸ್ಟ್ ತಯಾರಿಸಿ ಅದನ್ನು ಮುಖಕ್ಕೆ ಹಚ್ಚಿ. ಕಣ್ಣು ಮತ್ತು ತುಟಿಗಳಿಂದ ದೂರವಿರಲಿ. ಅದು ಒಣಗಿದ ನಂತರ ಸ್ವಚ್ಛಗೊಳಿಸಿ. ಮೊಡವೆ ಅಥವಾ ಗುಳ್ಳೆಗಳಿದ್ದರೆ ಇದಕ್ಕೆ ಗಂಧದ ಪುಡಿ, ರೋಸ್‌ ವಾಟರ್‌ ಮತ್ತು ಬೇವಿನ ಎಲೆಯ ಪುಡಿಯನ್ನು ಸೇರಿಸಿ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ  ಹಚ್ಚಿ, ಒಣಗಿಸಿದ ನಂತರ ತೊಳೆಯಿರಿ.

ಕೂದಲಿನ ರಕ್ಷಣೆ

1 ಚಮಚ ಬಾದಾಮಿ ಎಣ್ಣೆಗೆ, 1 ಚಮಚ ಅರ್ಕವನ್ನು ಸೇರಿಸಿ ಅದರಿಂದ ಕೂದಲನ್ನು ಮಸಾಜ್‌ ಮಾಡಿ. ನಂತರ ಕೂದಲನ್ನು ಬಿಸಿ ಟವೆಲ್‌ನಿಂದ ಸುತ್ತಿಟ್ಟು 1 ಗಂಟೆಯಾದ ಮೇಲೆ ತೊಳೆಯಿರಿ. ಇದರಿಂದ ಕೂದಲು ಮೃದು ಮತ್ತು ಕಾಂತಿಯುತಾಗುತ್ತದೆ.

ಶುಷ್ಕ ಮತ್ತು ಗುಂಗುರು ಕೂದಲಿಗೆ ಹೊಳಪು ನೀಡಲು ಕ್ರೀಮ್ ಯುಕ್ತವಾದ ಹೇರ್‌ ಕಂಡೀಶನರ್‌ಗೆ ಸ್ವಲ್ಪ ನೀರು ಸೇರಿಸಿ ಸ್ಪ್ರೇ ಬಾಟಲ್‌ನಲ್ಲಿ ತುಂಬಿಟ್ಟುಕೊಂಡು ಕೂದಲಿಗೆ ಹಚ್ಚಿ. ಅದು ಎಲ್ಲ ಕೂದಲಿಗೂ ಹರಡುವಂತೆ ಬಾಚಣಿಗೆಯಿಂದ ಬಾಚಿ.

ಮೇಕಪ್‌ ಫೌಂಡೇಶನ್‌ : ಸಮಾರಂಭಗಳಲ್ಲಿ ಪ್ರಕಾಶಮಾನವಾದ ಲೈಟಿಂಗ್‌ ವ್ಯವಸ್ಥೆ ಇರುತ್ತದೆ. ರಾತ್ರಿಯ ಸಮಯದಲ್ಲಿ ನಿಮ್ಮ ಮೇಕಪ್‌ಗೆ ಹೊಳೆಯುವ ಬಣ್ಣಗಳು ಅಗತ್ಯ. ಇಲ್ಲವಾದರೆ ನಿಮ್ಮ ಮುಖ ಮಂಕಾಗಿ ಕಾಣುತ್ತದೆ. ಮೊದಲು ಮುಖವನ್ನು ಚೆನ್ನಾಗಿ ತೊಳೆದು ಮಾಯಿಶ್ಚರೈಸರ್‌ ಹಚ್ಚಿ. ಎಣ್ಣೆ ಚರ್ಮಕ್ಕೆ ಹತ್ತಿಯಿಂದ ಆ್ಯಸ್ಟ್ರಿಂಜೆಂಟ್‌ ಲೋಶನ್‌ ಹಚ್ಚಿ ಸ್ವಲ್ಪ ಹೊತ್ತು ಬಿಡಿ.

ಬ್ಲಶರ್‌ : ಕೆನ್ನೆಗಳಿಗೆ ಬ್ಲಶರ್‌ ಹಚ್ಚಿ. ಇದನ್ನು ಮೇಲಿನಿಂದ ಕೆನ್ನೆಯ ಹೊರಭಾಗದತ್ತ ಹಚ್ಚಿ. ನಂತರ ತಿಳಿ ಬಣ್ಣದ ಹೈಲೈಟರ್‌ ಹಚ್ಚಿ ಚೆನ್ನಾಗಿ ಹೊಂದಿಕೊಳ್ಳುವಂತೆ ಮಾಡಿ. ಬ್ಲಶರ್‌ ಆರಿಸುವಾಗ ಲಿಪ್‌ಸ್ಟಿಕ್‌ ಬಣ್ಣದ ಸಮಾನ ಟೋನ್‌ ಇರುವಂತೆ ನೋಡಿಕೊಳ್ಳಿ.

ಐ ಮೇಕಪ್‌ : ಕಣ್ಣಿನ ಮೇಲ್ಭಾಗದ ಕಡೆಗೆ ತಿಳಿ ಕಂದು ಬಣ್ಣದ ಐ ಶ್ಯಾಡೋ ಹಚ್ಚಿ. ಗಾಢ ಬಣ್ಣದ ಐ ಶ್ಯಾಡೋವನ್ನು ಮೇಲು ತುದಿಯಿಂದ ಕಣ್ಣಿನ ಹೊರ ತುದಿಯವರೆಗೆ ಎಳೆಯಿರಿ. ಸ್ಪಂಜ್‌ ಟಿಪ್‌ ಅಪ್ಲಿಕೇಟರ್‌ನಿಂದ ಸ್ಮಡ್ಜ್ ಮಾಡಿ. ಐ ಪೆನ್ಸಿಲ್‌ ಅಥವಾ ಐ ಲೈನರ್‌ನಿಂದ ಕಣ್ಣಿನ ಔಟ್‌ಲೈನ್‌ ಮಾಡಿ. ಗೋಲ್ಡನ್‌, ಐವರಿ ಅಥವಾ ತಿಳಿ ಬಣ್ಣದ ಐ ಶ್ಯಾಡೋನಿಂದ ಐ ಬ್ರೋ ತಿದ್ದಿರಿ. ನಂತರ ಮಸ್ಕರಾ ಹಚ್ಚಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ