ಅಡುಗೆಮನೆಯಲ್ಲಿ ಕೆಲವು ಸಲಕರಣೆಗಳು ನಿರಂತರವಾಗಿ ಬಳಸುವುದರಿಂದ ಅವು ಹಳೆಯದಾಗಿ ಸವೆಯುತ್ತಾ ಹೋಗುತ್ತವೆ. ಜೊತೆಗೆ ಅವುಗಳಲ್ಲಿ ಒಂದಷ್ಟು ಕೊಳೆಯೂ ಜಮೆಗೊಳ್ಳುತ್ತದೆ. ಅವನ್ನು ಎಷ್ಟೇ ಸ್ವಚ್ಛಗೊಳಿಸಿದರೂ ಅವು ನೈರ್ಮಲ್ಯದಿಂದಿರುವುದಿಲ್ಲ. ಆದರೆ ಹೊಸ ಉಪಕರಣಗಳು ಹಾಗಲ್ಲ.

ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಮೇಲಿಂದ ಮೇಲೆ ಅಡುಗೆಮನೆಯ ಹೊಸ ಸಲಕರಣೆಗಳನ್ನು ಕೊಳ್ಳುತ್ತಾ ಇರಬೇಕಾ ಎಂದು ನೀವು ಕೇಳಬಹುದು. ಇಂದಿನ ಆನ್‌ಲೈನ್‌ ಶಾಪಿಂಗ್‌ ಯುಗದಲ್ಲಿ ಹೊಸ ಹೊಸ ಎಕ್ಸ್ ಚೇಂಜ್‌ ಆಫರ್ಸ್‌ಗಳು ಬರುತ್ತಲೇ ಇರುತ್ತವೆ. ಅಂತಹ ಆಫರ್‌ಗಳ ಮೇಲೆ ಕಣ್ಣಿಡಿ ಹಾಗೂ ಅವುಗಳ ಲಾಭ ಪಡೆದುಕೊಳ್ಳಿ.

ಕೆಲವೊಂದು ಸಲಕರಣೆಗಳು ಏನೇನೂ ಉಪಯೋಗವಿಲ್ಲ ಅನ್ನಿಸಿದರೆ ಅವುಗಳ ಜಾಗದಲ್ಲಿ ಬೇರೆ ಹೊಸ, ಬಹೂಪಯೋಗಿ ಉಪಕರಣ ಖರೀದಿಸಬಹುದು.

ಹ್ಯಾಂಡ್‌ಬ್ಲೆಂಡರ್‌ : ಇದೊಂದು ಬಹೂಪಯೋಗಿ ಉಪಕರಣ. ಮೊಸರು ಕಡೆದು ಬೆಣ್ಣೆ ತೆಗೆಯಬಹುದು. ಸೂಪ್‌, ಲಸ್ಸಿ ಮುಂತಾದವುಗಳನ್ನು ತಯಾರಿಸಲು ಇದರ ನೆರವು ಪಡೆಯಬಹುದು. ಇದು ನಿಮ್ಮ ಅಡುಗೆಯ ಸ್ಟೈಲ್‌ನ್ನು ಸುಲಭಗೊಳಿಸುತ್ತದೆ.

ಮೈಕ್ರೊವೇವ್‌ : ನಿಮಗೆ ನಿಮ್ಮ ಕುಟುಂಬದ ಆರೋಗ್ಯದ ಕಾಳಜಿ ಇದ್ದರೆ ಮೈಕ್ರೊವೇವ್‌ ಮನೆಗೆ ತನ್ನಿ. ಇದರಿಂದ ಆಹಾರವನ್ನು ಬೇಗ ತಯಾರಿಸಬಹುದು. ಅಷ್ಟೇ ಅಲ್ಲ, ಪೌಷ್ಟಿಕ ಕೂಡ ಆಗುತ್ತದೆ. ಇದರಲ್ಲಿ ಹಲವು ಬಗೆಯ ರುಚಿಕರ ಆಹಾರಗಳನ್ನು ಸಿದ್ಧಪಡಿಸಬಹುದು.

ಪರಿಸರಸ್ನೇಹಿ ಇಂಡಕ್ಷನ್‌ ಒಲೆ : ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ಜಾಗದ ಕೊರತೆಯಿರುವವರಿಗೆ ಇದೊಂದು ಒಳ್ಳೆಯ ಉಪಾಯ. ಅಡುಗೆಮನೆಯ ಹೊರತಾಗಿ ಇದನ್ನು ಎಲ್ಲಿ ಬೇಕಾದರೂ ಬಳಸಬಹುದು.

ನೈಫ್‌ ಸೆಟ್‌ : ಹಣ್ಣುಗಳು ಮತ್ತು ತರಕಾರಿಗಳ ಪೋಷಕಾಂಶ ಮತ್ತು ಗುಣಮಟ್ಟ ಕಾಯ್ದುಕೊಂಡು ಹೋಗಲು ನಿಮ್ಮ ಬಳಿ ಉತ್ತಮ ಗುಣಮಟ್ಟದ ನೈಫ್‌ ಸೆಟ್‌ ಇರಬೇಕು. ಸಿಪ್ಪೆ ಹೆರೆಯುವ ಚಾಕುವಿನಿಂದ ಹಿಡಿದು ಬೋನಿಂಗ್‌ ನೈಫ್‌ ತನಕ ಎಲ್ಲ ಬಗೆಯ ಕಟಿಂಗ್‌ ನೈಫ್‌ಗಳಿವೆ.

ಕಟಿಂಗ್‌ ಬೋರ್ಡ್‌ : ತರಕಾರಿಗಳನ್ನು ಕತ್ತರಿಸಲು ನೀವು ವುಡನ್‌ ಚಾಪಿಂಗ್‌ ಬೋರ್ಡ್‌ ತೆಗೆದುಕೊಳ್ಳಬಹುದು. ಅದರ ಮೇಲೆ ತರಕಾರಿ ಕತ್ತರಿಸುವುದು ಬಹಳ ಸುಲಭ ಎನಿಸುತ್ತದೆ.

ಟೆಫ್ಲಾನ್‌ ಶೀಟ್‌ : ಟೆಫ್ಲಾನ್‌ ಶೀಟ್‌ ಇರುವ ಪಾತ್ರೆಗಳು ಜೀವನದ ವಿಭಿನ್ನ ಅಂಗಗಳೇ ಆಗಿವೆ. ನಾನ್‌ಸ್ಟಿಕ್‌ ಪ್ಯಾನ್‌ ಟೆಫ್ಲಾನ್‌ ಕೋಟಿಂಗ್‌ ಇರುವ ಇವು ಬೇಗ ಅಡುಗೆ ಮಾಡಲು, ಸ್ವಚ್ಛಗೊಳಿಸಲು ಸುಲಭವಾಗಿವೆ. ನೋಡಲು ಕೂಡ ಇವು ಅತ್ಯಂತ ಆಕರ್ಷಕ ಎನಿಸುತ್ತವೆ.

ಗ್ರಿಲ್ಲಿಂಗ್‌ ಪ್ಯಾನ್‌ : ನೀವು ಯೂರೋ ಕುಕ್‌ ಗ್ರಿಲ್ಲಿಂಗ್‌ ಪ್ಯಾನ್‌ ಜೊತೆಗೆ ಗ್ರಿಲ್ಡ್ ಫುಡ್‌ನ ಮಜ ಪಡೆಯಬಹುದು. ಇದೊಂದು ಅತ್ಯಂತ ಒಳ್ಳೆಯ ಕುಕ್‌ವೇರ್‌ ಆಗಿದ್ದು, ಇದರಲ್ಲಿ ಟೆಫ್ಲಾನ್‌ ಡ್ರಾಫ್ಟ್ ಕೋಟಿಂಗ್‌ ಮಾಡಲಾಗಿರುತ್ತದೆ. ಸಾಮಾನ್ಯ ಕುಕ್‌ವೇರ್‌ಗೆ ಹೋಲಿಸಿದರೆ ಇದರಲ್ಲಿ ಕಡಿಮೆ ಎಣ್ಣೆ, ತುಪ್ಪದ ಜೊತೆ ಅಡುಗೆ ಮಾಡಬಹುದು.

ಕಟ್ಲೆರಿ ಸೆಟ್‌ : ಈಗ ಮಾರುಕಟ್ಟೆಯಲ್ಲಿ ಹಲವು ಬಗೆಯ ಕಟ್ಲೆರಿ ಸೆಟ್‌ಗಳು ದೊರೆಯುತ್ತವೆ. ನಿಮಗೆ ಇಷ್ಟವಾಗುವಂಥವನ್ನು ಖರೀದಿಸಬಹುದು.

ಫುಡ್‌ ಪ್ರೊಸೆಸರ್‌ : ಇವು ಅಡುಗೆಮನೆಯ ಪ್ರಮುಖ ಭಾಗವಾಗಿದ್ದು, ಅಡುಗೆ ಪ್ರಕ್ರಿಯೆನ್ನು ಇನ್ನಷ್ಟು ಉತ್ತಮಗೊಳಿಸಲು ನೆರವಾಗುತ್ತದೆ. ಇವು ತರಕಾರಿ ಕತ್ತರಿಸುವುದರಿಂದ ಹಿಡಿದು ಸಲಾಡ್‌ ತಯಾರಿಸುವುದು, ಹಿಟ್ಟು ನಾದುವುದು, ಚಟ್ನಿ ತಯಾರಿಸಲು ಸಹಾಯ ಮಾಡುತ್ತದೆ.

ಫ್ಲಾಟ್‌ ಬಾಟಮ್ ಹಾಬ್ಸ್ (ಒಲೆ) : ಮಾರ್ಕೆಟ್‌ನಲ್ಲಿ ಗ್ಯಾಸ್‌ ಒಲೆಯ ಬರ್ನರ್ಸ್ ನಲ್ಲೂ ಸಾಕಷ್ಟು ವೈವಿಧ್ಯತೆ ನೋಡಲು ಸಿಗುತ್ತದೆ. ಈಗ ಎಂತಹ ಬರ್ನರ್ಸ್ ಬಂದಿವೆಯಂದರೆ, ಅವು ಕಪ್ಪಗಾಗುವುದಿಲ್ಲ.

ಇಂದಿನ ಧಾವಂತದ ಜೀವನಶೈಲಿಯಲ್ಲಿ ಪ್ರತಿಯೊಂದು ಕೆಲಸ ಬೇಗ ಬೇಗ ಆಗಬೇಕಿರುತ್ತದೆ. ಅಂತಹ ಸ್ಥಿತಿಯಲ್ಲಿ ಈ ಆಧುನಿಕ ಅಡುಗೆಮನೆ ಉಪಕರಣಗಳು ನಿಮಗೆ ತುಂಬಾ ಉಪಯುಕ್ತ ಎನಿಸುತ್ತವೆ.

– ಚಂಚಲಾ ವಿ.ಪಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ