ಬಿಳಿಯ ಬಣ್ಣ, ನಯವಾದ ಚರ್ಮದ ಬಯಕೆ ಪ್ರತಿಯೊಬ್ಬ ಮಹಿಳೆಗೂ ಇರುತ್ತದೆ. ಬ್ಲೀಚಿಂಗ್ ಮಾಡಿಸಿಕೊಳ್ಳುವುದರ ಮೂಲಕ ಇದನ್ನು ಪಡೆಯಬಹುದು. ಬ್ಲೀಚಿಂಗ್‌ನಿಂದ ಫೇಶಿಯಲ್ ಹೇರ್‌ನ ಬಣ್ಣ ತಿಳಿಯಾಗುವುದರಿಂದ ಅದು ಎದ್ದು ಕಾಣುವುದಿಲ್ಲ ಹಾಗೂ ಚರ್ಮ ಬೆಳ್ಳಗೆ ಮತ್ತು ಸುಂದರವಾಗಿ ತೋರುತ್ತದೆ. ಈಗ ಅಂಗಡಿಗಳಲ್ಲಿ ಅನೇಕ ಬಗೆಯ ಬ್ಲೀಚ್ ದೊರೆಯುತ್ತದೆ. ಬ್ಲೀಚ್‌ನ್ನು ಬಳಸುವ ಮೊದಲು ಕೆಲವು ಮುಖ್ಯ ವಿಷಯಗಳನ್ನು ತಿಳಿಯಿರಿ :
ಪ್ರೋಟೀನ್ ಹೈಡ್ರಾ ಬ್ಲೀಚ್
ಇದು ಫ್ರೆಕ್ಸ್, ಏಜಿಂಗ್, ಡಾರ್ಕ್ ಸ್ಪಾಟ್ಸ್, ಪಿಗ್ಮೆಂಟೇಶನ್, ಅನ್‌ಈವೆನ್ ಸ್ಕಿನ್ ಟೋನ್‌ನಂತಹ ಸಮಸ್ಯೆಗಳಿಗೆ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತದೆ. ಫೇಶಿಯಲ್ ಹೇರ್‌ನ್ನೇ ಲೈಟ್ ಟೋನ್ ಮಾಡುವುದಲ್ಲದೆ, ಪಿಗ್ಮೆಂಟೇಶನ್‌ನ ಸಮಸ್ಯೆಯನ್ನೂ ದೂರಗೊಳಿಸುತ್ತದೆ. ಇದು ಚರ್ಮವನ್ನು ಡೀಪ್ ಕ್ಲೀನ್ ಮಾಡುವುದರ ಜೊತೆಗೆ ಚರ್ಮದ ರಂಧ್ರಗಳನ್ನೂ ರಿಫೈನ್‌ಮಾಡುತ್ತದೆ. ಸನ್ ಟ್ಯಾನ್‌ನ್ನು ನಿವಾರಿಸಲು ಇದು ಉತ್ತಮ ವಿಧಾನ. ಇದು ಎಲ್ಲ ಬಗೆಯ ಸ್ಕಿನ್ ಟೋನ್‌ಗೆ ಅನುಸಾರವಾಗಿ ಕೆಲಸ ಮಾಡುತ್ತದೆ. ಸೆನ್ಸಿಟಿವ್ ಸ್ಕಿನ್‌ಗೆ ಸಹ ಇದರಿಂದ ಕೆಂಪು ಅಥವಾ ಉರಿ ಉಂಟಾಗುವುದಿಲ್ಲ. ಪ್ರೋಟೀನ್ ಹೈಡ್ರಾ ಬ್ಲೀಚ್‌ನ್ನು ಒಳ್ಳೆಯ ಸೆಲೂನ್‌ನಲ್ಲಿ ಅನುಭವಿಗಳ ಕೈಯಿಂದಲೇ ಮಾಡಿಸಿಕೊಳ್ಳಿ.
ಎಕ್ಸ್ ಟ್ರಾ ಆಯಿಲ್ ಕಂಟ್ರೋಲ್
ವಿಶೇಷವಾಗಿ ಎಕ್ಸ್ ಟ್ರಾ ಆಯ್ಲಿ ಸ್ಕಿನ್‌ಗೆ ಈ ಬ್ಲೀಚ್ ಅತ್ಯಂತ ಉಪಯುಕ್ತವಾಗಿರುತ್ತದೆ. ಇದರಿಂದ ಚರ್ಮದಲ್ಲಿ ಮೆಲನಿನ್‌ಪಿಗ್ಮೆಂಟ್ಸ್ ಕಡಿಮೆಯಾಗುತ್ತವೆ. ಅವು ಕಡಿಮೆಯಾದಷ್ಟೂ ಚರ್ಮ ಅಷ್ಟೇ ಫೇರ್ ಆಗಿ ಗೋಚರಿಸುತ್ತದೆ. ಈ ಬ್ಲೀಚ್ ಚರ್ಮದ ಎಕ್ಸ್ ಟ್ರಾ ಆಯಿಲ್‌ನ್ನು ಮಿತಗೊಳಿಸುವುದಲ್ಲದೆ, ಮೃತಕೋಶಗಳನ್ನೂ ದೂರ ಮಾಡುತ್ತದೆ.
ಹೈಡ್ರೇಟಿಂಗ್ ಬ್ಲೀಚ್
ಶುಷ್ಕ ಚರ್ಮಕ್ಕೆ ಇದು ಅತ್ಯುತ್ತಮವಾದ ಬ್ಲೀಚ್. ಇದು ಚರ್ಮದಾಳಕ್ಕೆ ಇಳಿದು ಮಾಯಿಶ್ಚರ್ ಒದಗಿಸುತ್ತದೆ. ಆದ್ದರಿಂದ ಚರ್ಮಕ್ಕೆ ಫೇರ್‌ನೆಸ್ ದೊರೆತು ಮೃದುವಾಗಿಯೂ, ಆರೋಗ್ಯಕರವಾಗಿಯೂ ಇರುತ್ತದೆ.
ಬ್ಲೀಚ್‌ನ ವಿವಿಧ ಬಗೆಗಳು
ಪೌಡರ್ ಬ್ಲೀಚ್ : ಇದು ಅಮೋನಿಯ, ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಬ್ಲೀಚ್ ಪೌಡರ್‌ನ ಮಿಶ್ರಣವಾಗಿದೆ. ಡಾರ್ಕ್ ಸ್ಪಾಟ್ಸ್ ಮತ್ತು ಸುಕ್ಕುಗಳ ನಿವಾರಣೆಗೆ ಇದು ಉತ್ತಮ ಸಾಧನವಾಗಿದೆ. ಅನುಭವಿಗಳಿಂದಲೇ ಇದನ್ನು ಮಾಡಿಸಿಕೊಳ್ಳಿ. ಏಕೆಂದರೆ ಸರಿಯಾದ ಪ್ರಮಾಣವಿಲ್ಲದಿದ್ದರೆ ಇದರಿಂದ ಚರ್ಮಕ್ಕೆ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ.
ಕ್ರೀಮ್ ಬ್ಲೀಚ್ : ಅತಿ ಹೆಚ್ಚು ಬಳಕೆಯಲ್ಲಿರುವ ಬ್ಲೀಚ್ ಇದಾಗಿದ್ದು, ಉಪಯೋಗಿಸಲೂ ಸುಲಭವಾಗಿರುತ್ತದೆ. ಇದು ಕ್ರೀಮ್ ಬ್ಲೀಚ್‌ಮತ್ತು ಆ್ಯಕ್ಟಿವೇಟರ್‌ನ ಮಿಶ್ರಣವಾಗಿದೆ.
ವಿಧಾನ : ಈ ಮಿಶ್ರಣವನ್ನು ತಯಾರಿಸಲು 4 ಭಾಗ ಕ್ರೀಮ್ ಬ್ಲೀಚ್‌ಗೆ 1 ಭಾಗ ಆ್ಯಕ್ಟಿವೇಟರ್‌ನ್ನು ಹಾಕಿ ಗಂಟಿಲ್ಲದಂತೆ ಸ್ಪಾಟುಲಾದಿಂದ ಚೆನ್ನಾಗಿ ಮಿಶ್ರ ಮಾಡಿ. ಆ್ಯಕ್ಟಿವೇಟರ್‌ನ ಪ್ರಮಾಣ ಹೆಚ್ಚಾದರೆ, ಅತಿಯಾದ ಪಿಗ್ಮೆಂಟೇಶನ್
ಸಮಸ್ಯೆ ಮತ್ತು ಸ್ಕಿನ್ ಬರ್ನ್ ಉಂಟಾಗಬಹುದು.
ಪ್ಯಾಚ್ ಟೆಸ್ಟ್ : ಮೊದಲ ಬಾರಿ ಬ್ಲೀಚ್ ಬಳಸುತ್ತಿದ್ದರೆ, ಬ್ಲೀಚ್ ಮಾಡುವ ಮೊದಲು ಪ್ಯಾಚ್ ಟೆಸ್ಟ್ ಮಾಡಬೇಕು. ಇದಕ್ಕಾಗಿ ಕೊಂಚ ಮಿಶ್ರಣವನ್ನು ತೋಳಿನ ಮೇಲೆ ಹಚ್ಚಿಕೊಳ್ಳಿ. ಚರ್ಮ ಕೆಂಪಾದರೆ ಅಥವಾ ಉರಿಯಾದರೆ ಅದನ್ನು ಬಳಸಬೇಡಿ.
ಬ್ಲೀಚ್ ಮಾಡುವ ಮೊದಲು
ಬ್ಲೀಚ್ ಮಾಡುವ ಮೊದಲು ಸೌಮ್ಯವಾದ ಫೇಸ್ ವಾಶ್ ಬಳಸಿ ತಣ್ಣೀರಿನಿಂದ ಮುಖ ತೊಳೆಯಿರಿ. ಬ್ಲೀಚ್‌ಗೆ ಮೊದಲು ಮತ್ತು ನಂತರ ಬಿಸಿನೀರು ಮತ್ತು ಸ್ಕ್ರಬ್ ಬಳಸಬಾರದೆಂಬುದನ್ನು ನೆನಪಿಡಿ. ನಂತರ ಕಣ್ಣು, ತುಟಿ ಮತ್ತು ಐ ಬ್ರೋಸ್ ಬಿಟ್ಟು ಪೇಸ್ಟ್ ನ್ನು ಮುಖಕ್ಕೆ ಮೇಲಿನಿಂದ ಕೆಳಗಿನವರೆಗೆ ಹಚ್ಚಿರಿ. 10-15 ನಿಮಿಷಗಳ ನಂತರ ಹತ್ತಿಯಿಂದ ಸ್ವಚ್ಛಗೊಳಿಸಿ. ನಂತರ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿರಿ.
ಚರ್ಮಕ್ಕೆ ತಕ್ಕಂತೆ ಬ್ಲೀಚ್
ಸೂಕ್ಷ್ಮ ಚರ್ಮ : ಇಂತಹ ಚರ್ಮಕ್ಕೆ ಪ್ರೋಟೀನ್ ಹೈಡ್ರಾ, ಹರ್ಬಲ್, ಹೈಡ್ರೇಟಿಂಗ್ ಮತ್ತು ರೇಡಿಯೆಂಟ್ ಗ್ಲೋ ಬಳಸಿ.
ತೈಲಾಂಶ ಚರ್ಮ : ಸಾಮಾನ್ಯವಾಗಿ ಈ ಚರ್ಮದಲ್ಲಿ ಮೊಡವೆ, ಗುಳ್ಳೆಗಳ ತೊಂದರೆ ಇರುತ್ತದೆ. ಇಂತಹ ಚರ್ಮಕ್ಕೆ ಎಕ್ಸ್ ಟ್ರಾ ಆಯಿಲ್ ಕಂಟ್ರೋಲ್, ಅಮೋನಿಯಾ ಫ್ರೀ ಬ್ಲೀಚ್, ಡೀ ಟ್ಯಾನ್, ಫ್ರೂಟ್ ಬ್ಲೀಚ್ ಉತ್ತಮವಾಗಿರುತ್ತದೆ.
ಒಣ ಚರ್ಮ : ಈ ರೀತಿಯ ಚರ್ಮಕ್ಕೆ ಆಯಿಲ್ ಮತ್ತು ಮಾಯಿಶ್ಚರ್ ಬೇಸ್ಡ್ ಬ್ಲೀಚ್ ಬಳಸಿ. ಉದಾ : ಹೈಡ್ರೇಟಿಂಗ್ ಬ್ಲೀಚ್, ವೈಟ್‌ನಿಂಗ್ ಬ್ಲೀಚ್ ಇತ್ಯಾದಿ…..
ಮೆಚೂರ್‌ಸ್ಕಿನ್: ಇಂತಹ ಚರ್ಮಕ್ಕೆ ಏಜಿಂಗ್ ಆಕ್ಸಿಜನ್ ಬ್ಲೀಚ್ ಉಪಯೋಗಕರ. ಆದರೆ ಚರ್ಮದ ಆರ್ದ್ರತೆಯನ್ನು ಉಳಿಸಿಕೊಳ್ಳಲು ಹೈಡ್ರೇಟಿಂಗ್ ಬ್ಲೀಚ್ ಬಳಸಿ. ಅಲ್ಲದೆ ಚರ್ಮದ ಮೆಲನಿನ್ ಮಟ್ಟವನ್ನು ಕಡಿಮೆ ಮಾಡಲು ಪ್ರೋಟೀನ್
ಹೈಡ್ರಾಕ್ಸಿಯನ್ನು ಬಳಸಿ.
ಬ್ಲೀಚ್ ಮಾಡುವಾಗ ಗಮನಿಸಿ
ಥ್ರೆಡಿಂಗ್, ವ್ಯಾಕ್ಸಿಂಗ್, ಸ್ಕ್ರಬಿಂಗ್ ಮತ್ತು ಸ್ಟೀಮ್ ನಂತರ ಬ್ಲೀಚ್ ಮಾಡಬೇಡಿ.
ಒಣ ಮತ್ತು ಸೂಕ್ಷ್ಮ ಚರ್ಮಕ್ಕೆ ಬ್ಲೀಚಿಂಗ್‌ಗೆ ಮೊದಲು ಪ್ರೀ ಬ್ಲೀಚ್ ಲೋಶನ್ ಅಥವಾ ಲೈಟ್ ಮಾಯಿಶ್ಚರೈಸರ್ ಬಳಸಿ.
ಬ್ಲೀಚ್ ಮಾಡುವಾಗ ಉರಿ ಉಂಟಾದರೆ ಕೂಡಲೇ ತಣ್ಣೀರಿನಿಂದ ಮುಖ ತೊಳೆಯಿರಿ.
ಪ್ಯಾಚ್ ಟೆಸ್ಟ್ ಮಾಡಿದ ನಂತರವೇ ಬ್ಲೀಚ್ ಬಳಸಿ.
ಒಡೆದ ಅಥವಾ ಗಾಯವಿರುವ ಚರ್ಮಕ್ಕೆ ಬ್ಲೀಚ್ ಬಳಸಬೇಡಿ
ಬ್ಲೀಚ್ ಮಾಡಿದ ಮೇಲೆ 15-20 ದಿನಗಳವರಗೆ ಮತ್ತೆ ಮಾಡಬೇಡಿ.
15 ನಿಮಿಷಗಳಿಗಿಂತ ಹೆಚ್ಚಾಗಿ ಬ್ಲೀಚ್‌ನ್ನು ಹಚ್ಚಿ ಬಿಡಬೇಡಿ.
ಬ್ಲೀಚ್ ಕ್ರೀಮಿಗೆ ಆ್ಯಕ್ಟಿವೇಟರ್ ಮಿಶ್ರ ಮಾಡುವಾಗ ಮೆಟಲ್ ಬೌಲ್ ಮತ್ತು ಮೆಟಲ್ ಸ್ಪೂನ್ ಬಳಸಬೇಡಿ.
ಮುಖದ ಬ್ಲೀಚ್‌ನ್ನು ಶರೀರಕ್ಕೆ ಮತ್ತು ಶರೀರದ ಬ್ಲೀಚ್‌ನ್ನು ಮುಖಕ್ಕೆ ಹಚ್ಚಬೇಡಿ.
ಬ್ಲೀಚ್ ಮಾಡುವಾಗ ಟಿ.ವಿ ನೋಡುವುದು ಅಥವಾ ಪುಸ್ತಕ ಓದುವುದನ್ನು ಮಾಡಬೇಡಿ. ಏಕೆಂದರೆ ಇದರಿಂದ ಕಣ್ಣುಗಳಿಗೆ ಹಾನಿಯಾಗಬಹುದು.
ಬ್ಲೀಚ್ ಮಾಡಿದ 6 ಘಂಟೆಗಳವರೆಗೆ ಸಾಬೂನು ಅಥವಾ ಫೇಸ್‌ವಾಶ್ ಬಳಸಬೇಡಿ.
ಬಿಸಿಲಿನಿಂದ ಬಂದ ಕೂಡಲೇ ಬ್ಲೀಚ್ ಮಾಡಿಸಬೇಡಿ. ಶರೀರದ ತಾಪಮಾನ ಸಾಮಾನ್ಯವಾದ ನಂತರ ಮಾಡಿಸಿ.
ಬಾಡಿ ಹೀಟ್ ಹೆಚ್ಚಾಗಿರುವವರು ಚರ್ಮ ಪರೀಕ್ಷೆ ಮಾಡಿಸಿಕೊಂಡು ಚರ್ಮಕ್ಕೆ ತಕ್ಕಂತೆ ಬ್ಲೀಚ್ ಮಾಡಿಸಿಕೊಳ್ಳಬೇಕು.
ಬ್ಲೀಚ್ ಮಾಡಿಸಿದ ಮೇಲೆ ಸನ್‌ಗಾರ್ಡ್ ಹಚ್ಚಿಯೇ ಬಿಸಿಲಿಗೆ ಹೋಗಿ.
ಫೇಶಿಯಲ್ ಮಾಡಿದ ನಂತರ ಬ್ಲೀಚ್ ಬಳಸಬೇಡಿ. ಅದರಿಂದ ಹಾನಿ ಉಂಟಾಗುವ ಸಂಭವವಿರುತ್ತದೆ.
ಬ್ಲೀಚ್‌ನಿಂದಾಗುವ ಲಾಭಗಳು
ಬ್ಲೀಚ್‌ನಿಂದ ಫೇಶಿಯಲ್ ಹೇರ್ ಮತ್ತು ಸ್ಕಿನ್ ಟೋನ್ ಚೆನ್ನಾಗಿ ಹೊಂದಿಕೊಂಡು ಈವೆನ್ ಫೇರ್ ಗ್ಲೋ ಒದಗಿಸುತ್ತದೆ.
10-15 ನಿಮಿಷಗಳಲ್ಲಿಯೇ ಚರ್ಮ ಫೇರ್ ಮತ್ತು ರೇಡಿಯೆಂಟ್ ಲುಕ್ ಪಡೆಯುತ್ತದೆ.
ಬ್ಲೀಚ್ ಚರ್ಮದ ಮೃತ ಪದರವನ್ನು ನಿವಾರಿಸಿ ಚರ್ಮಕ್ಕೆ ಬ್ರೈಟ್ ಲುಕ್ ನೀಡುತ್ತದೆ.
ಪೋಸ್ಟ್ ಬ್ಲೀಚ್ ಪ್ಯಾಕ್ ಚರ್ಮವನ್ನು ಹೈಡ್ರೇಟ್ ಮಾಡಿ ಲೈಟ್‌ನಿಂಗ್ ಬೆನಿಫಿಟ್ ನೀಡುತ್ತದೆ.
ಇದು ಸನ್‌ಟ್ಯಾನ್‌ನ್ನು ಹೋಗಲಾಡಿಸಿ ಮೆಲನಿನ್‌ನ್ನು ತಿಳಿಯಾಗಿಸಿ ಸ್ಕಿನ್‌ಟೋನ್‌ನ್ನು ವೈಟರ್ ಮತ್ತು ಫೇರ್ ಆಗಿಸುತ್ತದೆ.
ಬ್ಲೀಚ್‌ನಿಂದಾಗುವ ಹಾನಿಗಳು
ಬ್ಲೀಚ್‌ನಲ್ಲಿರುವ ಮರ್ಕ್ಯುರಿಯು ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ.
ಬ್ಲೀಚ್‌ನ ನಂತರ ಚರ್ಮ ಕೆಂಪಾದರೆ ಬಿಸಿಲು ಮತ್ತು ಬೆಂಕಿಯಿಂದ ದೂರಿವಿರಿ.
ಶ್ಯಾಮಲ ವರ್ಣದವರಿಗೆ ಮಾತ್ರವಲ್ಲದೆ, ಗೌರವರ್ಣದವರಿಗೂ ಬ್ಲೀಚಿಂಗ್ ಬೇಕಾಗುತ್ತದೆ.
ಬ್ಲೀಚ್‌ನ ನಂತರ ಚರ್ಮದಲ್ಲಿ ಉರಿ, ಊತ, ಕೆಂಪು ಕಲೆ ಮುಂತಾದವು ಕಂಡುಬಂದರೆ ಬ್ಲೀಚ್ ರಿಯಾಕ್ಟ್ ಮಾಡಿದೆ ಎಂದು ತಿಳಿಯಬೇಕು.
ನೀವು ಕೆಮಿಕಲ್ ಪೀಲಿಂಗ್ ಮಾಡಿಸಿದ್ದರೆ ಮುಂದಿನ 4-6 ತಿಂಗಳವರೆಗೆ ಬ್ಲೀಚ್ ಮಾಡಿಸದಿರಿ. ಸೌಂದರ್ಯ ತಜ್ಞರ ಸಲಹೆ ಪಡೆದೇ ಬ್ಲೀಚಿಂಗ್ ಮಾಡಿಸಿ.
ಬ್ಲೀಚ್‌ನ್ನು ಕಣ್ಣು ಮತ್ತು ಹುಬ್ಬುಗಳ ಹತ್ತಿರ ಹಚ್ಚಬೇಡಿ. ಇಲ್ಲದಿದ್ದರೆ ಅದರಿಂದ ತೊಂದರೆಯಾಗುತ್ತದೆ.
ಬ್ಲೀಚ್‌ನ್ನು ಅನುಭವಸ್ಥರಿಂದಲೇ ಮಾಡಿಸಿ ಮತ್ತು ಬ್ರಾಂಡೆಡ್ ಪ್ರಾಡಕ್ಟ್ ಗಳನ್ನೇ ಬಳಸಿ.
– ಪ್ರೀತಿ ಜೈನ್