ಇಂದು ಹೆಣ್ಣು ಮನೆಯ ಹೊಸಿಲು ದಾಟಿ ಅತಿ ಎತ್ತರದ ಸ್ಥಾನ ತಲುಪಿದ್ದಾಳೆ. ಮಿಸ್‌ ವರ್ಲ್ಡ್ ಕಿರೀಟ ಗಿಟ್ಟಿಸುವುದಿರಲಿ ಅಥವಾ ಮಿಸ್‌ ಯೂನಿವರ್ಸ್‌, ಕಾರ್ಪೋರೇಟ್‌ ಲೋಕದಲ್ಲಿ  ಹೆಸರು ಗಳಿಸುವುದಿರಲಿ ಅಥವಾ ಪುರುಷಪ್ರಧಾನ ಕ್ಷೇತ್ರದಲ್ಲಿ ಉತ್ಕೃಷ್ಟತೆ ಸಾಬೀತು ಪಡಿಸುವುದಿರಲಿ, ಹೆಣ್ಣು ಸಾಮಾಜಿಕ ಬೇಡಿಗಳನ್ನು ಕಿತ್ತೊಗೆದು ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಿದ್ದಾಳೆ. ಅವಳ ವಿಚಾರಧಾರೆಯೂ ಬೋಲ್ಡ್ ಆಯಿತು, ಇದರ ಜೊತೆ ಅವಳ ಲುಕ್ಸ್ ಮತ್ತು ವ್ಯಕ್ತಿತ್ವದಲ್ಲೂ ಹೊಳಪು ಬಂದಿದೆ. ಡ್ರೆಸ್‌ ಅಥವಾ ಮೇಕಪ್‌ ಇರಲಿ, ಬೋಲ್ಡ್ ನೆಸ್‌ ಇಂಡಿಪೆಂಡೆನ್ಸ್ ಎರಡರಲ್ಲೂ ಗೋಚರಿಸುತ್ತದೆ.

ಚರ್ಚೆಯಲ್ಲಿ ಉಳಿಯುವುದೇ ಇಷ್ಟ

ಇತ್ತೀಚೆಗೆ `ದಬಂಗ್’ ಚಿತ್ರದಿಂದ ಫೇಮಸ್‌ ಆದ ಫಾತಿಮಾ ಶೇಖ್‌ ತನ್ನ ಬೋಲ್ಡ್ ಫೋಟೋ ಶೂಟ್‌ ಕಾರಣ ಹೆಚ್ಚು ಚರ್ಚೆಯಲ್ಲಿ ಉಳಿದಳು. ತಕ್ಷಣ ಆಕೆ ಇನ್‌ಸ್ಟಾಗ್ರಾಮ್ ನಲ್ಲಿ ತನ್ನ 2 ಬೋಲ್ಡ್ ಫೋಟೋಗಳನ್ನು ಪೋಸ್ಟ್ ಮಾಡಿದಳು. ಬೀಚಿನ ಸ್ವಿಮ್ ಸೂಟ್

ಎಲ್ಲರ ಕಣ್ಣು ಕುಕ್ಕುವಂತಿತ್ತು. ಇಂದಿನ ಆಧುನಿಕ ತರುಣಿಯರು ಹೀಗೆ ಚರ್ಚೆಯಲ್ಲಿ ಉಳಿಯಲು ಎಂಥ ಬೋಲ್ಡ್ ಸ್ಟೆಪ್‌ ತೆಗೆದುಕೊಳ್ಳಲಿಕ್ಕೂ ಹಿಂಜರಿಯುವುದಿಲ್ಲ. ಇದನ್ನು ಇನ್ನಷ್ಟು ಎಂಜಾಯ್‌ ಮಾಡುತ್ತಾರೆ. ಬೋಲ್ಡ್ ಲುಕ್ಸ್ ನ ಮತ್ತೊಂದು ಉದಾಹರಣೆ ಎಂದರೆ ಮಲೈಕಾ ಅರೋರಾ. ಈಕೆ ಸದಾ ತನ್ನ ಫ್ಯಾಷನ್‌, ಗ್ಲಾಮರ್‌, ಬೋಲ್ಡ್ ಸ್ಟೇಟ್‌ಮೆಂಟ್ಸ್ ನಿಂದಾಗಿ ಚರ್ಚೆಯಲ್ಲಿ ಉಳಿಯುತ್ತಾಳೆ.

ಕ್ರಿಯೇಟಿವಿಟಿಯ ಫಂಡಾ

ಇಂದಿನ ಹೆಣ್ಣು ಫ್ಯಾಷನೆಬಲ್ ಗ್ಲಾಮರಸ್‌ ಎನಿಸಲು ತನ್ನದೇ ಆದ ಸ್ಟೈಲ್‌ ಅನುಸರಿಸುತ್ತಾಳೆ. ಈ ಸ್ಟೈಲ್‌ನಿಂದಲೇ ಆ್ಯಟಿಟ್ಯೂಡ್

ಡೆವಲಪ್‌ ಆಗುತ್ತದೆ. ಅದನ್ನು ಜನ ಎಂದೂ ಮರೆಯುವುದಿಲ್ಲ.

ನೀವು ಎಂಥ ಫ್ಯಾನ್ಸಿ ಡ್ರೆಸ್‌ ಧರಿಸಿದ್ದೀರಿ ಎಂಬುದರತ್ತ ಜನರ ಗಮನ ಇರುವುದಿಲ್ಲ, ಅದನ್ನು ನೀವು ಹೇಗೆ ಕ್ಯಾರಿ ಮಾಡುತ್ತಿದ್ದೀರಿ ಎಂಬುದೇ ಇಲ್ಲಿ ಮುಖ್ಯವಾಗುತ್ತದೆ. ಡ್ರೆಸ್‌ ಜನರ ಮನಸ್ಸಿಗೆ ಬರಬೇಕು. ಅದು ಅವರಿಗೆ ಚೆನ್ನಾಗಿದೆ ಎನಿಸಬೇಕು ಎಂಬುದಷ್ಟೇ ಮುಖ್ಯ. ಅದು ಇಂಡಿಯನ್‌ ಆಗಿರಲಿ, ವೆಸ್ಟರ್ನ್‌ ಆಗಿರಲಿ. ಸ್ವಲ್ಪ ಪ್ರಯತ್ನಪಟ್ಟು ತುಸು ವಿಭಿನ್ನ ಸ್ಟೈಲ್ ನಿಮ್ಮದಾಗಿಸಿಕೊಳ್ಳಿ. ಅದು ಡಿಫರೆಂಟ್‌, ಬೋಲ್ಡ್ ಹಾಗೂ ನಿಮಗೆ ಒಪ್ಪುವಂತಿರಲಿ. ಉದಾ : ಸೀರೆ ಒಂದು ಸಾಂಪ್ರದಾಯಿಕ ಉಡುಗೆ. ಆದರೆ ಇಂದಿನ ಹುಡುಗಿಯರು ಸಿನಿ ತಾರೆಯರಿಂದ ಪ್ರಭಾವಿತರಾಗಿ ಇದಕ್ಕೆ ಗ್ಲಾಮರಸ್‌ ಟಚ್‌ ನೀಡಲು ಹಿಂಜರಿಯುವುದಿಲ್ಲ. ಸೀರೆ ಜೊತೆ ಮ್ಯಾಡರಿನ್‌ ಕಾಲರ್‌ ಬ್ಲೌಸ್‌, ಹಾಲ್ಟರ್‌ ನೆಕ್‌ ಬ್ಲೌಸ್‌, ಜಾಕೆಟ್‌, ಸ್ಲೀವ್ ಲೆಸ್ ಬ್ಲೌಸ್‌, ನೆಟ್‌ ಸ್ಲೀವ್ ವುಳ್ಳ ಬ್ಲೌಸ್‌ ಕ್ಯಾರಿ ಮಾಡುತ್ತಾ ಸಾಕಷ್ಟು ಬೋಲ್ಡ್ ಸ್ಟೈಲಿಶ್‌ ಎನಿಸುತ್ತಾರೆ.

ಫ್ಯಾಷನ್‌ : ಎಲ್ಲರ ಮೇಲೂ ಪ್ರಭಾವ

ಈಗ ಹೆಂಗಸರು ತಮ್ಮ ಮೇಲೆ ವಯಸ್ಸಿನ ಪ್ರಭಾವ ಆಗುವುದಕ್ಕೆ ಬಿಡುವುದಿಲ್ಲ. ಇಂದಿನ ಕಾಲದಲ್ಲಿ ಫ್ಯಾಷನ್ನಿನ ಬದಲಾವಣೆಯ ಪರಿಣಾಮ ಪ್ರತಿಯೊಬ್ಬ ವಯಸ್ಸಿನವರ ಮೇಲೂ ಆಗುತ್ತದೆ. ಅಮ್ಮ, ಅವರ ಅಕ್ಕ, ತಂಗಿ, ಅತ್ತೆ, ಅಜ್ಜಿ….. ಹಿಂದೆಲ್ಲ ಕೇವಲ ಸೀರೆಗಳಲ್ಲಿ ಅಥವಾ ಚೂಡಿದಾರ್‌ಗಳಲ್ಲಿ ಮಾತ್ರ ಕಾಣಿಸುತ್ತಿದ್ದರು. ಈಗ ಅವರೂ ಸಹ ತಮ್ಮ ಮಗಳು, ಸೊಸೆಯರ ತರಹವೇ ಮಾಡರ್ನ್ ಆಗಿ ಕಾಣಿಸಲು ಬಯಸುತ್ತಾರೆ. ಇವರಲ್ಲಿ ಎಷ್ಟೋ ಮಂದಿ ಜೀನ್ಸ್, ಟ್ರೌಸರ್ಸ್‌, ಟೀಶರ್ಟ್‌, ಫುಲ್ ಶರ್ಟ್‌ಗಳಲ್ಲಿ ಕಂಫರ್ಟೆಬಲ್ ಎನಿಸುತ್ತಾರೆ. ಆ ಮೂಲಕ ಮತ್ತಷ್ಟು ಯಂಗ್‌ ಆಗಬಯಸುತ್ತಾರೆ.

ಬೋಲ್ಡ್ ಮೇಕಪ್‌ನಿಂದ ಆತ್ಮವಿಶ್ವಾಸ

ಆಧುನಿಕ ಮೇಕಪ್‌ ಮಾನವರ ಬಾಹ್ಯ ಸೌಂದರ್ಯವನ್ನು ಮಾತ್ರ ಸುಧಾರಿಸುವುದಲ್ಲದೆ, ವಿಶಾಲ ವಿಶ್ವದೆದುರು ನಿಮ್ಮನ್ನು ನೀವು ಪ್ರಸ್ತುತಪಡಿಸಿಕೊಳ್ಳುವ ಆತ್ಮವಿಶ್ವಾಸವನ್ನೂ ಮೂಡಿಸುತ್ತದೆ. ಮೇಕಪ್‌ ಕಾರಣ ಸುಂದರಳಾದ ಹೆಣ್ಣಿನ ಮನದಲ್ಲಿ ಫೀಲ್ ‌ಗುಡ್‌ಫ್ಯಾಕ್ಟರ್‌ ಮತ್ತು ಆತ್ಮವಿಶ್ವಾಸ ಧಾರಾಳ ತುಂಬಿಕೊಳ್ಳುತ್ತದೆ. ಈ ತುಂಬು ಆತ್ಮವಿಶ್ವಾಸದಿಂದ ಅವಳು ಏನೇ ಮಾಡಿದರೂ ಅದರಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ!

ಬೋಲ್ಡ್ ಮೇಕಪ್

ನಿಮ್ಮನ್ನು ದೊಡ್ಡ ಗುಂಪಿನಿಂದ ಬೇರಾಗಿಸಿ ಡಿಫೆರೆಂಟ್‌ ಆಗಿ ತೋರಿಸಬಲ್ಲದು. ಬೋಲ್ಡ್ ಆಗಿ ಕಾಣಿಸಲು, ಇತ್ತೀಚೆಗೆ ಬ್ಲ್ಯಾಕ್‌ಟ್ರಾನ್ಸ್ ಪರೆಂಟ್‌ ಶೇಡ್ಸ್ ನ ಮಸ್ಕರಾ ಬದಲು ಪಿಂಕ್‌ನಿಂದ ಗ್ರೀನ್‌, ಯೆಲ್ಲೋನಿಂದ ಡಾರ್ಕ್‌ ಬ್ರೌನ್‌ವರೆಗೂ ವಿವಿಧ ಬಣ್ಣಗಳ ಮಸ್ಕರಾ ಟ್ರೈ ಮಾಡಿ. ಈ ಬಣ್ಣ ಬಣ್ಣದ ಶೇಡ್ಸ್ ನಿಮ್ಮ ಕಂಗಳನ್ನು ದೊಡ್ಡದು, ಬ್ಯೂಟಿಫುಲ್ ಮಾಡುವುದಲ್ಲದೆ, ಬ್ಲ್ಯಾಕ್‌ ಮಸ್ಕರಾಗೆ ಹೋಲಿಸಿದಾಗ ಮತ್ತಷ್ಟು ಆಕರ್ಷಕ ಎನಿಸುತ್ತದೆ. ಬೋಲ್ಡ್ ಲುಕ್ಸ್ ನಲ್ಲಿ ಲಿಪ್‌ಸ್ಟಿಕ್‌ನ ಡಾರ್ಕ್‌ ಶೇಡ್ಸ್ ಆದ ರೆಡ್‌, ಪಿಂಕ್‌, ಮೆರೂನ್‌ ಮುಖಕ್ಕೆ ಅಟ್ರಾಕ್ಟಿವ್ ‌ಲುಕ್ಸ್ ಅಷ್ಟೇ ನೀಡುವುದಲ್ಲದೆ, ಡಾರ್ಕ್‌ ಕಲರ್‌ ಮುಖವನ್ನು ಸುದೀರ್ಘ ಕಾಲ ಎನರ್ಜಿಟಿಕ್‌ ಆಗಿಸುತ್ತದೆ.

ಇದೇ ತರಹ ಕಂಗಳ ಸ್ಮೋಕಿ ಲುಕ್‌ ಬೋಲ್ಡ್ ಮೇಕಪ್‌ನಲ್ಲೇ ಹೆಚ್ಚು ಇಷ್ಟವಾಗುತ್ತದೆ. ಐ ಬ್ರೋಸ್‌ನ್ನು ದೊಡ್ಡದು ಮಾಡಿ ಅಥವಾ ಶೇಪ್‌ ರಹಿತ ಮಾಡಲಾಗುತ್ತದೆ. ಆಗ  ಪಾಯಿಂಟರ್ಸ್‌ ನೀಡದೆ ಸ್ಟ್ರೇಟ್‌ ಇರಿಸಲಾಗುತ್ತದೆ. ಉಗುರುಗಳಿಗೆ ಹೊಸ ಲುಕ್‌ ನೀಡಲು ನೇಲ್ ‌ಆರ್ಟ್‌ ಬಳಸುತ್ತಾರೆ.

ಕಾಸ್ಮೆಟಿಕ್‌ ಸರ್ಜರಿಯ ನೆರವು

ಇತ್ತೀಚೆಗೆ ಕಾಸ್ಮೆಟಿಕ್‌ ಸರ್ಜರಿ ಎಂಥ ಚಮತ್ಕಾರ ಮಾಡಿದೆ ಎಂದರೆ, ಜನ ಕೇವಲ ತಮ್ಮ ಮುಖ ಮಾತ್ರವಲ್ಲದೆ, ದೇಹದ ವಿವಿಧ ಭಾಗಗಳಿಗೂ ಹೊಸತಾದ, ಬೋಲ್ಡ್ ಲುಕ್ಸ್ ನೀಡಬಯಸುತ್ತಾರೆ. ಮಹಾ ನಗರಗಳಲ್ಲಿ ಮಾತ್ರವಲ್ಲದೆ, ಸಣ್ಣ ಊರುಗಳಲ್ಲೂ ಸಹ ಬಾಡಿ ಕಾಂಟೂರಿಂಗ್‌ ಕ್ಲಿನಿಕ್‌ ತೆರೆಯಲಾಗಿದೆ. ಈಗಿನ ಯುವತಿಯರು ಶಿಲ್ಪಾ ಶೆಟ್ಟಿಯಂಥ ಕರ್ವ್, ಕತ್ರೀನಾಳಂಥ ಆಕರ್ಷಕ ತುಟಿ, ಪ್ರಿಯಾಂಕಾ ತರಹ ಸೆಕ್ಸಿ ಲುಕ್ಸ್ ಪಡೆಯಬೇಕೆಂಬ ಆಸೆಯಲ್ಲಿ ಲಕ್ಷಾಂತರ ರೂ. ಖರ್ಚು ಮಾಡಲು ಹಿಂಜರಿಯುವುದಿಲ್ಲ. ಕಾಸ್ಮೆಟಿಕ್‌ ಸರ್ಜರಿಯಿಂದ ಅನೇಕ ಬಗೆಯ ಬೋಲ್ಡ್ ಅಟ್ರಾಕ್ಟಿವ್ ‌ಲುಕ್ಸ್ ಪಡೆಯಬಹುದು :

ಫೇಸ್‌ ಲಿಫ್ಟಿಂಗ್‌ : ಇದನ್ನು 2 ವಿಧದಲ್ಲಿ ನಡೆಸುತ್ತಾರೆ. ಮೊದಲು, ಸಾಂಪ್ರದಾಯಿಕ ಪದ್ಧತಿ. ಇದರಲ್ಲಿ ಸರ್ಜಿಕಲ್ ಪ್ರಕ್ರಿಯೆಯಿಂದ ಸಡಿಲ ತ್ವಚೆ ಮತ್ತು ಸುಕ್ಕುಗಳನ್ನು ನಿವಾರಿಸಬಹುದು. ಒಟ್ಟಾರೆ ಇದು ಒಂದು ಆಪರೇಶನ್‌ ತರಹ ಇರುತ್ತದೆ. 2-3 ದಿನ ಇದಕ್ಕಾಗಿ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ. ಸರ್ಜರಿಯಿಂದ ಮಾಂಸಖಂಡ ಮತ್ತು ಚರ್ಮವನ್ನು ಟೈಟ್‌ ಮಾಡಲಾಗುತ್ತದೆ.

ಯಾರಿಗೆ ಸುಕ್ಕಿನ ಬಾಧೆ ಇಲ್ಲವೋ, ಆದರೆ ಚರ್ಮ ಸಡಿಲವಾಗಿ ಮುಖ ಜೋತಾಡುತ್ತಿರುತ್ತದೋ, ಅಂಥವರಿಗೆ ಸರ್ಜರಿ ಇಲ್ಲದೆಯೇ ಫೇಸ್‌ ಲಿಫ್ಟ್ ಮಾಡಿಸುವ ಸಲಹೆ ನೀಡುತ್ತಾರೆ. ಇದರಲ್ಲಿ ಡರ್ಮ್‌ ಫಿಲ್ಲರ್‌ ಮೂಲಕ ವಾಲ್ಯೂಂ ಹೆಚ್ಚಿಸಲಾಗುತ್ತದೆ, ಅದರಿಂದಾಗಿ ಚರ್ಮ ಟೈಟ್‌ ಆದಂತೆನಿಸುತ್ತದೆ. ಮತ್ತೊಂದು ವಿಧಾನ, ಚರ್ಮಕ್ಕೆ ಥ್ರೆಡ್‌ ಹಾಕಿ ಅದನ್ನು ಒಳಗೊಳಗೇ ಟೈಟ್ ಮಾಡುತ್ತಾರೆ, ಇದರಿಂದಲೂ ಫೇಸ್‌ ಲಿಫ್ಟ್ ಆಗುತ್ತದೆ.

ಬ್ರೆಸ್ಟ್ ಕಾಂಟುರ್ಸ್‌ : ಎಷ್ಟೋ ಯುವತಿಯರಿಗೆ ತಮ್ಮ ಸ್ತನದ ಆಕಾರದಿಂದ ತೃಪ್ತಿ ಇರುವುದಿಲ್ಲ. ವಯಸ್ಸಿನ ಜೊತೆ ಸ್ತನ ಸಡಿಲಗೊಂಡು ಜೋತಾಡುವುದು ಒಂದು ಪ್ರಮುಖ ಸಮಸ್ಯೆ. ಬ್ರೆಸ್ಟ್ ಎನ್‌ಲಾರ್ಜ್‌ಮೆಂಟ್‌ ಆ್ಯಗ್ಮೆಂಟೇಶನ್‌ ಮೂಲಕ ಇವಕ್ಕೆ ಬೇಕಾದ ಆಕಾರ ನೀಡಬಹುದಾಗಿದೆ. ಅದೇ ಬ್ರೆಸ್ಟ್  ಎನ್‌ಹ್ಯಾನ್ಸ್ ಮೆಂಟ್‌ನಲ್ಲಿ ಸಿಲಿಕಾನ್‌ ಇಂಪ್ಲಾಂಟ್‌ ಮೂಲಕ ಅದನ್ನು ಸದೃಢವಾಗಿ, ದೊಡ್ಡದಾಗಿರುವಂತೆ ಮಾಡಬಹುದು. ಇದಕ್ಕೆ ಯಾವ ಸೈಡ್‌ ಎಫೆಕ್ಟ್ಸ್ ಇಲ್ಲ.

ಲಿಪ್‌ ಸರ್ಜರಿ : 2 ಕಾರಣಗಳಿಗಾಗಿ ಈ ಸರ್ಜರಿ ನಡೆಸುತ್ತಾರೆ. ಯಾರಿಗೆ ತುಟಿ ತುಂಬಾ ತೆಳುವೋ ಅವರಿಗೆ ಎನ್‌ಹ್ಯಾನ್ಸ್ ಮೆಂಟ್‌ಸರ್ಜರಿ ಮಾಡುತ್ತಾರೆ. ಇದರಲ್ಲಿ ಸರ್ಜರಿ ಮೂಲಕ ತುಟಿಗಳಿಗೆ ಸ್ಟಫಿಂಗ್‌ ತುಂಬಿಸಿ ಅದರ ಆಕಾರ ಹಿಗ್ಗಿಸಲಾಗುತ್ತದೆ.

ಮತ್ತೊಂದು ವಿಧಾನ, ಯಾರ ತುಟಿಗಳು ದಪ್ಪ, ದೊಡ್ಡದಾಗಿ ಇರುತ್ತವೋ ಅಂಥವರಿಗೆ ಲಿಪ್‌ ರಿಡಕ್ಷನ್‌ ಸರ್ಜರಿ ನಡೆಸುತ್ತಾರೆ. ಈ ಸರ್ಜರಿ ಮಾತ್ರವಲ್ಲದೆ ನಾನ್‌ ಸರ್ಜಿಕಲ್ ವಿಧಾನದಿಂದ, ಫಿಲ್ಲರ್ಸ್‌ ನೆರವಿನಿಂದ ತುಟಿಗಳ ಲುಕ್‌ನಲ್ಲಿ ಬದಲಾವಣೆ ತರಬಹುದಾಗಿದೆ.

ನೋಸ್‌ ಶೇಪಿಂಗ್‌ : ಕೆಲವರ ಮೂಗು ಅವರ ಮುಖಕ್ಕೆ ಹೊಂದುವುದಿಲ್ಲ. ಸರ್ಜರಿ ಮೂಲಕ ಮೂಗಿನ ಆಕಾರದಲ್ಲಿ ಬದಲಾವಣೆ ತರಬಹುದು. ಆಗ ಹೊಸ ಆಕಾರ ಮುಖಕ್ಕೆ ಕಳೆ ಕೊಡುತ್ತದೆ. ಈ ಸರ್ಜರಿಗಾಗಿ ಆಸ್ಪತ್ರೆಯಲ್ಲಿ ಅಡ್ಮಿಟ್‌ ಆಗಬೇಕಾಗುತ್ತದೆ. ರಿಕವರ್‌ ಆಗುವುದಕ್ಕೆ 3 ವಾರಗಳ ಕಾಲ ಅತ್ಯಗತ್ಯ.

ಟ್ಯಾಟೂಸ್‌ : ಇಂದಿನ ತರುಣಿಯರು ತಮ್ಮ ಲುಕ್ಸ್ ಕೂಲ್ ಬೋಲ್ಡ್ ಆಗಿಸಲು, ಟ್ಯಾಟೂ ಹಾಕಿಸಿಕೊಳ್ಳುವ ಹೆಚ್ಚಿನ ಕ್ರೇಜ್‌ಹೊಂದಿದ್ದಾರೆ. ಎಷ್ಟೋ ತರುಣಿಯರು ಭಾವೀ ಪತಿಯ ಹೆಸರು ಹಾಕಿಸಿಕೊಂಡರೆ, ಹೆಚ್ಚಿನ ಮಂದಿ ಬಾಯ್‌ಫ್ರೆಂಡ್‌ ಹೆಸರನ್ನೇ ಹಾಕಿಸುತ್ತಾರೆ. ಇದನ್ನು ರಿಮೂವ್ ‌ಮಾಡಿ ಮತ್ತೆ ಹೊಸತು ಹಾಕಿಸಲು ಅವಕಾಶವಿದೆ, ತುಸು ನೋವು ಸಹಿಸಬೇಕಷ್ಟೆ.

– ಜಿ. ಪಂಕಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ