ವಿಶೇಷ ಹಬ್ಬಗಳ ಸೀಸನ್ನಲ್ಲಿ ಪಾರಂಪರಿಕ ಉಡುಗೆಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಅದರಲ್ಲೂ ಭಾರತೀಯ ಮಹಿಳೆಯರ ಫ್ಯಾಷನ್ ಗಮನಿಸಿದಾಗ, ಅವರ ಸ್ಟೈಲ್ ಸ್ಟೇಟ್ಮೆಂಟ್ನಲ್ಲಿ ಪಾರಂಪರಿಕ ವೇಷಭೂಷಣಗಳ ಮೋಡಿ ಪ್ರಧಾನವಾಗಿರುತ್ತದೆ. ಈಗ ಆಧುನಿಕ ಯುವತಿಯರು ಹಬ್ಬಗಳಿಗಾಗಿ ಕೇವಲ ರೇಷ್ಮೆ ಸೀರೆ, ರೇಷ್ಮೆ ಲಂಗ, ಸಲ್ವಾರ್ ಸೂಟ್ ಕೊಳ್ಳುವ ಬದಲಾಗಿ ಹೊಸ ಹೊಸ ಪಾರಂಪರಿಕ ಉಡುಗೆಗಳಿಗೆ ಆದ್ಯತೆ ನೀಡುತ್ತಿದ್ದಾರೆ.
ನಿಧಾನವಾಗಿ ಮಹಿಳೆಯರಲ್ಲಿ ಪಾರಂಪರಿಕ ಬಣ್ಣಗಳನ್ನು ಬಿಟ್ಟು ಲೈಟ್ ಕಲರ್ಸ್ ಆರಿಸುವ ಕ್ರೇಝ್ ಹೆಚ್ಚುತ್ತಿದೆ. ಈಗ ಅವರು ಪೇಸ್ಟಲ್ ಮಿಂಟ್ ಗ್ರೀನ್, ಶಾಂಪೇನ್ ಗೋಲ್ಡ್, ಜೆಸ್ಟಿ ಆರೆಂಜ್ನಂಥ ಲೈಟ್ ಶೇಡ್ಸ್ ನ ಉಡುಗೆಗಳನ್ನೇ ಹೆಚ್ಚಾಗಿ ಆರಿಸತೊಡಗಿದ್ದಾರೆ. ಈ ಬಣ್ಣಗಳಿಂದ ಅವರ ಸಂಪೂರ್ಣ ವ್ಯಕ್ತಿತ್ವದಲ್ಲಿ ತಾಜಾತನ, ಹೊಳಪನ್ನು ಕಾಣಬಹುದು. ಅಷ್ಟು ಮಾತ್ರವಲ್ಲ, ಈಗ ಅವರ ಗಮನ ಹೆಚ್ಚು ಕಸೂತಿಯುಳ್ಳ ಭಾರಿ ಉಡುಗೆಗಳ ಬದಲಾಗಿ ಲೈಟ್ ಉಡುಗೆಗಳತ್ತ ಹೊರಳಿದೆ. ಹೀಗಾಗಿ ಕೆಳಗಿನ ಪಟ್ಟಿಯಲ್ಲಿ ನಿಮಗಾಗಿ 2021 ರ ಹಬ್ಬದ ಸೀಸನ್ನಲ್ಲಿ ಮಿಂಚಲಿರುವ ಉಡುಗೆಗಳ ಟ್ರೆಂಡ್ಸ್ ಕುರಿತು ಮಾಹಿತಿ ನೀಡಲಾಗಿದೆ.
ಹೈನೆಕ್ ಕಾಲರ್ : ಕ್ಲೋಸ್ಡ್ ನೆಕ್ ಯಾ ಕಾಲರ್ವುಳ್ಳ ಕುರ್ತಿಗಳು ಪಾರಂಪರಿಕ ಉಡುಗೆಗಳಿಗೆ ಫಾರ್ಮಲ್ ಅಂದ್ರೆ ಔಪಚಾರಿಕ ಲುಕ್ ಒದಗಿಸುತ್ತದೆ. ಫ್ರೆಂಡ್ಸ್ ಭೇಟಿ, ಕಾರ್ಪೊರೇಟ್ ಮೀಟಿಂಗ್ ಯಾ ಕಾನ್ಫರೆನ್ಸ್ ಅಟೆಂಡಿಂಗ್ ಇರಲಿ, ಈ ಕುರ್ತಿಗಳು ಪ್ರತಿ ಸಂದರ್ಭಕ್ಕೂ ಚೆನ್ನಾಗಿ ಒಪ್ಪುತ್ತವೆ. ರೆಟ್ರೋ ಪ್ರಿಂಟ್ಸ್ ವುಳ್ಳ ಕ್ಲೋಸ್ಡ್ ನೆಕ್ ಕುರ್ತಿಗಳು ಈ ವರ್ಷದ ಅಪರಂಪರಾಗತ ಫ್ಯಾಷನ್ ಪಟ್ಟಿಯಲ್ಲಿ ಶಾಮೀಲಾಗಿವೆ. ವಿಶಿಷ್ಟ ಜ್ಯಾಮಿಟ್ರಿಕ್ ಪ್ಯಾಟರ್ನ್ ಮತ್ತು ರಫ್ ಅಂಚಿನ ಡಿಸೈನ್ಸ್ ವುಳ್ಳ ಕುರ್ತಿಗಳನ್ನು ಧರಿಸಿ ನೀವು ಓಡಾಡಿದರೆ, ಜನ ಮತ್ತೆ ಮತ್ತೆ ನಿಮ್ಮತ್ತಲೇ ತಿರುಗಿ ನೋಡುವುದರಲ್ಲಿ ಸಂದೇಹವಿಲ್ಲ! ಬ್ರೊಕೇಡ್ ಯಾ ಚಂದೇರಿ ಸಿಲ್ಕ್ ನಿಂದ ರೂಪುಗೊಂಡು ಕ್ಲೋಸ್ಡ್ ನೆಕ್ ಯಾ ಕಾಲರ್ವುಳ್ಳ ಕುರ್ತಿಗಳು ನಿಮಗೆ ರಿಚ್ ಲುಕ್ಸ್ ತಂದುಕೊಡುತ್ತವೆ. ಚಂದೇರಿ ಸಿಲ್ಕ್ ನ ಟ್ರೌಸರ್ ಯಾ ಆ್ಯಕ್ಸೆಸರಿಯ ಜೊತೆ ಇವನ್ನೂ ಸೇರಿಸಿಕೊಳ್ಳಿ.
ಬೋಹೊ ಸ್ಕರ್ಟ್ : ಪ್ರತಿಯೊಬ್ಬ ಯುವತಿಯ ಬೀರುವಿನಲ್ಲಿ ಸ್ಕರ್ಟ್ ತನ್ನದೇ ಆದ ಒಂದು ವಿಶಿಷ್ಟ ಸ್ಥಾನ ಹೊಂದಿರುತ್ತದೆ. ಈ ವರ್ಷ ಹೂ, ಮೊಗ್ಗು, ಬಳ್ಳಿಗಳ ರೂಪಾಂಕಿತ ಪಾರಂಪರಿಕ ಪ್ರಿಂಟೆಡ್ ಸ್ಕರ್ಟ್ಸ್ ನ್ನು ಸ್ಟೈಲಿಶ್ ಚಿಕ್ಡ್ ಶರ್ಟ್ಸ್, ಟಾಪ್ಸ್, ಟ್ಯೂನಿಕ್ಸ್ ಜೊತೆ ಧರಿಸಬಹುದಾಗಿದೆ. ಆಫೀಸ್ ಪಾರ್ಟಿಗಳು, ಹಬ್ಬ, ಮದುವೆಗಳ ಸೀಸನ್ಗೆ ಈ ಬೋಹೋ ಇಂಡೋ ವೆಸ್ಟರ್ನ್ ಟ್ರೆಂಡ್ನ್ನು ತಮ್ಮದಾಗಿಸಿಕೊಂಡು ಯುವತಿಯರು ಎಲ್ಲೆಡೆ ಮೋಡಿ ಮಾಡಬಹುದು. ಹಬ್ಬಗಳಲ್ಲಿ ಸ್ಪೆಷಲ್ ಡಿಫರೆಂಟ್ ಆಗಿ ಕಂಡುಬರಲು, ನೀವು ಈ ಬೋಹೋ ಸ್ಕರ್ಟ್ಸ್ ನ್ನು ಕ್ರಾಪ್ ಟಾಪ್ ಯಾ ಭಾರೀ ದುಪಟ್ಟಾ ಜೊತೆ ಧರಿಸಬಹುದು.
ಸ್ಲಿಟ್ಸ್ : ಇತ್ತೀಚೆಗಷ್ಟೆ ಲಾಂಚ್ ಆದ ಈ ಎಕ್ಸ್ ಟಿಂಡೆಡ್ ಸ್ಲಿಟ್ಸ್ ನಿಮ್ಮ ಉಡುಗೆಗಳಿಗೆ ಹೊಸ ಆಧುನಿಕ ಬದಲಾವಣೆ ತಂದುಕೊಡುತ್ತವೆ. ಚಿಕ್ಡ್ ಡಿಸೈನ್ಗಳಿಗೆ ಬೋಲ್ಡ್ ಸ್ಲಿಟ್ಸ್ ಜೊತೆಯಾಗುತ್ತದೆ. ಇದು ಪಾರಂಪರಿಕ ಫ್ಯಾಷನ್ಗೆ ಒಂದು ಹೊಸ ಲುಕ್ ಪ್ರಧಾನಿಸಲಿದೆ. ಇಂದಿನ ಯುವತಿಯರಲ್ಲಿ ಸ್ಲಿಟ್ವುಳ್ಳ ಕುರ್ತಿಗಳು ಬಹಳ ಫೇಮಸ್ ಆಗುತ್ತಿವೆ. ಈ ಟ್ರೆಂಡ್ ಅವರಿಗೆ ರಿಚ್ ಮಾಡ್ಲುಕ್ ನೀಡುತ್ತವೆ. ಮುಖ್ಯವಾಗಿ ಪ್ಯಾಟರ್ನ್ವುಳ್ಳ ಸ್ಲಿಟ್ ಕುರ್ತಿಗಳಿಗೆ ಡಿಮ್ಯಾಂಡ್ ಜಾಸ್ತಿ. ಟ್ರೌಸರ್ಸ್, ಜೀನ್ಸ್ ಮತ್ತು ಪ್ಲಾಜೋ ಜೊತೆ ಈ ಕುರ್ತಿಗಳನ್ನು ಧರಿಸಿ, ಯುವತಿಯರು ತಮ್ಮ ಲುಕ್ಸ್ ಬದಲಿಸಿಕೊಳ್ಳಬಹುದು. ಹಬ್ಬಗಳ ಈ ಸೀಸನ್ನಲ್ಲಿ ಪಾರಂಪರಿಕ ಕುರ್ತಿಗಳ ಜೊತೆ ಪ್ಲಾಜೋಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಜಕ್ಸ್ ಟಾಪೋಸ್ ಪ್ರಿಂಟ್ವುಳ್ಳ ಪ್ಲಾಜೋ ಕೇವಲ ಬ್ಯೂಟಿಫುಲ್ ಯೂನಿಕ್ ಮಾತ್ರವಲ್ಲದೆ, ನಿಮ್ಮ ಒಟ್ಟಾರೆ ವ್ಯಕ್ತಿತ್ವಕ್ಕೂ ಸ್ಪೆಷಲ್ ಗೆಟಪ್ ತಂದುಕೊಡುತ್ತದೆ. ಈ ಫೆಸ್ಟಿವಲ್ ಸೀಸನ್ನಲ್ಲಿ ಸ್ಲಿಟ್ ಕುರ್ತಿಗಳಲ್ಲಿ ಮಿಂಟ್ ಗ್ರೀನ್, ಕಾಪರ್, ಇಂಡಿಗೋ ಬ್ಲೂ ಆರೆಂಜ್ನಂಥ ಬಣ್ಣಗಳು ಜನಪ್ರಿಯವಾಗಿವೆ.
ಕೇಪ್ಸ್ : ಒಂದು ಫೇಮಸ್ ವೆಸ್ಟರ್ನ್ ಸ್ಟೈಲ್ ಇದೀಗ ಭಾರತೀಯ ಫ್ಯಾಷನ್ ಟ್ರೆಂಡ್ನಲ್ಲಿ ಬೆರೆತುಹೋಗಿದೆ. ಯಾವುದೇ ಬಗೆಯ ಬಾಡಿ ಟೈಪ್ವುಳ್ಳ ಯುವತಿಯರು ಸುಲಭವಾಗಿ ಇದನ್ನು ಧರಿಸಬಹುದು. ಪಾರಂಪರಿಕ ಉಡುಗೆಯನ್ನು ಬಿಲ್ಕುಲ್ ಹೊಸ ಅಂದಾಜಿನಲ್ಲಿ ಪ್ರಸ್ತುತಪಡಿಸಲು ಬಯಸಿದರೆ, ಆಗ ನೀವು ನಿಮ್ಮ ಸಾಧಾರಣ ಕುರ್ತಿಯನ್ನು ಫ್ಯಾನ್ಸಿ ಲಹಂಗಾ ಯಾ ಸೆನ್ಸ್ಯುಯೆಲ್ ಸೀರೆ ಮೇಲೆ ಕೇಪ್ ಧರಿಸಿ ನೋಡಿ. ಫೆಸ್ಟಿವಲ್ ಸೀಸನ್ಗಾಗಿ ಅತಿ ಸುಂದರ ಪ್ಯಾಟರ್ನ್, ಸ್ಟೈಲ್ ಮತ್ತು ಟೆಕ್ಸ್ ಚರ್ನಲ್ಲಿ ಈ ಕೇಪ್ಸ್ ಲಭ್ಯವಿವೆ. ನೆಟ್ ಮೆಟೀರಿಯಲ್ನಲ್ಲಿ ಭಾರಿ ಕಸೂತಿಯುಳ್ಳಂಥ ಕೇಪ್ಸ್ ಲಭ್ಯ.
ಅಸಿಮಿಟ್ರಿಕ್ ಹ್ಯಾಮ್ : ವಿಶೇಷ ಕಟ್ಸ್ ವುಳ್ಳ ಅಸಿಮಿಟ್ರಿಕ್ ಹ್ಯಾಮ್ಸ್ ಗೆ ಡಿಸೈನರ್ಸ್ ಇನ್ನಷ್ಟು ರಂಗು ತುಂಬಿರುವುದರಿಂದ ಯುವತಿಯರು ಮುಗಿಬಿದ್ದು ಕೊಳ್ಳುತ್ತಿದ್ದಾರೆ. ಈ ಸ್ಟೈಲ್ನ್ನು ಹೆಚ್ಚು ಕಡಿಮೆ ಎಲ್ಲಾ ಡಿಸೈನರ್ಸ್ ತಮ್ಮ ಲೇಟೆಸ್ಟ್ ಸಂಗ್ರಹದಲ್ಲಿ ಹೊಂದಿರುತ್ತಾರೆ. ನಿಮ್ಮ ಟ್ರೆಂಡಿ ಸ್ಟೈಲ್ಸ್ಟೇಟ್ಮೆಂಟ್ ಮಾಡಿಕೊಳ್ಳಲು ಈ ಅಸಿಮಿಟ್ರಿಕ್ ಕುರ್ತಿಗಳನ್ನು ಪಟಿಯಾಲಾ ಸಲ್ವಾರ್, ಲೆಗಿಂಗ್ ಮತ್ತು ಪ್ಲಾಜೋ ಜೊತೆ ಧರಿಸಬಹುದು. ಅಂದರೆ 2 ಲೇಸ್ ಅಥವಾ ಹೈ ಲೋ ಕೂಡ. ಈ ಪ್ಯಾಟರ್ನ್ಸ್ ನಲ್ಲಿ ಇನ್ನೂ ಅಧಿಕ ರಚನಾತ್ಮಕ ಡಿಸೈನ್ಗಳಲ್ಲಿ ಕೆಲಸ ನಡೆಯುತ್ತಿದೆ. ಹಬ್ಬಗಳ ಈ ಸೀಸನ್ನಲ್ಲಿ ಇದು ಹೆಚ್ಚು ಉಪಯುಕ್ತ ಫ್ಯೂಷನ್ ಲುಕ್ಸ್ ಎಂದೆನಿಸಿವೆ.
ವೆಸ್ಟರ್ನ್ ಸೀರೆ : ಭಾರತೀಯ ಪರಂಪರಾಗತ ಉಡುಗೆಯಲ್ಲಿ ಬಲು ವೇಗದ ಬದಲಾವಣೆ ಬರತೊಡಗಿದೆ. ಇತ್ತೀಚೆಗೆ ಆಧುನಿಕ ಟ್ವಿಸ್ಟ್ ಜೊತೆ ಸೀರೆಗಳಿಗೆ ಹೊಚ್ಚ ಹೊಸ ಲುಕ್ಸ್ ನೀಡಲಾಗುತ್ತಿದೆ. ಗೌನ್ ತರಹ ಧರಿಸಬಹುದಾದ ಈ ಸೀರೆಗಳು, ಅಂತಾರಾಷ್ಟ್ರೀಯ ಫ್ಯಾಷನ್ಗೆ ಕಠಿಣ ಸವಾಲು ಒಡ್ಡುತ್ತವೆ. ಹಳೆಯ ಶೈಲಿಯ ಬ್ಲೌಸ್ ಬದಲು ಯುವತಿಯರು ಈ ಫಿಟ್ಟಿಂಗ್ಸ್ ವುಳ್ಳ ಸೀರೆಗಳನ್ನು ಬ್ಲೇಝರ್, ಕ್ರಾಪ್ ಟಾಪ್, ಟ್ಯೂಬ್ಗಳ ಜೊತೆ ಧರಿಸಿ ತಮ್ಮ ಕರ್ವೀ ಬಾಡಿಯೊಂದಿಗೆ ಮೆರೆಯುತ್ತಿದ್ದಾರೆ. ಆ್ಯಕ್ಸೆಸರೀಸ್ ಆಗಿ ಸೀರೆ ಜೊತೆ ಬೆಲ್ಟ್ ಧರಿಸಿ, ಸೀರೆಯ ಈ ಪಾಶ್ಚಿಮಾತ್ಯ ರೂಪಾಂತರಣಕ್ಕೆ ಹೊಸ ಲುಕ್ಸ್ ಹುಡುಕಿಕೊಂಡಿದ್ದಾರೆ. ಸೀರೆಯನ್ನು ಸರ್ವಶ್ರೇಷ್ಠ ಪಾರಂಪರಿಕ ಉಡುಗೆ ಎನ್ನುತ್ತಾರೆ. ಇದನ್ನು ಹಲವಾರು ರೀತಿಗಳಲ್ಲಿ ಉಡಲಾಗುತ್ತದೆ (ಡ್ರೇಪಿಂಗ್). ಹಬ್ಬಗಳ ಈ ಸೀಸನ್ನಲ್ಲಿ ನೀವು ನಿಮ್ಮ ಸೀರೆಯನ್ನು ತುಸು ವಿಭಿನ್ನವಾಗಿ ಉಟ್ಟು, ನಿಮ್ಮ ಲುಕ್ ಬದಲಿಸಿ. ಅಗತ್ಯವೆನಿಸಿದರೆ ನೀವು ನಿಮ್ಮ ಬ್ಲೌಸ್ನಲ್ಲೂ ಸಹ ಡಿಫರೆಂಟ್ ಕಟ್ಸ್ ಸ್ಟಿಚಸ್ ತೋರಿಸಬಹುದು. ನಿಮ್ಮ ಸೀರೆ ಸಿಂಪಲ್ ಎನಿಸಿದರೆ, ಅದರ ಬ್ಲೌಸ್ನ್ನೂ ಗ್ರಾಂಡ್ ಆಗಿರಿಸಿ. ಬ್ಲೌಸ್ನ ನೆಕ್ಬ್ಯಾಕ್ ಜೊತೆ ಹಲವು ಬಗೆಯ ಪ್ರಯೋಗಗಳನ್ನು ಮಾಡಿ, ಹಬ್ಬದ ರಂಗು ಹೆಚ್ಚಿಸಬಹುದು. ಲೈಟ್ ಫ್ಯಾಬ್ರಿಕ್ಸ್ : ಪಾರಂಪರಿಕ ಫ್ಯಾಷನ್ ಟ್ರೆಂಡ್ನ್ನು ಡಿಫೈನ್ ಮಾಡುವಲ್ಲಿ ಫ್ಯಾಬ್ರಿಕ್ಸ್ ಗೆ ತಮ್ಮದೇ ಆದ ಮಹತ್ವವಿದೆ. ಪರಂಪರಾಗತ ಹ್ಯಾಂಡ್ಲೂಮ್ ಮತ್ತು ಆಧುನಿಕ ಡಿಸೈನಿನ ಮಿಶ್ರಣದಿಂದ ಪಾರಂಪರಿಕ ಉಡುಗೆಗಳಿಗೆ ಲೈಟ್ ಫ್ಯಾಬ್ರಿಕ್ನಲ್ಲಿ ತಯಾರಿಸಲಾಗುತ್ತಿದೆ. ಕಾಟನ್, ಶಿಫಾನ್, ಸಿಲ್ಕ್ ನಂಥ ಫ್ಯಾಬ್ರಿಕ್ಸ್ ಜೊತೆ ಗಮನಸೆಳೆಯುವ ಪ್ಯಾಟರ್ನ್ಸ್ ಬಳಕೆ ಉಡುಗೆಗಳಿಗೆ ಹೆಚ್ಚಿನ ಕಳೆ ಕೊಡುತ್ತವೆ.
– ಮೋನಿಕಾ