ಹಬ್ಬಗಳ ಸಾಲು ಪ್ರಾರಂಭವಾಯಿತೆಂದರೆ ಉಂಡು, ಉಟ್ಟು, ನಲಿದು ಸಂಭ್ರಮಿಸುವ ಕಾಲ ಬಂದಿತೆಂದೇ ಅರ್ಥ. ಈ ಸಮಯದಲ್ಲಿ ಊಟ ತಿಂಡಿ ನಿದ್ರೆಗಳಿಗೆ ನಿರ್ದಿಷ್ಟ ಸಮಯವೆಂಬುದು ಇರುವುದಿಲ್ಲ. ಇದರಿಂದಾಗಿ ನಿಮ್ಮ ಆರೋಗ್ಯ ಕೆಡಬಾರದಲ್ಲವೇ? ಅದಕ್ಕಾಗಿ ಇಲ್ಲಿ ನೀಡಲಾದ ಅಂಶಗಳನ್ನು ಗಮನಿಸಿ :
ಆಹಾರ ಪಾನೀಯಗಳು
ಫೆಸ್ಟಿವ್ ಸೀಸನ್‌ನಲ್ಲಿ ಸಿಹಿ ತಿಂಡಿಗಳನ್ನು ಸಂಪೂರ್ಣವಾಗಿ ದೂರವಿರಿಸಲು ಆಗುವುದಿಲ್ಲ. ಆದರೂ ನಿಮ್ಮ ಡೇಲಿ ರೊಟೀನ್‌ನಲ್ಲಿ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದರ ಮೂಲಕ ಹಬ್ಬಗಳಿಂದಾಗುವ ಸೈಡ್ ಎಫೆಕ್ಟ್ ಗಳಿಂದ ನಿಮ್ಮನ್ನು ತಕ್ಕ ಮಟ್ಟಿಗೆ ರಕ್ಷಿಸಿಕೊಳ್ಳಬಹುದು.
ನಮ್ಮ ಶರೀರಕ್ಕೆ ನೀರಿನ ಪ್ರಾಮುಖ್ಯತೆ ಬಹಳವಾಗಿರುತ್ತದೆ. ಆದ್ದರಿಂದ ಬೆಳಗ್ಗೆ ಎದ್ದಾಗ 2 ಲೋಟ ಬೆಚ್ಚನೆಯ ನೀರನ್ನು ಕುಡಿಯುವುದರಿಂದ ನಮ್ಮ ಶರೀರದಲ್ಲಿರುವ ಉಪಯೋಗಿ ಬ್ಯಾಕ್ಟೀರಿಯಾ ಶರೀರದಲ್ಲೇ ಉಳಿಯುತ್ತದೆ. ಅಲ್ಲದೆ ನೀರು ಶರೀರಕ್ಕೆ ಶಕ್ತಿ ನೀಡುತ್ತದೆ. ಸ್ವಲ್ಪ ಹೊತ್ತಿನ ನಂತರ ಓಮುಕಾಳು ಕುದಿಸಿದ ನೀರನ್ನು ಕುಡಿಯುವುದರಿಂದ ಸಾಕಷ್ಟು ಮಟ್ಟಿಗೆ ಫ್ಯಾಟ್‌ನ್ನು ಹತೋಟಿಯಲ್ಲಿಡಬಹುದು. ದಿನದಲ್ಲಿ ಕನಿಷ್ಠ ಪಕ್ಷ 8-10 ಲೋಟ ನೀರು ಕುಡಿಯಲು ಮರೆಯದಿರಿ.
ಬೆಳಗ್ಗೆ ಖಾಲಿ ಹೊಟ್ಟೆಗೆ 1 ಚಮಚ ಅಗಸೆ ಬೀಜವನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ತೂಕವನ್ನು ಕಂಟ್ರೋಲ್ ಮಾಡಬಹುದು. ಜೊತೆಗೆ ಇದರಿಂದ ಬೆಲ್ಲಿ ಫ್ಯಾಟ್ ಹೆಚ್ಚುವುದಿಲ್ಲ ಮತ್ತು ಬ್ಲಡ್ ಪ್ರೆಶರ್ ಸಹ ಸರಿಯಾಗಿರುತ್ತದೆ. ಆದ್ದರಿಂದ ಹಬ್ಬದ ಸಮಯದಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಇರಲಿ.
ಊಟಕ್ಕೆ ಅರ್ಧ ಗಂಟೆ ಮೊದಲು ಮತ್ತು ನಂತರ 1 ಗಂಟೆಯ ಕಾಲ ನೀರು ಕುಡಿಯದಿರಿ. ಅತಿ ತಣ್ಣನೆಯ ಅಥವಾ ಅತಿ ಬಿಸಿಯಾದ ನೀರು ಕುಡಿಯುವುದು ಸರಿಯಲ್ಲ. ಅದರಿಂದ ಜೀರ್ಣಶಕ್ತಿಗೆ ತೊಂದರೆಯಾಗುತ್ತದೆ.
ಮನೆಯಲ್ಲಿ ಸಿಹಿತಿಂಡಿ ತಯಾರಿಸುವಾಗ ಸಕ್ಕರೆಯ ಬದಲು ಬೆಲ್ಲವನ್ನು ಉಪಯೋಗಿಸಿ. ಅಂಗಡಿಯಿಂದ ಕೊಂಡು ತರುವಾಗ ಕಡಲೆಹಿಟ್ಟಿನಿಂದ ತಯಾರಿಸಿದ ಮಿಠಾಯಿಯನ್ನೇ ಖರೀದಿಸಿ. ಕೆಲವು ಸಂಶೋಧನೆಗಳ ಪ್ರಕಾರ ಸಕ್ಕರೆ, ಗೋಧಿ ಮತ್ತು ಹಾಲು ಶರೀರದಲ್ಲಿ ಉರಿಯನ್ನು ಉಂಟು ಮಾಡಿ ಶಕ್ತಿಯನ್ನು ಕುಂದಿಸುತ್ತದೆ.
ನಿಂಬೆಹಣ್ಣಿನ ಶರಬತ್ ಅಥವಾ ವಿಟಮಿನ್`ಸಿ’ ಸಪ್ಲಿಮೆಂಟ್‌ನ ಸೇವನೆಯಿಂದ ಉರಿಯನ್ನು ನಿವಾರಿಸಿಕೊಳ್ಳಬಹುದು.
ಒಳ್ಳೆಯ ನಿದ್ರೆ
ಫೆಸ್ಟಿವ್ ಸೀಸನ್‌ನ ಓಡಾಟದಲ್ಲಿ ಮಹಿಳೆಯರಿಗೆ ಸಾಕಷ್ಟು ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಇದು ಅವರಿಗೆ ಹಾನಿಕಾರಕ. ಆದ್ದರಿಂದ ದಿನದಲ್ಲಿ 6-7 ಗಂಟೆಗಳ ನಿದ್ರೆ ಅವಶ್ಯಕ. ಏಕೆಂದರೆ ನಿದ್ರಿಸುವಾಗ ಶರೀರದಲ್ಲಿ ಹೊರಬೀಳುವ ಕೆಮಿಕಲ್ ಮೆಲಟೋನಿಸ್ ಶರೀರವನ್ನು ಶಕ್ತಿಶಾಲಿಯಾಗಿಸುತ್ತದೆ.
ವಾರ್ಮ್ ಅಪ್ ಎಕ್ಸ್ರ್ಸೈಸ್
ಗೃಹಿಣಿಯಾಗಿರಲಿ ಅಥವಾ ಉದ್ಯೋಗಸ್ಥೆಯಾಗಿರಲಿ, ಹಬ್ಬದ ಕೆಲಸವನ್ನು ನಿಭಾಯಿಸಲು ಎನರ್ಜಿ ಬೇಕೇ ಬೇಕು. ಬೆಳಗ್ಗೆ ಎದ್ದು ಮಾಡುವ ಮಾರ್ಮ್ ಅಪ್ ಎಕ್ಸರ್ ಸೈಸ್ ದಿನವಿಡೀ ಶರೀರಕ್ಕೆ ಶಕ್ತಿ ತುಂಬುತ್ತದೆ. ಈ ಎಕ್ಸರ್ ಸೈಸೆಸ್ ಬಹಳ ಸರಳ ಮತ್ತು ಎಫೆಕ್ಟಿವ್ ಆಗಿರುತ್ತದೆ.
ಮಂಡಿಗಳನ್ನು ಕ್ರಮವಾಗಿ 10-10 ಸಲ ಎದೆಯವರೆಗೆ ಕೊಂಡೊಯ್ಯಬೇಕು.
ಒಂದೇ ಜಾಗದಲ್ಲಿ ನಿಂತು 2 ನಿಮಿಷ ಜಾಗಿಂಗ್ ಮಾಡಬೇಕು.
4-4 ಸಲ ಫಾರ್ವರ್ಡ್ ಬೆಂಡಿಂಗ್ ಮತ್ತು ಸೈಡ್ ಬೆಂಡಿಂಗ್ ಮಾಡಬೇಕು.
5-5 ಸಲ ನಿಧಾನವಾಗಿ ಎರಡೂ ಪಕ್ಕಕ್ಕೆ ಕತ್ತನ್ನು ತಿರುಗಿಸಬೇಕು.
ಶಾರೀರಿಕ ಮತ್ತು ಮಾನಸಿಕ ಒತ್ತಡವನ್ನು ದೂರ ಮಾಡಲು ಕಿವಿಗಳನ್ನು ಭುಜಗಳಿಗೆ ಮುಟ್ಟಿಸುವುದು, ಭುಜಗಳನ್ನು ತಿರುಗಿಸುವುದು, ನೆಕ್ಸ್ ಟ್ರಚಿಂಗ್ ಇವುಗಳನ್ನು ಮಾಡಬಹುದು.
ಪಾಸ್ಚರ್
ಮಗ್ಗುಲಾಗಿ ಮಲಗಿದಾಗ 1 ದಿಂಬನ್ನು ಕತ್ತಿನ ಕೆಳಗೆ ಮತ್ತು 1 ದಿಂಬನ್ನು ಕಾಲುಗಳ ಮಧ್ಯದಲ್ಲಿ ಇರಿಸಿ, ನೇರವಾಗಿ ಮಲಗಿದಾಗ ದಿಂಬನ್ನು ಮಂಡಿಗಳ ಕೆಳಗೆ ಇರಿಸಿ.
ಮೋಟರ್ ಗಾಡಿಯಲ್ಲಿ ಹೋಗುವಾಗ ಸೀಟ್ ತಗ್ಗಿನಲ್ಲಿದ್ದರೆ ಒಂದು ಕುಶನ್ ಇರಿಸಿಕೊಂಡು ಕುಳಿತುಕೊಳ್ಳಿ.
– ಡಾ. ವಿನುತಾ