ನನ್ನ ದೇಹ ನನ್ನ ಹಕ್ಕು!

ಕಳೆದ 158 ವರ್ಷಗಳಷ್ಟು ಹಳೆಯ ಕಾನೂನೊಂದನ್ನು ಸುಪ್ರೀಂ ಕೋರ್ಟ್‌ ಸಂವಿಧಾನ ಬಾಹಿರ ಎಂದು ಹೇಳಿತು. ಬೇರೊಬ್ಬರ ಪತ್ನಿಯ ಜೊತೆ ಒಪ್ಪಿಗೆಯ ಲೈಂಗಿಕ ಸಂಬಂಧ ಮಾಡಿದ್ದರೆ, ಅದು ಮುಂಚೆ ದಂಡನಾರ್ಹ ಅಪರಾಧವಾಗಿತ್ತು. ಅದೀಗ ರದ್ದಾಯಿತು. ಆ ಕಾನೂನು ಅದರಷ್ಟರ ಮಟ್ಟಿಗೆ ಅದು ಅನೈತಿಕವಾಗಿತ್ತು. ಅದರ ಬಗ್ಗೆ ಸಾಕಷ್ಟು ಆಕ್ಷೇಪಗಳು ಕೇಳಿ ಬರುತ್ತಿದ್ದವು. ಒಂದು ರೋಚಕ ಸಂಗತಿಯೆಂದರೆ, ಗಂಡ ಯಾರ ಜೊತೆಗಾದರೂ ಅಕ್ರಮ ಸಂಬಂಧ ಹೊಂದಿದ್ದರೆ, ಅದರ ಬಗ್ಗೆ ಕೇಳುವ ಹಕ್ಕು ಹೆಂಡತಿಗೆ ಇರುತ್ತಿರಲಿಲ್ಲ. ಮತ್ತೊಂದು ಆಸಕ್ತಿದಾಯಕ ವಿಚಾರವೆಂದರೆ, ಆಗ ಹೆಂಡತಿ ಅಪರಾಧಿ ಆಗುತ್ತಿರಲಿಲ್ಲ. ಪರಪರುಷ ಮಾತ್ರ ಅಪರಾಧಿ ಆಗಿರುತ್ತಿದ್ದ.

ಹೆಂಡತಿಯರು ಗಂಡಂದಿರ ಆಸ್ತಿ ಎಂದು ಈ ಕಾನೂನು ಹೇಳುತ್ತಿತ್ತು. ಪರಪುರುಷರು ತಮ್ಮ  ಸ್ತ್ರೀಯ ದುರುಪಯೋಗ ಮಾಡಿಕೊಳ್ಳದಿರಲಿ ಎಂದು ಅದು ಸೂಚಿಸುತ್ತಿತ್ತು. ಹಾಗೊಂದು ವೇಳೆ ಪತಿ ಅನುಮತಿ ಕೊಟ್ಟರೆ ಅದು ದಂಡನಾರ್ಹ ಅಪರಾಧ ಆಗುತ್ತಿರಲಿಲ್ಲ. ಅಂದರೆ ಪ್ರಕರಣ ನೈತಿಕತೆ ಅಥವಾ ವೈವಾಹಿಕ ಶುದ್ಧತೆಯದಲ್ಲ, ಹೊಂದಾಣಿಕೆಯದ್ದಾಗಿತ್ತು.

ಹಿಂದೆ ಕೂಡ 2-3 ಸಲ ಈ ಪ್ರಕರಣ ಸುಪ್ರೀಂ ಕೋರ್ಟ್‌ ಅಂಗಳದ ತನಕ ಬಂದಿತ್ತು. ಇದು ಏಕಮುಖ ಆಗಿರುವ ಕಾರಣ ಸಂವಿಧಾನಬಾಹಿರ ಎಂದು ಘೋಷಿಸುವ ಬೇಡಿಕೆ ಇಡಲಾಆಗಿತ್ತು. ಆದರೆ ನ್ಯಾಯಾಲಯ ಇದರಲ್ಲಿ ಹಸ್ತಕ್ಷೇಪ ಮಾಡಲಿಲ್ಲ ಹಾಗೂ ಸಂಸತ್ತು ಕೂಡ ಈ ಕಾನೂನನ್ನು ಬದಲಿಸಲು ಹೋಗಲಿಲ್ಲ. ಬ್ರಿಟಿಷರ ಮೇಲೆ ಆರೋಪ ಹೊರಿಸುವುದಕ್ಕಿಂತ ಭಾರತೀಯ ಸಂಸತ್ತು ಈ ಕಾನೂನಿಗೆ ಹೊಣೆಯಾಗಿದೆ. 70 ವರ್ಷಗಳ ಕಾಲ ಅದನ್ನು ಜನರ ಮೇಲೆ ಹೇರಿತ್ತು. ಅಂದಹಾಗೆ ಈ ಕಾನೂನು ನಿಷ್ಕ್ರಿಯ ಸ್ಥಿತಿಯಲ್ಲಿಯೇ ಇತ್ತು. ಅತ್ಯಂತ ಕಡಿಮೆ ಪ್ರಕರಣಗಳು ದಾಖಲಾಗುತ್ತಿದ್ದ. ಆದರೆ ಆಕೆಯ ಪ್ರೇಮಿಯ ಮೇಲೆ ತೂಗುಗತ್ತಿ ಸದಾ ಹಾಗೆಯೇ ನೇತಾಡುತ್ತಿತ್ತು. ಗಂಡ ಯಾವಾಗ ದೂರು ಕೊಡುತ್ತಾನೋ, ತಾನು ಯಾವಾಗ ಜೈಲಿಗೆ ಹೋಗಬೇಕಾಗುತ್ತೋ ಎಂಬ ಭಯ ಪ್ರೇಮಿಗೆ ಸದಾ ಕೂಡಿರುತ್ತಿತ್ತು.

ಬಹಳಷ್ಟು ವಿವಾಹಿತೆಯರು ತಮ್ಮ ಪತಿಯ ಮನೆ ತೊರೆದು ಪ್ರೇಮಿಯ ಜೊತೆ ಇರಲು ಹೆದರುತ್ತಿದ್ದರು, ಏಕೆಂದರೆ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಭಯ ಇರುತ್ತಿತ್ತು. ಆದರೆ ಬೇರೆ ವಿವಾಹಿತೆ ಅಥವಾ ಅವಿವಾಹಿತೆಯ ಜೊತೆ ಇರುವ ಪತಿಯ ವಿರುದ್ಧ ಪ್ರಕರಣ ದಾಖಲಿಸುವ ಹಕ್ಕು ಮಾತ್ರ ಹೆಂಡತಿಗೆ ಇರುತ್ತಿರಲಿಲ್ಲ.

ವೈವಾಹಿಕ ಕಾನೂನಿನಲ್ಲಿ ಈ ನಿಟ್ಟಿನಲ್ಲಿ ಇಬ್ಬರಿಗೂ ವಿಚ್ಛೇದನ ಕೊಡುವ ಹಕ್ಕು ಮೊದಲಿನಿಂದಲೇ ಇತ್ತು. ಆದರೆ ಆ ಪ್ರಕ್ರಿಯೆ ಬಹು ದೀರ್ಘ. ಠಾಣೆಯಿಂದ ಠಾಣೆಗೆ, ವಕೀಲರ ಬಳಿ ಎಡತಾಕುವುದು ಬಹು ಕ್ಲಿಷ್ಟಕರವಾಗಿದ್ದವು.

ಮೊದಲು ಸುಪ್ರಿಂಕೋರ್ಟ್‌ಇದು ಅನೈತಿಕ, ವ್ಯಭಿಚಾರ ಎಂದು ಹೇಳಿ, ಪರಪುರುಷನನ್ನೇ  ಅಪರಾಧಿಯಾಗಿಸುವುದು, ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ತಪ್ಪಲ್ಲ ಎಂದು ಹೇಳಿತ್ತು. ಏಕೆಂದರೆ ಇದರಿಂದ ಪರಪುರುಷನ ಜೊತೆ ಸಂಬಂಧ ಬೆಳೆಸುವ ಮಹಿಳೆಗೆ ಸುರಕ್ಷತೆ ದೊರೆಯುತ್ತದೆ. ಸುಪ್ರಿಂ ಕೋರ್ಟ್‌ನ ಸಮಾನತೆಯ ಅರ್ಥ ಪತ್ನಿಯ ಮೇಲೂ ಪ್ರಕರಣ ದಾಖಲು ಮಾಡಬೇಕು ಎಂಬುದಾಗಿತ್ತು.

ಈಗಿನ ತೀರ್ಪಿನಲ್ಲಿ ಉಲ್ಲೇಖಿಸಿರುವುದೇನೆಂದರೆ, ಹೆಂಡತಿಯ ಮೇಲೆ ಅಪರಾಧದ ಪ್ರಕರಣ ದಾಖಲಾಗುವುದಿಲ್ಲ. ಜೊತೆಗೆ ಅವಳ ಪ್ರೇಮಿಯ ಮೇಲೂ ಕೂಡ. ಈ ತೀರ್ಪಿನ ಅರ್ಥ ಹೀಗೂ ಕೂಡ ಆಗುತ್ತದೆ. ಲೋಕಸಭೆ ಕೂಡ ಈಗ ಕಾನೂನುಬಾಹಿರ ರೂಪಿಸುವ ಹಾಗಿಲ್ಲ. ಏಕೆಂದರೆ ಅದನ್ನು ಸಂವಿಧಾನ ಬಾಹಿರ ಎಂದು ಹೇಳಲಾಗಿದೆ. ಲೋಕಸಭೆ ಮೊದಲೇ ಈ ಬಗ್ಗೆ ಕಾನೂನು ರೂಪಿಸಿದ್ದರೆ ಏನಾದರೂ ಮಧ್ಯದ ದಾರಿ ಕಂಡುಕೊಳ್ಳುವ ಸಾಧ್ಯತೆ ಇತ್ತು. ಇದು ಸೆಕ್ಸ್ ಸಂಬಂಧಗಳಿಗೆ ಉದಾಹರಣೆಯ ಲೈಸೆನ್ಸ್ ಅಲ್ಲ, ಇದು ಸ್ತ್ರೀಪುರುಷರ ಸಂಬಂಧವನ್ನು ನೈತಿಕ ಪೊಲೀಸ್‌ ಗಿರಿಯಿಂದ ರಕ್ಷಿಸುವ ಕವಚವಾಗಿದೆ. ಇದರಲ್ಲಿ ಕಾನೂನಿನ ಬಲದಿಂದ ಅವರ ಮೇಲೆ ಒತ್ತಾಯ ಒತ್ತಡ ತರುವ ಹಾಗಿಲ್ಲ. ನೈತಿಕತೆಯ ಪಾಠ ಬೋಧಿಸುವ ಹಾಗೂ ಹಿಂದೂ ಸಂಸ್ಕೃತಿಯ ನೆಪ ಹೇಳುವವರು ಒಂದೊಮ್ಮೆ ಧರ್ಮಗ್ರಂಥಗಳ ಪುಟಗಳನ್ನು ತಿರುಗಿಸಿ ನೋಡಿದರೆ, ಯಾವ ದೇವ ದೇವಿಯರನ್ನು ಅವರು ಪೂಜಿಸುತ್ತಾರೊ, ಅದರಲ್ಲಿ ಬಹಳಷ್ಟು ದೇವಿದೇವತೆಯರಿಗೆ ವಿವಾವೇಹೇತರ ಸಂಬಂಧ ಇದ್ದಿರುವುದು ತಿಳಿದು ಬರುತ್ತದೆ.

ಮಹಾನ್‌ ಭಾರತೀಯ ಹಿಂದೂ ಸಂಸ್ಕೃತಿಯ ರಹಸ್ಯ ಇಷ್ಟಕ್ಕೇ ಸೀಮಿತವಾಗಿದೆ. ಇಂದು ಬಲಾತ್ಕಾರದ ಪ್ರಕರಣಗಳು ಹೆಚ್ಚಾಗಲು ಮಹಿಳೆಯರನ್ನು ಸಂಪತ್ತು ಎಂದು ಪರಿಗಣಿಸಿರುವುದು ಕಾರಣ. ಒಂದು ವೇಳೆ ಇದೇ ರಸ್ತೆಯ ಮೇಲೆ ಕಾಣಿಸಿದರೆ ಅವಳನ್ನು ಬಳಸಿಕೊಂಡುಬಿಡಬೇಕು ಎಂಬ ಮನೋಭಾವ ಹೇಗಿದೆ ಎಂದರೆ, ರಸ್ತೆಯ ಮೇಲೆ ಬಿದ್ದ 2000 ರೂ. ನೋಟನ್ನು ಅನಾಮತ್ತಾಗಿ ಎತ್ತಿಕೊಂಡು ಜೇಬಿಗೆ ಹಾಕಿಕೊಂಡಂತೆ.

ಗಂಡಹೆಂಡತಿಯ ಸಂಬಂಧ ಮಧುರವಾಗಿರಬೇಕು, ಸುಖವಾಗಿರಬೇಕು. ಅದರ ಜವಾಬ್ದಾರಿ ಗಂಡಹೆಂಡತಿ ಇಬ್ಬರದ್ದೂ ಆಗಿದೆ. ಅದು ಅವ್ಯವಹಾರೀ ಧರ್ಮ

ಧರ್ಮ ತನ್ನಷ್ಟಕ್ಕೆ ತಾನು ದಂಧೆಯೇ ಆಗಿಬಿಟ್ಟಿದೆ, ಈ ದಂಧೆಗಾಗಿ ಬಾಲ್ಯದಿಂದಲೇ ಗ್ರಾಹಕರನ್ನು ಜೀವನ ಪರ್ಯಂತ, ರಾಯಲ್ಟಿ ಪ್ರೋಗ್ರಾಮಿಗಾಗಿ ಸದಸ್ಯರನ್ನಾಗಿಸಿಕೊಳ್ಳಲಾಗುತ್ತದೆ. ಬಹಳಷ್ಟು ಸೇವೆಗಳನ್ನು ಧರ್ಮದ ಮುಖಾಂತರವೇ ಪಡೆದುಕೊಳ್ಳಲಾಗುತ್ತದೆ. ದಂಧೆಯ ಹಾಗೆ ಪ್ರತಿಯೊಂದು ಸೇವೆಗೂ ಇಲ್ಲಿ ಬೆಲೆ ತೆರಬೇಕಾಗುತ್ತದೆ. ಯಾವುದೂ ಉಚಿತವಾಗಿ ಸಿಗುವುದಿಲ್ಲ.

ಕ್ರೆಡಿಟ್‌ ಕಾರ್ಡುಗಳ ರಾಯಲ್ಟಿ ಪ್ರೋಗ್ರಾಮ್ ಗಳ ಹಾಗೆ ಧರ್ಮದ ರಾಯಲ್ಟಿಯಲ್ಲಿ ಸಾವಿರಾರು ನಿಯಮ ಉಪನಿಯಮಗಳಿರುತ್ತವೆ. ಆರಂಭದಲ್ಲಿ ಪ್ರತಿಯೊಂದು ದಂಧೆಯ ಹಾಗೆ ಪ್ರತಿಯೊಂದು ಧರ್ಮ ದೊಡ್ಡ ದೊಡ್ಡ ಕನಸುಗಳನ್ನು ತೋರಿಸುತ್ತದೆ. ಗ್ರಾಹಕನ ಒಪ್ಪಿಗೆ ಸಿಗುತ್ತಿದ್ದಂತೆ ಕಣ್ಣು ತೇಲಾಡುತ್ತವೆ.

ಯಾರು ಕ್ರೆಡಿಟ್‌ ಕಾರ್ಡ್‌ ಅಥವಾ ಬ್ಯಾಂಕಿನಲ್ಲಿ ಖಾತೆ ಹೊಂದಿರುತ್ತಾರೊ, ಧರ್ಮದ ರೀತಿನೀತಿಯ ಹಾಗೆ ಬ್ಯಾಂಕ್‌ ಮತ್ತು ಕ್ರೆಡಿಟ್ ಕಾರ್ಡ್‌ ಕಂಪನಿಗಳಿಗೂ ರೀತಿ ನೀತಿ ಇರುತ್ತವೆ ಎಂಬುದನ್ನು ಚೆನ್ನಾಗಿ ತಿಳಿದು ಕೊಂಡಿರುತ್ತಾರೆ. ಈಚೆಗೆ ದೊಡ್ಡ ದೊಡ್ಡ ಮಂದಿರಗಳಲ್ಲಿ ಬಹಳಷ್ಟು ಉದ್ದದ ಕ್ಯೂನಲ್ಲಿ ಗೊಂದಲ ಗಲಾಟೆಯ ಬಳಿಕ ಹಣ ಕೊಟ್ಟು ಸೇವೆ ಪಡೆಯಬೇಕಾಗುತ್ತದೆ. ಅದೇ ರೀತಿ ಖಾತೆದಾರರು ಮತ್ತು ಕ್ರೆಡಿಟ್‌ ಕಾರ್ಡ್‌ ಹೋಲ್ಡರ್‌ಗಳಿಗೆ ಬಹಳಷ್ಟು ತೊಂದರೆಯ ಬಳಿಕ ತಮ್ಮ ದೇವರನ್ನು ಕಾಣಲು ಹಲವು ಗಂಟೆ ದಿನಗಳು ಬೇಕಾಗುತ್ತವೆ.

ಕ್ರೆಡಿಟ್‌ ಕಾರ್ಡ್‌ ಮಾರಾಟ ಮಾಡುವ ಮುನ್ನ, ಖಾತೆ ತೆರೆಯುವ ಮುಂಚೆ ಅಥವಾ ಏರ್‌ಲೈನ್ಸ್ ಪ್ರೋಗ್ರಾಂ ಸದಸ್ಯರಾಗಲು ಅಥವಾ ಹೋಟೆಲ್‌ ಚೇನ್‌ನ ವಿಶೇಷ ಸೌಲಭ್ಯ ಪಡೆಯಲು ಬಹು ದೊಡ್ಡ ಕನಸುಗಳನ್ನು ತೋರಿಸಲಾಗುತ್ತದೆ. ಒಂದು ಸಲ ಆ ಜಾಗದಲ್ಲಿ ಸಿಲುಕಿ ಬಿಟ್ಟರೆ ಮತ್ತು ಹಣ ವಾಪಸ್‌ ಕೊಡದೆ ಇದ್ದರೆ ನೀವು ಗುಲಾಮರಾದಂತೆಯೇ ಸರಿ. ಧರ್ಮದ ಹಾಗೆ ನಿಮಗೆ ಪುರೋಹಿತರ ರೂಪದಲ್ಲಿ ರಾಯಲ್ಟಿ ಮ್ಯಾನೇಜರ್‌ ಅಥವಾ ರಿಲೇಶನ್‌ಶಿಪ್‌ ಮ್ಯಾನೇಜರ್‌ ಸಿಗುತ್ತಾರೆ. ಅವರು ಹಣ ವಸೂಲಿಗೆಂದೇ ಇರುತ್ತಾರೆ ಹೊರತು ಭಕ್ತರಿಗೆ ಸೇವೆ ಕೊಡಲು ಅಲ್ಲ.

ಪ್ರತಿಯೊಂದು ಧರ್ಮ ಭಕ್ತರಿಗೆ ಬಣ್ಣ ಬಣ್ಣದ ಭರವಸೆ ಕೊಡುತ್ತಿರುತ್ತದೆ. ಅವನೇ ಉದ್ಧಾರ ಮಾಡುತ್ತಾನೆ, ಪಾಪ ಕೊನೆಗೊಳಿಸುತ್ತಾನೆ, ಹಣ ಪಡೆದು ರೋಗಗಳನ್ನು ನಿರ್ನಾಮ ಮಾಡುತ್ತಾನೆ, ಆರ್ಥಿಕ ಸಂಕಷ್ಟಗಳನ್ನು ನಿವಾರಿಸುತ್ತಾನೆ, ಅದಕ್ಕಾಗಿ ಧರ್ಮಕ್ಕೆ ಶರಣಾಗುವ… ಅದೇ ರೀತಿ 40 ಪ್ರವಾಸಿ ಸ್ಥಳಗಳಲ್ಲಿ ಹೋಟೆಲ್ ಹೊಂದಿರುವ ಹೋಟೆಲ್‌ ಸಮೂಹವೊಂದು ಹೇಳುತ್ತದೆ ಒಂದು ಸಲ ಹಣ ಕೊಡಿ ಹಾಗೂ ಜೀವನ ಪರ್ಯಂತ ಖುಷಿಪಡಿ!

ಕ್ರೆಡಿಟ್‌ ಕಾರ್ಡ್‌ ಕಂಪನಿಗಳು ಈಗ ಖಜಾನೆ ನಿಮ್ಮ ಕೈಗೆ ಬಂತು, ನಿಮಗಿಷ್ಟವಾದುದನ್ನು ಖರೀದಿಸಿ. ಇಎಂಐ ಕೂಡ ಇದೆ, ಚಿಂತೆ ಬೇಡ ನಾವಿದ್ದೀಲ್ಲ, ಎಂದು ಹೇಳುತ್ತವೆ. ತಿಂಗಳಾಗುತ್ತಲೇ ಆ ಕ್ರೆಡಿಟ್‌ ಕಾರ್ಡ್‌ನ ಮರ್ಮ ಗೊತ್ತಾಗುತ್ತದೆ. ಹೆಚ್ಚು ಕಡಿಮೆ  ಆಗಿಬಿಟ್ಟರೆ, ಕ್ರೆಡಿಟ್‌ ಕಾರ್ಡ್‌ ಬಂದ್‌ ಆಗಿಬಿಡುತ್ತದೆ. ಧರ್ಮ ಸಂಸತ್ತು ಭಕ್ತರು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಅದಕ್ಕಾಗಿ 40 ಜನ ಅರ್ಹರನ್ನು ಕರೆಸಿ ಭೋಜನ ಮಾಡಿಸಬೇಕು ಎಂದು ಹೇಳುತ್ತದೆ. ಹೋಟೆಲ್ ರಾಯಲ್ಟಿ ಪ್ರೋಗ್ರಾಮ್ ಪಾಯಿಂಟ್ಸ್ ಎಕ್ಸ್ ಪೈರ್ಡ್‌ ಆಗಿಬಿಟ್ಟಿವೆ. ಈಗ ಏನೂ ಮಾಡಲಾಗದು. ಫ್ರೀ ಕೊಡುವ ಮಾತು ಫ್ರೀ ಇದ್ದಾಗಿನ ವಿಷಯ. ಬಳಿಕ ಎಲ್ಲಕ್ಕೂ ಪಾವತಿ ಮಾಡಬೇಕು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ