ಮದುವೆ ಎಂಬುದು ಯಾವುದೇ ಯುವತಿಯ ಬಾಳಿನಲ್ಲಿ ಮಹತ್ವಪೂರ್ಣ ದಿವಸ. ಆ ದಿನದಂದು ಮದುಮಗಳು ಸುಂದರ ಮತ್ತು ವಿಶೇಷವಾಗಿ ಕಾಣಿಸಿಕೊಳ್ಳಲು ಬಯಸುತ್ತಾಳೆ. ಮದುವೆಯಲ್ಲಿ ಎಲ್ಲ ಚೊಕ್ಕವಾಗಿ ಮತ್ತು ಆಕರ್ಷಕವಾಗಿ ಇರಲೆಂದು ಅವಳು ಇಷ್ಟಪಡುತ್ತಾಳೆ. ಮದುವೆಯ ಸಂದರ್ಭದಲ್ಲಿ ಮದುಮಗಳು ಇತರರಿಗಿಂತ ವಿಶಿಷ್ಟವಾಗಿ ಕಾಣಬೇಕಾದರೆ, ಕೆಲವು ವಿಷಯಗಳನ್ನು ಗಮನದಲ್ಲಿಡಬೇಕಾಗುತ್ತದೆ. ಮೇಕಪ್‌ ಹೇರ್‌ ಸ್ಟೈಲ್‌ಗಳಿಂದ ಹಿಡಿದು ಸೀರೆ, ಲಹಂಗಾಗಳನ್ನು ಆರಿಸುವ ಕಷ್ಟದ ಕೆಲಸ ಅವಳ ಮುಂದಿರುತ್ತದೆ. ಸುಂದರ ಡ್ರೆಸ್‌ನ್ನು ಆರಿಸುವ ಶ್ರಮದ ಪ್ರತಿಫಲ ವೆಡ್ಡಿಂಗ್‌ ಆಲ್ಬಂನಲ್ಲಿ ಪ್ರತಿಬಿಂಬಿತವಾಗುತ್ತದೆ. ಬಾಳಿನುದ್ದಕ್ಕೂ ಅದೊಂದು ಮನೋಲ್ಲಾಸದ ಇಡುಗಂಟಾಗಿ ಅವಳ ಬಳಿ ಉಳಿದಿರುತ್ತದೆ.

ಬ್ರೈಡಲ್ ಹೇರ್‌ನ್ನು ಆರಿಸುವಾಗ ಯುವತಿಯರಿಗೆ ಯಾವ ಬಣ್ಣ, ಡಿಸೈನ್‌ ಮತ್ತು ಪ್ಯಾಟರ್ನ್‌ನ ಬ್ರೈಡಲ್ ಡ್ರೆಸ್‌ನ್ನು ಕೊಳ್ಳಬೇಕೆಂದು ತಿಳಿಯುವುದಿಲ್ಲ.

ಡ್ರೆಸ್‌ ಡಿಸೈನರ್‌ ಊರ್ಮಿಳಾ ಈ ಬಗ್ಗೆ ಹೀಗೆ ಹೇಳುತ್ತಾರೆ, “ಮದುವೆ ಎಂಬುದು ಮದುಮಗಳಿಗೆ ವಿಶೇಷ ಸಂದರ್ಭವಾಗಿರುತ್ತದೆ. ಆ ದಿನಗಳಲ್ಲಿ ಆಕೆ ಸುಂದರವಾಗಿ ಕಾಣಿಸಿಕೊಳ್ಳಲು ಬಯಸುವುದು ಸಹಜ. ಆದರೆ ಅದಕ್ಕಾಗಿ ಅವಳು ತನ್ನ ಮೈಮಾಟಕ್ಕೆ ತಕ್ಕಂತಹ ಬ್ರೈಡಲ್ ವೇರ್‌ ಕೊಳ್ಳುವುದು ಅಗತ್ಯ.”

ಮುಂಬೈನ ಡ್ರೆಸ್‌ ಡಿಸೈನರ್‌ ನಚಿಕೇತ್‌ ಬಿ ಹೀಗೆ ಅಭಿಪ್ರಾಯಪಡುತ್ತಾರೆ, “ಮದುಮಗಳು ಮದುವೆಯ ನಂತರ ಆ ಡ್ರೆಸ್‌ಗಳನ್ನು ಉಪಯೋಗಿಸಲು ಬರುವಂತಹ ಉಡುಪುಗಳನ್ನು ಆರಿಸಬೇಕು. ಆದ್ದರಿಂದ ಮಿಕ್ಸ್ ಅಂಡ್‌ ಮ್ಯಾಚ್‌ ಮಾಡಿ ತಯಾರಿಸಿರುವ ಕಸ್ಟಮೈಸ್ಡ್ ಲಹಂಗಾಗಳನ್ನು ಆರಿಸುವ ಬಗ್ಗೆಯೂ ಯೋಚಿಸಬೇಕು.”

ಡಿಸೈನರ್‌ ನಯನಾ, “ಮದುಮಗಳು ತನ್ನ ಆರಾಮದ ಕುರಿತಾಗಿ ಗಮನವಿಡಬೇಕು. ಹೆಚ್ಚು ಭಾರವಿರುವ ಕಂಚಿ ಸೀರೆ ಅಥವಾ ಭಾರಿ ಲಹಂಗಾಗಳನ್ನು ಕೊಂಡರೆ ಅವುಗಳನ್ನು ಧರಿಸಿದ ಕೆಲವೇ ಗಂಟೆಗಳಲ್ಲಿ ಬಳಲಿಬಿಡುತ್ತಾರೆ. ಆದ್ದರಿಂದ ಅವು ಅತಿ ಹೆಚ್ಚು ಭಾರದ್ದಾಗಿರದಂತೆ ನೋಡಿಕೊಳ್ಳಬೇಕು,” ಎಂದು ಹೇಳುತ್ತಾರೆ.

ಕಡಿಮೆ ಎತ್ತರದರ ಡ್ರೆಸ್‌ : ಯುವತಿಯರು ತಮ್ಮ ಹೈಟ್‌ಗೆ ಅನುಸಾರವಾಗಿ ಬ್ಲೌಸ್‌ ಧರಿಸಬೇಕು ಎಂದು ಊರ್ಮಿಳಾ ಹೇಳುತ್ತಾರೆ. ಕಡಿಮೆ ಎತ್ತರವಿರುವವರು ಉದ್ದವಾದ ಬ್ಲೌಸ್‌ ಧರಿಸಬಾರದು. ಏಕೆಂದರೆ ಅದರಿಂದ ಅವರ ಎತ್ತರ ಇನ್ನೂ ಕಡಿಮೆ ಕಾಣುತ್ತದೆ.

ನಯನಾರ ಪ್ರಕಾರ, ಕಡಿಮೆ ಎತ್ತರವಿರುವರು ದೊಡ್ಡ  ಬಾರ್ಡರ್‌ನ ಸೀರೆ ಅಥವಾ ಲಹಂಗಾ ಆರಿಸಬಾರದು ಮತ್ತು ಅವರ ಬಾಡಿ ಪೂರ್ತಿ ಜರಿ ಅಥವಾ ಎಂಬ್ರಾಯಿಡರಿ ಇಲ್ಲದಂತೆ ನೋಡಿಕೊಳ್ಳಬೇಕು.

ಬಣ್ಣದ ಆಯ್ಕೆ : ಬ್ರೈಡಲ್ ಡ್ರೆಸ್‌ ಆರಿಸುವಾಗ ಬಣ್ಣವನ್ನು ಗಮನಿಸಬೇಕು. ಮುಖ್ಯವಾಗಿ ಬ್ರೈಡಲ್ ಲಹಂಗಾ ಎಂದೊಡನೆ ಕೆಂಪು ಮತ್ತು ಹಸಿರು ಟಿಪಿಕಲ್ ಬಣ್ಣಗಳು ಕಣ್ಣು ಮುಂದೆ ಬರುತ್ತದೆ. ಆದರೆ ಅದಲ್ಲದೆ ಇತರೆ ಕೆಲವು ಬಣ್ಣಗಳೂ ಮದುಮಗಳಿಗೆ ಶೋಭೆ ನೀಡಬಲ್ಲವು.

ಮದುಮಗಳು ಲಹಂಗಾದ ಬಣ್ಣವನ್ನು ಎಕ್ಸ್ ಪೆರಿಮೆಂಟ್‌ ಮಾಡಬೇಕು ಎಂದು ಊರ್ಮಿಳಾ ಹೇಳುತ್ತಾರೆ. ಸಾಮಾನ್ಯವಾದ ಕೆಂಪು, ಹಸಿರು ಬಣ್ಣಗಳಲ್ಲದೆ ಪಿಂಕ್‌, ಸ್ಕೈ ಬ್ಲೂ, ಆಕ್ವಾ ಬ್ಲೂ ಬಣ್ಣಗಳನ್ನೂ ಆರಿಸಬಹುದು.

ಭಾರತೀಯ ಸ್ಕಿನ್‌ ಟೋನ್‌ಗೆ ನಿಯಾನ್‌ ಬಣ್ಣಗಳು ಅತಿ ಗಾಢವಾಗಿ ತೋರುವವೆಂದು ನಚಿಕೇತ್‌ ಅಭಿಪ್ರಾಯಪಡುತ್ತಾರೆ.  ಅಂತಹ ಬಣ್ಣಗಳಿಂದ ನಿಮ್ಮ ಸ್ಕಿನ್‌ ಟೋನ್‌ ಮಂಕಾಗಿ ಕಾಣುತ್ತದೆ.

ತನ್ನ ಸ್ಕಿನ್‌ಟೋನ್‌ಗೆ ತಕ್ಕಂತಹ ಬಣ್ಣದ ಉಡುಪನ್ನು ಆರಿಸಬೇಕೆಂದು ನಯನಾ ಸಲಹೆ ನೀಡುತ್ತಾರೆ. ಬಿಳಿ ಚರ್ಮವಿರುವವರಿಗೆ ಗಾಢ ಬಣ್ಣದ ಸೀರೆಗಳು ಒಪ್ಪುತ್ತವೆ. ಆದರೆ ಅವರು ಲಹಂಗಾ ಆರಿಸುವಾಗ ಪೇಸ್ಟಲ್ ಕಲರ್ಸ್ ತೆಗೆದುಕೊಳ್ಳುವುದು ಉತ್ತಮ. ಇತರರಿಗೆ ಕೊಂಚ ತಿಳಿ ಬಣ್ಣದ ಸೀರೆಗಳು ಹೊಂದಿಕೆಯಾಗುತ್ತವೆ. ಗೋಧಿ ಬಣ್ಣದವರಿಗೆ ನೀಲಿ, ಕೇಸರಿಯಂತಹ ಮೀಡಿಯಮ್ ಟೋನ್‌ನ ಬಣ್ಣದ ಡ್ರೆಸ್‌ಗಳು ಚೆನ್ನಾಗಿರುತ್ತವೆ. ಶ್ಯಾಮಲ ವರ್ಣದವರಿಗೆ ಮೆಜೆಂತಾ, ಲೈಟ್‌ ಬ್ಲೂ ಲಹಂಗಾಗಳು ಚೆನ್ನಾಗಿ ಒಪ್ಪುತ್ತವೆ.

ಟ್ರೆಂಡ್‌ನಲ್ಲಿರುವ ಗೌನ್‌ : ಇಂದು ಭಾರತೀಯ ವಿವಾಹಗಳಲ್ಲಿ ಮುಹೂರ್ತದ ಸಮಯದ ಹೊರತಾಗಿ ಇತರೆ ಕಾರ್ಯಕ್ರಮಗಳಲ್ಲಿ ವೆಸ್ಟರ್ನ್‌ ಲುಕ್‌ನ್ನು ಇಷ್ಟಪಡಲಾಗುತ್ತದೆ. ಸೀರೆ, ಘಾಘ್ರಾ ಚೋಲಿಗಳ ಬದಲು ಯುವತಿಯರು ಗೌನ್‌ನ್ನು ಮೆಚ್ಚುತ್ತಿದ್ದಾರೆ. ಮೆಟ್ರೋ ಸಿಟಿಗಳಲ್ಲದೆ ಇತರೆ ನಗರಗಳಲ್ಲಿಯೂ ಇದೊಂದು ಟ್ರೆಂಡ್‌ ಆಗಿದೆ. ಈಚಿನ ದಿನಗಳಲ್ಲಿ ಅನೇಕ ಬಗೆಯ ಗೌನ್‌ಗಳು ಚಾಲ್ತಿಯಲ್ಲಿದ್ದು, ಅವುಗಳಲ್ಲಿ ಡ್ರೇಪ್‌ ಗೌನ್‌ ಹೆಚ್ಚು ಪ್ರಚಲಿತವಾಗಿದೆ. ಈ ಈವ್ನಿಂಗ್‌ ಗೌನ್‌ 2 ರೀತಿಯ ಡ್ರೇಪ್‌ ದೊರೆಯುತ್ತಿದ್ದು. ಒಂದು ಸೈಡ್‌ಡ್ರೇಪ್‌, ಮತ್ತೊಂದು ಫ್ರಂಟ್‌ ಡ್ರೇಪ್‌ ಆಗಿದೆ. ಇದಲ್ಲದೆ ಸ್ಯಾರಿ ಡ್ರೇಪ್‌ ಗೌನ್‌ ಸಹ ಯುವತಿಯರ ಮೆಚ್ಚಿಗೆ ಪಡೆದಿದೆ.

ಇದರಲ್ಲಿ ಸೀರೆಯನ್ನು ಗೌನ್‌ನಂತೆ ಉಡಲಾಗುತ್ತದೆ. ಇವುಗಳಲ್ಲದೆ ಸಿಂಡ್ರೆಲಾ ಗೌನ್‌, ಸ್ಟ್ರೇಟ್‌ ಗೌನ್‌ ಮತ್ತು ಕಟ್‌ಔಟ್‌ ಗೌನ್‌ಗಳೂ ಹೆಚ್ಚು ಬೇಡಿಕೆಯಲ್ಲಿವೆ. ಶರೀರ ಪರ್ಫೆಕ್ಟ್ ಶೇಪ್‌ನಲ್ಲಿರುವವರಿಗೆ ಕಟ್‌ಔಟ್‌ ಗೌನ್‌ ಹೊಂದಿಕೆಯಾಗುತ್ತದೆ.

ಇಂಡೋವೆಸ್ಟರ್ನ್‌ ಡ್ರೆಸ್‌ ಆಯ್ಕೆ : ಡಿಸೈನರ್‌ ಊರ್ಮಿಳಾ ಹೇಳುತ್ತಾರೆ, “ಮದುಮಗಳು ತನ್ನ ಲುಕ್‌ನೊಂದಿಗೆ ಎಕ್ಸ್ ಪೆರಿಮೆಂಟ್‌ ಮಾಡಲು ಬಯಸುತ್ತಾಳಾದರೆ, ಅವಳ ಸ್ಟೈಲ್ ‌ಮತ್ತು ಲುಕ್‌ ಎದ್ದು ಕಾಣುತ್ತದೆ. ಇಂಡೋವೆಸ್ಟರ್ನ್‌ ಸ್ಟೈಲ್‌ನಲ್ಲಿ ಟ್ರೆಡಿಶನಲ್ ಮತ್ತು ಮಾಡರ್ನ್‌ ಟೇಸ್ಟ್ ಗಳನ್ನು ಒಂದಾಗಿಸಲಾಗುತ್ತದೆ. ಮದುಮಗಳು ತನ್ನ ಮದುವೆಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮದಲ್ಲಿ ಇಂಡೋವೆಸ್ಟರ್ನ್‌ ಸ್ಟೈಲ್‌‌ನ ಉಡುಗೆಯನ್ನು ಧರಿಸಬಹುದು.

ಇಂದಿನ ದಿನಗಳಲ್ಲಿ ಫ್ಲಾಪ್‌ ಧೋತಿ ಮತ್ತು ಸಲ್ವಾರ್‌ ಧೋತಿಗಳು ಚಾಲ್ತಿಯಲ್ಲಿವೆ. ಒಳ್ಳೆಯ ಎತ್ತರ ಹೊಂದಿರುವ ಯುವತಿಯರು ಕ್ರಾಪ್‌ ಟಾಪ್‌ ಮತ್ತು ಫ್ಲೋರ್‌ ಲೆಂತ್‌ ಜಾಕೆಟ್‌ ಧರಿಸಬಹುದು. ಇವುಗಳಲ್ಲದೆ ಈಚಿನ ದಿನಗಳಲ್ಲಿ ಒನ್‌ ಶೋಲ್ಡರ್‌ ಡ್ರೆಸ್‌ ಸಹ ಜನಪ್ರಿಯವಾಗಿದೆ.

ಎಕ್ಸ್ ಪೆರಿಮೆಂಟ್‌ ಮಾಡಿ ನೋಡಿ : ಸೀರೆಯನ್ನು ಒಂದೇ ರೀತಿಯಲ್ಲಿ ಉಡಬೇಕೆಂದೇನೂ ಇಲ್ಲ, ಬೇರೆ ಬೇರೆ ರೀತಿಯಲ್ಲಿ ಉಟ್ಟು ಡಿಫರೆಂಟ್‌ ಲುಕ್‌ ಪಡೆಯಬಹುದು. ಘಾಘ್ರಾ ಚೋಲಿಯನ್ನೂ ಸಹ ಬೇರೆ ಬಗೆಯಾಗಿ ಧರಿಸಬಹುದು. ದುಪಟ್ಟಾವನ್ನು ವಿವಿಧ ರೀತಿಗಳಲ್ಲಿ ಡ್ರೇಪ್‌ ಮಾಡಿಕೊಳ್ಳಬಹುದು. ಮದುವೆಗಾಗಿ ಕೊಂಡ ಡ್ರೆಸ್‌ಗಳು ನಂತರ ಬೇರೆ ಡ್ರೆಸ್‌ನೊಂದಿಗೆ ಮ್ಯಾಚ್‌ ಮಾಡಿ ಉಪಯೋಗಿಸುವಂತಿರಬೇಕು ಎಂದು ನಚಿಕೇತ್‌ ಸಲಹೆ ನೀಡುತ್ತಾರೆ. ಸೀರೆಯ ಬ್ಲೌಸ್‌ನ್ನು ಲಹಂಗಾದ ಜೊತೆಗೆ, ಘಾಘ್ರಾದ ದುಪಟ್ಟಾವನ್ನು ಪ್ಲೇನ್‌ ಸಲ್ವಾರ್‌ ಕಮೀಜ್‌ನೊಂದಿಗೆ ಧರಿಸಬಹುದು.

ಬೋಲ್ಡ್ ಅಂಡ್‌ ಬ್ಯೂಟಿಫುಲ್ ಲುಕ್ಸ್ ಗಾಗಿ ಬ್ಲೌಸ್‌ ಅಥವಾ ಚೋಲಿಯೊಂದಿಗೆ ಎಕ್ಸ್ ಪಿರಿಮೆಂಟ್‌ ಮಾಡಬಹುದು. ತೆರೆದ ಬೆನ್ನಿನ ಡಿಸೈನರ್‌ ಬ್ಲೌಸ್‌ಗಳು ಈಗ ಮನೆಮಾತಾಗಿವೆ. ಇದಲ್ಲದೆ ಬ್ಯಾಕ್‌ ಲೆಸ್ ಬ್ಲೌಸ್‌, ಒನ್‌ ಶೋಲ್ಡರ್‌ ಚೋಲಿ, ಆಫ್‌ ಶೋಲ್ಡರ್‌ಚೋಲಿಗಳೂ ಚಾಲ್ತಿಯಲ್ಲಿವೆ.

ತನ್ನ ಬಾಡಿ ಶೇಪ್‌ಗೆ ಯಾವ ಸ್ಟೈಲ್ ‌ಆಕರ್ಷಕವಾಗಿರುತ್ತದೆ ಎಂಬುದನ್ನು ಮದುಮಗಳು ನೋಡಿ ನಿರ್ಧರಿಸಬೇಕು.

– ವನಿತಾ ಪ್ರಭು

ಗ್ಲಾಮರಸ್‌ ಬ್ರೈಡಲ್ ಲುಕ್‌ ಲೇಯರ್ಡ್‌ ಲಹಂಗಾ : ಪ್ರೌಢ ಮಹಿಳೆಯರಿಗೆ ತಮ್ಮ ಮೈಮಾಟವನ್ನು ಕಾಪಾಡಿಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ ಅವರು ಸೀರೆಯಲ್ಲದೆ ಇತರೆ ಡ್ರೆಸ್‌ ಧರಿಸಲು ಹಿಂಜರಿಯುತ್ತಾರೆ. ಆದರೆ ಎರಡೂವರೆ ಮೀ. ಬಟ್ಟೆಯಿಂದ ತಯಾರಿಸಿದ ಲೇಯರ್ಡ್ ಲಹಂಗಾ ಸ್ಥೂಲತೆಯನ್ನು ಮರೆ ಮಾಡಿ. ಒಳ್ಳೆಯ ಶೇಪ್‌ ಒದಗಿಸುತ್ತದೆ.

ಬ್ರೈಟ್‌ ಲಹಂಗಾ ಲೈಟ್‌ ದುಪಟ್ಟಾ : ಬ್ರೈಟ್‌ ಕಲರ್‌ನ ಬ್ರೈಡಲ್ ಔಟ್‌ಫಿಟ್‌ ಇಷ್ಟವಿಲ್ಲದಿರುವವರಿಗೆ ಈ ಕಾಂಬಿನೇಶನ್‌ಸೂಕ್ತವಾಗಿರುತ್ತದೆ. ಬ್ರೈಟ್‌ ಪಿಂಕ್‌ ಅಥವಾ ರೆಡ್‌ ಕಲರ್‌ನ ಎಂಬ್ರಾಯಿಡರ್ಡ್‌ ಲಹಂಗಾದೊಂದಿಗೆ ಬಾರ್ಡರ್‌ ಹೊಂದಿರುವ, ನೆಕ್ಕಿ ಕೆಲಸ ಮಾಡಲ್ಪಟ್ಟಿರುವ ತಿಳಿ ಬಣ್ಣದ ದುಪಟ್ಟಾ ಧರಿಸಬಹುದು. ಈ ಕಾಂಬಿನೇಶನ್‌ ಹಗಲಿನ ಕಾರ್ಯಕ್ರಮದಲ್ಲಿ ಚೆನ್ನಾಗಿ ಕಾಣುತ್ತದೆ.

ಶರಾರಾ ಲಹಂಗಾ : ಮೆಹಂದಿ ಸಮಾರಂಭದಲ್ಲಿ ಈ ಡ್ರೆಸ್‌ ಧರಿಸಲು ಯುವತಿಯರು ಇಷ್ಟಪಡುತ್ತಾರೆ. ಈ ಲಹಂಗಾದ ವೈಶಿಷ್ಟ್ಯವೆಂದರೆ ಇದು ಹಿಪ್‌ನಿಂದ ಬಾಡಿ ಶೇಪ್‌ನ್ನು ಚೆನ್ನಾಗಿ ತೋರಿಸುತ್ತದೆ ಮತ್ತು ಕಾಲ ಬಳಿ ಇಳಿಬಿದ್ದಿರುವ ಪದರ ರಾಯಲ್ ಲುಕ್‌ ನೀಡುತ್ತದೆ. ಅದು ಟ್ರೆಡಿಶನಲ್ ಜೊತೆಗೆ ಡಿಫರೆಂಟ್‌ ಲುಕ್‌ ಒದಗಿಸುತ್ತದೆ.

ಇಳಿಬಿದ್ದ ಲಹಂಗಾ : ಗ್ಲಾಮರಸ್‌ ಬ್ರೈಡಲ್ ಲುಕ್‌ ಬಯಸುವಿರಾದರೆ ಇದಕ್ಕಿಂತ ಉತ್ತಮವಾದ ಲಹಂಗಾ ಬೇರೊಂದಿಲ್ಲ. ಇದರಲ್ಲಿ ಹೆವಿ ಎಂಬ್ರಾಯಿಡರಿ ಇರುವುದರಿಂದ ಅತಿ ಹೆಚ್ಚು ಜ್ಯೂವೆಲರಿ ಹಾಕದಿರಿ. ಎತ್ತರವಾಗಿರುವ ಸುಂದರ ಮದುಮಗಳಿಗೆ ಇದು ಪರ್ಫೆಕ್ಟ್ ಸ್ಟೈಲ್ ‌ಆಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ