ಮದುವೆ ಎಂಬುದು ಯಾವುದೇ ಯುವತಿಯ ಬಾಳಿನಲ್ಲಿ ಮಹತ್ವಪೂರ್ಣ ದಿವಸ. ಆ ದಿನದಂದು ಮದುಮಗಳು ಸುಂದರ ಮತ್ತು ವಿಶೇಷವಾಗಿ ಕಾಣಿಸಿಕೊಳ್ಳಲು ಬಯಸುತ್ತಾಳೆ. ಮದುವೆಯಲ್ಲಿ ಎಲ್ಲ ಚೊಕ್ಕವಾಗಿ ಮತ್ತು ಆಕರ್ಷಕವಾಗಿ ಇರಲೆಂದು ಅವಳು ಇಷ್ಟಪಡುತ್ತಾಳೆ. ಮದುವೆಯ ಸಂದರ್ಭದಲ್ಲಿ ಮದುಮಗಳು ಇತರರಿಗಿಂತ ವಿಶಿಷ್ಟವಾಗಿ ಕಾಣಬೇಕಾದರೆ, ಕೆಲವು ವಿಷಯಗಳನ್ನು ಗಮನದಲ್ಲಿಡಬೇಕಾಗುತ್ತದೆ. ಮೇಕಪ್‌ ಹೇರ್‌ ಸ್ಟೈಲ್‌ಗಳಿಂದ ಹಿಡಿದು ಸೀರೆ, ಲಹಂಗಾಗಳನ್ನು ಆರಿಸುವ ಕಷ್ಟದ ಕೆಲಸ ಅವಳ ಮುಂದಿರುತ್ತದೆ. ಸುಂದರ ಡ್ರೆಸ್‌ನ್ನು ಆರಿಸುವ ಶ್ರಮದ ಪ್ರತಿಫಲ ವೆಡ್ಡಿಂಗ್‌ ಆಲ್ಬಂನಲ್ಲಿ ಪ್ರತಿಬಿಂಬಿತವಾಗುತ್ತದೆ. ಬಾಳಿನುದ್ದಕ್ಕೂ ಅದೊಂದು ಮನೋಲ್ಲಾಸದ ಇಡುಗಂಟಾಗಿ ಅವಳ ಬಳಿ ಉಳಿದಿರುತ್ತದೆ.

ಬ್ರೈಡಲ್ ಹೇರ್‌ನ್ನು ಆರಿಸುವಾಗ ಯುವತಿಯರಿಗೆ ಯಾವ ಬಣ್ಣ, ಡಿಸೈನ್‌ ಮತ್ತು ಪ್ಯಾಟರ್ನ್‌ನ ಬ್ರೈಡಲ್ ಡ್ರೆಸ್‌ನ್ನು ಕೊಳ್ಳಬೇಕೆಂದು ತಿಳಿಯುವುದಿಲ್ಲ.

ಡ್ರೆಸ್‌ ಡಿಸೈನರ್‌ ಊರ್ಮಿಳಾ ಈ ಬಗ್ಗೆ ಹೀಗೆ ಹೇಳುತ್ತಾರೆ, ``ಮದುವೆ ಎಂಬುದು ಮದುಮಗಳಿಗೆ ವಿಶೇಷ ಸಂದರ್ಭವಾಗಿರುತ್ತದೆ. ಆ ದಿನಗಳಲ್ಲಿ ಆಕೆ ಸುಂದರವಾಗಿ ಕಾಣಿಸಿಕೊಳ್ಳಲು ಬಯಸುವುದು ಸಹಜ. ಆದರೆ ಅದಕ್ಕಾಗಿ ಅವಳು ತನ್ನ ಮೈಮಾಟಕ್ಕೆ ತಕ್ಕಂತಹ ಬ್ರೈಡಲ್ ವೇರ್‌ ಕೊಳ್ಳುವುದು ಅಗತ್ಯ.''

ಮುಂಬೈನ ಡ್ರೆಸ್‌ ಡಿಸೈನರ್‌ ನಚಿಕೇತ್‌ ಬಿ ಹೀಗೆ ಅಭಿಪ್ರಾಯಪಡುತ್ತಾರೆ, ``ಮದುಮಗಳು ಮದುವೆಯ ನಂತರ ಆ ಡ್ರೆಸ್‌ಗಳನ್ನು ಉಪಯೋಗಿಸಲು ಬರುವಂತಹ ಉಡುಪುಗಳನ್ನು ಆರಿಸಬೇಕು. ಆದ್ದರಿಂದ ಮಿಕ್ಸ್ ಅಂಡ್‌ ಮ್ಯಾಚ್‌ ಮಾಡಿ ತಯಾರಿಸಿರುವ ಕಸ್ಟಮೈಸ್ಡ್ ಲಹಂಗಾಗಳನ್ನು ಆರಿಸುವ ಬಗ್ಗೆಯೂ ಯೋಚಿಸಬೇಕು.''

ಡಿಸೈನರ್‌ ನಯನಾ, ``ಮದುಮಗಳು ತನ್ನ ಆರಾಮದ ಕುರಿತಾಗಿ ಗಮನವಿಡಬೇಕು. ಹೆಚ್ಚು ಭಾರವಿರುವ ಕಂಚಿ ಸೀರೆ ಅಥವಾ ಭಾರಿ ಲಹಂಗಾಗಳನ್ನು ಕೊಂಡರೆ ಅವುಗಳನ್ನು ಧರಿಸಿದ ಕೆಲವೇ ಗಂಟೆಗಳಲ್ಲಿ ಬಳಲಿಬಿಡುತ್ತಾರೆ. ಆದ್ದರಿಂದ ಅವು ಅತಿ ಹೆಚ್ಚು ಭಾರದ್ದಾಗಿರದಂತೆ ನೋಡಿಕೊಳ್ಳಬೇಕು,'' ಎಂದು ಹೇಳುತ್ತಾರೆ.

ಕಡಿಮೆ ಎತ್ತರದರ ಡ್ರೆಸ್‌ : ಯುವತಿಯರು ತಮ್ಮ ಹೈಟ್‌ಗೆ ಅನುಸಾರವಾಗಿ ಬ್ಲೌಸ್‌ ಧರಿಸಬೇಕು ಎಂದು ಊರ್ಮಿಳಾ ಹೇಳುತ್ತಾರೆ. ಕಡಿಮೆ ಎತ್ತರವಿರುವವರು ಉದ್ದವಾದ ಬ್ಲೌಸ್‌ ಧರಿಸಬಾರದು. ಏಕೆಂದರೆ ಅದರಿಂದ ಅವರ ಎತ್ತರ ಇನ್ನೂ ಕಡಿಮೆ ಕಾಣುತ್ತದೆ.

ನಯನಾರ ಪ್ರಕಾರ, ಕಡಿಮೆ ಎತ್ತರವಿರುವರು ದೊಡ್ಡ  ಬಾರ್ಡರ್‌ನ ಸೀರೆ ಅಥವಾ ಲಹಂಗಾ ಆರಿಸಬಾರದು ಮತ್ತು ಅವರ ಬಾಡಿ ಪೂರ್ತಿ ಜರಿ ಅಥವಾ ಎಂಬ್ರಾಯಿಡರಿ ಇಲ್ಲದಂತೆ ನೋಡಿಕೊಳ್ಳಬೇಕು.

ಬಣ್ಣದ ಆಯ್ಕೆ : ಬ್ರೈಡಲ್ ಡ್ರೆಸ್‌ ಆರಿಸುವಾಗ ಬಣ್ಣವನ್ನು ಗಮನಿಸಬೇಕು. ಮುಖ್ಯವಾಗಿ ಬ್ರೈಡಲ್ ಲಹಂಗಾ ಎಂದೊಡನೆ ಕೆಂಪು ಮತ್ತು ಹಸಿರು ಟಿಪಿಕಲ್ ಬಣ್ಣಗಳು ಕಣ್ಣು ಮುಂದೆ ಬರುತ್ತದೆ. ಆದರೆ ಅದಲ್ಲದೆ ಇತರೆ ಕೆಲವು ಬಣ್ಣಗಳೂ ಮದುಮಗಳಿಗೆ ಶೋಭೆ ನೀಡಬಲ್ಲವು.

ಮದುಮಗಳು ಲಹಂಗಾದ ಬಣ್ಣವನ್ನು ಎಕ್ಸ್ ಪೆರಿಮೆಂಟ್‌ ಮಾಡಬೇಕು ಎಂದು ಊರ್ಮಿಳಾ ಹೇಳುತ್ತಾರೆ. ಸಾಮಾನ್ಯವಾದ ಕೆಂಪು, ಹಸಿರು ಬಣ್ಣಗಳಲ್ಲದೆ ಪಿಂಕ್‌, ಸ್ಕೈ ಬ್ಲೂ, ಆಕ್ವಾ ಬ್ಲೂ ಬಣ್ಣಗಳನ್ನೂ ಆರಿಸಬಹುದು.

ಭಾರತೀಯ ಸ್ಕಿನ್‌ ಟೋನ್‌ಗೆ ನಿಯಾನ್‌ ಬಣ್ಣಗಳು ಅತಿ ಗಾಢವಾಗಿ ತೋರುವವೆಂದು ನಚಿಕೇತ್‌ ಅಭಿಪ್ರಾಯಪಡುತ್ತಾರೆ.  ಅಂತಹ ಬಣ್ಣಗಳಿಂದ ನಿಮ್ಮ ಸ್ಕಿನ್‌ ಟೋನ್‌ ಮಂಕಾಗಿ ಕಾಣುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ