ಇತ್ತೀಚೆಗೆ ಹೆಣ್ಣುಮಕ್ಕಳು ಫ್ಯಾಷನ್ನಿನಲ್ಲಿ ದೇಶಿ ಸ್ಟೈಲ್ ‌ಬಹಳ ಇಷ್ಟಪಡುತ್ತಿದ್ದಾರೆ. ಹೀಗಿರುವಾಗ ಅವರ ಮೊದಲ ಆಯ್ಕೆ ಸೀರೆ ತಾನೇ ಆಗಿರಬೇಕು? ಇಂದಿನ ಟ್ರೆಂಡ್‌ಪ್ರಕಾರ ಪ್ಲೇನ್‌ ಸೀರೆ ಜೊತೆ ಹೆವಿ ಬ್ಲೌಸ್‌ ಹೆಸರು ಮಾಡುತ್ತಿದೆ.

ಆಧುನಿಕ ಡಿಸೈನರ್‌ಗಳು ಈ ಕುರಿತು ಹೇಳುವುದೆಂದರೆ ಡಿಫರೆಂಟ್‌ ಸ್ಟೈಲ್‌ಗಳನ್ನು ಅನುಸರಿಸುವ ಮೊದಲು, ನೀವು ನಿಮ್ಮ ಕಂಫರ್ಟ್ಸ್ ಮರೆಯಬಾರದು. ನೀವು ಹೊಸ ರೀತಿಯ ಡಿಸೈನರ್‌ ಬ್ಲೌಸ್‌ ಧರಿಸಬಯಸಿದರೆ, ಆಗ ನೀವು ನಿಮಗೆ ಸಿಗುವ ವಿಶೇಷ ಸೌಲಭ್ಯಗಳತ್ತ ಗಮನಹರಿಸಿ. ನೀವು ಹೋದ ಕಡೆಯಲ್ಲೆಲ್ಲ ಈ ಡಿಸೈನ್ಸ್ ಕ್ಯಾರಿ ಮಾಡದಿದ್ದರೆ ಅಥವಾ ಅನಾನುಕೂಲದ ಕಾರಣ ಪ್ರತಿ ಸಲ ಅದನ್ನೇ ಚಿಂತಿಸುತ್ತಿದ್ದರೆ, ಆಗ ನಿಮ್ಮ ಲುಕ್ಸ್ ಪೂರ್ತಿ ಹಾಳಾಗುತ್ತದೆ. ಆದ್ದರಿಂದ ನೀವು ನಿಮ್ಮ ಕಂಫರ್ಟ್ಸ್ ಕುರಿತು ನಿಗಾ ಇಡಿ. ಬ್ಲೌಸ್‌ಗಳ ಈ ವಿವಿಧ ಡಿಸೈನ್ಸ್ ನಿಮ್ಮ ಸೌಂದರ್ಯಕ್ಕೆ ಹೆಚ್ಚಿನ ಮೆರುಗು ತರಲಿವೆ :

ರೌಂಡ್‌ ನೆಕ್‌ ಜೊತೆ ಫುಲ್ ಸ್ಲೀವ್ ಬ್ಲೌಸ್‌ : ಇತ್ತೀಚೆಗೆ ಪೂರ್ತಿ ತೋಳುಗಳ ಗೋಲಾಕಾರದ ಬ್ಲೌಸ್‌ ಹೆಚ್ಚು ಖ್ಯಾತಿ ಪಡೆಯುತ್ತಿದೆ. ಈ ತರಹದ ಬ್ಲೌಸ್‌ನಲ್ಲಿ ಕಸೂತಿಯ ಕೆಲಸ ಬಹಳ ಸುಂದರವೆನಿಸುತ್ತದೆ. ಅದು ಜರ್ದೋಜಿ ಅಥವಾ ಮಿರರ್‌ ವರ್ಕ್‌ ಇರಲಿ, ಈ ತರಹದ ಕಸೂತಿ ಒಪ್ಪುತ್ತದೆ.

ಫ್ರಿಲ್ ಸ್ಟ್ರಾಪ್‌ ಬ್ಲೌಸ್‌ : ಇತ್ತೀಚೆಗೆ ಫ್ರಿಲ್‌ನ ಫ್ಯಾಷನ್‌ ಮತ್ತೆ ಟ್ರೆಂಡ್‌ನಲ್ಲಿದೆ. ಹೀಗಾಗಿ ನೀವು ಫ್ರಿಲ್‌‌ಯುಕ್ತ ಭುಜದ ಬ್ಲೌಸ್‌ ಅಥವಾ ಫ್ರಿಲ್‌‌ಯುಕ್ತ ನೆಕ್‌ ಇರುವ ಬ್ಲೌಸ್‌ ರೆಡಿ ಮಾಡಿಸಬಹುದು. ಇದು ಖಂಡಿತಾ ಡಿಫರೆಂಟ್‌ ಲುಕ್ಸ್ ಕೊಡುತ್ತದೆ.

ಬೋಟ್‌ ನೆಕ್‌ ಬ್ಲೌಸ್‌ : ಇದು ನಿಮ್ಮ ಕುತ್ತಿಗೆಯ ಭಾಗವನ್ನು ಹೈಲೈಟ್‌ಗೊಳಿಸಲು ನೆರವಾಗುತ್ತದೆ. ಈ ಬ್ಲೌಸ್‌ ಫುಲ್ ಹಾಫ್‌ ಸ್ಲೀವ್ಸ್ ಎರಡರಲ್ಲೂ ಚೆನ್ನಾಗಿ ಕಾಣಿಸುತ್ತದೆ. ಇದರ ಡಿಸೈನಿನಲ್ಲಿ ಮೇಲಿನ ಚಿತ್ರದಂತೆ ಆ್ಯಕ್ಸೆಸರೀಸ್‌ ಬಳಸಿದಷ್ಟೂ ಸೊಗಸು!

ಹೈನೆಕ್‌ ಬ್ಲೌಸ್‌ : ಇದರ ಲುಕ್ಸ್ ನಿಜಕ್ಕೂ ಬಲು ಡಿಫರೆಂಟ್‌. ಇದು ನಿಮ್ಮ ಕುತ್ತಿಗೆ ಮತ್ತು ಹೆಗಲಿಗೆ ಬ್ಯೂಟಿ ಟಚ್‌ ನೀಡುತ್ತದೆ. ಈ ಬ್ಲೌಸ್‌ ಎಲ್ಲಾ ಬಗೆಯ ಸೀರೆಯ ಡ್ರೇಪಿಂಗ್‌ಗೂ ಒಪ್ಪುತ್ತದೆ.

ವೇಸ್ಟ್ ಕೋಟ್‌ ಸ್ಟೈಲ್ ‌: ನೀವು ನಿಮ್ಮ ದೇಶೀ ಲುಕ್ಸ್ ನಲ್ಲಿ ವೆಸ್ಟರ್ನ್‌ ಸ್ಟೈಲ್‌‌ನ ಟಚ್‌ ನೀಡಬಯಸಿದರೆ, ಈ ಸ್ಟೈಲ್‌ನ್ನು ಇಂದೇ ನಿಮ್ಮದಾಗಿಸಿಕೊಳ್ಳಿ. ಇದು ನಿಮಗೆ ವಿಭಿನ್ನ ಹಾಗೂ ಟ್ರೆಂಡಿ ಲುಕ್ಸ್ ನೀಡುತ್ತದೆ. ಈ ಬ್ಲೌಸ್‌ನ್ನು ನೀವು ಯಾವ ಬಗೆಯ ಸೀರೆಯ ಜೊತೆಗಾದರೂ ತೊಡಬಹುದು.

ಸಿಂಗಲ್ ಸ್ಲೀವ್ ‌ಬ್ಲೌಸ್‌ : ಈ ಬ್ಲೌಸ್‌ ನಿಮಗೆ ಅತ್ಯುತ್ತಮ ಟ್ರೆಂಡಿ ಬೋಲ್ಡ್ ಲುಕ್ಸ್ ನೀಡುತ್ತದೆ. ಈ ಬ್ಲೌಸ್‌ಗೆ ಪ್ಯೂರ್‌ ಶಿಫಾನ್‌ ಸೀರೆ ಹೆಚ್ಚು ಹೊಂದುತ್ತದೆ. ಇದರ ಡಿಸೈನ್‌ ನಿಮ್ಮ ಸುಘಟಿತ  ಬಾಹುಗಳ ಅಂದ ಎತ್ತಿ ತೋರಿಸುತ್ತದೆ.

ಸ್ಪೆಗೆಟಿ ಸ್ಟೈಲ್ : ನೀವು ಎಂದಿನ ಮಾಮೂಲಿ ಶೈಲಿಯ ಬ್ಲೌಸ್‌ ಧರಿಸಿ ಬೇಸತ್ತಿದ್ದರೆ, ಮುಂದಿನ ಪಾರ್ಟಿಗೆ ವೆಸ್ಟರ್ನ್‌ ಬೋಲ್ಡ್ ಲುಕ್ಸ್ ಬೇಕಿದ್ದರೆ, ಈ ಸ್ಟೈಲ್ ನಿಮಗೆ ಚೆನ್ನಾಗಿ ಸೂಟ್‌ ಆಗುತ್ತದೆ. ಈ ಸ್ಟೈಲ್‌ನ್ನು ನೀವು ಮ್ಯಾಚಿಂಗ್‌ ಸೀರೆ ಮಾತ್ರವಲ್ಲದೆ, ಕಾಂಟ್ರಾಸ್ಟ್, ಕಲರ್‌ ಫುಲ್ ಬೀಟ್ಸ್ ಜೊತೆಗೂ ಬಳಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ