ಆಕರ್ಷಕವಾಗಿ ಸೀರೆಯುಡುವುದು ಒಂದು ಕಲೆ. ಅದಕ್ಕೆ ಸಂಬಂಧಪಟ್ಟ ಕೆಲವು ಮುಖ್ಯ ಅಂಶಗಳು ಮತ್ತು ಟ್ರಿಕ್‌ಗಳನ್ನು ನೀವು ಕಲಿತರೆ, ಸೀರೆಯುಡುವುದು ಬಹಳ ಸುಲಭದ ಕೆಲಸ ಎನ್ನಿಸುತ್ತದೆ. ಫೇಮಸ್‌ ಸೆಲೆಬ್ರಿಟಿ ಸ್ಯಾರಿ ಡ್ರೇಪರ್‌ ಡಾಲಿ ಜೈನ್‌ ಕೆಲವು ಸುಲಭ ವಿಧಾನಗಳಿಂದ ಸ್ಯಾರಿ ಡ್ರೇಪಿಂಗ್‌ ಕಲೆಯನ್ನು ಪರಿಚಯಿಸುತ್ತಾರೆ :

ಸೀರೆಯನ್ನು 3 ಸ್ಟೆಪ್‌ಗಳಲ್ಲಿ ಉಡಲಾಗುತ್ತದೆ ಎಂದು ಡಾಲಿ ಹೇಳುತ್ತಾರೆ ಮೊದಲು ಸೀರೆಯ ಒಂದು ತುದಿಯನ್ನು ಟಕ್ ಮಾಡಿಕೊಳ್ಳಬೇಕು. ನಂತರ ಸೀರೆಯ ಸೆರಗನ್ನು ಸಿದ್ಧಪಡಿಸಬೇಕು. ಸೀರೆಯ ಸೆರಗು ಎಷ್ಟು ಉದ್ದವಿರುತ್ತದೋ ನೀವು ಅಷ್ಟು ಎತ್ತರ ಕಾಣುವಿರೆಂಬುದನ್ನು ಗಮನದಲ್ಲಿಡಬೇಕು. ಸೆರಗನ್ನು ಭುಜದ ಮೇಲೆ ಸೆಟ್‌ ಮಾಡಿದ ನಂತರ ಅದನ್ನು ಸೊಂಟದವರೆಗೆ ತಂದು ನೆರಿಗೆ ಹಿಡಿದು ಟಕ್‌ ಮಾಡಬೇಕು. ಈ ರೀತಿ ನೀವು ಪರ್ಫೆಕ್ಟ್ ಸ್ಯಾರಿ ಡ್ರೇಪ್‌ ಮಾಡಬಹುದು.

ರೇಷ್ಮೆ ಸೀರೆ ಉಡುವಾಗ ದೊಡ್ಡ ನೆರಿಗೆ ಹಿಡಿಯಬೇಕು, ಆದರೆ ಚಿಕ್ಕ ನೆರಿಗೆ ಹಿಡಿಯಬಾರದು. ಚಿಕ್ಕ ನೆರಿಗೆ ಹಿಡಿದರೆ ಅದರಿಂದ ನಿಮ್ಮ ಹೊಟ್ಟೆ ಉಬ್ಬಿದಂತೆ ಕಂಡು ನಿಮ್ಮ ಲುಕ್‌ ಹಾಳಾಗುತ್ತದೆ.

ಸ್ಥೂಲಕಾಯದ ಮಹಿಳೆಯರು ನೆಟ್‌ ಸೀರೆ ಉಟ್ಟರೆ, ಶರೀರದ ಆಕಾರ ಎದ್ದು ಕಾಣುತ್ತದೆ.

ಸಮಾರಂಭಗಳ ಸಂದರ್ಭದಲ್ಲಿ ಗುಜರಾತಿ ಸ್ಟೈಲ್ ಸೀರೆಯು ಆರಾಮದಾಯಕವಾಗಿರುತ್ತದೆ. ಇದರಲ್ಲಿ ಸೀರೆಯ ಸೆರಗು ಮುಂಭಾಗದಲ್ಲಿದ್ದು, ಅದರ ವಿನ್ಯಾಸ ಶೋಭಿಸುತ್ತದೆ.

ಸೀರೆಯುಟ್ಟಾಗ ಸೊಂಟಕ್ಕೆ ಡಾಬನ್ನು ಹಾಕುವುದು ಹಳೆಯ ಫ್ಯಾಷನ್‌ ಆದರೂ ಈಗ ಅದು ಹೊಸ ಸ್ಟೈಲ್‌ನಲ್ಲಿ ಮತ್ತೆ ಜನಪ್ರಿಯವಾಗಿದೆ. ಹಿಂದಿನ ಸಾಂಪ್ರದಾಯಿಕ ಡಾಬುಗಳ ಜೊತೆಗೆ ಇಂದು ಸರಪಳಿ ಮತ್ತು ಉಡಿದಾರದಂತಹ ಸೊಂಟಪಟ್ಟಿಗಳಿಂದ ಸೀರೆಯುಟ್ಟ ಹೆಣ್ಣುಮಕ್ಕಳು ಆಕರ್ಷಕವಾಗಿ ಕಾಣುತ್ತಾರೆ. ಇದರೊಂದಿಗೆ ಸ್ಯಾರಿ ಕ್ಲಿಪ್‌ಗಳನ್ನೂ ಹಾಕಿಕೊಳ್ಳಬಹುದು.

ಡಿಸೈನರ್‌ ಬ್ಲೌಸ್‌ ಸೀರೆಗೆ ಹೆಚ್ಚು ಶೋಭೆ ನೀಡುತ್ತದೆ. ಸಾಧಾರಣ ಬ್ಲೌಸ್‌ನಿಂದ ಅದರ ಬೆಲೆ ಹೆಚ್ಚಾಗಿರುವುದರಿಂದ ಅದರ ರಕ್ಷಣೆಯ ಕಡೆ ಗಮನ ನೀಡಬೇಕು. ಅದನ್ನು ಧರಿಸುವಾಗ ಅಂಡರ್‌ ಆರ್ಮ್ ಪ್ಯಾಡ್ಸ್ ಹಾಕಿಕೊಂಡರೆ, ಬೆವರಿನಿಂದ ಬ್ಲೌಸ್‌ಹಾಳಾಗುವುದು ತಪ್ಪುವುದಲ್ಲದೆ, ನಿಮಗೆ ಆರಾಮವನ್ನೂ ನೀಡುತ್ತದೆ.

- ಪ್ರಭಾವತಿ

ಮರ್ಮೇಡ್‌ ಸ್ಟೈಲ್‌ ಸ್ಯಾರಿ ಡ್ರೇಪಿಂಗ್‌

ಡಾಲಿ ಅವರ ಪ್ರಕಾರ ಮರ್ಮೇಡ್‌ ಸ್ಟೈಲ್‌ ಇಂದು ಹೆಚ್ಚು ಬಳಕೆಯಲ್ಲಿದೆ. ಇದರಲ್ಲಿ ಸೀರೆಯುಡುವ ಸಾಂಪ್ರದಾಯಿಕ ವಿಧಾನದೊಂದಿಗೆ ಆಧುನಿಕತೆಯೂ ಸೇರಿರುವುದರಿಂದ ಇದು ಜನಪ್ರಿಯಾಗಿದೆ. ಈ ಸ್ಟೈಲ್‌ನ್ನು ಅನುಸರಿಸುವ ಸ್ಟೆಪ್ಸ್ ಹೀಗಿವೆ :

ಸೀರೆಯ ಒಂದು ಭಾಗವನ್ನು ಟಕ್‌ ಮಾಡಿ ಒಂದು ರೌಂಡ್‌ ರಾಂಪ್‌ ಮಾಡಿ.

ಸೀರೆಯು ನೆಲದಿಂದ 1 ಅಂಗುಲ ಮೇಲಿರುವಂತೆ ನೋಡಿಕೊಳ್ಳಿ.

ಈಗ ಸೀರೆಯ ಇನ್ನೊಂದು ತುದಿಯನ್ನು ಸೆರಗಿನ ನೆರಿಗೆ ಮಾಡಿಕೊಳ್ಳಿ.

ಸೆರಗಿನ ಭಾಗವನ್ನು ಹಿಂದಿನಿಂದ  ಮುಂದಕ್ಕೆ ತಂದು ಬಲ ಭುಜದ ಮೇಲೆ ಇರಿಸಿ.

ಸೆರಗಿನ ತುದಿಯು ನೆಲದಿಂದ 5 ಅಂಗುಲ ಮೇಲಿರಲಿ.

ಈಗ ಸೀರೆಯ ಉಳಿದ ಭಾಗವನ್ನು ಟಕ್‌ ಮಾಡಿ.

ಫ್ಲೀಟ್ಸ್ ಒಂದು ತುದಿಯನ್ನು ಹಿಡಿದು ಸೊಂಟದ ಹಿಂದಿನಿಂದ ಸುತ್ತಿ ಮುಂದೆ ತನ್ನಿ ಮತ್ತು ಸೊಂಟದಿಂದ ಸ್ವಲ್ಪ ಕೆಳಗೆ ಪಿನ್‌ ಮಾಡಿ. ಪಿನ್‌ ಮಾಡಿದ ತುದಿಯು ಸೆರಗಿನ ಕೆಳಗಿರಲಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ