ಸೀರೆ ಒಂದು ಅದ್ಭುತ ಭಾರತೀಯ ಉಡುಗೆ. ಅದು ಸಾಂಪ್ರದಾಯಿಕವಾದರೂ ಹಾಟ್‌ ಲುಕ್‌ ನೀಡಬಲ್ಲದು. ಸೀರೆ ಪ್ರತಿಯೊಬ್ಬರಿಗೂ ಹೊಂದುತ್ತದೆ. ಒಂದೊಂದು ಸ್ಥಳದಲ್ಲಿಯೂ ಇದನ್ನು ಬೇರೆ ಬೇರೆ ರೀತಿಯಲ್ಲಿ ಉಡಲಾಗುತ್ತದೆ. ಸೀರೆ ಉಡುವ ಕೆಲವು ಹಾಟ್‌ ಸ್ಟೈಲ್‌ಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.

ಈ ಹಬ್ಬದ ಸೀಸನ್‌ನಲ್ಲಿ ಸಾಂಪ್ರದಾಯಿಕ ಭಾರತೀಯ ಲುಕ್‌ಗಾಗಿ ಸ್ಯಾರಿ ಡ್ರೇಪಿಂಗ್‌ನ ಈ ಸ್ಟೈಲ್‌ಗಳಲ್ಲಿ ನಿಮಗೆ ಮೆಚ್ಚಿಗೆಯಾದುದನ್ನು ಆರಿಸಿಕೊಂಡು ಮನಃಪೂರ್ತಿಯಾಗಿ ಹಬ್ಬದ ಆನಂದವನ್ನು ಅನುಭವಿಸಿ.

-  ವಿನುತಾ

ಬಟರ್‌ ಫ್ಲೈ ಸೀರೆ : ಬಟರ್‌ ಫ್ಲೈ ಸ್ಟೈಲ್‌ನ ಸೀರೆ ಉಡುವ ವಿಧಾನ ನವಿಲಿನ ಸ್ಟೈಲ್‌ನಂತೆ ಇರುತ್ತದೆ. ಕೇವಲ ಸೆರಗಿನಲ್ಲಿ ವ್ಯತ್ಯಾಸವಿರುತ್ತದೆ. ಈ ಸ್ಟೈಲ್‌ನಲ್ಲಿ ಸೆರಗು ತೆಳುವಾಗಿರುವಂತೆ ಮಾಡಿ ಶರೀರದ ಮಧ್ಯಭಾಗ ಗೋಚರಿಸುವಂತೆ ಮಾಡಲಾಗುತ್ತದೆ.

ನವಿಲು ಸ್ಟೈಲ್ ‌: ನವಿಲ ಸ್ಟೈಲ್ ಸೀರೆಯುಡುವುದು ಬಹಳ ಸುಲಭ ಮತ್ತು ಇದೊಂದು ಪ್ರಚಲಿತ ವಿಧಾನವಾಗಿದೆ. ಇದನ್ನು ದಿನನಿತ್ಯ ಉಡಬಹುದು ಅಥವಾ ಯಾವುದೇ ಸಮಾರಂಭಕ್ಕೂ ಉಡಬಹುದು. ಇದು ಮೂಲತಃ ಆಂಧ್ರಪ್ರದೇಶದ ಸ್ಟೈಲ್ ಆಗಿದ್ದು, ಇಡೀ ಭಾರತದ ಜನಪ್ರಿಯ ಸ್ಟೈಲ್ ಆಗಿದೆ.  

ಇದು ಲೇಟೆಸ್ಟ್ ಫ್ಯಾಷನ್‌ನ ವಿಶೇಷ ಸ್ಟೈಲ್ ಆಗಿದ್ದು, ಯುವತಿಯರಿಗೆ ಅಚ್ಚುಮೆಚ್ಚಿನದಾಗಿದೆ. ಸಾಲಿಡ್‌ ಪ್ಯಾಂಟ್‌ಗಾಗಿ ಪ್ರಿಂಟೆಡ್ ಸೀರೆಯನ್ನು ಆರಿಸಿಕೊಳ್ಳಬಹುದು. ಈ ವಿನೂತನ ಸ್ಟೈಲ್‌ನಲ್ಲಿ ನೀವು ಸುಂದರವಾಗಿ ಕಾಣುವಿರಿ.

ಮುಮ್ತಾಜ್‌ ಸ್ಟೈಲ್ ‌: ಪಾರ್ಟಿಗೆ ಹೊರಟಾಗ ಆಕರ್ಷಕ ಲುಕ್‌ ಬೇಕೆಂದರೆ ಮುಮ್ತಾಜ್‌ ಸ್ಟೈಲ್‌ಗಿಂತ ಉತ್ತಮವಾದುದು ಮತ್ತೊಂದಿರಲಾರದು. ನಿಮಗೆ ಸುಂದರ ಫಿಗರ್‌ ಇದ್ದರೆ, ಈ ಸ್ಟೈಲ್‌‌ನಲ್ಲಿ ನೀವು ಸೆಂಟರ್‌ ಆಫ್‌ ಅಟ್ರಾಕ್ಷನ್‌ ಆಗುವುದರಲ್ಲಿ ಸಂದೇಹವೇ ಇಲ್ಲ.

ಲೆಹಂಗಾ ಸ್ಟೈಲ್‌ : ಇದೊಂದು ಆಧುನಿಕ ಸ್ಟೈಲ್ ಆಗಿದ್ದು, 2 ಸುಂದರ ಭಾರತೀಯ ಉಡುಪುಗಳಾದ ಸೀರೆ ಮತ್ತು ಲೆಹಂಗಾಗಳ ಮಿಶ್ರಣವಾಗಿದೆ. ಸೀರೆಯನ್ನು ನೆರಿಗೆಗಳನ್ನಾಗಿ ಜೋಡಿಸಿ ಲೆಹಂಗಾದ ರೀತಿಯಲ್ಲಿ ಉಡಲಾಗುತ್ತದೆ. ಈ ಸ್ಟೈಲ್‌‌ನಲ್ಲಿ ಉಲ್ಟಾಪಲ್ಟಾ ಮಾದರಿಯನ್ನು ಬಳಸಲ್ಪಡುತ್ತದೆ. ಸಮಾರಂಭಗಳಲ್ಲಿ ಉಡಲು ಇದು ಸೊಗಸಾಗಿರುತ್ತದೆ.

ಕೂರ್ಗಿ ಸ್ಟೈಲ್‌: ಇದೊಂದು ಬಹಳ ವಿಶಿಷ್ಟವಾದ ಸ್ಟೈಲ್. ಇದರಲ್ಲಿ ನೆರಿಗೆಯನ್ನು ಹಿಂಭಾಗದಲ್ಲಿ ಮಾಡಲಾಗುತ್ತದೆ. ಈ ಸ್ಟೈಲ್‌ನಲ್ಲಿ ಸೆರಗು ಮುಂಭಾಗದಲ್ಲಿ ಚೆಸ್ಟ್ ಮೇಲೆ ಸುತ್ತಿ, ಹಿಂದಿನಿಂದ ಬಂದು ಮುಂದೆ ಭುಜದ ಮೇಲೆ ನೆಕ್‌ ಲೈನ್‌ನ ಪಕ್ಕದಲ್ಲಿ ಇಳಿ ಬೀಳುತ್ತದೆ.

ಬಂಗಾಳೀ ಸ್ಟೈಲ್ ‌: ಟ್ರೆಡಿಶನಲ್ ಲುಕ್‌ಗಾಗಿ ಬಂಗಾಳೀ ಸ್ಟೈಲ್‌ನಲ್ಲಿ ಸೀರೆ ಉಡುವುದು ಒಂದು ಉತ್ತಮ ಆಯ್ಕೆ. ಇದು ಗ್ರೇಸ್‌ಫುಲ್ ಲುಕ್‌ ನೀಡುತ್ತದೆ. ಅಲ್ಲದೆ ಇದನ್ನು ಮ್ಯಾನೇಜ್‌ ಮಾಡುವುದೂ ಬಹಳ ಸುಲಭ.

ಮರಾಠೀ ಸ್ಟೈಲ್ ‌: ಸೀರೆಯುಡುವ ಸಾಧಾರಣ ಸ್ಟೈಲ್‌ಗಿಂತ ಇದು ವಿಭಿನ್ನವಾಗಿರುತ್ತದೆ. ಇದಕ್ಕೆ 6 ಗಜದ ಬದಲು 9 ಗಜದ ಸೀರೆ ಬೇಕಾಗುತ್ತದೆ ಮತ್ತು ಪೆಟಿಕೋಟ್‌ ಧರಿಸುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ