ನೀವು ಸೀರೆ ಉಡುವ ಪ್ರೇಮಿ ಆಗಿದ್ದು, ಆದರೆ 6 ಗಜ ಉಡಲು, ನಿಭಾಯಿಸಲು ಕಷ್ಟಪಡುತ್ತಿದ್ದರೆ, ನಿಮಗಾಗಿ ಬಂದಿದೆ ಹೊಸತಾದ ಗ್ಲಾಮರಸ್ ಸೀರೆ ಗೌನ್! ಸೀರೆ ಮತ್ತು ಗೌನಿನ ಕಾಂಬಿನೇಶನ್ನಿನ ಈ ಸೀರೆ ಗೌನ್ ಬಲು ಸ್ಟೈಲಿಶ್ ಎನಿಸುತ್ತದೆ. ಇದನ್ನು ಮ್ಯಾನೇಜ್ ಮಾಡುವುದೂ ಅಷ್ಟೇ ಸುಲಭ. ಈ ಸೀರೆ ಗೌನ್ ಆರಿಸುವಾಗ ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ವಿವರವಾಗಿ ತಿಳಿಯೋಣ.
ಇದನ್ನು ಧರಿಸಬೇಕೇಕೆ?
ಎವರ್ ಗ್ರೀನ್ ಸದಾ ಫ್ಯಾಷನ್ನಿನಲ್ಲಿ ಇನ್ ಇರುವಂಥ ಸೀರೆ ಗೌನ್‌ನ್ನು ಧರಿಸುವುದು, ಮ್ಯಾನೇಜ್ ಮಾಡುವುದು ಬಲು ಈಝಿ. ಇದರಲ್ಲಿ ಪ್ಲೀಟ್ಸ್ ಜೊತೆಯೇ ಬ್ಲೌಸ್ ಮತ್ತು ಸೆರಗು ಅಟ್ಯಾಚ್ಡ್ ಆಗಿರುತ್ತವೆ. ಹೀಗಾಗಿ ಇದನ್ನು ಚೂಡಿದಾರ್ ತರಹ ಸುಲಭವಾಗಿ ಧರಿಸಬಹುದು. ಎಲ್ಲೂ ಅಟ್ಯಾಚ್ಡ್ ಪ್ಲೀಟ್ಸ್, ಸೆರಗು ಬಿಟ್ಟುಕೊಳ್ಳುತ್ತದೆ ಎಂಬ ಭಯವಿಲ್ಲ.
ಪರ್ಫೆಕ್ಟ್ ಸೀರೆ ಗೌನ್ ಆರಿಸಿ
ಸೀರೆ ಗೌನ್ ಖರೀದಿಸುವಾಗ ಮಾರ್ಕೆಟ್‌ನಲ್ಲಿ ನಿಮಗೆ ಇದರ ಪ್ಯಾಟರ್ನ್, ಸ್ಟೈಲ್, ಫ್ಯಾಬ್ರಿಕ್‌ಗಳಲ್ಲಿ ಎಷ್ಟೋ ವೆರೈಟಿಗಳು ಲಭ್ಯವಿವೆ. ಹೀಗಿರುವಾಗ ನೀವು ಪರ್ಫೆಕ್ಟ್ ಸೀರೆ ಗೌನ್ ಖರೀದಿಸ ಬಯಸಿದರೆ ಈ ಕೆಳಗಿನ ವಿಷಯಗಳನ್ನು ನೆನಪಿಡಿ :
ಪ್ಯಾಟರ್ನ್ : ಪ್ರಸ್ತುತ ಮಾರುಕಟ್ಟೆಯಲ್ಲಿ ಬಹಳಷ್ಟು ವೆರೈಟಿಗಳು ಲಭ್ಯವಿವೆ. ಧೋತಿ, ಪ್ಯಾಂಟ್ ಸ್ಟೈಲ್‌ನಿಂದ ಹಿಡಿದು ಫಿಶ್ ಕಟ್, ಸ್ಟ್ರೇಟ್ ಕಟ್, ಲಹಂಗಾವರೆಗೆ. ಹೀಗಿರುವಾಗ ಸೀರೆ ಗೌನ್ ಪ್ಯಾಟರ್ನ್‌ಗಳನ್ನು ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಆರಿಸಿ. ನಿಮ್ಮ ಬಾಡಿ ಶೇಪ್‌ಗೆ ಚೆನ್ನಾಗಿ ಸೂಟ್ ಆಗುವಂಥದ್ದನ್ನೇ ಆರಿಸಿ. ನಿಮ್ಮ ಹೈಟ್ ಕಡಿಮೆ ಇದ್ದರೆ ಸ್ಟ್ರೇಟ್ ಯಾ ಫಿಶ್ ಕಟ್ ಆರಿಸಿ. ಇದರಿಂದ ನೀವು ತುಸು ಎತ್ತರಕ್ಕಿರುವಂತೆ ಕಾಣುವಿರಿ. ನಿಮ್ಮ ಹೈಟ್ ಹೆಚ್ಚಿದ್ದರೆ, ಫ್ಲೇಯರ್ಡ್ ಸೀರೆ ಗೌನ್ ಆರಿಸಿಕೊಳ್ಳಿ.
ಬ್ಲೌಸ್ : ಸೀರೆ ಗೌನಿನ ಬ್ಲೌಸ್‌ನಲ್ಲೂ ಎಷ್ಟೋ ಪ್ಯಾಟರ್ನ್‌ಗಳಿವೆ. ಒನ್ ಶೋಲ್ಡರ್, ಆಫ್ ಶೋಲ್ಡರ್, ಸ್ಲೀವ್ ಲೆಸ್, ಹಾಫ್‌ಸ್ಲೀವ್, ಫುಲ್ಸ್ಲೀವ್, ಥ್ರೀಫೋರ್ತ್ ಸ್ಲೀವ್ ಬ್ಲೌಸ್ ಇತ್ಯಾದಿ. ಇದರ ಜೊತೆ ನೆಕ್ ಲೈನಿನಲ್ಲೂ ಬಗೆಬಗೆಯ ವೆರೈಟಿಗಳು ಲಭ್ಯ. ಅಂದರೆ ರೌಂಡ್, ಸ್ಕ್ವೇರ್, ಓವಲ್, ಬ್ಯಾಕ್ ನೆಕ್ ಲೈನ್ ಇತ್ಯಾದಿ. ಹೀಗಿರುವಾಗ ನಿಮ್ಮ ಪರ್ಸನಾಲಿಟಿಗೆ ಸೂಟ್ ಆಗುವಂಥ ಬ್ಲೌಸ್‌ಆಧಾರದಲ್ಲಿ ಸೀರೆ ಗೌನ್ ಆರಿಸಿ.
ಡಿಸೈನ್ : ಸಿಂಪಲ್ ಸೋಬರ್‌ನಿಂದ ಹಿಡಿದು ಸೀಕ್ವೆನ್ಸ್, ಶೀರ್ ಮತ್ತು ಕಸೂತಿಯುಳ್ಳ ಸೀರೆ ಗೌನ್ ಸಹ ಸುಲಭವಾಗಿ ಮಾರುಕಟ್ಟೆಯಲ್ಲಿ ಲಭ್ಯ. ಇವನ್ನು ನಿಮ್ಮ ಸಮಯ ಸಂದರ್ಭಾನುಸಾರ ನೋಡಿಕೊಳ್ಳಿರಿ. ಮದುವೆಯಂಥ ಶುಭ ಸಮಾರಂಭಕ್ಕೆ ಸೀಕ್ವೆನ್ಸ್, ಶೀರ್ ಅಥವಾ ಕಸೂತಿಗೊಳಿಸಾದ ಹೆವಿ ವರ್ಕ್‌ನ ಸೀರೆ ಗೌನ್ ಕೊಳ್ಳಿರಿ. ಡೇ ಪಾರ್ಟಿ, ಗೆಟ್ ಟು ಗೆದರ್‌ಗಾಗಿ ಸಿಂಪಲ್ ಸೋಬರ್ ಡಿಸೈನ್ ಆರಿಸಿ.
ಕಲರ್ಸ್ : ಲೈಟ್‌ನಿಂದ ಡಾರ್ಕ್, ಬ್ರೈಟ್‌ನಿಂದ ಡಲ್ ಕಲರ್ಸ್‌ನಲ್ಲಿ ಸೀರೆ ಗೌನಿನ ಹಲವು ವಿಧಗಳು ಲಭ್ಯ. ಆದರೆ ನಿಮ್ಮ ಸ್ಕಿನ್‌ಟೋನ್‌ಗೆ ಹೊಂದುವಂಥ ಶೇಡ್ಸ್ ಇರುವುದನ್ನೇ ಆರಿಸಿ. ನೀವು ಗೌರವರ್ಣ ಹೊಂದಿದ್ದರೆ, ಆಗ ರೆಡ್, ಪಿಂಕ್, ಗೋಲ್ಡ್, ಸಿಲ್ವರ್.... ಮುಂತಾದ ಶೇಡ್ಸ್ ಆರಿಸಿ. ನೀವು ಶ್ಯಾಮಲ ವರ್ಣದವರಾದರೆ ಲೈಟ್ ಪೇಸ್ಟಲ್ ಶೇಡ್ಸ್ ಟ್ರೈ ಮಾಡಿ. ಕೆಲವು ಗೌನ್ಸ್ ಡ್ಯುಯೆಲ್ ಶೇಡ್ಸ್, ಕಾಂಟ್ರಾಸ್ಟ್ ಕಲರ್ಸ್ ಹಾಗೂ ಮಲ್ಟಿ ಶೇಡ್ಸ್ ನಲ್ಲೂ ಲಭ್ಯ. ಫ್ಯಾಬ್ರಿಕ್ ನೆಟ್‌ನಿಂದ ಸಿಲ್ಕ್, ಬ್ರೋಕೆಟ್‌ನಿಂದ ಜಾರ್ಜೆಟ್‌ವರೆಗೂ ಸೀರೆ ಗೌನ್ ಎಲ್ಲದರಲ್ಲೂ ಲಭ್ಯ. ಬೇರೆ ಬೇರೆ ಫ್ಯಾಭ್ರಿಕ್ಸ್ ನಲ್ಲಿ ಇದರ ಲುಕ್ಸ್ ವಿಭಿನ್ನವಾಗಿರುತ್ತದೆ. ಹೀಗಿರುವಾಗ ಸೀರೆ ಗೌನ್‌ನ ಲುಕ್ಸ್ ಹಾಗೂ ಋತುವಿಗೆ ತಕ್ಕಂತೆ ಇದರ ಫ್ಯಾಬ್ರಿಕ್ ಆರಿಸಿ. ಪ್ಲೇನ್ ಫ್ಯಾಬ್ರಿಕ್‌ನಿಂದ ತಯಾರಾದ ಸೀರೆ ಗೌನ್, ಎಲ್ಲಕ್ಕೂ ಬ್ಯೂಟಿಫುಲ್ ಎನಿಸುತ್ತದೆ. ಇದರ ಜೊತೆ ಬ್ಲೌಸ್‌ಗಾಗಿ ಟ್ರಾನ್ಸ್ ಪರೆಂಟ್ ಫ್ಯಾಬ್ರಿಕ್‌ನ ಆಯ್ಕೆ ಅಂಥದನ್ನು ಗ್ಲಾಮರಸ್ ಆಗಿಸುತ್ತದೆ.