ನಾಲಿಗೆಯ ರುಚಿಗಾಗಿ : ನೀವು ಸ್ಪೈಡರ್ ಮ್ಯಾನ್ ತರಹ ಆಗಬೇಕೇ? ಅಂದರೆ ಅವನ ತರಹ ಕಟ್ಟಡದಿಂದ ಕಟ್ಟಡಕ್ಕೆ ಹಾರಬೇಕಿಲ್ಲ, ಇಲ್ಲಿ ತೋರಿಸಿರುವ ಬಗೆಬಗೆಯ ಜೇಡ (ಸ್ಪೈಡರ್)ಗಳನ್ನು ರುಚಿ ನೋಡಿದರಾಯಿತು! ಮುಖ ಸಿಂಡರಿಸಬೇಡಿ, ವಿವರ ಓದಿ. ಕಾಂಬೋಡಿಯಾದ ಕಾಡುಗಳಲ್ಲಿ ಲಭ್ಯವಿರುವ ಅಂಗೈ ಅಗಲದ ಕೂದಲುಳ್ಳ ಈ ದೈತ್ಯ ಜೇಡಗಳನ್ನು ಹಿಡಿದುತಂದು, ಹೀಗೆ ಡೀಪ್ ಫ್ರೈ ಮಾಡಿ ಸವಿಯುತ್ತಾರಂತೆ. ಇದರಿಂದ ಆರೋಗ್ಯಕ್ಕೆ ಹಾನಿ ಇಲ್ಲ ಎನ್ನುತ್ತಾರೆ ಆಧುನಿಕ ಆಹಾರ ತಜ್ಞರು, ಮುಂದೆ ಇದೂ ಕೂಡ ಹೇಳ ಹೆಸರಿಲ್ಲದಂತೆ ಮಾಯವಾಗಬಾರದಷ್ಟೆ.
ಮಾತನಾಡುತ್ತಿರುವ ಚಿತ್ರಗಳು : ಭಾರೀ ಜನದಟ್ಟಣೆ ಹಾಗೂ ಸೈಕಲ್ ಸವಾರರ ಕಷ್ಟಗಳ ಬಗ್ಗೆ ಹೇಳುವಂಥ ಒಂದು ಅದ್ಭುತ ಪೇಂಟಿಂಗ್ ಇತ್ತೀಚೆಗೆ ಪ್ಯಾರಿಸ್ ನಗರದಲ್ಲಿ ಪ್ರದರ್ಶನಗೊಂಡಿತು. ಯಾರೋ ಒಬ್ಬರು ಬೇಕೆಂದೇ ಆ ಕಲಾವಿದನನ್ನು, ಹೀಗೆ ಸೈಕಲ್ ಚಲಿಸಿದರೆ ಯಾರ ತಲೆ ಮೇಲೆ ಕಾಲಿಟ್ಟು ಇಳಿಯಬೇಕು ಎಂದು ಕೆಣಕಿದರಂತೆ. ಅದೇನು ಜವಾಬಿತ್ತರೋ ಗೊತ್ತಿಲ್ಲ, ಕಲಾವಿದ ಹಾಗೂ ಸೈಕಲ್ ಸವಾರರ ಕಷ್ಟ ಕಲ್ಪನೆಗಳು ಬೇರೆ ಎಂಬುದು ಸ್ಪಷ್ಟವಾಯ್ತು.
ಇದಲ್ಲವೇ ಗ್ಲಾಮರಸ್ ಫ್ಯಾಷನ್ ! : ಕ್ಯಾಲಿಫೋರ್ನಿಯಾದ ಕೊಚೇಲಾ ಮ್ಯೂಸಿಕ್ ಫೆಸ್ಟಿವಲ್ ಇದೀಗ ವಿಶ್ವವಿಡೀ ಪ್ರಸಿದ್ಧ. ಇಲ್ಲಿ ಹಾಡು ಡ್ಯಾನ್ಸ್ ಮಾತ್ರವಲ್ಲದೆ, ಹೊಚ್ಚ ಹೊಸ ಫ್ಯಾಷನೆಬಲ್ ಡಿಸೈನರ್ ಉಡುಗೆಗಳಿಗೇನೂ ಕೊರತೆ ಇಲ್ಲ. ಇಲ್ಲಿನ ಈ ಅತ್ಯಾಧುನಿಕ ಡಿಸೈನ್ ಗಮನಿಸಿ, ಇಂದಿನ ಟ್ರೆಂಡ್ ನಿಮಗೇ ತಿಳಿಯುತ್ತದೆ. ಭಾರತೀಯರಾದ ನಾವು ಇನ್ನೂ 18ನೇ ಶತಮಾನದಲ್ಲೇ ಇದ್ದುಬಿಟ್ಟಿರುವುದರಿಂದ ಇದು ವಿಚಿತ್ರ ಅನಿಸಿದರೆ ಆಶ್ಚರ್ಯವೇನಿಲ್ಲ. ಮುಂದಿನ ತಲೆಮಾರಿಗೆ ಇದು ಚೆನ್ನ ಎನಿಸಬಹುದೇನೋ?
ಮುಖ ಅಲ್ಲ ಹೂ ನೋಡಿ : ಇಲ್ಲಿನ ಸುಂದರ ಸೌಮ್ಯ ಮುಖದ ಬದಲು, ಇಲ್ಲಿನ ಹೂಗಳ ರಾಶಿ ನೋಡಿ. ಏಕೆಂದರೆ ಈ ಮುಖ ಕೃತಕವಾದುದು. ಇಲ್ಲಿನ ಟ್ಯೂಲಿಪ್ ಹೂಗಳ ಸೌಂದರ್ಯವನ್ನು ಎಷ್ಟು ವರ್ಣಿಸಿದರೂ ಸಾಲದು. ಹಾಲೆಂಡ್‌ನ ತವರಿನ ಚಳಿಯ ವಾತಾವರಣ ಇಲ್ಲದಿದ್ದರೂ, ಈಗ ಇದು ಸಿಂಗಾಪೂರ್‌ನ ಈ ಪ್ರದರ್ಶನದ ಮಟ್ಟಕ್ಕೆ ಬೆಳೆಯುವಂತಾಗಿದೆ.
ನಿಮ್ಮನ್ನೂ ಕುಣಿಸದೇ ಬಿಡೋದಿಲ್ಲ : ಈ ಜೀವಿಗಳು ಯಾವ ಗ್ರಹದಿಂದ ಇಳಿದು ಬಂದಿವೆ ಎನ್ನಬೇಡಿ. ಇವರುಗಳ ಹಾಡು ಎಂಥ ಮಸ್ತ್ ಏನು ಮಜಾ ಎಂದು ವಿಚಾರಿಸಿ. ಈ ಫ್ರೆಂಚ್ ಎಲೆಕ್ಟ್ರೋ ಡ್ಯಾನ್ಸರ್ ಗ್ರೂಪ್ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ಇದರ ವಿಡಿಯೋ ಎಲ್ಲೆಲ್ಲೂ ವೈರಲ್ ಆಗಿದೆ.
ಇಂಥ ಹೋಳಿ ಕಂಡಿದ್ದುಂಟೇ? : ಇದೂ ಸಹ ಒಂದು ಬಗೆಯ ಹೋಳಿ ಎಂದೇ ಹೇಳಬಹುದು. ಹೊಸ ವರ್ಷದ ಆಚರಣೆಗಾಗಿ ಯೂರೋಪ್‌ನ ಒಂದು ದೇಶದಲ್ಲಿ ಹೀಗೆ ಜನ ಒಂದೆಡೆ ಕಲೆತು ವಾಟರ್ ಪೈಪ್‌ನಿಂದ ಪರಸ್ಪರ ಮೇಲೆ ನೀರೆರಚಿ ಸ್ನಾನ ಮಾಡಿಸಿ, ನಂತರ ಒದ್ದೆ ಬಟ್ಟೆಯಲ್ಲೇ ಪಾರ್ಟಿ ಮಾಡಿ ಮಜಾ ಉಡಾಯಿಸುತ್ತಾರೆ. ಯಾಕೋ… ಇದರ ಮುಂದೆ ನಮ್ಮ ಹೋಳಿ ಸಪ್ಪೆ ಎನಿಸುತ್ತಿದೆ.
ಭಯ ಪಡುವ ಅಗತ್ಯವಿಲ್ಲ : ಹೋಮೀ ಭಾಭಾರ ಈ ಕಲಾಕೃತಿಯನ್ನು ನ್ಯೂಯಾರ್ಕ್‌ನ ಮ್ಯೂಸಿಯಂನಲ್ಲಿ ಇರಿಸಲಾಗಿದೆ. ಇದು 1951ರ ಸೈನ್ಸ್ ಫಿಲ್ಮಂನ ಒಂದು ಪಾತ್ರ ಆಧರಿಸಿ ತಯಾರಿಸಿದ್ದು. ಬೇರೆ ಗ್ರಹಗಳಲ್ಲೂ ನಮ್ಮಂಥ ಜೀವಜಂತುಗಳಿವೆ ಎಂಬುದನ್ನು ಅಮೀರ್‌ಖಾನ್‌ನ `ಪಿಕೆ’ ಚಿತ್ರದಲ್ಲಿ ಮಾತ್ರ ತೋರಿಸಲಾಗಿದೆ ಅಂದುಕೊಳ್ಳಬೇಡಿ, ಇಂಥ ಕಾಲ್ಪನಿಕ ಪಾತ್ರಗಳನ್ನು ಎಲ್ಲಾ ಕಡೆ ಬೇಕಾದಂತೆ ತೋರಿಸಬಹುದು.