ಯಾವ ಸಂದರ್ಭದಲ್ಲಿ ಯಾವ ಡ್ರೆಸ್‌ ಜೊತೆ ಎಂಥ ಇಯರ್‌ರಿಂಗ್ಸ್ ಧರಿಸಬಹುದು?

ಜ್ಯೂವೆಲರಿ ಬಾಕ್ಸಿನಲ್ಲಿ ನೆಕ್‌ಪೀಸ್‌ನಿಂದ ಫಿಂಗರ್‌ರಿಂಗ್ಸ್ ವರೆಗೂ ವಿಶಿಷ್ಟ ಸ್ಥಾನವಿದೆ. ಆದರೆ ಇಯರ್‌ರಿಂಗ್ಸ್ ವಿಷಯವೇ ಬೇರೆ. ನೀವು ಎಷ್ಟೇ ಜ್ಯೂವೆಲರಿ ಧರಿಸಿದ್ದರೂ, ಇಯರ್‌ರಿಂಗ್ಸ್ ಧರಿಸದಿದ್ದರೆ ನಿಮ್ಮ ಅಲಂಕಾರ ಅಪೂರ್ಣ ಎನಿಸುತ್ತದೆ. ಇತ್ತೀಚೆಗೆ ಎಂಥ ಇಯರ್‌ರಿಂಗ್ಸ್ ಫ್ಯಾಷನ್‌ನಲ್ಲಿ ಇನ್‌ ಎಂದು ತಿಳಿಯೋಣವೇ?

ಚಂದ್ರಾಕಾರದ ಇಯರ್‌ರಿಂಗ್ಸ್

`ರಾಮಲೀಲಾ’ ಚಿತ್ರದ ನಂತರ ಈ ಬಗೆಯ ಚಂದ್ರಾಕಾರದ ರಿಂಗ್ಸ್ ದಿನೇದಿನೇ ಜನಪ್ರಿಯವಾಗುತ್ತಿವೆ. ಇದನ್ನು ನಮ್ಮ ಸಾಂಪ್ರದಾಯಿಕ ಸೀರೆ, ಸಲ್ವಾರ್‌ ಸೂಟ್‌, ಲಹಂಗಾ ಚೋಲಿ ಜೊತೆ ಜೊತೆಯಲ್ಲೇ ಇಂಡೋವೆಸ್ಟರ್ನ್‌ ವೇರ್‌ಗಳಾದ ಸ್ಯಾರಿ ಗೌನ್‌, ಸ್ಕರ್ಟ್‌, ಪ್ಲಾಜೋ ಇತ್ಯಾದಿಗಳ ಜೊತೆಯೂ ಧರಿಸಬಹುದು. ಹಾಫ್‌ ಜೊತೆ ಫುಲ್ ಚಂದ್ರಾಕಾರಗಳೂ ಉಂಟು. ಇದರಲ್ಲಿ ಅನೇಕ ವೆರೈಟಿಗಳಿವೆ. ಕಲರ್ಸ್‌ ಜೊತೆ ಜೊತೆಯಲ್ಲೇ ಮೆಟೀರಿಯಲ್‌ನಲ್ಲೂ ವ್ಯತ್ಯಾಸ ಇರುತ್ತದೆ. ನೀವು ಇಂಥ ಚಂದ್ರಾಕಾರದ ಇಯರ್‌ರಿಂಗ್ಸ್ ಧರಿಸಿ ಮಿಂಚಲು ಬಯಸಿದರೆ, ಕೂದಲನ್ನು ಓಪನ್‌ ಬಿಡುವ ಬದಲು, ಅಪ್ಪರ್‌ ಯಾ ಲೋಯರ್‌ ಬನ್‌ ಸ್ಟೈಲ್ ಮಾಡಿ.

ಶಾಂಡ್ಲಿಯರ್‌ ಇಯರ್‌ರಿಂಗ್ಸ್

ನೀವು ಈಗಾಗಲೇ ಹೂಜಾ ಇಯರ್‌ರಿಂಗ್ಸ್ ಧರಿಸುತ್ತಿದ್ದರೆ, ಈ ಶಾಂಡ್ಲಿಯರ್‌ (ಜೂಮರ್‌) ಇಯರ್‌ರಿಂಗ್ಸ್ ನ್ನು ನಿಮ್ಮ ಜ್ಯೂವೆಲರಿ ಬಾಕ್ಸಿಗೆ ಸೇರಿಸಿ. ಇದು ಮೇಲಿನಿಂದ ಟಾಪ್ಸ್ ತರಹ, ಕೆಳಗಿನಿಂದ ಲೋಲಾಕಿನ ತರಹ 2 ಇನ್‌ ಆಗಿದೆ. ಈ ಕಾರಣಕ್ಕೆ ಇಂಥ ಹೆಸರು ಬಂದಿದೆ. ಇದನ್ನು ನೀವು ಇಂಡಿಯನ್‌, ವೆಸ್ಟರ್ನ್‌, ಇಂಡೋವೆಸ್ಟರ್ನ್‌ ಯಾವುದೇ ಉಡುಗೆ ಜೊತೆ ಧರಿಸಬಹುದು. ಅದಕ್ಕಾಗಿ ಗೋಲ್ಡ್ ಸಿಲ್ವರ್‌, ಕಾಪರ್‌, ಡೈಮಂಡ್‌ ಅಥವಾ ಪರ್ಲ್ ನ ಶಾಂಡ್ಲಿಯರ್‌ ಇಯರ್‌ರಿಂಗ್ಸ್ ಖರೀದಿಸಲು ಮರೆಯದಿರಿ. ಆಯಾ ಉಡುಗೆಗಳಿಗೆ ತಕ್ಕಂತೆ ಬದಲಾಯಿಸಿ ಈ ಒಡವೆಗಳನ್ನು ಧರಿಸುತ್ತಿರಿ.

ಟ್ಯಾಸ್‌ ಇಯರ್‌ರಿಂಗ್ಸ್

ಈ ಗೊಂಚಲಿನ ಇಯರ್‌ರಿಂಗ್ಸ್ ಮೇಲ್ಭಾಗದಿಂದ ಟಾಪ್ಸ್ (ಹುಕ್‌ ತರಹ) ಆಕಾರ ಹಾಗೂ ಕೆಳಭಾಗದಿಂದ ಗೊಂಚಲಿನಂತೆ ವಿವಿಧ ಎಳೆಗಳ ಜೋಡಣೆ ಆಗಿರುತ್ತದೆ. ಹೀಗಾಗಿ ಇದನ್ನು ಟ್ಯಾಸ್‌ ಇಯರ್‌ರಿಂಗ್ಸ್ ಎನ್ನುತ್ತಾರೆ. ಇದು ಮುಖ್ಯವಾಗಿ ವೆಸ್ಟರ್ನ್‌ ವೇರ್‌ಗೆ ಚೆನ್ನಾಗಿ ಹೊಂದುತ್ತದೆ. ಆದರೆ ಇಂಡಿಯನ್‌ ವೇರ್‌ಗೆಂದೇ ವಿಶೇಷವಾಗಿ ರೂಪಿಸಲಾದ ಗೋಲ್ಡ್ ಪ್ಲೇಟೆಡ್‌ ಟ್ಯಾಸ್‌ ಇಯರ್‌ರಿಂಗ್ಸ್ ಇದೀಗ ಹೆಚ್ಚು ಜನಪ್ರಿಯವಾಗುತ್ತಿದೆ. ಜುಮಕಿ ಮತ್ತು ಶಾಂಡ್ಲಿಯರ್‌ ಇಯರ್‌ರಿಂಗ್ಸ್ ಗೆ ಹೋಲಿಸಿದಾಗ ಇವು ಸಾಕಷ್ಟು ಹಗುರ ಎನಿಸುತ್ತವೆ. ವಿಶೇಷ ದಿನಗಳಿಗಾಗಿ ಮಾತ್ರವಲ್ಲದೆ ಇವನ್ನು ಸಾಧಾರಣ ದಿನಗಳಿಗೂ ಬಳಸಬಹುದು.

ಸ್ಟಡ್‌ ಇಯರ್‌ರಿಂಗ್ಸ್

ಕುಂದಣ, ಪೋಲ್ಕಿ, ಜೆಮ್ ಸ್ಟೋನ್‌, ಪರ್ಲ್, ಡೈಮಂಡ್‌ ಮುಂತಾದ ಮೆಟೀರಿಯಲ್‌ಗಳಿಂದ ತಯಾರಾಗುವ ಸ್ಟಡ್‌ ಇಯರ್‌ರಿಂಗ್ಸ್ ನ್ನು ನೀವು ಇಂಡಿಯನ್‌ ವೇರ್‌ ಜೊತೆಯಲ್ಲೇ ವೆಸ್ಟರ್ನ್‌ ವೇರ್‌ಗೂ ಧರಿಸಬಹುದು. ಇವು ಸ್ಮಾಲ್ ಸೈಜ್‌ನಿಂದ ಹ್ಯೂಜ್‌ವರೆಗೂ, ಹೆವಿಯಿಂದ ಲೈಟ್‌ ವೆಯ್ಟ್ ವರೆಗೂ ಲಭ್ಯ. ಸಿಂಪಲ್ ಸೊಫೆಸ್ಟಿಕೇಟೆಡ್‌ ಲುಕ್ಸ್ ಗಾಗಿ ಸ್ಮಾಲ್ ಸೈಜ್‌ನ ಪರ್ಲ್, ಜೆಮ್ ಸ್ಟೋನ್‌, ಡೈಮಂಡ್‌ನ ಸ್ಟಡ್‌ ಇಯರ್‌ರಿಂಗ್ಸ್ ಖರೀದಿಸಿ. ಬೋಲ್ಡ್ ಬ್ಯೂಟಿಫುಲ್ ಲುಕ್ಸ್ಗಾಗಿ ಹ್ಯೂಜ್‌ ಸೈಜ್‌ನ ಗೋಲ್ಡನ್‌, ಕಾಪರ್, ಕುಂದಣ ಯಾ ಪೋಲ್ಕಿ ಸ್ಟಡ್‌ ಇಯರ್‌ರಿಂಗ್ಸ್ ನಿಮ್ಮ ಮೊದಲ ಆಯ್ಕೆ ಆಗಿರಲಿ.

ನಟಿಯರ ಇಯರ್‌ರಿಂಗ್ಸ್ ಕ್ರೇಝ್

ಬಾಲಿವುಡ್‌ ದೀವಾಗಳೂ ಈ ಇಯರ್‌ರಿಂಗ್ಸ್ ನ ಕಟ್ಟಾ ಅಭಿಮಾನಿಗಳು. ದೀಪಿಕಾ, ವಿದ್ಯಾ, ಅನುಷ್ಕಾ, ಪ್ರಿಯಾಂಕಾ, ಕರೀನಾ, ಸೋನಂ, ಬಿಪಾಶಾ, ಆಲಿಯಾ ಮುಂತಾದವರು ಚಂದ್ರಾಕಾರದ ರಿಂಗ್ಸ್, ಓವರ್‌ ಸೈಜ್‌ ಜುಮಕಿ, ಶಾಂಡ್ಲಿಯರ್‌, ಟ್ಯಾಸ್‌ ಇಯರ್‌ ರಿಂಗ್ಸ್, ಸ್ಟಡ್ಸ್ ಇತ್ಯಾದಿಗಳನ್ನು ಅನೇಕ ಸಿನಿಮಾಗಳಲ್ಲಿ ಮಾತ್ರವಲ್ಲದೆ, ಈವೆಂಟ್ಸ್ ಗಳಿಗೂ ಧರಿಸುತ್ತಾರೆ. ನಿಮ್ಮ ನೆಚ್ಚಿನ ನಟಿಯರ ಆಯ್ಕೆಯಂತೆ ನೀವು ಸಹ ಇಂಥದ್ದನ್ನು ಧರಿಸಿ ನಿಮ್ಮದೇ ಸ್ಟೈಲ್ ಸ್ಟೇಟ್‌ಮೆಂಟ್‌ ನೀಡಬಹುದು.

ಡ್ರಾಪ್‌ ಇಯರ್‌ರಿಂಗ್ಸ್

ಬಹಳ ಹೆವಿ ಯಾ ಬಲು ಲೈಟ್‌ ವೆಯ್ಟ್ ಇಯರ್‌ರಿಂಗ್ಸ್ ಮಧ್ಯದಲ್ಲಿ ಏನನ್ನಾದರೂ ಟ್ರೈ ಮಾಡಬಯಸಿದರೆ, ಈ ಡ್ರಾಪ್‌ಇಯರ್‌ರಿಂಗ್ಸ್ ನ್ನು ಆರಿಸಿ. ಡ್ರಾಪ್‌ ಅಂದರೆ ಹನಿ ಆಕಾರದ (ಮೇಲ್ಭಾಗದಿಂದ ತೆಳು ಹಾಗೂ ಕೆಳಭಾಗದಿಂದ ಹೆವಿ ಲುಕ್‌ನದು) ಈ ಇಯರ್‌ರಿಂಗ್ಸ್, ಇಂಡಿಯನ್‌ ವೆಸ್ಟರ್ನ್‌ ಎರಡೂ ಉಡುಗೆಗಳಿಗೆ ಹೊಂದುತ್ತವೆ. ಇವು ಟಾಪ್ಸ್ ಜೊತೆ ಹುಕ್‌ ಮಾದರಿಯದೂ ಸಿಗುತ್ತದೆ. ಮೀಡಿಯಂ ಸೈಜ್‌ನಿಂದ ಹ್ಯೂಜ್‌ವರೆಗೂ ಇವು ಗೋಲ್ಡನ್‌, ಸಿಲ್ವರ್‌, ಡೈಮಂಡ್‌, ಪರ್ಲ್ ಡ್ರಾಪ್ಸ್ ಆಗಿಯೂ ಎಲ್ಲೆಡೆ ಲಭ್ಯ.

ಓವರ್‌ ಸೈಜ್‌ ಜುಮಕಿ

ಜುಮಕಿ ಎಂದೂ ಔಟ್‌ ಆಫ್‌ ಫ್ಯಾಷನ್‌ ಆಗುವುದೇ ಇಲ್ಲ. ಒಮ್ಮೆ ಪುಟ್ಟ ಜುಮಕಿ (ಸಣ್ಣ ಗಾತ್ರದ್ದು) ಸ್ಟೈಲ್‌‌ನಲ್ಲಿ ಬಂದರೆ ಮತ್ತೊಮ್ಮೆ ಬೇರೆ ಬೇರೆ ಮೆಟೀರಿಯಲ್, ಕಲರ್‌ ಆಧರಿಸಿ ಇವು ಫ್ಯಾಷನ್‌ನಲ್ಲಿ ಡಿಮ್ಯಾಂಡ್‌ ಹೊಂದಿರುತ್ತವೆ. ಹಾಗೆ ನೋಡಿದರೆ ಈಗ ಓವರ್‌ಸೈಜ್‌ ಜುಮಕಿ ಹೆಚ್ಚು ಬೇಡಿಕೆಯಲ್ಲಿದೆ. ಟ್ರೆಡಿಶನಲ್ ಫಂಕ್ಷನ್‌ಗಳಿಂದ ಹಿಡಿದು ಮದುವೆಯಂಥ ಶುಭ ಸಮಾರಂಭಗಳವರೆಗೂ ಇದನ್ನು ಎಲ್ಲರೂ ಧಾರಾಳವಾಗಿ ಧರಿಸುತ್ತಾರೆ. ಗೋಲ್ಡ್ ನಿಂದ ಹಿಡಿದು ಆಕ್ಸೈಡ್‌ವರೆಗೂ, ಸಿಲ್ವರ್‌, ಪರ್ಲ್, ಮಲ್ಟಿ ಕಲರ್ಸ್‌ನಲ್ಲಿಯೂ ಇವು ಲಭ್ಯ. ಇವನ್ನು ಸಲ್ವಾರ್‌ ಸೂಟ್‌, ಕುರ್ತಿ, ಸೀರೆ, ಲಹಂಗಾ ಚೋಲಿ ಮುಂತಾದ ಎಲ್ಲಾ ಇಂಡಿಯನ್‌ ವೇರ್‌ಜೊತೆಯೂ ಧರಿಸಬಹುದಾಗಿದೆ.

ಆಕ್ಸಿಡೈಸ್ಡ್ ಇಯರ್‌ರಿಂಗ್ಸ್

ಇತ್ತೀಚೆಗಂತೂ ಈ ಬಗೆಯ ಇಯರ್‌ರಿಂಗ್ಸ್ ಸಾಕಷ್ಟು ಬೇಡಿಕೆ ಗಳಿಸುತ್ತಿವೆ. ಆಕ್ಸೈಡ್‌ ಮೆಟೀರಿಯಲ್ ಇರುವ ಕಾರಣ ಇದು 3 ಬಗೆಯ ಉಡುಗೆಗಳಿಗೂ ಹೊಂದುತ್ತದೆ. ಪಾರ್ಟಿ, ಫಂಕ್ಷನ್‌ ಮುಂತಾದ ಸಂದರ್ಭಗಳಲ್ಲಿ ಮಾತ್ರವಲ್ಲದೆ, ಇವನ್ನು ಮಾಮೂಲಿ ದಿನಗಳಲ್ಲಿಯೂ ಧರಿಸಬಹುದು. ಇವನ್ನು ಆರಿಸುವಾಗ ಇವುಗಳ ಆಕಾರ ಮತ್ತು ತೂಕದ ಕಡೆಯೂ ಗಮನವಿರಲಿ. ಚಂದ್ರಾಕಾರದ ಇಯರ್‌ರಿಂಗ್ಸ್, ಜುಮಕಿ, ಶಾಂಡ್ಲಿಯರ್‌, ಡ್ರಾಪ್‌, ಸ್ಟಡ್‌ ಇಯರ್‌ರಿಂಗ್ಸ್ ಸಹ ಆಕ್ಸಿಡೈಸ್ಡ್ ಮೆಟೀರಿಯಲ್‌ನಲ್ಲಿ ನಿಮಗೆ ಸಿಗುತ್ತವೆ.

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ