ಸ್ನೇಹಾ ಮೊಣಕೈಯಿಂದ ಭರತ್‌ಗೆ ಹಗುರವಾಗಿ ತಿವಿದು ಫ್ರಿಜ್‌ನಿಂದ ಹಾಲು ತರಲು ಹೇಳಿದಾಗ ಅವನು ಕೋಪಗೊಂಡ.
“ಏನು? ನಾನು ಬಟ್ಟೆ ಹಾಕಿಕೊಳ್ಳೋದು ಕಾಣಿಸ್ತಿಲ್ವಾ?”
ಭರತ್ ಜೊತೆಗೆ ಸ್ನೇಹಾ ಹಾಗೆ ವರ್ತಿಸಿದ್ದು ಪ್ರೀತಿಯಿಂದ. ಅದಕ್ಕೆ ಪ್ರತಿಯಾಗಿ ಆಕೆ ಪತಿಯಿಂದ ಅದೇ ತೆರನಾದ ಸ್ಪರ್ಶ ತುಂಟಾಟ ಅಪೇಕ್ಷಿಸಿದ್ದಳು. ಆದರೆ ಭರತ್‌ಗೆ ಮಾತ್ರ ಆ ರೀತಿಯ ಸ್ಪರ್ಶ ಇಷ್ಟವಾಗಲಿಲ್ಲ.
ಸ್ನೇಹಾಳ ಮೂಡ್ ಆಕಸ್ಮಿಕವಾಗಿಯೇ ಹಾಳಾಗಿಹೋಯಿತು. ಆಕೆ ಕಣ್ಣು ತುಂಬಿಸಿಕೊಂಡು, “ನಾನು ನಿಮ್ಮನ್ನು ಆಕರ್ಷಿಸಲೆಂದೇ ಹಾಗೆ ಮೊಣಕೈನಿಂದ ತಿವಿದಿದ್ದೆ. ಅದಕ್ಕೆ ಪ್ರತಿಯಾಗಿ ನಾನೂ ನಿಮ್ಮಿಂದ ಅಂತಹದೇ ತುಂಟಾಟ, ಛೇಡಿಸುವ ಮಾತುಗಳನ್ನು ಅಪೇಕ್ಷಿಸಿದ್ದೆ. ಆದರೆ ನನ್ನ ವರ್ತನೆ ನಿಮಗೆ ಕೋಪ ತರಿಸಿತು,” ಎಂದಳು.
ಹೆಂಡತಿಯ ಮಾತು ಕೇಳಿ ಭರತ್‌ಗೆ ಒಮ್ಮೆಲೆ ಗಾಬರಿ. ಅವನು ಫ್ರಿಜ್‌ನಿಂದ ಹಾಲು ತೆಗೆದುಕೊಡುತ್ತ, “ಸಾರಿ, ನಾನು ನಿನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ. ನಿನ್ನ ಭಾವನೆಗಳನ್ನು ಮನಸ್ಸಿಗೆ ತಂದುಕೊಳ್ಳಲಿಲ್ಲ. ನನಗೀಗ ನಿಜಕ್ಕೂ ಬೇಸರವಾಗುತ್ತಿದೆ. ಈ ವಿಷಯದಲ್ಲಿ ನಾನು ನಿಜಕ್ಕೂ ದಡ್ಡನೇ ಸರಿ,” ಎಂದ.
ಸ್ನೇಹಾಳ ದುಃಖ, ಬೇಸರ ಒಂದೇ ಕ್ಷಣದಲ್ಲಿ ತಗ್ಗಿಹೋಯಿತು. ಅವಳು ಅವನ ಹತ್ತಿರ ಬಂದು ಕಾಲರ್ ಹಿಡಿದು, “ನೀನು ನನ್ನ ಅತೃಪ್ತಿಯನ್ನು ಕಂಡುಕೊಂಡೆ. ನನಗೆ ಇಷ್ಟೇ ಸಾಕು. ನೀನು ನಿನ್ನ ತಪ್ಪನ್ನು ಒಪ್ಪಿಕೊಂಡೆ, ಅದು ಕೂಡ ಒಂದು ಸ್ಪರ್ಶವೇ ಹೌದು. ನಿನ್ನ ಒಂದೊಂದು ಶಬ್ದಗಳು ನನ್ನ ಹೃದಯನ್ನು ತಟ್ಟಿ ಪುಳುಕಿತಗೊಳಿಸಿದವು,” ಎಂದು ಹೇಳಿ ಅವನನ್ನು ತಬ್ಬಿಕೊಂಡಳು.
ಭರತ್‌ನ ಕೈಗಳು ಅವಳ ಸೊಂಟವನ್ನು ಬಳಸಿದವು. ಅವನು ಅವಳ ಬೆನ್ನನ್ನು ನೇವರಿಸುತ್ತಾ, “ನಿನ್ನ ಸೊಂಟ ಅದೆಷ್ಟು ತೆಳ್ಳಗಾಗಿದೆ,” ಎಂದ.
ಅವನ ಮಾತು ಮುಗಿಯುವ ಮೊದಲೇ ಸ್ನೇಹಾ ಅವನ ಹೊಟ್ಟೆಗೆ ಬೆರಳಿನಿಂದ ತಿವಿದಳು. ಅವನು ಮಂಚದ ಮೇಲೆ ಹಾಗೆಯೇ ಉರುಳಿಬಿಟ್ಟ. ಅವಳೂ ಅವನ ಮೇಲೆ ಹಾಗೆಯೇ ಒರಗಿದಳು. ಸ್ವಲ್ಪ ಹೊತ್ತಿನ ತನಕ ಅವರು ತುಂಟಾಟ, ನಗುವಿನಲ್ಲಿ ಮುಳುಗಿದರು.
ಪ್ರೀತಿ ಹೆಚ್ಚುವುದು ಹೀಗೆ….
ಜೀವನದಲ್ಲಿ ರೊಮಾನ್ಸ್ ಹೆಚ್ಚುವುದು ಹೀಗೆಯೇ. ಸಿಹಿಕಹಿ ಅನುಭವಗಳು ಜೀವನದಲ್ಲಿ ಖುಷಿಯ ರಸವನ್ನು ಬೆರೆಸುತ್ತವೆ, ಜೀವನವನ್ನು ಸುಲಭಗೊಳಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಹಲವು ಬಗೆಯ ಜವಾಬ್ದಾರಿಗಳು ನಮ್ಮ ಮೆದುಳಿನಲ್ಲಿ ಸುರುಳಿಯಂತೆ ಸುತ್ತುತ್ತಿರುತ್ತವೆ. ಗಂಡ ಹೆಂಡತಿ ಜೊತೆಗಿದ್ದೂ ಕೂಡ ನಗುನಗುತ್ತಾ ಇರಲು ಆಗುವುದಿಲ್ಲ. ಇಂತಹ ಬೇಸರದಾಯಕ ಕ್ಷಣಗಳಲ್ಲಿ ಸಂಗಾತಿಯನ್ನು ಛೇಡಿಸುವುದು ಯಾವುದೇ ಔಷಧಿಗಿಂತ ಕಡಿಮೆ ಮೌಲ್ಯದಾಯಕವಾಗಿರುವುದಿಲ್ಲ.
ಹೆಚ್ಚಿನ ದಂಪತಿಗಳು ಒತ್ತಡದ ಕ್ಷಣಗಳಲ್ಲಿ ಪರಸ್ಪರ ಮಾತುಕತೆ ನಡೆಸಲು ಆಗುವುದಿಲ್ಲ. ಇಂತಹ ಕ್ಷಣಗಳಲ್ಲಿ ಮುಂದುವರಿಯುವ ಅಗತ್ಯ ಇರುತ್ತದೆ. ನೀವು ಧೈರ್ಯ ಮಾಡಿ ಸಂಗಾತಿಯ ಹಣೆ ಚುಂಬಿಸಿ ಇಲ್ಲವೇ ಮೃದುವಾಗಿ ಸ್ಪರ್ಶಿಸಿ. ಆರಂಭದಲ್ಲಿ ಸಂಗಾತಿ ನಿಮ್ಮನ್ನು ನಿರ್ಲಕ್ಷಿಸಬಹುದು. ಆದರೆ ಬಹಳ ಹೊತ್ತು ಹಾಗೆಯೇ ಇರಲು ಆಗುವುದಿಲ್ಲ. ಏಕೆಂದರೆ ಛೇಡಿಸುವಿಕೆಯಿಂದ ಮೆದುಳಿನಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯುತ್ತದೆ. ನೀವು ಹೆಂಡತಿ ಎಂಬ ಕಾರಣದಿಂದ ಹೆದರಬೇಡಿ. ನನ್ನ ಈ ರೀತಿಯ ನಿರ್ಧಾರ ಗಂಡ ಯಾವ ರೀತಿ ತೆಗೆದುಕೊಳ್ಳಬಹುದೆಂದು ಮೌನಕ್ಕೆ ಶರಣಾಗಲು ಹೋಗಬೇಡಿ. ಈ ರೀತಿಯ ಹೆದರಿಕೆಯಿಂದ ಜೀವಿಸುವ ಯಾರೇ ಆಗಲಿ ರೊಮಾನ್ಸ್ ಮಜ ಪಡೆಯಲು ಆಗುವುದಿಲ್ಲ. ಅವರ ಮನಸ್ಸು ಹಾಗೆಯೇ ಸರಿದು ಹೋಗುತ್ತದೆ.
ನೀವು ಸ್ವಲ್ಪ ಧೈರ್ಯ ಮಾಡಿ ಸಂಗಾತಿಯ ಹಣೆ ಚುಂಬಿಸಿ, ಅಪ್ಪಿಕೊಳ್ಳಿ ಅಥವಾ ಸೊಂಟ ಬಳಸಿ ಸ್ಪರ್ಶಿಸಿ. ಆರಂಭದಲ್ಲಿ ಸಂಗಾತಿ ನಿಮ್ಮ ಛೇಡಿಸುವಿಕೆಯನ್ನು ನಿರ್ಲಕ್ಷಿಸಬಹುದು. ಆದರೆ ಕ್ರಮೇಣ ಛೇಡಿಸುವಿಕೆಯನ್ನು ನಿರ್ಲಕ್ಷಿಸಲು ಆಗುವುದಿಲ್ಲ. ಏಕೆಂದರೆ ಸ್ಪರ್ಶಿಸುವುದರಿಂದ ಅಥವಾ ಛೇಡಿಸುವುದರಿಂದ ಮೆದುಳಿಗೆ ಒಂದು ಬಗೆಯ ಸಕಾರಾತ್ಮಕ ಸಂದೇಶ ಹೋಗುತ್ತದೆ. ಆ ಸಂದೇಶ ದೊರೆತ ಬಳಿಕ ಮೆದುಳಿನಲ್ಲಿನ ಒತ್ತಡದ ಕಪ್ಪು ಛಾಯೆ ನಿವಾರಣೆಯಾಗುತ್ತದೆ. ನೀವು ಸಂಗಾತಿಗೆ ಬೇಕು ಎನಿಸಲಾರಂಭಿಸುತ್ತೀರಿ. ಆ ಒಂದು ಅನುಭೂತಿಯೇ ನಿಮ್ಮಿಬ್ಬರ ನಡುವೆ ರೋಮಾಂಚಕ ಕ್ಷಣಗಳನ್ನು ಹೆಚ್ಚಿಸಲು ಸಹಾಯವಾಗುತ್ತದೆ.
ಸುಖದ ಕ್ಷಣಗಳು
ಸ್ನೇಹಾ ಸುಮ್ಮನೆ ನಿಂತಿದ್ದ ಪತಿ ಭರತ್‌ಗೆ ತನ್ನ ಮೊಣಕೈಯಿಂದ ಮೆಲ್ಲನೆ ತಿವಿದು ಹಾಲು ತರಲು ಹೇಳಿದ್ದಳು. ಅವಳ ಆ ವರ್ತನೆಗೆ ಭರತ್ ಬೇಸರಗೊಂಡಿದ್ದ. ಅಷ್ಟೇ ಅಲ್ಲ, ಅವಳ ಮೇಲೆ ಅವನಿಗೆ ಕೋಪ ಕೂಡ ಬಂದಿತ್ತು. ಆದರೆ ಸ್ನೇಹಾ ಮಾತ್ರ ಹೆದರಲಿಲ್ಲ. ತನ್ನ ಭಾವನೆ ಮತ್ತು ಅಂತರಂಗದ ಪ್ರೀತಿಯನ್ನು ಹೊರಹಾಕಲು ಪ್ರಯತ್ನಿಸಿದಳು. ಕೆಲವೇ ಕ್ಷಣಗಳಲ್ಲಿ ಅವನ ಕೋಪ, ಬೇಸರ ಕರ್ಪೂರದಂತೆ ಕರಗಿಹೋಗಿತ್ತು. ಜೊತೆಗೆ ತನ್ನ ವರ್ತನೆಯಿಂದ ಸಂಕೋಚ ಆಗಿತ್ತು. ಆ ಬಳಿಕ ಅವನು ಸ್ನೇಹಾಳ ಬಗೆಗಿನ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಶುರು ಮಾಡಿದ್ದ. ಮರುಕ್ಷಣವೇ ಅವರು ಪರಸ್ಪರರಲ್ಲಿ ತಲ್ಲೀನರಾಗಿ ಒಬ್ಬರಿಗೊಬ್ಬರು ಇಷ್ಟವಾಗತೊಡಗಿದರು.
ಜೀವನದಲ್ಲಿ ರೊಮಾನ್ಸ್ ಮತ್ತು ರೋಮಾಂಚನವನ್ನು ತರಲು ಇದು ಒಂದು ಒಳ್ಳೆಯ ವಿಧಾನವಾಗಿದೆ. ಆದರೆ ನಮ್ಮಲ್ಲಿನ ಬಹಳಷ್ಟು ದಂಪತಿಗಳಿಗೆ ಇದು ಗೊತ್ತಾಗುವುದೇ ಇಲ್ಲ. ಜೊತೆಗೇನೊ ಇರುತ್ತಾರೆ. ಇಷ್ಟವಿದ್ದರೆ ಮಾತನಾಡುತ್ತಾರೆ. ಇಲ್ಲವೇ ವಾದವಿವಾದದಲ್ಲಿ ಮುಳುಗಿಬಿಡುತ್ತಾರೆ. ಹೆಚ್ಚು ಒತ್ತಡಕ್ಕೊಳಗಾದರೆ ಪರಸ್ಪರರೆದುರು ಅತ್ತೇ ಬಿಡುತ್ತಾರೆ. ಆದರೆ ಇದು ವೈವಾಹಿಕ ಜೀವನದ ನಕಾರಾತ್ಮಕ ಸಂಗತಿಯಾಗಿದೆ. ಇದರಿಂದ ದಂಪತಿಗಳು ಎಂದೂ ರೊಮ್ಯಾಂಟಿಕ್ ಕಪಲ್ ಆಗಲು ಸಾಧ್ಯವಿಲ್ಲ. ಅವರ ಜೀವನದಲ್ಲಿ ಏನು ಘಟಿಸುತ್ತದೋ, ಅದು ಸ್ವಾಭಾವಿಕ ಅಥವಾ ನ್ಯಾಚುರಲ್ ಆಗದೆ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಬಂಧ ಆಗಬಹುದು ಅಥವಾ ಪ್ರೀತಿ ಮತ್ತು ತಮಾಷೆಗೆ ಇದೆಲ್ಲ ಅಗತ್ಯವಾಗಿರುತ್ತದೆ. ಆ ವ್ಯಕ್ತಿ ತನ್ನ ಸಂಗಾತಿಯ ಇಚ್ಛೆಯನ್ನು ಈಡೇರಿಸಲು ಪ್ರಯತ್ನಿಸುತ್ತಾನೆ ಅಥವಾ ಇಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ. ಇದೇ ವೈವಾಹಿಕ ಜೀವನಪರ್ಯಂತ ಖುಷಿದಾಯಕ, ರೊಮ್ಯಾಂಟಿಕ್ ಕ್ಷಣವಾಗಿರುತ್ತದೆ. ಒಬ್ಬ ವ್ಯಕ್ತಿ ಎಷ್ಟು ದಿನಗಳ ಕಾಲ ಒತ್ತಾಯ ಮಾಡಲು ಸಾಧ್ಯ? ಒಂದು ದಿನ ಬೇಸತ್ತು ಪ್ರೀತಿಗಾಗಿ ಪ್ರಯತ್ನ ಮಾಡಲೇಬೇಕಾಗಬಹುದು.
ರೊಮ್ಯಾಂಟಿಕ್ ಆಗುವುದು ಹೇಗೆ?
ಇಂದಿನ ವೈವಾಹಿಕ ಜೀನದಲ್ಲಿ ಜವಾಬ್ದಾರಿಗಳ ಒತ್ತಡದಿಂದ ಪರಸ್ಪರರನ್ನು ನೋಡಿ ಯಾರೊಬ್ಬರೂ ಪ್ರೀತಿ ಅನುರಾಗವನ್ನು ಮನಸ್ಸಿನಲ್ಲಿ ಹುಟ್ಟುಹಾಕಲು ಸಾಧ್ಯವಿಲ್ಲ. ಅದನ್ನು ನೀವು ಮನಸ್ಸಿನಲ್ಲಷ್ಟೇ ಉತ್ಪನ್ನ ಮಾಡಿಕೊಳ್ಳಬಹುದು. ನಿಮ್ಮಿಬ್ಬರಲ್ಲಿ ಒಬ್ಬರು ಮಾತ್ರ ಮುಂದೆ ಬಂದರೆ ಸಾಕೇ? ಮುಂದೆ ಹೋಗುವವರು ಯಾರು? ಈ ದ್ವಂದ್ವದಡಿ ಜೋಡಿ ರೊಮಾನ್ಸ್ ಕ್ಷಣಗಳನ್ನು ತಮ್ಮ ಕೈಯಿಂದ ಜಾರಿ ಹೋಗುವಂತೆ ಮಾಡುತ್ತಾರೆ. ತಜ್ಞರ ಅಭಿಪ್ರಾಯದ ಪ್ರಕಾರ, ಪತ್ನಿಗಿಂತ ಮಿಗಿಲಾದ ಜೀವನದ ಮರ್ಮ ತಿಳಿದವರು ಯಾರೂ ಇಲ್ಲ.
ಮಹಿಳೆಯಾಗಿರುವ ಕಾರಣದಿಂದ ಆಕೆ ಹೃದಯ ಸ್ನೇಹಿಯಾಗಿರುತ್ತಾಳೆ. ಸ್ನೇಹಾಳ ಅಷ್ಟಿಷ್ಟು ಪ್ರಯತ್ನದಿಂದಾಗಿ, ಆಕೆಗೆ ಪುನಃ ರೊಮ್ಯಾಂಟಿಕ್ ಕ್ಷಣಗಳು ದೊರೆತವು. ಈ ಬಾಬತ್ತಿನಲ್ಲಿ ನೀವು ಹಠವಾದಿಗಳಾಗಬೇಡಿ, ಗಂಡನಿಗೆ ನನ್ನ ಅವಶ್ಯಕತೆಯೇ ಇಲ್ಲ, ನನ್ನ ಜೊತೆ ಮಾತನಾಡಲು ಅವನು ರಾಜಿ ಆಗುವುದಿಲ್ಲವೆಂದರೆ ನಾನೇಕೆ ಅವನ ಜೊತೆ ಮಾತನಾಡಬೇಕು ಎಂದೆಲ್ಲ ಅಹಂ ಭಾವನೆ ಇಟ್ಟುಕೊಳ್ಳಬೇಡಿ. ಇಂತಹ ವಿಚಾರಗಳನ್ನು ಮನಸ್ಸಿಗೆ ತಂದುಕೊಳ್ಳಬಾರದು. ಅದರಿಂದ ದಾಂಪತ್ಯ ಜೀವನ ಬರಡಾಗುತ್ತದೆ. ನಿಮ್ಮಲ್ಲಿ ಹುಟ್ಟಿನಿಂದಲೇ ಪ್ರೀತಿಯ ಭಾವನೆ ಇದೆ. ರೊಮಾನ್ಸ್ ಸೆಕ್ಸ್ ಭಾವನೆ ಕೂಡ ಅದರಲ್ಲಿ ಸೇರಿಕೊಂಡಿರುತ್ತದೆ. ನೀವು ಅದಕ್ಕೆ ಜೀವನದಲ್ಲಿ ಪ್ರವೇಶಿಸಲು ಅವಕಾಶ ಕೊಡಿ. ಆಗ ಒತ್ತಡ, ಹೊಣೆಗಾರಿಕೆಗಳ ಮೇಲೆ ರೊಮಾನ್ಸ್ ಹೇಗೆ ಸವಾರಿ ಮಾಡುತ್ತದೆ ಎಂಬುದನ್ನು ನೋಡಿ ಚಕಿತರಾಗುವಿರಿ.
– ಮೋನಿಕಾ