``ಅಮ್ಮಾ, ನಾನೀಗ್ಲೇ ಗೆಳತಿ ಅನಿತಾಳ ಮನೆಗೆ ಹೋಗಬೇಕು. ಅವಳು ಇಂದು ಕ್ಲಾಸಿನಲ್ಲಿ ಬಹಳ ಚೆನ್ನಾಗಿ ನೋಟ್ಸ್ ಮಾಡಿಕೊಂಡಿದ್ದಾಳೆ. ನಾಳೆ ಟೆಸ್ಟ್ ಇದೆ. ಇವತ್ತು ಅವಳ ಮನೆಗೆ ಹೋಗಿ ಓದಿಕೊಂಡು ಬಂದರೆ ಬಹಳ ಉಪಯೋಗವಾಗುತ್ತದೆ. ಸ್ಕೂಟಿಯಲ್ಲಿ ಹೋಗಿ ಬೇಗ ಬಂದುಬಿಡ್ತೀನಿ,'' ರಶ್ಮಿ  ಹೇಳಿದಳು.

``ಇದು ಹುಡುಗಿಯರು ಮನೆಯಿಂದ ಹೊರಗೆ ಹೋಗುವ ಹೊತ್ತಾ? ನಿರ್ಮಲಾ, ನೀನು ಇವಳಿಗೆ ಬಹಳ ಸಲಿಗೆ ಕೊಟ್ಟಿದ್ದೀಯ. ಏನಾದರೂ ಆಗಬಾರದ್ದು ಆಗಿಬಿಟ್ಟರೆ ಆಮೇಲೆ ಪಶ್ಚಾತ್ತಾಪಡುತ್ತಾ ಕೂತಿರ್ತಿಯಾ,'' ಅಮ್ಮ ಏನಾದರೂ ಹೇಳುವ ಮುಂಚೆಯೇ ಅಜ್ಜಿ ಬಾಯಿಬಿಟ್ಟಳು.

``ನೀನು ಕ್ಲಾಸ್‌ನಲ್ಲಿಯೇ ಅವಳಿಂದ ನೋಟ್ಸ್ ತೆಗೆದುಕೊಳ್ಳಬೇಕಿತ್ತು. ರಾತ್ರಿಯಾದ ಮೇಲೆ ನೀನು ಅವಳ ಮನೆಗೆ ಹೋಗಬೇಕೆಂದಿರುವುದೇಕೆ?'' ಅಪ್ಪ ಅತ್ತಿಂದಿತ್ತ ಹೆಜ್ಜೆ ಹಾಕುತ್ತಾ ಹೇಳಿದರು.

``ರಶ್ಮಿ, ನೀನು ಅವಳ ನೋಟ್ಸ್ ಬಗ್ಗೆ ವಿಚಾರ ಮಾಡಬೇಡ. ನಿನ್ನದೇ ಆದ ನೋಟ್ಸ್ ರೆಡಿ ಮಾಡಿಕೋ, ಈಗ ರಾತ್ರಿ 9 ಗಂಟೆ. ಇಷ್ಟೊತ್ತಿನಲ್ಲಿ ಗೆಳತಿಯ ಮನೆಗೆ ಹೋಗಬೇಕೆನ್ನುವುದು ಸರಿಯಲ್ಲ,'' ಅಮ್ಮ ನಿರ್ಮಲಾ ಅವಳಿಗೆ ತಿಳಿವಳಿಕೆ ಹೇಳಿದರು.

ರಶ್ಮಿ ದುಃಖಿತಳಾಗಿ ಏನೂ ಮಾತನಾಡದೆ ತನ್ನ ರೂಮಿಗೆ ಹೋಗಿ ಓದುತ್ತಾ ಕುಳಿತಳು.

ಇದಾದ ಸುಮಾರು 1 ಗಂಟೆ ಬಳಿಕ ರಶ್ಮಿಯ ಅಣ್ಣ ಶೇಖರ್‌ ತನ್ನ ಕೋಣೆಯಿಂದ ಹೊರಬಂದು, ``ಅಮ್ಮಾ, ನಾನು ಸಂಜೆಯಿಂದ ಹೊರಗೆಲ್ಲೂ ಹೋಗಿಲ್ಲ, ಒಂದು ರೌಂಡ್‌ ಹೊರಗೆ ಸುತ್ತಾಡಿ ಬರ್ತೀನಿ,'' ಎಂದವನೇ ಬೈಕ್‌ ಸ್ಟಾರ್ಟ್‌ ಮಾಡಿ ಹೊರಟೇ ಬಿಟ್ಟ. ಆಗ ಯಾರೊಬ್ಬರೂ `ಏಕೆ ಹೋಗ್ತಿದೀಯಾ? ಎಲ್ಲಿಗೆ ಹೋಗ್ತಿದೀಯಾ?' ಎಂದು ಅವನನ್ನು ಪ್ರಶ್ನಿಸಲಿಲ್ಲ.

ದ್ವಂದ್ವ ಯೋಚನೆ

ಭಾರತದ ಪ್ರತಿಯೊಂದು ಕುಟುಂಬದಲ್ಲೂ ಈ ಪರಿಸ್ಥಿತಿ ಇದೆ. ಮಗಳಿಗೆ ಯಾವಾಗ ನೋಡಿದರೂ ಆಚಾರ ವಿಚಾರಗಳನ್ನು ಕಲಿಸುತ್ತಾ ಇರುತ್ತಾರೆ. ಬೇರೆಯವರ ಮನೆ ಹೊಸ್ತಿಲು ತುಳಿಯಬೇಕಾಗುತ್ತದೆ ಎಂಬ ಕಾರಣದಿಂದಲೋ ಅಥವಾ ಈಗ ಜಗತ್ತು ಬಹಳ ಕೆಟ್ಟುಹೋಗಿದೆ ಎಂಬ ನೆಪದ ಮೇರೆಗೆ ಅವರು ಮಗಳಿಗೆ ಹೀಗೆ ಮಾಡಬೇಕು, ಹೀಗೆ ನಡೆಯಬೇಕು, ಹಾಗೆ ಮಾಡಬಾರದು, ಅಂತಹ ಡ್ರೆಸ್‌ ಧರಿಸಬಾರದು ಎಂದೆಲ್ಲ ದೊಡ್ಡ ಪಟ್ಟಿಯನ್ನೇ ಕೊಡುತ್ತಾರೆ. ಒಮ್ಮೆ ನೇರ ಮಾತುಗಳಲ್ಲಿಯೇ ಹೇಳಿದರೆ, ಕೆಲವೊಮ್ಮೆ ಸುತ್ತಿಬಳಸಿ ಅವರಿಗೆ ದಾರಿಯಲ್ಲಿನ ಪುಂಡ ಪೋಕರಿಗಳನ್ನು ಹೇಗೆ ನಿರ್ಲಕ್ಷ್ಯ ಮಾಡಬೇಕೆಂದು ತಿಳಿಸಿಕೊಡುತ್ತಾರೆ. ಯಾರಾದರೂ ಏನಾದರೂ ಮಾತನಾಡಿದರೂ ಅವರಿಗೆ ಪ್ರತ್ಯುತ್ತರ ಕೊಡದೆ ವಾದ ವಿವಾದಕ್ಕೆ ಅವಕಾಶ ಕೊಡದೆ ಅಲ್ಲಿಂದ ಹೇಗೆ ಹೊರಬರಬೇಕು ಎಂಬುದರ ಬಗ್ಗೆ ಅವರಿಗೆ ತಿಳಿಹೇಳಲಾಗುತ್ತದೆ. ಆಕಸ್ಮಿಕವಾಗಿ ಏನಾದರೂ ತಪ್ಪು ಘಟಿಸಿದರೆ, ಕಾರಣ ಕಂಡುಹಿಡಿದು ಹುಡುಗಿಯರನ್ನೇ ತಪ್ಪಿತಸ್ಥರನ್ನಾಗಿ ಮಾಡಲಾಗುತ್ತದೆ. ಅವಳು ಧರಿಸಿದ ಬಟ್ಟೆಯೇ ಅದಕ್ಕೆ ಕಾರಣವಿರಬಹುದು, ಒಳ್ಳೆಯ ಮನೆತನದ ಹುಡುಗಿಯರು ಹೀಗೆ ರಾತ್ರಿ ಮನೆಯಿಂದ ಹೊರಡುವುದು ಸರಿಯೇ? ಎಂದೆಲ್ಲ ಪ್ರಶ್ನೆ ಹಾಕುತ್ತಾರೆ. ಪತ್ರಿಕೆಗಳಲ್ಲಿ ಬಂದ ಬಲಾತ್ಕಾರದ ಘಟನೆಗಳನ್ನು ಉಲ್ಲೇಖಿಸಿ ಅವರನ್ನು ಇನ್ನಷ್ಟು ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತದೆ. ಇದೇ ಯೋಚನೆ ಹುಡುಗರ ಬಗ್ಗೆ ಏಕೆ ತೋರಿಸಲಾಗುವುದಿಲ್ಲ? ಅವನು ಹುಡುಗ, ಅವನ ಬಗ್ಗೆ ಯೋಚಿಸುವುದು ಏನಿದೆ ಎಂದು ಸಬೂಬು ಹೇಳಲಾಗುತ್ತದೆ. ಎಲ್ಲಿಗೆ ಹೋಗ್ತಿದೀಯಾ ಏನು ಮಾಡ್ತಿದೀಯಾ? ಎಂಬ ಈ ಪ್ರಶ್ನೆಗಳೇ ಹುಡುಗಿಯರ ಬಗೆಗಿನ ಸಂಕುಚಿತ ಭಾವನೆಯನ್ನು ತೋರಿಸುತ್ತವೆ. ಹುಡುಗರಿಂದ ಅಷ್ಟೇ ತೊಂದರೆ ಎಂದು ನಿಮಗೆ ಅನಿಸುತ್ತದೆಯೇ? ಹುಡುಗಿಯರು ಗುಂಪು ಸೇರಿ ಒಬ್ಬ ಯುವಕನನ್ನು ಚುಡಾಯಿಸಿದರೆ, ಅವನ ಮೇಲೆ ಬಲಾತ್ಕಾರ ಮಾಡಿದರೆ? ಅಥವಾ ಇಂಥದೆ ಏನೋ ಇಲ್ಲ ತಾನೆ? ಹುಡುಗರಿಗೆ ಹೋಲಿಸಿದರೆ ಹುಡುಗಿಯರು ದ್ವಿಚಕ್ರ ವಾಹನ ಓಡಿಸುತ್ತ (ಕೆಲವು ಅಪವಾದಗಳನ್ನು ಹೊರತುಪಡಿಸಿ) ಮೃತಪಟ್ಟ ಉದಾಹರಣೆ ತುಂಬಾ ಕಡಿಮೆ. ಗಾಯಗೊಂಡವರು ಹಾಗೂ ಸಾಯುವವರಲ್ಲಿ ಹುಡುಗರ ಸಂಖ್ಯೆಯೇ ಜಾಸ್ತಿ. ಹುಡುಗಿಯರು ಈಗ ದ್ವಿಚಕ್ರ ವಾಹನವನ್ನು ಅತ್ಯಂತ ಶಿಸ್ತಿನಿಂದ ಓಡಿಸುತ್ತಾರೆ. ವೇಗದ ಮಿತಿಯನ್ನು, ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ