ಸ್ನೇಹಾ ಮೊಣಕೈಯಿಂದ ಭರತ್‌ಗೆ ಹಗುರವಾಗಿ ತಿವಿದು ಫ್ರಿಜ್‌ನಿಂದ ಹಾಲು ತರಲು ಹೇಳಿದಾಗ ಅವನು ಕೋಪಗೊಂಡ.

``ಏನು? ನಾನು ಬಟ್ಟೆ ಹಾಕಿಕೊಳ್ಳೋದು ಕಾಣಿಸ್ತಿಲ್ವಾ?''

ಭರತ್‌ ಜೊತೆಗೆ ಸ್ನೇಹಾ ಹಾಗೆ ವರ್ತಿಸಿದ್ದು ಪ್ರೀತಿಯಿಂದ. ಅದಕ್ಕೆ ಪ್ರತಿಯಾಗಿ ಆಕೆ ಪತಿಯಿಂದ ಅದೇ ತೆರನಾದ ಸ್ಪರ್ಶ ತುಂಟಾಟ ಅಪೇಕ್ಷಿಸಿದ್ದಳು. ಆದರೆ ಭರತ್‌ಗೆ ಮಾತ್ರ ಆ ರೀತಿಯ ಸ್ಪರ್ಶ ಇಷ್ಟವಾಗಲಿಲ್ಲ.

ಸ್ನೇಹಾಳ ಮೂಡ್‌ ಆಕಸ್ಮಿಕವಾಗಿಯೇ ಹಾಳಾಗಿಹೋಯಿತು. ಆಕೆ ಕಣ್ಣು ತುಂಬಿಸಿಕೊಂಡು, ``ನಾನು ನಿಮ್ಮನ್ನು ಆಕರ್ಷಿಸಲೆಂದೇ ಹಾಗೆ ಮೊಣಕೈನಿಂದ ತಿವಿದಿದ್ದೆ. ಅದಕ್ಕೆ ಪ್ರತಿಯಾಗಿ ನಾನೂ ನಿಮ್ಮಿಂದ ಅಂತಹದೇ ತುಂಟಾಟ, ಛೇಡಿಸುವ ಮಾತುಗಳನ್ನು ಅಪೇಕ್ಷಿಸಿದ್ದೆ. ಆದರೆ ನನ್ನ ವರ್ತನೆ ನಿಮಗೆ ಕೋಪ ತರಿಸಿತು,'' ಎಂದಳು.

ಹೆಂಡತಿಯ ಮಾತು ಕೇಳಿ ಭರತ್‌ಗೆ ಒಮ್ಮೆಲೆ ಗಾಬರಿ. ಅವನು ಫ್ರಿಜ್‌ನಿಂದ ಹಾಲು ತೆಗೆದುಕೊಡುತ್ತ, ``ಸಾರಿ, ನಾನು ನಿನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ. ನಿನ್ನ ಭಾವನೆಗಳನ್ನು ಮನಸ್ಸಿಗೆ ತಂದುಕೊಳ್ಳಲಿಲ್ಲ. ನನಗೀಗ ನಿಜಕ್ಕೂ ಬೇಸರವಾಗುತ್ತಿದೆ. ಈ ವಿಷಯದಲ್ಲಿ ನಾನು ನಿಜಕ್ಕೂ ದಡ್ಡನೇ ಸರಿ,'' ಎಂದ.

ಸ್ನೇಹಾಳ ದುಃಖ, ಬೇಸರ ಒಂದೇ ಕ್ಷಣದಲ್ಲಿ ತಗ್ಗಿಹೋಯಿತು. ಅವಳು ಅವನ ಹತ್ತಿರ ಬಂದು ಕಾಲರ್‌ ಹಿಡಿದು, ``ನೀನು ನನ್ನ ಅತೃಪ್ತಿಯನ್ನು ಕಂಡುಕೊಂಡೆ. ನನಗೆ ಇಷ್ಟೇ ಸಾಕು. ನೀನು ನಿನ್ನ ತಪ್ಪನ್ನು ಒಪ್ಪಿಕೊಂಡೆ, ಅದು ಕೂಡ ಒಂದು ಸ್ಪರ್ಶವೇ ಹೌದು. ನಿನ್ನ ಒಂದೊಂದು ಶಬ್ದಗಳು ನನ್ನ ಹೃದಯನ್ನು ತಟ್ಟಿ ಪುಳುಕಿತಗೊಳಿಸಿದವು,'' ಎಂದು ಹೇಳಿ ಅವನನ್ನು ತಬ್ಬಿಕೊಂಡಳು.

ಭರತ್‌ನ ಕೈಗಳು ಅವಳ ಸೊಂಟವನ್ನು ಬಳಸಿದವು. ಅವನು ಅವಳ ಬೆನ್ನನ್ನು ನೇವರಿಸುತ್ತಾ, ``ನಿನ್ನ ಸೊಂಟ ಅದೆಷ್ಟು ತೆಳ್ಳಗಾಗಿದೆ,'' ಎಂದ.

ಅವನ ಮಾತು ಮುಗಿಯುವ ಮೊದಲೇ ಸ್ನೇಹಾ ಅವನ ಹೊಟ್ಟೆಗೆ ಬೆರಳಿನಿಂದ ತಿವಿದಳು. ಅವನು ಮಂಚದ ಮೇಲೆ ಹಾಗೆಯೇ ಉರುಳಿಬಿಟ್ಟ. ಅವಳೂ ಅವನ ಮೇಲೆ ಹಾಗೆಯೇ ಒರಗಿದಳು. ಸ್ವಲ್ಪ ಹೊತ್ತಿನ ತನಕ ಅವರು ತುಂಟಾಟ, ನಗುವಿನಲ್ಲಿ ಮುಳುಗಿದರು.

ಪ್ರೀತಿ ಹೆಚ್ಚುವುದು ಹೀಗೆ....

ಜೀವನದಲ್ಲಿ ರೊಮಾನ್ಸ್ ಹೆಚ್ಚುವುದು ಹೀಗೆಯೇ. ಸಿಹಿಕಹಿ ಅನುಭವಗಳು ಜೀವನದಲ್ಲಿ ಖುಷಿಯ ರಸವನ್ನು ಬೆರೆಸುತ್ತವೆ, ಜೀವನವನ್ನು ಸುಲಭಗೊಳಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಹಲವು ಬಗೆಯ ಜವಾಬ್ದಾರಿಗಳು ನಮ್ಮ ಮೆದುಳಿನಲ್ಲಿ ಸುರುಳಿಯಂತೆ ಸುತ್ತುತ್ತಿರುತ್ತವೆ. ಗಂಡ ಹೆಂಡತಿ ಜೊತೆಗಿದ್ದೂ ಕೂಡ ನಗುನಗುತ್ತಾ ಇರಲು ಆಗುವುದಿಲ್ಲ. ಇಂತಹ ಬೇಸರದಾಯಕ ಕ್ಷಣಗಳಲ್ಲಿ ಸಂಗಾತಿಯನ್ನು ಛೇಡಿಸುವುದು ಯಾವುದೇ ಔಷಧಿಗಿಂತ ಕಡಿಮೆ ಮೌಲ್ಯದಾಯಕವಾಗಿರುವುದಿಲ್ಲ.

ಹೆಚ್ಚಿನ ದಂಪತಿಗಳು ಒತ್ತಡದ ಕ್ಷಣಗಳಲ್ಲಿ ಪರಸ್ಪರ ಮಾತುಕತೆ ನಡೆಸಲು ಆಗುವುದಿಲ್ಲ. ಇಂತಹ ಕ್ಷಣಗಳಲ್ಲಿ ಮುಂದುವರಿಯುವ ಅಗತ್ಯ ಇರುತ್ತದೆ. ನೀವು ಧೈರ್ಯ ಮಾಡಿ ಸಂಗಾತಿಯ ಹಣೆ ಚುಂಬಿಸಿ ಇಲ್ಲವೇ ಮೃದುವಾಗಿ ಸ್ಪರ್ಶಿಸಿ. ಆರಂಭದಲ್ಲಿ ಸಂಗಾತಿ ನಿಮ್ಮನ್ನು ನಿರ್ಲಕ್ಷಿಸಬಹುದು. ಆದರೆ ಬಹಳ ಹೊತ್ತು ಹಾಗೆಯೇ ಇರಲು ಆಗುವುದಿಲ್ಲ. ಏಕೆಂದರೆ ಛೇಡಿಸುವಿಕೆಯಿಂದ ಮೆದುಳಿನಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯುತ್ತದೆ. ನೀವು ಹೆಂಡತಿ ಎಂಬ ಕಾರಣದಿಂದ ಹೆದರಬೇಡಿ. ನನ್ನ ಈ ರೀತಿಯ ನಿರ್ಧಾರ ಗಂಡ ಯಾವ ರೀತಿ ತೆಗೆದುಕೊಳ್ಳಬಹುದೆಂದು  ಮೌನಕ್ಕೆ ಶರಣಾಗಲು ಹೋಗಬೇಡಿ. ಈ ರೀತಿಯ ಹೆದರಿಕೆಯಿಂದ ಜೀವಿಸುವ ಯಾರೇ ಆಗಲಿ ರೊಮಾನ್ಸ್ ಮಜ ಪಡೆಯಲು ಆಗುವುದಿಲ್ಲ. ಅವರ ಮನಸ್ಸು ಹಾಗೆಯೇ ಸರಿದು ಹೋಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ